For Quick Alerts
ALLOW NOTIFICATIONS  
For Daily Alerts

ಹಾಲು v/s ಬಾದಾಮಿ ಹಾಲು ಇವೆರಡರಲ್ಲಿ ಯಾರು ಹಿತವರು?

By Hemanth
|

ಪ್ರಕೃತಿಯು ಮನುಷ್ಯನಿಗೆ ನೀಡಿರುವ ವರವೆಂದರೆ ಅದು ಹಾಲು. ಹಾಲಿನಲ್ಲಿರುವಂತಹ ಪೋಷಕಾಂಶಗಳು ಬೇರೆ ಯಾವುದೇ ವಸ್ತುಗಳಲ್ಲಿ ಇಲ್ಲವೆನ್ನಬಹುದು. ಹೆಚ್ಚಾಗಿ ಸಸ್ತನಿಗಳು ತಮ್ಮ ಆಹಾರ ಕ್ರಮವನ್ನು ಆರಂಭಿಸುವುದೇ ಹಾಲಿನಿಂದ. ಹೀಗಾಗಿ ಹಾಲು ನಮಗೆ ತುಂಬಾ ಮುಖ್ಯವೆನಿಸುತ್ತದೆ.

milk

ಹಾಲಿನಲ್ಲಿರುವ ಪೋಷಕಾಂಶಗಳು ದೇಹದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ತಾಯಿಯ ಎದೆಹಾಲಿನಿಂದ ಹಿಡಿದು ದನ, ಎಮ್ಮೆ, ಆಡು ಹೀಗೆ ಹಲವಾರು ಪ್ರಾಣಿಗಳ ಹಾಲನ್ನು ನಾವು ಸೇವನೆ ಮಾಡುತ್ತೇವೆ. ಆದರೆ ಹಾಲಿನಂತೆಯೇ ಪೋಷಕಾಂಶಗಳನ್ನು ಹೊಂದಿರುವಂತಹ ಬಾದಾಮಿ ಹಾಲಿನ ಬಗ್ಗೆ ಕೇಳಿದ್ದೀರಾ? ಹಾಲು-ಜೇನಿನ ಜೋಡಿಯನ್ನು ಎಷ್ಟು ಹೊಗಳಿದರೂ ಸಾಲದು!

ನಾವು ಬಾದಾಮಿಯನ್ನು ತಿಂದಿದ್ದೇವೆ. ಆದರೆ ಅದರ ಹಾಲಿನ ಬಗ್ಗೆ ಅಷ್ಟೊಂದು ತಿಳುವಳಿಕೆ ನಮ್ಮಲ್ಲಿ ಇಲ್ಲ. ಹೆಚ್ಚಾಗಿ ಸಿಹಿ ತಿಂಡಿಗಳಲ್ಲಿಯೂ ಬಾದಾಮಿಯನ್ನು ಬಳಸುತ್ತಾರೆ. ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲ, ವಿಟಮಿನ್ ಇ, ವಿಟಮಿನ್ಎ, ಪ್ರೋಟೀನ್ ಇತ್ಯಾದಿ ಪೋಷಕಾಂಶಗಳು ಇವೆ.

ಬಾದಾಮಿ ಸಾರದಿಂದ ಮಾಡಲಾಗಿರುವ ಬಾದಾಮಿ ಹಾಲು ದೇಹಕ್ಕೆ ಪುನಶ್ಚೇತನವನ್ನು ನೀಡಿ ದೇಹವನ್ನು ಪೋಷಿಸುತ್ತದೆ. ದನದ ಹಾಲು ಹೆಚ್ಚು ಪೋಷಕಾಂಶಗಳನ್ನು ಪಡೆದುಕೊಂಡಿದೆ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ದನದ ಹಾಲಿಗಿಂತಲೂ ಬಾದಾಮಿ ಹಾಲು ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ನಾವು ತಿಳಿದುಕೊಳ್ಳುವ. ಆಹಾ ಎಮ್ಮೆ ಹಾಲು, ನಿನಗೆ ಸರಿಸಾಟಿ ಯಾರು..?

ದನದ ಹಾಲು ಆರೋಗ್ಯಕಾರಿ ಅಲ್ಲ ಯಾಕೆ?
ದನದ ಹಾಲು ಸಾವಯವವಾಗಿರದಿದ್ದರೆ ಅದರಲ್ಲಿ ಹಲವಾರು ರೀತಿಯ ಹಾರ್ಮೋನುಗಳು ಒಳಗೊಂಡಿರುತ್ತದೆ. ಇದರಿಂದ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಕಾಯಿಲೆಗಳನ್ನು ತಡೆಯಲು ದನಗಳಿಗೆ ಆ್ಯಂಟಿಬಯೋಟಿಕ್ ಇಂಜೆಕ್ಷನ್ ಚುಚ್ಚಲಾಗುತ್ತದೆ ಮತ್ತು ಹೆಚ್ಚು ಹಾಲು ನೀಡಲು ಹಾರ್ಮೋನು ನೀಡಲಾಗುತ್ತದೆ. ಹಾಲು-ಅರಿಶಿನದ ಜೋಡಿ ಮಾಡಲಿದೆ ಕಮಾಲಿನ ಮೋಡಿ!

ಒಂದು ಲೋಟ ದನದ ಹಾಲನ್ನು ಕುಡಿದಾಗ ದೇಹದೊಳಗೆ 60 ರೀತಿಯ ವಿವಿಧ ಹಾರ್ಮೋನುಗಳು, ಕೀಟನಾಶಕಗಳು ಹಾಗೂ ಆ್ಯಂಟಿಬಯೋಟಿಕ್ ಗಳು ದೇಹವನ್ನು ಸೇರುತ್ತದೆ. ಹಾಲನ್ನು ಕುಡಿದಾಗ ನಿಮ್ಮ ದೇಹಕ್ಕೆ ರಾಸಾಯನಿಕಗಳಿಂದ ಎಷ್ಟು ಹಾನಿಯಾಗಬಹುದು ಎಂದು ನೀವೇ ಯೋಚಿಸಿ. ಇಂತಹ ರಾಸಾಯನಿಕಗಳು ದೇಹವನ್ನು ಸೇರಿದರೆ ಅದರಿಂದ ಗುಳ್ಳೆಗಳು, ಪ್ರತಿರೋಧಕ ವ್ಯವಸ್ಥೆಯಲ್ಲಿ ದುರ್ಬಲತೆ, ಜೀರ್ಣಕ್ರಿಯೆ ಸಮಸ್ಯೆ, ಹಾರ್ಮೋನು ಅಸಮತೋಲನ, ಬಂಜೆತನ ಇತ್ಯಾದಿ ಉಂಟಾಗಲಿದೆ.

ಬಾದಾಮಿ ಹಾಲು ಹೆಚ್ಚು ಆರೋಗ್ಯಕರವೇಕೇ?
ಬಾದಾಮಿ ಹಾಲು ಶೇಕಡಾ ನೂರರಷ್ಟು ನೈಸರ್ಗಿಕ ಹಾಗೂ ಸುರಕ್ಷಿತವಾಗಿರುವ ಹಿನ್ನೆಲೆಯಲ್ಲಿ ಇಂದು ವಿಶ್ವದೆಲ್ಲೆಡೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಇದನ್ನು ಮೊದಲನೇಯದಾಗಿ ಪರಿಗಣಿಸುತ್ತಾರೆ. ವಿವಿಧೆಡೆಯಲ್ಲಿ ಸಿಗುವುದರಿಂದ ಹೆಚ್ಚಿನವರು ಇದನ್ನು ಬಳಕೆ ಮಾಡಲು ಆರಂಭಿಸಿದ್ದಾರೆ.


ಬಾದಾಮಿ ಹಾಲಿನಲ್ಲಿ ಆರೋಗ್ಯಕಾರಿ ಕೊಬ್ಬು ಇರುವ ಕಾರಣ ಇದರಿಂದ ದೇಹದ ತೂಕ ಹೆಚ್ಚುವುದಿಲ್ಲ. ಬಾದಾಮಿ ಹಾಲಿನಲ್ಲಿ ಲ್ಯಾಕ್ಟೋಸ್ ಇಲ್ಲದೆ ಇರುವ ಕಾರಣದಿಂದಾಗಿ ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವವರು ಬಾದಾಮಿ ಹಾಲನ್ನು ಬಳಸಬಹುದು. ಬಾದಾಮಿ ಹಾಲಿನ ಸೇವನೆಯಿಂದ ಕಾಂತಿಯುತ ಹಾಗೂ ಹೊಳೆಯುವ ತ್ವಚೆ ಸಿಗುವುದು, ಕ್ಯಾನ್ಸರ್ ತಡೆಗಟ್ಟುವುದು, ಸ್ನಾಯುಗಳನ್ನು ಬಳಪಡಿಸಲು ಇದು ನೆರವಾಗುವುದು. ಇದು ದನದ ಹಾಲಿಗೆ ಒಂದು ಒಳ್ಳೆಯ ಪರ್ಯಾಯವಾಗಿದೆ. ದಿನನಿತ್ಯ ತುಳಸಿ ಬೆರೆಸಿದ ಹಾಲು ಕುಡಿಯಿರಿ- ಆರೋಗ್ಯ ಪಡೆಯಿರಿ
English summary

Why Is It Healthier To Switch From Cow's Milk To Almond Milk?

Milk, the epitome of healthy drinks, has been glorified since times immemorial for its numerous health benefits, right? Well, what if we told you that there might be a healthier alternative - almond milk! Yes, that's right. Now, many of us would not be familiar with the many health benefits of almond milk.
Story first published: Thursday, November 24, 2016, 18:59 [IST]
X
Desktop Bottom Promotion