For Quick Alerts
ALLOW NOTIFICATIONS  
For Daily Alerts

ಈರುಳ್ಳಿ: ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯಕ್ಕೆ ಪನ್ನೀರು!

By Manu
|

ನಮ್ಮ ಅಡುಗೆಯಲ್ಲಿ ಅತಿ ಸಾಮಾನ್ಯವಾದ ತರಕಾರಿ ಎಂದರೆ ಈರುಳ್ಳಿ ಮತ್ತು ಆಲುಗಡ್ಡೆ. ಅತಿ ಹೆಚ್ಚು ಕಾಲ ಕೆಡದಂತೆ ಕಾಪಾಡ ಬಹುದಾದ ಇವುಗಳ ಗುಣವೇ ಇದರ ವೈಶಿಷ್ಟ್ಯತೆ, ಕಡಿಮೆ ಬೆಲೆ ಮತ್ತು ವರ್ಷದ ಎಲ್ಲಾ ಕಾಲ ಸುಲಭವಾಗಿ ಲಭ್ಯವಾಗುವ ಈ ಎರಡು ತರಕಾರಿಗಳು ಪ್ರತಿ ಮನೆಯ ಅಡುಗೆ ಮನೆಯಲ್ಲಿ ಸದಾ ಇರುತ್ತವೆ. ಅದರಲ್ಲೂ ಈರುಳ್ಳಿ ಕತ್ತರಿಸಿದಾದ ಕಣ್ಣೀರು ಬರುತ್ತದೆ ಎಂಬ ಒಂದೇ ಅವಗುಣವನ್ನು ಬಿಟ್ಟರೆ ಬೇರೆಲ್ಲಾ ರೀತಿಯಲ್ಲಿ ಆಹಾರಕ್ಕಿಂತಲೂ ಔಷಧೀಯ ರೂಪದಲ್ಲಿಯೇ ಆರೋಗ್ಯಕ್ಕೆ ಪೂರಕವಾಗಿದೆ. ಈರುಳ್ಳಿ ಹಾಕಿದ ಸಾಕ್ಸ್‌ ಧರಿಸಿ-ವ್ಯತ್ಯಾಸ ನೀವೇ ನೋಡಿ!

Why You Should Eat Onions Everyday

ಇದು ಹತ್ತು ಹಲವು ಕಾಯಿಲೆಗಳನ್ನು ಸುಲಭವಾಗಿ ಗುಣಪಡಿಸುವುದು ಮಾತ್ರವಲ್ಲ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಈ ಗುಣಗಳನ್ನು ಮನಗಂಡ ನಮ್ಮ ಹಿರಿಯರು ನಿತ್ಯವೂ ಈರುಳ್ಳಿಯನ್ನು ಸೇವಿಸುವ ಅಭ್ಯಾಸವನ್ನು ಹೊಂದಿದ್ದರು. ಇದರಿಂದ ಹತ್ತು ಹಲವು ರೋಗಗಳಿಂದ ರಕ್ಷಣೆ ಪಡೆಯುವುದು ಮಾತ್ರವಲ್ಲ, ಎದುರಾಗುವ ಚಿಕ್ಕ ಪುಟ್ಟ ಕಾಯಿಲೆಗಳಿಗೂ ತಕ್ಷಣ ಉಪಶಮನ ಪಡೆದುಕೊಳ್ಳುತ್ತಿದ್ದರು.

ಹಲವು ಸೋಂಕುಗಳಿಂದ ರಕ್ಷಣೆ ಒದಗಿಸುವ ಈರುಳ್ಳಿಯಲ್ಲಿರುವ ಕಾರಣ ಇದನ್ನು ನಿತ್ಯವೂ ಕೊಂಚ ಪ್ರಮಾಣದಲ್ಲಿಯಾದರೂ ಹಸಿಯಾಗಿ ಸೇವಿಸುವಂತೆ ತಜ್ಞರು ಸಲಹೆ ಮಾಡುತ್ತಾರೆ. ಇದರಿಂದ ವಿವಿಧ ಸೋಂಕು, ಆರೋಗ್ಯದ ಏರುಪೇರು, ಸುಸ್ತು ಮೊದಲಾದವುಗಳಿಂದ ರಕ್ಷಣೆ ಪಡೆಯಬಹುದು. ಹಸಿಯಾಗಿ ಸಾಧ್ಯವಾಗದಿದ್ದರೂ ಬೇಯಿಸಿ ಆಹಾರದ ಮೂಲಕವಾದರೂ ನಿತ್ಯವೂ ಕೊಂಚ ಪ್ರಮಾಣವನ್ನು ಸೇವಿಸುವುದು ನಿಜಕ್ಕೂ ಪ್ರಯೋಜನಕಾರಿಯಾಗಿದೆ.

ರೋಗ ನಿರೋಧಕ ಶಕ್ತಿ
ಈರುಳ್ಳಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇರದ ಉರಿಯೂತ ನಿವಾರಕ ಗುಣ ಅತಿ ಪ್ರಬಲವಾಗಿದ್ದು ಹಲವು ಸೋಂಕುಗಳಿಂದ ರಕ್ಷಿಸುತ್ತದೆ. ಇದರ ಮೂಲಕ ಈರುಳ್ಳಿ ನಮ್ಮ ದೇಹದ ಮೇಲೆ ಧಾಳಿಯಿಡುವ ಹತ್ತು ಹಲವು ಕ್ರಿಮಿಗಳಿಂದ ರಕ್ಷಣೆ ಒದಗಿಸುತ್ತದೆ. ಬಹುಪಯೋಗಿ ಈರುಳ್ಳಿಯ ಅಸಾಮಾನ್ಯ ಗುಣಗಳು

ಸೌಂದರ್ಯದ ಆರೈಕೆಗೆ
ವಿಶೇಷವಾಗಿ ಇದರ ಆರೈಕೆಯಿಂದ ಚರ್ಮದ ಸೆಳೆತ ಹೆಚ್ಚುತ್ತದೆ ಹಾಗೂ ವಯೋಸಹಜವಾಗಿ ಮೂಡುವ ನೆರಿಗೆ, ಸೂಕ್ಷ್ಮಗೆರೆಗಳು ಬೀಳುವ ಸಂಭವ ತಡವಾಗುತ್ತದೆ. ಇದರಲ್ಲಿರುವ ಸಮೃದ್ಧ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಚರ್ಮಕ್ಕೆ ವಯಸ್ಸಿನ ಪ್ರಭಾವವಾಗುವುದನ್ನು ತಡೆದು ವೃದ್ಧಾಪ್ಯವನ್ನು ದೂರಾಗಿಸುತ್ತದೆ. ಇದರ ಉರಿಯೂತ ನಿವಾರಕ ಗುಣ ಮೊಡವೆಗಳು ಮೂಡದೇ ಇರಲೂ ನೆರವಾಗುತ್ತದೆ.

ರಕ್ತದಲ್ಲಿ ಗ್ಲುಕೋಸ್ ಪ್ರಮಾಣ
ಸಂಶೋಧಕರ ಪ್ರಕಾರ ನಿತ್ಯವೂ ಈರುಳ್ಳಿಯನ್ನು ತಿನ್ನುವ ಮೂಲಕ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಸರಿಯಾದ ಮಟ್ಟದಲ್ಲಿರಲು ಸಾಧ್ಯವಾಗುತ್ತದೆ. ಈರುಳ್ಳಿಯ ರಸದಲ್ಲಿರುವ ಕ್ವೆರ್ಸಟಿನ್ (quercetin) ಎಂಬ ಫ್ಲೇವನಾಯ್ಡು ರಕ್ತದಲ್ಲಿ ಅಗತ್ಯಕ್ಕೂ ಕಡಿಮೆ ಪ್ರಮಾಣದ ಗ್ಲೂಕೋಸ್ ಇದ್ದರೆ ಇದನ್ನು ಸರಿಪಡಿಸಲು ಸಮರ್ಥವಾಗಿದೆ.

ಈರುಳ್ಳಿ ಹೃದಯದ ಆರೋಗ್ಯವನ್ನೂ ಹೆಚ್ಚಿಸುತ್ತದೆ
ಇದರ ಆಂಟಿ ಆಕ್ಸಿಡೆಂಡುಗಳು ರಕ್ತನಾಳಗಳ ಒಳಗೆ ಜಿಡ್ಡು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅಂಟಿಕೊಳ್ಳುವುದನ್ನು ತಪ್ಪಿಸಿ ಹೃದಯದ ಮೇಲೆ ಬೀಳಬಹುದಾಗಿದ್ದ ಒತ್ತಡವನ್ನು ಇಲ್ಲವಾಗಿಸುತ್ತದೆ. ಅಲ್ಲದೇ ರಕ್ತನಾಳಗಳ ಒಳಗೆ ರಕ್ತ ಹೆಪ್ಪುಗಟ್ಟುವ (thrombosis) ಸಾಧ್ಯತೆಯನ್ನೂ ಅಪಾರವಾಗಿ ಕಡಿಮೆಗೊಳಿಸುತ್ತದೆ. ಅಲ್ಲದೇ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟಗಳನ್ನೂ ತಗ್ಗಿಸಿ ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತವೆ. ಕಣ್ಣೀರು ಬರದೆಯೇ ಈರುಳ್ಳಿ ಹಚ್ಚಲು ಇಲ್ಲಿದೆ ಸರಳ ಪರಿಹಾರ!

ಕ್ಯಾನ್ಸರ್‌ಗೂ ರಾಮಬಾಣ
ನಿತ್ಯವೂ ಈರುಳ್ಳಿಯನ್ನು ಸೇವಿಸುತ್ತಾ ಬರುವ ಮೂಲಕ ಹಲವು ಬಗೆಯ ಕ್ಯಾನ್ಸರ್‌‌ನಿಂದ ರಕ್ಷಣೆ ಪಡೆಯಬಹುದು. ವಿಶೇಷವಾಗಿ ಬಾಯಿಯ ಕ್ಯಾನ್ಸರ್, ಕರುಳು ಮತ್ತು ಗುದನಾಳ, ಮೂತ್ರಪಿಂಡ, ಪ್ರಾಸ್ಟೇಟ್ ಗ್ರಂಥಿ, ಸ್ತನ ಮೊದಲಾದ ಅಂಗಗಳಿಗೆ ತಗಲುವ ಕ್ಯಾನ್ಸರ್‌ನಿಂದ ರಕ್ಷಣೆ ಪಡೆಯಬಹುದು. ಇದರ ಕಮಟು ವಾಸನೆಗೆ ಗಂಧಕ ಕಾರಣವಾಗಿದ್ದು ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕರಿಸುತ್ತದೆ. ಅಲ್ಲದೇ ಈರುಳ್ಳಿ ಸೇವನಿಯಿಂದ ಉತ್ತಮ ನಿದ್ದೆಯೂ ಪಡೆಯಲು ಸಾಧ್ಯವಾಗುತ್ತದೆ. ಕೂದಲಿಗೆ ಈರುಳ್ಳಿ ರಸ-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಅಷ್ಟೇ ಅಲ್ಲ, ಈರುಳ್ಳಿಯಲ್ಲಿರುವ ಕ್ವೆರ್ಸಟಿನ್ (quercetin) ಎಂಬ ಫ್ಲೇವನಾಯ್ಡು ನಿದ್ರಾಜನಕ ಗುಣ ಹೊಂದಿದ್ದು ಮೆದುಳಿಗೆ ಉತ್ತಮ ಪ್ರಮಾಣದ ರಕ್ತಪರಿಚಲನೆಯನ್ನು ಒದಗಿಸುವ ಮೂಲಕ ಮಾನಸಿಕ ಉದ್ವೇಗ, ಒತ್ತಡ, ಖಿನ್ನತೆ ಮೊದಲಾದ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

English summary

Why You Should Eat Onions Everyday

Onions contain an extensive variety of natural substances that have the ability to fight against diseases and heal the human body. Our ancestors were aware of the medicinal value of onions and hence they consumed them on a regular basis, so as to defend themselves from any kind of illness and in order to help them to heal quickly.
X
Desktop Bottom Promotion