For Quick Alerts
ALLOW NOTIFICATIONS  
For Daily Alerts

ಹಾಸಿಗೆ ಬಳಿ ಮೊಬೈಲ್ ಇಟ್ಟುಕೊಂಡರೆ ಅಪಾಯ ಗ್ಯಾರಂಟಿ..

By Su.Ra
|

ಮೊಬೈಲ್ ಇಲ್ಲದೆ ಜಗತ್ತಿದ್ಯಾ ಹೇಳಿ ಈಗ.. ನೋ ಚಾನ್ಸ್.. ಪ್ರತಿಯೊಬ್ಬರಿಗೂ ಮೊಬೈಲ್ ಬೇಕೇಬೇಕು. ಎದ್ದಾಗ, ಮಲಗಿದಾಗ 24/7 ಮೊಬೈಲ್ ಇರಲೇಬೇಕು ಅನ್ನುವಂತಾಗಿದೆ ಹೆಚ್ಚಿನವ್ರ ಸ್ಥಿತಿ. ಕೆಲವರಿಗೆ ಮೊಬೈಲ್ ಕೈಯಲ್ಲಿ ಇಲ್ಲದೇ ಇದ್ರೆ ಏನನ್ನೋ ಕಳದುಕೊಂಡ ಭಾವನೆ. ಹೀಗೆ ಅತಿಯಾಗಿ ಮೊಬೈಲ್ ಬಳಸೋದು, ಅದಕ್ಕಿಂತಲೂ ಹೆಚ್ಚಾಗಿ ಮಲಗುವ ವೇಳೆ, ಬೆಡ್ ರೂಂನಲ್ಲೂ ಮೊಬೈಲ್ ಬಳಸೋದ್ರಿಂದ ಆಗುವ ದುಷ್ಪರಿಣಾಮಗಳು ಒಂದೆರಡಲ್ಲ. ಅಯ್ಯಯ್ಯೋ ಫೋನ್ ಸಹವಾಸವೇ ಬೇಡ! ಏನಿದರ ರಹಸ್ಯ?

ಹೆಚ್ಚಿನವ್ರು ತಾವು ಮಲಗುವಾಗ ಮೊಬೈಲ್ ಅನ್ನು ತಮ್ಮ ತಲೆಯ ಬಳಿಯೇ ಇಲ್ಲವೇ ದಿಂಬಿನ ಪಕ್ಕದಲ್ಲಿ ಅಥವಾ ಅಲ್ಲೇ ಆಚೆ ಈಚೆ ಇಟ್ಟುಕೊಂಡು ಮಲಗ್ತಾರೆ. ಹೀಗೆ ಮಾಡುವ ಪರಿಪಾಠ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತೆ ಅನ್ನೋದು ಸಂಶೋಧನೆಯಿಂದ ಬಹಿರಂಗ ಗೊಂಡಿದೆ. ಹಾಗಾದ್ರೆ ಏನೆಲ್ಲ ಪರಿಣಾಮಗಳಾಗುತ್ತೆ ಅನ್ನೋದನ್ನು ತಿಳಿದುಕೊಳ್ಳಲು ಮುಂದೆ ಓದಿ..

ನಿದ್ದೆ ಹಾಳಾಗುತ್ತೆ..

ನಿದ್ದೆ ಹಾಳಾಗುತ್ತೆ..

ಮೊಬೈಲ್‌ನಲ್ಲಿ ಅದೂ ಇದೂ ಅಂತ ನೋಡ್ತಾನೇ ಇರೋದ್ರಿಂದ ಮೊದಲನೆಯದಾಗಿ ಅಗತ್ಯಕ್ಕಿಂತ ಕಡಿಮೆ ನಿದ್ದೆ ಮಾಡುವಂತಾಗುತ್ತೆ. ಫಿಲ್ಮ್ ನೋಡೋದು, ಚಾಟ್ ಮಾಡೋದು ಮಾಡ್ತಲೇ ಇರೋದ್ರಿಂದ ನಿದ್ದೆ ಹಾಳಾಗುತ್ತೆ. ನಿದ್ದೆ ಹಾಳಾದ್ರೆ ಎಲ್ಲವೂ ಹಾಳಾದಂತೆ..ನಿದ್ದೆ ಕಡಿಮೆಯಾದ್ರೆ ಹತ್ತು ಹಲವು ಆರೋಗ್ಯ ಸಮಸ್ಯೆಗಳು ತನ್ನಿಂದ ತಾನೆ ವಕ್ಕರಿಸಿಕೊಂಡು ಬಿಡುತ್ತೆ. ತಲೆನೋವು, ಡಾರ್ಕ್ ಸರ್ಕಲ್, ಟೆಕ್ಷನ್, ಇತ್ಯಾದಿಗಳು ಬಳುವಳಿಯಾಗಿ ಸಿಗುತ್ತೆ.

 ಕುತ್ತಿಗೆ ನೋವು, ಕೈನೋವು

ಕುತ್ತಿಗೆ ನೋವು, ಕೈನೋವು

ಹಾಸಿಗೆಯಲ್ಲಿ ಮೊಬೈಲ್ ಹಿಡಿದು ಮಲಗುವುದರಿಂದ, ಯಾವ್ಯಾವುದೋ ಭಂಗಿಯಲ್ಲಿ ನೀವು ಮೊಬೈಲ್‌ನಲ್ಲಿ ಕೆಲಸ ಮಾಡುತ್ತೀರಿ. ಹಾಗಾಗಿ ಕ್ರಮೇಣ ಅದು ಕುತ್ತಿಗೆನೋವು ಮತ್ತು ಕೈನೋವಿಗೆ ಕಾರಣವಾಗುತ್ತೆ. ಹಾಗಾಗಿ ಮೊಬೈಲ್ ದೂರ ಇಟ್ಟು ಮಲಗೋದೆ ಸೂಕ್ತ...

Most Read:ಮೊಳಕೆ ಕಟ್ಟಿದ ಹೆಸರು ಕಾಳಿನ ಆರೋಗ್ಯಕಾರಿ ಪ್ರಯೋಜನಗಳು

ಮೊಬೈಲ್ ವಿಕಿರಣಗಳ ಪ್ರಭಾವ

ಮೊಬೈಲ್ ವಿಕಿರಣಗಳ ಪ್ರಭಾವ

ನಿಮ್ಗೆ ಗೊತ್ತಿಲ್ಲದೆ ನಿಮ್ಮ ಮೇಲೆ ಹಾಸಿಗೆ ಹತ್ತಿರದಲ್ಲೇ ಇರುವ ಮೊಬೈಲ್ ಎಫೆಕ್ಟ್ ಮಾಡುತ್ತೆ. ಮೊಬೈಲ್‌ ಸಿಗ್ನಲ್‌ಗಾಗಿ ಇರುವ ವಿಕಿರಣ ನಿಮ್ಮ ದೇಹಕ್ಕೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುತ್ತೆ. ಕಾಲಕ್ರಮೇಣ ಗೊತ್ತಾಗುವ ವಿಚಾರವೇ ಹೊರತು, ಇದ್ರ ಎಫೆಕ್ಟ್ ಒಮ್ಮೆಲೆ ತಿಳಿದುಬರುವುದಿಲ್ಲ.

ಲೈಂಗಿಕ ಸಂಬಂಧ ಹಾಳು ಮಾಡುತ್ತೆ

ಲೈಂಗಿಕ ಸಂಬಂಧ ಹಾಳು ಮಾಡುತ್ತೆ

ಮೊಬೈಲ್ ಹಾಸಿಗೆ ಹತ್ತಿರದಲ್ಲೇ ಇರೋದ್ರಿಂದ ಹೆಚ್ಚಿನವ್ರು ತಮ್ಮ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದಾರೆ ಅನ್ನೋದು ಸಮೀಕ್ಷೆಗಳಿಂದ ತಿಳಿದುಬಂದಿದೆ. ನಿಶ್ಯಬ್ಧತೆ ಲೈಂಗಿಕತೆಯನ್ನು ವೃದ್ಧಿಸುತ್ತೆ. ಆದ್ರೆ ಮೊಬೈಲ್ ನಲ್ಲಿ ಆಗಾಗ ಬರುವ ಮೇಸೇಜ್ ಗಳು,ಫೋನ್ ಕಾಲ್ ಗಳು ಆ ನಿಶ್ಯಬ್ಧತೆಯನ್ನು ಹಾಳು ಮಾಡಿ ನಿಮ್ಮ ಲೈಂಗಿಕ ಆಸಕ್ತಿಯನ್ನು ಕುಂದಿಸುತ್ತೆ. ಲೈಫಲ್ಲಿ ಎಲ್ಲಕ್ಕಿಂತ ಹೆಚ್ಚು ಮೊಬೈಲ್ ಅನ್ನುವಂತೆ ವರ್ತಿಸುವ ಕೆಲವರು ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದುಕೊಂಡಿರ್ತಾರೆ ಅನ್ನೋದು ಸಾಬೀತಾಗಿದೆ.

ಕಣ್ಣಿಗೆ ಕೆಟ್ಟ ಪರಿಣಾಮ ಉಂಟುಮಾಡುತ್ತೆ

ಕಣ್ಣಿಗೆ ಕೆಟ್ಟ ಪರಿಣಾಮ ಉಂಟುಮಾಡುತ್ತೆ

ಮಲಗುವಾಗ ಲೈಟ್ ಆಫ್ ಮಾಡಿ ಮೊಬೈಲ್ ನೋಡೋದು ಅಭ್ಯಾಸ. ಅಂದ್ರೆ ಕತ್ತಲೆ ಕೋಣೆಯಲ್ಲಿ ಮೊಬೈಲ್ ಬೆಳಕು ಮಾತ್ರ ನಿಮ್ಮ ಕಣ್ಣಿಗೆ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತೆ. ಕತ್ತಲೆಯಲ್ಲಿ ಮಲಗೋದ್ರಿಂದ ನಮ್ಮ ದೇಹದಲ್ಲಿ ಹಲವು ಹಾರ್ಮೋನುಗಳು ಬಿಡುಗಡೆಗೊಳ್ಳುತ್ತೆ ಮತ್ತು ಆರೋಗ್ಯವಾಗಿರಲು ಈ ಹಾರ್ಮೋನುಗಳು ಸಹಾಯಕವಾಗಲಿದೆ. ಅದ್ರಲ್ಲೂ ಬ್ರೈಟ್‌ನೆಸ್ ಅಧಿಕವಾಗಿಟ್ಟುಕೊಂಡು ಮೊಬೈಲ್ ನೋಡುವವರಿಗೆ ಹಲವು ದೃಷ್ಟಿ ದೋಷ ಉಂಟಾಗೋದು ಗ್ಯಾರೆಂಟಿ..

Most Read:ಲೋಹದ ತಟ್ಟೆಗಳಿಂದ ಆಹಾರ ಸೇವಿಸಿದರೆ ಸಿಗುವ ಆರೋಗ್ಯಕಾರಿ ಲಾಭಗಳು

ಸೋ ಬಿ ಕೇರ್‌ಫುಲ್

ಸೋ ಬಿ ಕೇರ್‌ಫುಲ್

ಇದಿಷ್ಟೇ ಅನ್ಕೋಬೇಡಿ, ಇನ್ನು ಹಲವು ಸಮಸ್ಯೆಗಳಿಗೆ ನೀವು ಹಾಸಿಗೆ ಬಳಿ ಮೊಬೈಲ್ ಇಡೋದ್ರಿಂದ ಆಗಲಿದೆ. ಒಂದು ವೇಳೆ ಮೊಬೈಲ್ ಸಿಡಿದರಂತೂ ಕೇಳೋದೆ ಬೇಡ, ಜೀವಕ್ಕೇ ಅಪಾಯ. ಸೋ ಬಿ ಕೇರ್‌ಫುಲ್. ಒಂದು ವೇಳೆ ಇಷ್ಟು ದಿನ ನೀವು ಮಲಗುವಾಗ ಮೊಬೈಲ್ ಹತ್ತಿರದಲ್ಲೇ ಇಟ್ಟು ಮಲಗುತ್ತಾ ಇದ್ದಲ್ಲಿ ಇನ್ಮುಂದೆ ಆ ತಪ್ಪನ್ನು ಮುಂದುವರಿಸ್ಬೇಡಿ...


English summary

Why you should Never keep your mobile in your bedroom

Sleeping with a cell phone under your pillow or next to your head is not advised due to .... Is it really not safe to keep your phone when you go to sleep... Its raise health concerns such as altered brain metabolism, sleep disturbance, have a look of some health problems....
X
Desktop Bottom Promotion