ಆರೋಗ್ಯ ಟಿಪ್ಸ್: ಜಗಿದು ತಿಂದರೆ ಜಿಗಿಯುವುದು ಆರೋಗ್ಯ!

By: Hemanth
Subscribe to Boldsky

ನಮಗೆ ಸಮಯ ಎಷ್ಟು ಕಡಿಮೆಯಾಗಿದೆಯೆಂದರೆ ದಿನಕ್ಕೆ 40 ಗಂಟೆಯಿದ್ದರೂ ಸಾಲದು ಎನ್ನುವಂತಾಗಿದೆ. ಅಷ್ಟೊಂದು ಕೆಲಸಗಳು ಪ್ರತೀದಿನವೂ ಬಾಕಿ ಉಳಿದಿರುತ್ತದೆ. ಈ ಒತ್ತಡದ ಕೆಲಸದ ಮಧ್ಯೆ ನಮಗೆ ಆರೋಗ್ಯವನ್ನು ನೋಡಿಕೊಳ್ಳಲು ಸಮಯವೇ ಇಲ್ಲದಾಗಿದೆ.

ಕೆಲಸದ ಒತ್ತಡದಿಂದಾಗಿ ತಿನ್ನುವ ಆಹಾರದ ಬಗ್ಗೆಯೂ ನಿರ್ಲಕ್ಷ್ಯ. ತಿನ್ನುವ ಆಹಾರವನ್ನು ಸರಿಯಾಗಿ ಜಗಿಯದೆ ಅವಸರದಲ್ಲಿ ಹಾಗೆ ನುಂಗುತ್ತೇವೆ. ಆಹಾರವನ್ನು ಸರಿಯಾಗಿ ಜಗಿಯುವುದರಿಂದ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಗೆ ಕೂಡ ಇದು ಸಹಕಾರಿಯಾಗಲಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  ಆಹಾರವನ್ನು ಹೇಗೆ ತಿನ್ನುವ ಅಭ್ಯಾಸ ನಿಮ್ಮದು?

ಸರಿಯಾಗಿ ಜಗಿಯದೆ ಇರುವ ಕಾರಣದಿಂದಾಗಿ ಹಲವಾರು ಅಜೀರ್ಣದ ಸಮಸ್ಯೆ ಕಾಣಿಸಿಕೊಳ್ಳಬಹುದು. ಸಣ್ಣ ಗಾತ್ರದ ಆಹಾರವನ್ನು ಬಾಯಿಗೆ ಹಾಕಿಕೊಂಡು ಅದನ್ನು ಸುಮಾರು 7-8 ಸಲ ಜಗಿಯುವುದು ಮುಖ್ಯವಾಗಿದೆ. ಇದನ್ನು ತುಂಬಾ ನಿಧಾನವಾಗಿ ಮಾಡಬೇಕಾಗಿದೆ. ಆಹಾರವನ್ನು ಸರಿಯಾಗಿ ಜಗಿದು ತಿನ್ನುವುದರಿಂದ ದೇಹಕ್ಕೆ ಆಗುವಂತಹ ಲಾಭಗಳು ಏನು ಎನ್ನುವುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.....  

ಜೀರ್ಣಕ್ರಿಯೆಗೆ ಸಹಕಾರಿ...

ಸರಿಯಾಗಿ ಆಹಾರವನ್ನು ಜಗಿದರೆ ಆಗ ಜೀರ್ಣಕ್ರಿಯೆಯ ವೇಳೆ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುತ್ತದೆ. ಜಗಿಯುವುದರಿಂದ ಆಹಾರದ ಗಾತ್ರ ತುಂಬಾ ಸಣ್ಣದಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಹೆಚ್ಚಿನ ಶ್ರಮವಿಲ್ಲದೆ ನಡೆಯುತ್ತದೆ. ಹೆಚ್ಚಿನ ಆಹಾರ ಹೀರಿಕೊಂಡು ಕಡಿಮೆ ಆಹಾರ ವ್ಯರ್ಥವಾಗುವುದು.

ದೇಹವು ಆಹಾರವನ್ನು ಬೇಗನೆ ಜೀರ್ಣಿಸಿಕೊಳ್ಳುವುದು

ದೇಹದಲ್ಲಿ ಜೀರ್ಣಕ್ರಿಯೆ ಎನ್ನುವುದು ತುಂಬಾ ಕಠಿಣ ಕೆಲಸವಾಗಿದೆ. ಇದು ದೇಹಕ್ಕೆ ದೊಡ್ಡ ಸವಾಲು. ಆದರೆ ಆಹಾರವನ್ನು ಸರಿಯಾಗಿ ಜಗಿದರೆ ಆಗ ದೇಹವು ಆಹಾರವನ್ನು ಬೇಗನೆ ಜೀರ್ಣಿಸಿಕೊಳ್ಳುವುದು. ಲಾಲಾರಸ ಆಹಾರವನ್ನು ಬೇಗನೆ ಜೀರ್ಣಿಸುವಂತೆ ಮಾಡುವುದು.

ತೂಕವು ಕಡಿಮೆಯಾಗುವುದು....

ನೀವು ಆಹಾರವನ್ನು ಹೆಚ್ಚಿಗೆ ಜಗಿದಾಗ ಕಡಿಮೆ ಆಹಾರ ತಿನ್ನುತ್ತೀರಿ. ನಿಧಾನವಾಗಿ ತಿನ್ನುವುದರಿಂದ ಕಡಿಮೆ ತಿನ್ನಬಹುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಇದರಿಂದ ದೇಹದ ತೂಕವು ಕಡಿಮೆಯಾಗುವುದು.

ಹಲ್ಲುಗಳಿಗೆ

ಆಹಾರಗಳನ್ನು ಸರಿಯಾಗಿ ಜಗಿಯುವುದರಿಂದ ಹಲ್ಲುಗಳಿಗೆ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಅಲ್ಲದೆ ಸರಿಯಾಗಿ ಜಗಿದರೆ ನಿಮ್ಮ ಹಲ್ಲುಗಳು ಬಲಿಷ್ಠವಾಗಿರುವುದು.

ಸ್ವಾದ ಹಾಗೂ ರುಚಿಯನ್ನು ಸವಿಯಬಹುದು

ಜಗಿಯುವುದರಿಂದ ಆಹಾರದ ಎಲ್ಲಾ ಸ್ವಾದ ಹಾಗೂ ರುಚಿಯನ್ನು ಸವಿಯಬಹುದು. ಇದರಿಂದ ನಿಮಗೆ ಒಳ್ಳೆಯ ಭಾವನೆಯಾಗುತ್ತದೆ. ಜಗಿಯುವುದರಿಂದ ಹಲವಾರು ರೀತಿಯ ಲಾಭಗಳಿವೆ.

ಲಾಲಾರಸ ಸ್ರವಿಸುತ್ತಾ ಇರುತ್ತದೆ

ಹೆಚ್ಚೆಚ್ಚು ಜಗಿದಾಗ ಲಾಲಾರಸ ಸ್ರವಿಸುತ್ತಾ ಇರುತ್ತದೆ. ಇದರಲ್ಲಿರುವ ಕೆಲವೊಂದು ಕಿಣ್ವಗಳು ಆಹಾರವನ್ನು ಹೊಡೆದುಹಾಕಿ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಆಹಾರದೊಂದಿಗೆ ಲಾಲಾರಸ ಸರಿಯಾಗಿ ಮಿಶ್ರಣವಾದಾಗ ಅದು ಲೂಬ್ರಿಕೆಂಟ್ ನಂತೆ ಕೆಲಸ ಮಾಡುತ್ತದೆ.

ಸರಿಯಾಗಿ ಜಗಿದು ಆಹಾರ ಸೇವಿಸಿ

ಸರಿಯಾಗಿ ಜಗಿಯದೆ ಇರುವಂತಹ ಆಹಾರವು ಸರಿಯಾಗಿ ಜೀರ್ಣವೂ ಆಗುವುದಿಲ್ಲ. ಇಂತಹ ಆಹಾರವು ಕರುಳಿನೊಳಗೆ ಪ್ರವೇಶಿಸಿದಾಗ ಅದನ್ನು ಬ್ಯಾಕ್ಟೀರಿಯಾ ವಿಂಗಡಿಸುತ್ತದೆ. ಈ ವೇಳೆ ಹೊಟ್ಟೆಯುಬ್ಬರ, ಮಲಬದ್ಧತೆ, ಭೇದಿ ಹಾಗೂ ಇತರ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Why You Must Chew Your Foods Properly

We gulp food in large bites and tend to mindlessly chew a bite and swallow the food. We are in a hurry. We need to go to the office or we are in a hurry to finish the lunch to carry on with the office tasks. But chewing must be taken as a mindful ritual, say health experts....read more
Please Wait while comments are loading...
Subscribe Newsletter