For Quick Alerts
ALLOW NOTIFICATIONS  
For Daily Alerts

ಹಣ್ಣುಗಳನ್ನು ಸೇವಿಸುವ ಮುನ್ನ, ಒಮ್ಮೆ ಈ ಲೇಖನ ಓದಿ....

By Arshad
|

ಊಟ ಬಲ್ಲವನಿಗೆ ರೋಗವಿಲ್ಲ ಎಂಬುದೊಂದು ಗಾದೆ. ಯಾವ ಊಟವನ್ನು ಯಾವ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂದು ತಿಳಿದುಕೊಂಡವರಿಗೆ ಮಾತ್ರ ಈ ಗಾದೆ ಅನ್ವಯವಾಗುತ್ತದೆ. ಸಾಮಾನ್ಯವಾಗಿ ಆಹಾರಪದ್ಧತಿಯನ್ನು ನಾವೆಲ್ಲರೂ ನಮ್ಮ ಮನೆಯಲ್ಲಿ ಕಲಿತುಕೊಂಡು ಬಂದ ಅಭ್ಯಾಸದ ರೂಪದಲ್ಲಿಯೂ ಅಭ್ಯಾಸ ಮಾಡಿಕೊಂಡಿದ್ದೇವೆ. ಜಗತ್ತಿನ ಅತ್ಯುತ್ತಮ 12 ಆರೋಗ್ಯದಾಯಕ ಹಣ್ಣುಗಳು

ಆದರೆ ದಿನ ಬದಲಾಗುತ್ತಿದ್ದಂತೆಯೇ ಲಭ್ಯವಾಗುತ್ತಿರುವ ಸಿದ್ಧ ಆಹಾರಗಳು ಮತ್ತು ವೈವಿಧ್ಯತೆ ನಿಧಾನವಾಗಿ ಈ ಗಾದೆಯ ಮೇಲೆ ಪ್ರಭಾವ ಬೀರತೊಡಗಿದೆ. ಮುಖ್ಯವಾಗಿ ಹಣ್ಣುಗಳ ಸೇವನೆ. ಸುಮ್ಮನೆ ಮಾರುಕಟ್ಟೆಯಲ್ಲಿ ಕಣ್ಣಾಡಿಸಿದರೆ ಯಾವುದೇ ಹೊತ್ತಿನಲ್ಲಿಯಾದರೂ ಹಣ್ಣು ಮತ್ತು ಹಣ್ಣಿನ ರಸಗಳು ಸಿದ್ಧರೂಪದಲ್ಲಿ ಲಭ್ಯವಿರುವುದು ಕಾಣುತ್ತದೆ. ಮಧುಮೇಹಿಗಳು ತಿನ್ನಬಾರದ 10 ಹಣ್ಣುಗಳು

ಕಣ್ಣಿಗೆ ಕಂಡ ಬಳಿಕ ಹೊಟ್ಟೆಯಲ್ಲಿರುವ ಬಕಾಸುರ ಸುಮ್ಮನಿರುತ್ತಾನೆಯೇ? ತಕ್ಷಣ ಎದ್ದು ತನಗೆ ಬೇಕು ಎಂದು ಬೇಡಿಕೆ ಇಟ್ಟ ಬಳಿಕ ನಾವೆಲ್ಲಾ ಸೋತು ಯಾವಾಗ ಆಯಿತೋ ಆವಾಗ, ಏನು ಸಿಕ್ಕಿತೋ ಅದು ತಿಂದುಕೊಂಡು ಸಂತೃಪ್ತಿ ಅನುಭವಿಸುತ್ತಾ ಬಂದಿದ್ದೇವೆ.

ಆದರೆ ಈ ಕ್ರಮ ಆರೋಗ್ಯಕರವೇ? ಆದರೆ ಆಹಾರತಜ್ಞರ ಪ್ರಕಾರ ಯಾವುದೇ ಆಹಾರ ಅಥವಾ ಹಣ್ಣುಗಳ ಗರಿಷ್ಠ ಪ್ರಯೋಜನವನ್ನು ಪಡೆಯಬೇಕಾದರೆ ಸೂಕ್ತ ಸಮಯದಲ್ಲಿ ಸೇವಿಸಬೇಕು. ಹಾಗೆಂದರೆ ಏನು? ಮುಂದೆ ಓದಿ... ಜೀರ್ಣಕ್ರಿಯೆ ವೃದ್ಧಿಸುವ ಶಕ್ತಿ-ಇಂತಹ ಹಣ್ಣುಗಳಲ್ಲಿ ಅಡಗಿದೆ

ಸಲಹೆ #1

ಸಲಹೆ #1

ಹಣ್ಣುಗಳನ್ನು ತಿನ್ನಲು ಬೆಳಗ್ಗಿನ ಸಮಯ ಅತಿ ಸೂಕ್ತವಾಗಿದೆ. ಆದರೆ ಹಣ್ಣು ತಿನ್ನುವ ಮೊದಲು ಒಂದು ಲೋಟ ನೀರು ಕುಡಿದು ಬಳಿಕ ಹಣ್ಣನ್ನು ತಿಂದರೆ ಉತ್ತಮ. ಇನ್ನುಳಿದ ಸಮಯ ಅಷ್ಟು ಸೂಕ್ತವಲ್ಲ. ಅದರಲ್ಲೂ ನಾವೆಲ್ಲರೂ ತಿಳಿದುಕೊಂಡು ಬಂದಂತೆ ಊಟದ ಬಳಿಕ ಹಣ್ಣು ತಿನ್ನುವುದರಿಂದ ಹೆಚ್ಚು ಲಾಭವಾಗದು.

ಸಲಹೆ #2

ಸಲಹೆ #2

ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಹಣ್ಣುಗಳನ್ನು ತಿಂದರೆ ಹೊಟ್ಟೆಯಲ್ಲಿನ ಕಲ್ಮಶಗಳು ಸುಲಭವಾಗಿ ವಿಸರ್ಜನೆಯಾಗಲು ನೆರವಾಗುತ್ತದೆ.

ಸಲಹೆ #3

ಸಲಹೆ #3

ಬೆಳಗ್ಗಿನ ಸಮಯದ ಬಳಿಕ ಹಣ್ಣು ತಿನ್ನಲು ಸಕಾಲ ಎಂದರೆ ಮದ್ಯಾಹ್ನ. ಅಂದರೆ ಯಾವುದೋ ಕಾರಣಕ್ಕೆ ಬೆಳಗ್ಗಿನ ಸಮಯದಲ್ಲಿ ಹಣ್ಣು ತಿನ್ನಲು ಸಾಧ್ಯವಾಗದೇ ಇದ್ದಾಗ ಮಾತ್ರ ಮಧ್ಯಾಹ್ನ ತಿನ್ನಬಹುದು.

ಸಲಹೆ #4

ಸಲಹೆ #4

ಊಟ ಮತ್ತು ಹಣ್ಣು ಎರಡನ್ನೂ ಒಟ್ಟೊಟ್ಟಿಗೇ ಸೇವಿಸುವುದು ಒಳ್ಳೆಯದಲ್ಲ. ಒಂದು ವೇಳೆ ಎರಡೂ ಇದ್ದಾಗ ಊಟವಾದ ಅರ್ಧ ಗಂಟೆಯ ಬಳಿಕವೇ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಏಕೆಂದರೆ ಹೀಗೆ ಮಾಡಿದರೆ ಮಾತ್ರ ನಮ್ಮ ದೇಹ ಎರಡೂ ಆಹಾರಗಳ ಪೂರ್ಣ ಪ್ರಯೋಜನಗಳನ್ನು ಪಡೆಯಲು ಸಾಧ್ಯ. ಇನ್ನೊಂದು ಕ್ರಮವೆಂದರೆ ಮಧ್ಯಾಹ್ನದ ಊಟದ ಮುನ್ನ ಅಂದರೆ ಸುಮಾರು ಒಂದು ಗಂಟೆಗೂ ಮುನ್ನ ಹಣ್ಣುಗಳನ್ನು ತಿನ್ನುವುದು.

ಸಲಹೆ #5

ಸಲಹೆ #5

ಅನಾನಸ್, ದಾಳಿಂಬೆ, ವಿವಿಧ ಬೆರ್ರಿ ಹಣ್ಣುಗಳು, ಕಲ್ಲಂಗಡಿ ಮೊದಲಾದ ಹಣ್ಣುಗಳನ್ನು ಹಾಲು ಅಥವಾ ಮೊಸರಿನೊಂದಿಗೆ ಮಿಶ್ರಣ ಮಾಡಿ ಕುಡಿದರೆ ಗರಿಷ್ಟ ಪ್ರಮಾಣದ ಪ್ರಯೋಜನ ಪಡೆಯಬಹುದು. ಅನಾನಸ್ ಹಣ್ಣು ನೆನೆಸಿದ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

ಸಲಹೆ #6

ಸಲಹೆ #6

ಯಾವಾಗಲೂ ಹಣ್ಣು ಮತ್ತು ಹಸಿ ತರಕಾರಿಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆದುಕೊಳ್ಳಬೇಕು. ಹರಿಯುತ್ತಿರುವ ನಲ್ಲಿಯ ಕೆಳಗೆ ಪ್ರತಿ ಹಣ್ಣು ತರಕಾರಿಯನ್ನು ಕೈಗಳಿಂದ ಒರೆಸಿಯೇ ತಿನ್ನಬೇಕು, ಏಕೆಂದರೆ ಕೀಟನಾಶಕದ ತೆಳುವಾದ ಪದರ ಇದ್ದು ಇದು ಕೇವಲ ನೀರಿನ ಹರಿವಿನಿಂದ ಹೋಗುವುದಿಲ್ಲ, ಕೈಗಳಿಂದ ಒರೆಸಿದ ಬಳಿವೇ ಹೋಗುತ್ತದೆ. ಇನ್ನೂ ಒಳ್ಳೆಯ ಅಭ್ಯಾಸವೆಂದರೆ ಮನೆಗೆ ತಂದ ಬಳಿಕ ಚೆನ್ನಾಗಿ ತೊಳೆದು ಒಣಗಿಸಿಯೇ ಫ್ರಿಜ್ಜಿನಲ್ಲಿಡುವುದು.

ಸಲಹೆ #7

ಸಲಹೆ #7

ಒಂದು ವೇಳೆ ನೀವು ನಿತ್ಯವೂ ವ್ಯಾಯಮ ಮಾಡುವವರಾಗಿದ್ದರೆ ವ್ಯಾಯಮಕ್ಕೂ ಅರ್ಧ ಗಂಟೆ ಮುನ್ನ ಹಣ್ಣುಗಳನ್ನು ತಿನ್ನುವ ಮೂಲಕ ವ್ಯಾಯಮಕ್ಕೆ ಅಗತ್ಯವಾದ ಶಕ್ತಿ ಮತ್ತು ನೀರು ದೊರಕುತ್ತದೆ. ಇದರಿಂದ ನಿಮ್ಮ ವ್ಯಾಯಮ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

English summary

What's The Right Time To Eat Fruits?

Most of us know that it is healthy to eat fruits but when is the right time to eat fruits? Can you eat fruits any time? Frankly speaking, your body will be able to absorb the nutrients in fruits better only if you consume them on specific times. So, when to eat fruits? What would be the best time during the day? Read on to know about such tips.
X
Desktop Bottom Promotion