For Quick Alerts
ALLOW NOTIFICATIONS  
For Daily Alerts

ಇನ್ನು ಟೀ ಕುಡಿಯುವ ಮೊದಲು 'ರಕ್ತದ ಗುಂಪು' ತಿಳಿದಿರಲಿ!

By Arshad
|

ಹಿಂದೆಲ್ಲಾ ಟೀಪುಡಿ ಎಂದಿದ್ದರೆ ಅದು ಬ್ರೂಕ್ ಬಾಂಡ್ ಸುಪರ್ ಡಸ್ಟ್ ಟೀ ಎಂಬ ಒಂದೇ ಒಂದು ಬಗೆಯದ್ದಾಗಿತ್ತು. ಟೀಪುಡಿಯಲ್ಲಿಯೂ ವೈವಿಧ್ಯಗಳಿವೆ ಎಂದು ಭಾರತೀಯರಿಗೆ ತೋರಿದ್ದು ತೀರಾ ಇತ್ತೀಚೆಗೆ. ಇಂದು ಮಾರುಕಟ್ಟೆಯಲ್ಲಿ ಕಪ್ಪು ಚಹಾದಲ್ಲಿಯೇ ಸರಿಸುಮಾರು ಹತ್ತಕ್ಕೂ ಹೆಚ್ಚು ಬಗೆಯ ಟೀಪುಡಿ ಲಭ್ಯವಿವೆ. ಇದರೊಂದಿಗೆ ಕೆಲವು ಸಾಂಬಾರಗಳನ್ನು, ಗಿಡಮೂಲಿಕೆಗಳನ್ನು ಸೇರಿಸಿದರೆ ಈ ವೈವಿಧ್ಯತೆ ಇನ್ನಷ್ಟು ಹೆಚ್ಚುತ್ತದೆ.

ಆದರೆ ಎಲ್ಲಾ ವಿಧದ ಆಹಾರಗಳು ಎಲ್ಲರಿಗೂ ಒಗ್ಗುವುದಿಲ್ಲ. ಅಂತೆಯೇ ಟೀ ಸಹಾ. ಅದರಲ್ಲೂ ಪ್ರತಿ ಗುಂಪಿನ ರಕ್ತದವರಿಗೆ ಪ್ರತ್ಯೇಕವಾದದ್ದೇ ಆಯ್ಕೆಗಳಿರುತ್ತವೆ. ಈ ಆಯ್ಕೆಗಳು ಯಾವುದು, ಯಾವ ಆಹಾರ ಯಾವ ರಕ್ತದ ಗುಂಪಿನವರಿಗೆ ಸೂಕ್ತ ಎಂಬ ಬಗ್ಗೆ ಕೆಲವು ಸಂಶೋಧನೆಗಳು ನಡೆದಿವೆ. ಏಕೆಂದರೆ ಪ್ರತಿ ರಕ್ತದ ಗುಂಪು ಆ ವ್ಯಕ್ತಿಯ ಆರೋಗ್ಯವನ್ನು ಪತ್ತೆಹಚ್ಚಲು ಹೆಚ್ಚಿನ ನೆರವು ನೀಡುತ್ತದೆ. ಉದಾಹರಣೆಗೆ ಎ ಗುಂಪಿನ ರಕ್ತದ ಜನರು ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ಧಾಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಅಂದರೆ ಅವರಲ್ಲಿ ಈ ಬ್ಯಾಕ್ಟೀರಿಯಾಗಳನ್ನು ಎದುರಿಸುವ ಕ್ಷಮತೆ ಉಳಿದ ರಕ್ತದ ಗುಂಪಿನವರಿಗಿಂತ ಕಡಿಮೆ ಇರುತ್ತದೆ. ವ್ಯಕ್ತಿಯ ರಕ್ತದ ಗುಂಪು, ಆತನ ಜಾತಕವನ್ನೇ ಬಿಚ್ಚಿಡುತ್ತದೆ!

ಅಂತೆಯೇ ಒ ಗುಂಪಿನ ರಕ್ತದ ಜನರಿಗೆ ಕರುಳಿನ ಹುಣ್ಣು, ಎಬಿ ಮತ್ತು ಬಿ ಗುಂಪಿನ ರಕ್ತದ ಜನರಿಗೆ ಸ್ಥೂಲಕಾಯ ಬೇಗನೇ ಆವರಿಸುತ್ತದೆ. ಆದ್ದರಿಂದ ರಕ್ತದ ಗುಂಪಿಗೆ ಹೊಂದುವ ಟೀ ಸೇವಿಸುವ ಮೂಲಕ ಈ ತೊಂದರೆಗಳ ಸಾಧ್ಯತೆಯನ್ನು ಸಾಕಷ್ಟು ಕಡಿಮೆಗೊಳಿಸಬಹುದು. ಪ್ರತಿ ವಿಧದ ಟೀ ಯಲ್ಲಿ ಪ್ರತ್ಯೇಕವಾದ ಪೋಷಕಾಂಶಗಳಿದ್ದು ಆಯಾ ರಕ್ತದ ಗುಂಪಿನ ವ್ಯಕ್ತಿಗಳಿಗೆ ಗರಿಷ್ಟ ಉಪಯೋಗ ನೀಡಬಲ್ಲುದು. ಆದರೆ ಯಾವಗುಂಪಿನವರಿಗೆ ಯಾವ ಟೀ ಉತ್ತಮ? ಈ ಪ್ರಶ್ನೆಗೆ ಕೆಳಗಿನ ಸ್ಲೈಡ್ ಷೋ ಸಮರ್ಪಕ ಉತ್ತರ ನೀಡುತ್ತದೆ.

ಎ ಗುಂಪಿನ ರಕ್ತದ ವ್ಯಕ್ತಿಗಳು

ಎ ಗುಂಪಿನ ರಕ್ತದ ವ್ಯಕ್ತಿಗಳು

ಈ ಗುಂಪಿನ ವ್ಯಕ್ತಿಗಳಿಗೆ ಒತ್ತಡ ಸಹಿಸುವ ಶಕ್ತಿ ಉಳಿದವರಿಗಿಂತ ಕಡಿಮೆ. ಇವರು ಅತಿ ಸೂಕ್ಷ್ಮಸಂವೇದಿಗಳೂ ಆಗಿರುವ ಕಾರಣ ನಿತ್ಯದ ಹಲವು ಬಗೆಯ ಒತ್ತಡಗಳು ಇವರ ಆರೋಗ್ಯವನ್ನು ಸದಾ ಬಾಧಿಸುತ್ತವೆ.ಇವರಿಗೆ ಒತ್ತಡವನ್ನು ಕಡಿಮೆಗೊಳಿಸುವ ಹಾಗೂ ಮನಸ್ಸಿಗೆ ಮುದ ನೀಡುವ ಆಹಾರಗಳು ಉತ್ತಮ.

ಎ ಗುಂಪಿನ ರಕ್ತದ ವ್ಯಕ್ತಿಗಳಿಗೆ ಸೂಕ್ತವಾದ ಟೀ

ಎ ಗುಂಪಿನ ರಕ್ತದ ವ್ಯಕ್ತಿಗಳಿಗೆ ಸೂಕ್ತವಾದ ಟೀ

ಇವರಿಗೆ ಹಸಿರು ಟೀ, ಮಾರಿಗೋಲ್ಡ್ ಟೀ, ಥೈಮ್ ಟೀ ಮತ್ತು ಜಾಸ್ಮಿನ್ ಟೀ ಉತ್ತಮ. ಇವುಗಳಲ್ಲಿ ಮೆದುಳಿಗೆ ಆರಾಮ ನೀಡುವ ಮತ್ತು ಒತ್ತಡವನ್ನು ಕಡಿಮೆಗೊಳಿಸುವ ಗುಣಗಳಿದ್ದು ಎ ಗುಂಪಿನ ರಕ್ತದ ವ್ಯಕ್ತಿಗಳಿಗೆ ಉತ್ತಮವಾಗಿದೆ.

ಬಿ ಗುಂಪಿನ ರಕ್ತದ ವ್ಯಕ್ತಿಗಳು

ಬಿ ಗುಂಪಿನ ರಕ್ತದ ವ್ಯಕ್ತಿಗಳು

ಈ ಗುಂಪಿನ ವ್ಯಕ್ತಿಗಳು ಸ್ಥೂಲಕಾಯಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಏಕೆಂದರೆ ಕೊಬ್ಬನ್ನು ಕರಗಿಸುವ ಯಾವುದೇ ಕೆಲಸಕ್ಕೆ ಇವರು ಅತೀವವಾದ ಸೋಮಾರಿತನವನ್ನು ತೋರುತ್ತಾರೆ.

ಬಿ ಗುಂಪಿನ ರಕ್ತದ ವ್ಯಕ್ತಿಗಳು

ಬಿ ಗುಂಪಿನ ರಕ್ತದ ವ್ಯಕ್ತಿಗಳು

ಅಲ್ಲದೇ ಇವರ ಜೀವರಾಸಾಯನಿಕ ಕ್ರಿಯೆಯೂ ನಿಧಾನವಾಗಿದ್ದು ಯಾವುದೇ ದೈಹಿಕ ಚಟುವಟಿಕೆಯಿಂದ ಇವರು ಶೀಘ್ರವಾಗಿ ದಣಿವಿಗೆ ಮಣಿಯುತ್ತಾರೆ. ಇವರು ಸದಾ ಸುಸ್ತು ಮತ್ತು ಚಡಪಡಿಕೆಯನ್ನು ತೋರ್ಪಡಿಸುತ್ತಾ ಇರುತ್ತಾರೆ. ಇವರಿಗೆ ನಿದ್ದೆಯೂ ಬೇಗನೇ ಹತ್ತುವುದಿಲ್ಲ.

ಬಿ ಗುಂಪಿನ ರಕ್ತದ ವ್ಯಕ್ತಿಗಳಿಗೆ ಸೂಕ್ತವಾದ ಟೀ

ಬಿ ಗುಂಪಿನ ರಕ್ತದ ವ್ಯಕ್ತಿಗಳಿಗೆ ಸೂಕ್ತವಾದ ಟೀ

ಇವರಿಗೆ Melissa officinalis ಅಥವಾ ಲೆಮನ್ ಬಾಮ್ (lemon balm) ಟೀ, ಸೇಜ್ ಎಲೆಗಳ ಟೀ, elderberry ಟೀ, rooibos ಟೀ, ಕೆಂಪು ಟೀ, ಅಥವಾ ಹಸಿರು ಟೀ ಉತ್ತಮವಾಗಿದೆ. ಇವು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಹೆಚ್ಚಿನ ಚಟುವಟಿಕೆಗೆ ಪ್ರಚೋದಿಸುತ್ತವೆ ಹಾಗೂ ರಾತ್ರಿ ಉತ್ತಮ ನಿದ್ದೆ ಬರಲೂ ನೆರವಾಗುತ್ತವೆ.

ಎಬಿ ಗುಂಪಿನ ರಕ್ತದ ವ್ಯಕ್ತಿಗಳು

ಎಬಿ ಗುಂಪಿನ ರಕ್ತದ ವ್ಯಕ್ತಿಗಳು

ಇವರು ಸಾಮಾನ್ಯವಾಗಿ ಹೆಚ್ಚು ಕ್ರಿಯಾತ್ಮಕರಾಗಿದ್ದು ಕಲ್ಪನೆಯಲ್ಲಿ ಬಹಳಷ್ಟನ್ನು ನೋಡಬಲ್ಲರು. ಇವರು ಕುತೂಹಲಿಗರೂ ಹೌದು. ಇವರು ಒತ್ತಡವನ್ನು ಸಮರ್ಥವಾಗಿ ನಿಭಾಯಿಸಬಲ್ಲವರಾಗಿದ್ದರೂ ಪ್ರಣಯದ ವಿಷಯದಲ್ಲಿ ಬಹಳ ನಿಧಾನಿಗಳು. ಇವರಿಗೆ ಕಾಫಿ ಸರ್ವಥಾ ತಕ್ಕುದಲ್ಲ, ಬದಲಿಗೆ ಟೀ ಸೇವಿಸುವುದು ಉತ್ತಮ.

ಎಬಿ ಗುಂಪಿನ ರಕ್ತದ ವ್ಯಕ್ತಿಗಳಿಗೆ ಸೂಕ್ತವಾದ ಟೀ

ಎಬಿ ಗುಂಪಿನ ರಕ್ತದ ವ್ಯಕ್ತಿಗಳಿಗೆ ಸೂಕ್ತವಾದ ಟೀ

ಈ ವ್ಯಕ್ತಿಗಳು ಪುದಿನಾ ಎಲೆ ಸೇರಿಸಿದ ಹಾಲಿಲ್ಲದ ಕಪ್ಪು ಟೀ, ಕ್ಯಾನ್ಬೆರಿ ಟೀ, ಲ್ಯಾವೆಂಡರ್ ಟೀ, ಹಸಿರು ಟೀ ಮತ್ತು ಹಳದಿ ಟೀ ಸೇವಿಸುವುದು ಉತ್ತಮ. ಇವು ಮನಸ್ಸಿನ ದುಗುಡವನ್ನು ನಿವಾರಿಸಿ ಪ್ರಣಯದ ವಾಂಛೆಯನ್ನು ಹೆಚ್ಚಿಸುವ ಮೂಲಕ ಜೀವನದಲ್ಲಿ ಹೆಚ್ಚಿನ ಆನಂದವನ್ನು ಪಡೆಯಲು ನೆರವಾಗುತ್ತವೆ.

ಒ ಗುಂಪಿನ ರಕ್ತದ ವ್ಯಕ್ತಿಗಳು

ಒ ಗುಂಪಿನ ರಕ್ತದ ವ್ಯಕ್ತಿಗಳು

ಇವರಿಗೆ ಹೊಟ್ಟೆಯಲ್ಲಿ ಆಮ್ಲೀಯತೆಯ, ಅಜೀರ್ಣ ಸಂಬಂಧಿ ತೊಂದರೆಗಳು ಹೆಚ್ಚು ಕಾಟ ಕೊಡುತ್ತವೆ. ಇವರು ಒತ್ತಡವನ್ನು ಸಮರ್ಥವಾಗಿ ನಿಭಾಯಿಸಬಲ್ಲವರೂ ಕಠಿಣಶ್ರಮಿಗಳೂ ಆಗಿರುತ್ತಾರೆ. ಆದರೆ ಇವರಿಗೂ ಕಾಫಿ ತಕ್ಕುದಲ್ಲ. ಬದಲಿಗೆ ಟೀ ಸೇವನೆ ಉತ್ತಮ.

ಒ ಗುಂಪಿನ ರಕ್ತದ ವ್ಯಕ್ತಿಗಳಿಗೆ ಸೂಕ್ತವಾದ ಟೀ

ಒ ಗುಂಪಿನ ರಕ್ತದ ವ್ಯಕ್ತಿಗಳಿಗೆ ಸೂಕ್ತವಾದ ಟೀ

ಇವರಿಗೆ ಶುಂಠಿ ಸೇರಿಸಿದ ಕಪ್ಪು ಟೀ, ಜಿಂಸೆಂಗ್ ಟೀ, yerba mate ಟೀ ಮತ್ತು ಹಸಿರು ಟೀ ಉತ್ತಮವಾಗಿದೆ. ಇವು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ಅಜೀರ್ಣ, ಆಮ್ಲೀಯತೆ, ಹೊಟ್ಟೆಯಲ್ಲಿ ಉರಿ, ವಾಯುಪ್ರಕೋಪ ಮೊದಲಾದ ತೊಂದರೆಗಳನ್ನು ನಿವಾರಿಸುವ ಮೂಲಕ ಒ ಗುಂಪಿನ ವ್ಯಕ್ತಿಗಳ ಆರೋಗ್ಯವನ್ನು ಕಾಪಾಡುತ್ತದೆ.

English summary

Which Tea Is Good For You As Per Your Blood Group

Many studies have been made on the foods and drinks that a person with a particular blood group type must have. Our blood group plays an important role in determining our health. People have some health risk factors associated with them. Here are some teas that you must drink based on your blood group type
X
Desktop Bottom Promotion