ಲಿಂಬೆ ತುಂಡು ಇರಿಸಿದ ಸಾಕ್ಸ್ ಧರಿಸಿ-ದುಪ್ಪಟ್ಟು ಲಾಭ ಪಡೆಯಿರಿ!

By: manu
Subscribe to Boldsky

ಕೆಲವರು ಯಾರಿಗೂ ಹೇಳದೇ ಕೆಲವು ಅಭ್ಯಾಸಗಳನ್ನು ಅನುಸರಿಸುತ್ತಿರುತ್ತಾರೆ. ಇತರರಿಗೆ ಇರಿಸು ಮುರಿಸು ಉಂಟಾದರೂ ಇದರ ನಿಜವಾದ ಗುಣವನ್ನು ಕಂಡಾಗ ಮಾತ್ರ ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ.  ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

ಉದಾಹರಣೆಗೆ ರಾತ್ರಿ ಮಲಗುವ ಮುನ್ನ ಕೊಂಚ ನಡೆಯುವ ಅಭ್ಯಾಸ. ಇದಕ್ಕಾಗಿ ಇವರು ನೆಚ್ಚಿನ ಧಾರಾವಹಿಯನ್ನೂ ಬಿಡಬಲ್ಲರು...! ಈ ಅಭ್ಯಾಸದ ಪರಿಣಾಮವನ್ನು ಕಂಡುಕೊಂಡರೆ ಮಾತ್ರ ಇದರ ಮಹತ್ವವನ್ನು ಅರಿಯಬಹುದು.     ಎಲೆಮರೆ ಕಾಯಿ ಲಿಂಬೆ: ಅದೇನು ಮಾಯೆ, ಅದೇನು ಜಾದೂ!

ಇಂತಹ ಇನ್ನೊಂದು ಅಭ್ಯಾಸವೆಂದರೆ ಕೆಲವು ಮಹಿಳೆಯರು ರಾತ್ರಿ ಮಲಗುವ ಮುನ್ನ ತಮ್ಮ ಕಾಲುಚೀಲದಲ್ಲಿ (ಸಾಕ್ಸ್) ಲಿಂಬೆ ಹಣ್ಣಿನ ತುಂಡೊಂದನ್ನು ಇರಿಸಿದ ಬಳಿಕವೇ ಮಲಗುತ್ತಾರೆ. ಬೆರಗು ಮೂಡಿತೇ? ಈ ಅಭ್ಯಾಸದಿಂದ ಯಾವ ಪ್ರಯೋಜನವಿದೆ, ಇದನ್ನು ಬಳಸುವುದು ಹೇಗೆ ಎಂಬುದನ್ನು ಮುಂದೆ ಓದಿ...   

ಹಂತ #1

ಒಂದು ಚೆನ್ನಾಗಿ ಹಣ್ಣಾದ ಲಿಂಬೆಯನ್ನು ಅಡ್ಡಲಾಗಿ ಎರಡು ಭಾಗವಾಗಿ ಕತ್ತರಿಸಿ. ಈ ಲಿಂಬೆ ಸಾಧ್ಯವಾದಷ್ಟು ದೊಡ್ಡದೇ ಇರಲಿ. ಚಿಕ್ಕಗಾತ್ರ ಅಷ್ಟೊಂದು ಪ್ರಯೋಜನವಿಲ್ಲ. ಈ ಲಿಂಬೆಯನ್ನು ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸವನ್ನು ಕೊಂಚ ನೀರಿಗೆ ಬೆರೆಸಿ ಮಲಗುವ ಮುನ್ನ ಕುಡಿಯಿರಿ, ಆದರೆ ಕಡ್ಡಾಯವಿಲ್ಲ. ಈ ವಿಧಾನಕ್ಕೆ ಲಿಂಬೆರಸ ಕುಡಿಯುವ ಅನಿವಾರ್ಯತೆ ಇಲ್ಲ.  

ಹಂತ#2

ಈಗ ಹಿಂಡಿ ಬಿಟ್ಟ ಆ ಎರಡೂ ಸಿಪ್ಪಿಗಳನ್ನು ಒಳಭಾಗ ಹೊರಬರುವಂತೆ ಬೆರಳಿನಿಂದ ನೂಕಿ ಚಪ್ಪಟೆಯಾಗಿಸಿ. ಈಗ ಹಣ್ಣಿನ ತೊಳೆಗಳು ಹಿಮ್ಮಡಿಯ ಅಡಿ ತಾಕುವಂತೆ ಇರಿಸಿ. ವಿಶೇಷವಾಗಿ ಹಿಮ್ಮಡಿಯಲ್ಲಿ ಬಿರುಕುಗಳು ಇರುವಲ್ಲಿ ಇರಿಸಿ.

ಹಂತ #3

ಬಳಿಕ ಹತ್ತಿಯ ಕಾಲುಚೀಲವೊಂದನ್ನು ಧರಿಸಿ ಈ ಲಿಂಬೆಯ ಸಿಪ್ಪೆ ಹಿಮ್ಮಡಿಯಿಂದ ಅಲ್ಲಾಡದಂತೆ ಭದ್ರಪಡಿಸಿ. ಮರುದಿನ ಬೆಳಿಗ್ಗೆ ಕಾಲುಚೀಲ (ಸಾಕ್ಸ್) ಕಳಚಿ ಲಿಂಬೆಸಿಪ್ಪೆಯನ್ನು ನಿವಾರಿಸಿ.

ದಿನದ ಸಮಯದಲ್ಲಿ ಸೂಕ್ತವಲ್ಲ

ಈ ವಿಧಾನವನ್ನು ದಿನದಲ್ಲಿ ಮಾಡಲು ಸಾಧ್ಯವಿಲ್ಲ. ನಿತ್ಯದ ಹಲವು ಕೆಲಸಗಳಿಗಾಗಿ ಅತ್ತಿತ್ತ ಓಡಾಡಬೇಕಾಗಿರುವ ಕಾರಣ ಇದು ಸಾಧ್ಯವಾಗುವುದಿಲ್ಲ. ಬದಲಿಗೆ ನಿತ್ಯವೂ ರಾತ್ರಿ ಸ್ವಚ್ಛ ಕಾಲುಚೀಲ ಧರಿಸಿ ಪ್ರತಿಬಾರಿ ಲಿಂಬೆಸಿಪ್ಪೆಯನ್ನು ಕೊಂಚವೇ ಇತರ ಬಿರುಕುಗಳಿರುವಲ್ಲಿ ಜರುಗಿಸಿ ಧರಿಸಿ. ಇದರಿಂದ ಕ್ರಮೇಣ ಹಿಮ್ಮಡಿಯ ಎಲ್ಲಾ ಬಿರುಕುಗಳು ಕೆಲವೇ ದಿನಗಳಲ್ಲಿ ತುಂಬಿಕೊಳ್ಳುತ್ತದೆ.

ಇತರ ಪ್ರಯೋಜನಗಳು

ಕೋಣೆಯಲ್ಲಿ ಲಿಂಬೆಯ ಪರಿಮಳ ತುಂಬಿಕೊಂಡಿದ್ದರೆ ಆಹ್ಲಾಕರವಾಗಿರುತ್ತದೆ. ಇದಕ್ಕಾಗಿ ಮಲಗುವ ಮುನ್ನ ಇನ್ನೊಂದು ಲಿಂಬೆಯನ್ನು ಕತ್ತರಿಸಿ ಮಂಚದ ಪಕ್ಕದಲ್ಲಿರಿಸಿ. ಲಿಂಬೆಯ ಪರಿಮಳ ಸುಖನಿದ್ದೆಗೆ ಸಹಕರಿಸುತ್ತದೆ.

ಗಾಢನಿದ್ದೆಗೆ ಪೂರಕ

ಸುಖನಿದ್ದೆ ಅಥವಾ ಗಾಢನಿದ್ದೆ ಪಡೆಯಲು ಕಷ್ಟಪಡುವವರು ಲಿಂಬೆಯ ಸುವಾಸನೆಯನ್ನು ಸೇವಿಸುತ್ತಾ ರಾತ್ರಿ ಮಲಗಿದರೆ ಸುಖನಿದ್ದೆ ಆವರಿಸುತ್ತದೆ ಎಂದು ಕೆಲವು ಸಂಶೋಧನೆಗಳ ಮೂಲಕ ತಿಳಿದುಬಂದಿದೆ.

ಬೆಳಿಗ್ಗೆದ್ದು ಏನು ಮಾಡಬೇಕು?

ಪ್ರತಿದಿನ ಬೆಳಿಗ್ಗೆದ್ದ ತಕ್ಷಣ ಕಾಲುಚೀಲ ಕಳಚಿ ಲಿಂಬೆಯ ಸಿಪ್ಪೆಯನ್ನು ತೆಗೆದುಬಿಡಬೇಕು. ಬಳಿಕ ಸ್ನಾನದ ಸಮಯದಲ್ಲಿ ಹಿಮ್ಮಡಿಗಳನ್ನು ನಯವಾಗಿ ಕಲ್ಲಿಗೆ ತಿಕ್ಕಿ ಬಿರುಕುಗಳ ಪಕ್ಕದ ದೃಢ ಚರ್ಮವನ್ನು ತೆಳುವಾಗಿಸಬೇಕು.

ಬೆಳಿಗ್ಗೆದ್ದು ಏನು ಮಾಡಬೇಕು?

ರಾತ್ರಿಯಿಡೀ ಲಿಂಬೆಯ ರಸದೊಂದಿಗಿದ್ದ ಚರ್ಮ ಸುಲಭವಾಗಿ ಸವೆಯುತ್ತದೆ. ಕೆಲವೇ ದಿನಗಳಲ್ಲಿ ಬಿರುಕುಗಳು ತುಂಬಿಕೊಂಡು ಪಾದಗಳು ಸೌಮ್ಯವಾಗುತ್ತವೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Friday, October 7, 2016, 14:59 [IST]
English summary

Why Some Women Put Lemon In Socks?

What Happens If You Put Cotton On Your Navel. Yes, the remedy involves putting lemon in socks. Some women do it every night.Some folk remedies sound meaningless but if they really work and do a good job in healing you, what else would you ask for? Well, this is one such remedy which could surprise you as there is no clear logic behind how it might work. Well, does it have any side effects? Of course no. But if you have sensitive skin or if you hate the smell of lemons, avoid it.
Please Wait while comments are loading...
Subscribe Newsletter