ವೈದ್ಯರಿಂದ ದೂರವಿರಲು, ದಿನಕ್ಕೊಂದು ಸೇಬು ಸಾಕು...

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುವುದು" ಈ ವಾಕ್ಯವನ್ನು ಚಿಕ್ಕಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ. ಬೇರೆಲ್ಲಾ ಹಣ್ಣುಗಳಿಗಿಂತ ಸೇಬಿನಲ್ಲಿರುವ ಪೋಷಕಾಂಶಗಳ ಆಗರವೇ ಇದಕ್ಕೆ ಕಾರಣ... ಮುಂದೆ ಓದಿ....

By: Hemanth
Subscribe to Boldsky

ಪ್ರಕೃತಿಯಲ್ಲಿ ಸಿಗುವ ಪ್ರತಿಯೊಂದು ಹಣ್ಣುಗಳು ಕೂಡ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಉಳಿಯಬಹುದು ಎನ್ನುವ ಮಾತಿದೆ. ಸೇಬಿನ ಬಗ್ಗೆ ಇಷ್ಟೆಲ್ಲಾ ಹೇಳಬೇಕಾದರೆ ಸೇಬಿನಲ್ಲಿ ಅಂತಹದ್ದೇನಿದೆ ಎಂದು ನಿಮಗೆ ಅಚ್ಚರಿಯಾಗಬಹುದು.   ಸೇಬು ಹಣ್ಣಿನಲ್ಲಿರುವ ಅತ್ಯದ್ಭುತ ಪ್ರಯೋಜನಗಳು

ಸೇಬಿನಲ್ಲಿರುವ ಕೆಲವೊಂದು ಆರೋಗ್ಯಕಾರಿ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ವಿಶ್ವದೆಲ್ಲೆಡೆಯಲ್ಲಿ ಬೆಳೆಯುವ ಸೇಬನ್ನು ಹಾಗೆ ತಿನ್ನಬಹುದು, ಅದರ ಜ್ಯೂಸ್ ಮಾಡಿಕೊಂಡು ಅಥವಾ ಐಸ್ ಕ್ರೀಂಗೆ ಸಲಾಡ್ ಮಾಡಿಕೊಂಡು ತಿನ್ನಬಹುದು. ವಿಟಮಿನ್ ಸಿ, ವಿಟಮಿನ್ ಬಿ, ನಾರಿನಾಂಶ, ಪೊಟಾಶಿಯಂ, ಕ್ಯಾಲ್ಸಿಯಂ, ಫೋಸ್ಪರಸ್ ಇತ್ಯಾದಿಗಳನ್ನು ಒಳಗೊಂಡಿರುವ ಸೇಬು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೇಬಿನಲ್ಲಿರುವ ಹತ್ತು ಹಲವಾರು ಆರೋಗ್ಯಕಾರಿ ಗುಣಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ... ಮುಂದೆ ಓದಿ... 

ಮಧುಮೇಹ(ಡಯಾಬಿಟಿಸ್) ವಿರೋಧಿ

ವಾರದಲ್ಲಿ ಮೂರು ಸೇಬನ್ನು ತಿನ್ನುವ ವ್ಯಕ್ತಿಗಳು ಎರಡನೇ ಮಟ್ಟದ( ಟೈಪ್ 2) ಮಧುಮೇಹಕ್ಕೆ ಒಳಗಾಗುವ ಸಾಧ್ಯತೆ ತುಂಬಾ ಕಡಿಮೆ. ಈ ಹಣ್ಣಿನಲ್ಲಿರುವ ಪೊಲ್ಯಪೆನೊಲ್ಸ್ ಎನ್ನುವ ಅಂಶವು ಕಾರ್ಬೋಹೈಡ್ರೆಟ್ಸ್ ಅನ್ನು ಹೀರಿಕೊಳ್ಳಲು ತುಂಬಾ ಸಹಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ತೂಕ ಕಳೆದುಕೊಳ್ಳಲು ಸಹಕಾರಿ

ಹೆಚ್ಚಿನ ನಾರಿನಾಂಶ ಮತ್ತು ಕಡಿಮೆ ಕ್ಯಾಲರಿ ಒಳಗೊಂಡಿರುವ ಸೇಬು ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ತುಂಬಾ ಸಹಕಾರಿ. ನಾರಿನಾಂಶ ಅಧಿಕವಾಗಿರುವ ಕಾರಣದಿಂದ ಸೇಬು ತಿಂದ ಬಳಿಕ ಹೊಟ್ಟೆ ತುಂಬಿದಂತೆ ಆಗುತ್ತದೆ. ಇದರಿಂದ ಅತಿಯಾಗಿ ತಿನ್ನುವುದು ಕಡಿಮೆಯಾಗುತ್ತದೆ.

ಹೃದಯದ ಕಾಯಿಲೆಯಿಂದ ದೂರವಿರಿಸುತ್ತದೆ

ಸೇಬಿನಲ್ಲಿರುವ ಇರುವಂತಹ ಪೈಥೋನ್ಯೂಟ್ರಿಯಂಟ್ಸ್ ಹೃದಯನಾಳದ ವ್ಯವಸ್ಥೆಯಲ್ಲಿ ಉತ್ಕರ್ಷಣಶೀಲ ಹಾನಿಯನ್ನು ತಡೆದು ಇದರಿಂದ ಬರುವ ಕಾಯಿಲೆಗಳನ್ನು ತಡೆಯುತ್ತದೆ. ಸೇಬಿನಲ್ಲಿರುವ ಪೆಕ್ಟಿನ್ ಎನ್ನುವ ಅಂಶವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯನಾಳಗಳಲ್ಲಿ ತಡೆಯಾಗುವುದನ್ನು ತಪ್ಪಿಸುತ್ತದೆ.

ಮೂಳೆಗಳಿಗೆ ಶಕ್ತಿ

ಸೇಬಿನಲ್ಲಿರುವ ಇರುವಂತಹ ಕ್ಯಾಲ್ಸಿಯಂ ಮೂಲೆಗಳಿಗೆ ಶಕ್ತಿ ನೀಡುವುದು. ಇದರಲ್ಲಿರುವ ವಿಶೇಷವಾದ ಖನಿಜಾಂಶ ಬೊರೊನ್ ಮೂಳೆಗಳನ್ನು ಬಲಿಷ್ಠಗೊಳಿಸಿ ಮುರಿತದಿಂದ ತಡೆಯುತ್ತದೆ. ಫ್ಲೊರಿಡ್ಜಿನ್ ಎನ್ನುವ ಫ್ಲೆವನಾಯ್ಡ್ ಅಂಶವು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಅಸ್ಥಿರಂಧ್ರತೆಯನ್ನು ಕಡಿಮೆ ಮಾಡುತ್ತದೆ.

ಕಣ್ಣುಗಳ ದೃಷ್ಟಿಗೆ

ಸೇಬಿನಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶವು ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ತುಂಬಾ ಸಹಕಾರಿಯಾಗಿದೆ.

ಯಕೃತ್ ಸ್ವಚ್ಛಗೊಳಿಸಲು

ಸೇಬಿನಲ್ಲಿರುವಂತಹ ಪೆಕ್ಟಿನ್ ಅಂಶವು ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಜೀರ್ಣ ಕ್ರಿಯೆ ವೇಳೆ ದೇಹದಲ್ಲಿರುವ ವಿಷಕಾರಿ ಅಂಶ ಹಾಗೂ ಬೇಡದ ತ್ಯಾಜ್ಯಗಳನ್ನು ಇದು ಹೊರಹಾಕುತ್ತದೆ. ಸ್ವಚ್ಛವಾಗಿರುವ ಯಕೃತ್ ನಿಂದ ಅಜೀರ್ಣ ಸಮಸ್ಯೆ, ತಲೆನೋವು, ಅಲರ್ಜಿ ಇತ್ಯಾದಿ ಸಮಸ್ಯೆಗಳು ದೇಹವನ್ನು ಕಾಡುವುದಿಲ್ಲ.

ಕ್ಯಾನ್ಸರ್ ವಿರೋಧಿ

ಸೇಬಿನಲ್ಲಿರುವಂತಹ ಉರಿಯೂತ ಶಮನಕಾರಿ ಗುಣ ಹಾಗೂ ಫೈಥೋಕೆಮಿಕಲ್ ಕೋಶಗಳ ಒಳಗೆ ಕ್ಯಾನ್ಸರ್ ಕಾರಿ ಅಂಶಗಳು ಹೋಗಿ ತೊಂದರೆ ಮಾಡುವುದನ್ನು ತಡೆಯುತ್ತದೆ. ಕ್ಯಾನ್ಸರ್ ಗಡ್ಡೆಗಳು ಬೆಳವಣಿಗೆ ಆಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಕ್ಯಾನ್ಸರ್‌ನ ಕೋಶಗಳು ಸತ್ತು ಹೋಗುತ್ತದೆ. ಸೇಬು ತಿನ್ನುವುದರಿಂದ ಕರುಳು, ಶ್ವಾಸಕೋಶ, ಸ್ತನ ಮತ್ತು ಯಕೃತ್ ನ ಕ್ಯಾನ್ಸರ್ ಅನ್ನು ತಡೆಯುತ್ತದೆ.

ಅಸ್ತಮಾಗೆ ಒಳ್ಳೆಯದು

ವಾರದಲ್ಲಿ ಎರಡರಿಂದ ಐದು ಸೇಬನ್ನು ತಿಂದರೆ ಅಸ್ತಮಾದಿಂದ ಬಳಲುವ ಸಾಧ್ಯತೆ ತುಂಬಾ ಕಡಿಮೆಯಾಗುತ್ತದೆ. ಸೇಬಿನಲ್ಲಿರುವ ಫ್ಲಾವನಾಯ್ಡ್ ಉಸಿರಾಟದ ವೇಳೆ ಉಂಟಾಗುವಂತಹ ಉರಿಯೂತವನ್ನು ಕಡಿಮೆ ಮಾಡುತ್ತದೆ. ಸೇಬಿನಲ್ಲಿರುವ ವಿಟಮಿನ್ ಸಿ ಯಕೃತ್ ಅನ್ನು ಆರೋಗ್ಯಕಾರಿ ಹಾಗೂ ವಿಷದಿಂದ ಮುಕ್ತವಾಗಿಡುತ್ತದೆ.

ಹೊಳೆಯುವ ಹಲ್ಲುಗಳಿಗಾಗಿ

ಸೇಬಿನಲ್ಲಿರುವಂತಹ ಆ್ಯಸಿಡ್ ಗುಣವು ಹಲ್ಲುಗಳಲ್ಲಿ ಇರುವಂತಹ ಹಳದಿ ಬಣ್ಣವನ್ನು ತೆಗೆದುಹಾಕಿ ಬಿಳಿಯಾಗಿ ಹೊಳೆಯುವಂತೆ ಮಾಡುತ್ತದೆ. ಹಲ್ಲುಗಳ ಸಮಸ್ಯೆ ಬರದಂತೆ ತಡೆಯಲು ಸೇಬು ತಿಂದ ಬಳಿಕ ಬಾಯಿ ತೊಳೆಯಿರಿ.

ಮೆದುಳಿನ ಆರೋಗ್ಯಕ್ಕೆ

ಸೇಬಿನಲ್ಲಿರುವ ಕ್ವೆರಾಸೆಟಿನ್ ಎನ್ನುವ ಉರಿಯೂತ ಶಮನಕಾರಿ ಗುಣವು ಮೆದುಳಿನ ಕೋಶಗಳನ್ನು ರಕ್ಷಿಸಿ ಮೆದುಳಿನ ಕಾರ್ಯಕ್ಷಮತೆ ಹಾಗೂ ಆರೋಗ್ಯವನ್ನು ಸುಧಾರಣೆ ಮಾಡುತ್ತದೆ. ಸೇಬು ತಿನ್ನುವುದರಿಂದ ಅಲ್ಜಿಮರ್ ಮತ್ತು ಬುದ್ಧಿಮಾಂದ್ಯತೆಯನ್ನು ತಡೆಯಬಹುದು.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Why Should We Eat Apples Often?

We all have known it by heart by now that an apple a day keeps the doctor away. So, what exactly are the benefits that this fruit offers to our health that make it an equivalent to a doctor?
Please Wait while comments are loading...
Subscribe Newsletter