For Quick Alerts
ALLOW NOTIFICATIONS  
For Daily Alerts

ಬೆಳಿಗ್ಗೆ ಎದ್ದಾಕ್ಷಣ ಪಪ್ಪಾಯಿ+ಲಿಂಬೆಯ ಜ್ಯೂಸ್ ಕುಡಿಯಿರಿ!

By manu
|

ಪಪ್ಪಾಯಿ ಹಣ್ಣು ಹೆಚ್ಚಿನವರಿಗೆ ಅಷ್ಟೊಂದು ಇಷ್ಟವಿಲ್ಲದಿದ್ದರೂ ಆಗಾಗ ತಿನ್ನುವುದಕ್ಕೇನೂ ಹಿಂದೇಟು ಹಾಕುವುದಿಲ್ಲ. ಆದರೆ ಪಪ್ಪಾಯಿ ಹಣ್ಣಿನಲ್ಲಿ ಹಲವು ಆರೋಗ್ಯಕರ ಅಂಶಗಳಿದ್ದು ಇದನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ. ಎಷ್ಟೋ ಸಲ ನಮ್ಮ ಅಡುಗೆಮನೆಯಲ್ಲಿಯೇ ಇರುವ ಸಾಮಾನ್ಯ ಸಾಮಾಗ್ರಿಗಳೇ ಅತ್ಯಂತ ಆರೋಗ್ಯಕರವಾಗಿರುವ ಅಂಶವನ್ನು ನಾವು ಮರೆತೇ ಬಿಡುತ್ತೇವೆ. ಆದರೆ ಇದೇ ಅಂಶಗಳನ್ನು ವೈದ್ಯರು ಹೇಳಿ ದುಬಾರಿ ಬೆಲೆಯ ಮಾತ್ರೆಗಳ ರೂಪದಲ್ಲಿ ಮಾತ್ರ ತಪ್ಪದೇ ಸೇವಿಸುತ್ತೇವೆ. ಆರೋಗ್ಯಕಾರಿ ಟಿಪ್ಸ್: ಪಪ್ಪಾಯಿ ಹಣ್ಣಿನ ಬಗ್ಗೆ ತಪ್ಪು ತಿಳಿಯಬೇಡಿ!

ಒಂದು ವೇಳೆ ನಿಯಮಿತವಾಗಿ ಲಿಂಬೆರಸ ಮತ್ತು ಪಪ್ಪಾಯಿ ಹಣ್ಣಿನ ರಸದ ಮಿಶ್ರಣವನ್ನು ಸೇವಿಸುತ್ತಾ ಬಂದರೆ ಇದು ಆರೋಗ್ಯಕ್ಕೆಷ್ಟು ಉತ್ತಮ ಎಂದು ನಿಮಗೆ ಗೊತ್ತೇ? ಇದಕ್ಕೆ ಹೆಚ್ಚು ಶ್ರಮಪಡುವ ಅಗತ್ಯವಿಲ್ಲ. ಒಂದು ಚಿಕ್ಕ ಹೋಳು ಪಪ್ಪಾಯಿ ಹಣ್ಣನ್ನು ಕಿವುಚಿ ಬಟ್ಟೆಯಲ್ಲಿ ಹಿಂಡಿದರೆ ಸಿಗುವ ರಸ ಮೂರು ದೊಡ್ಡ ಚಮಚದಷ್ಟು ಸಂಗ್ರಹಿಸಿ ಇದಕ್ಕೆ ಒಂದು ದೊಡ್ಡ ಚಮಚ ಲಿಂಬೆರಸ ಸೇರಿಸಿದರೆ ಸಾಕು, ಅದ್ಭುತ ಟಾನಿಕ್ ತಯಾರ್. ದೇವತೆಗಳ ಹಣ್ಣು-ಪಪ್ಪಾಯಿ ಹಣ್ಣಿನಲ್ಲಿದೆ ಸೌಂದರ್ಯದ ಶಕ್ತಿ

ಪ್ರತಿದಿನ ಬೆಳಿಗ್ಗೆ ಈ ರಸವನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಅತ್ಯುತ್ತಮವಾಗಿದೆ. ಈ ದ್ರವ ದೇಹದ ಹಲವು ಅಂಗಗಳಿಗೆ ಅಗತ್ಯವಾದ ಪೋಷಣೆ ನೀಡುವ ಜೊತೆಗೇ ಆರೋಗ್ಯವನ್ನು ಕಾಪಾಡಿಕೊಳ್ಳಲೂ ನೆರವಾಗುತ್ತದೆ. ಅಲ್ಲದೇ ನಮ್ಮ ದೇಹದಲ್ಲಿ ಈಗಾಗಲೇ ಪ್ರಾರಂಭವಾಗಿರುವ ಕೆಲವು ಕಾಯಿಲೆಗಳನ್ನು ಹಿಮ್ಮೆಟ್ಟಿಸಿ ಆ ಕಾಯಿಲೆಗೆ ಒಳಗಾಗದಂತೆಯೂ ನೋಡಿಕೊಳ್ಳುತ್ತದೆ. ಬನ್ನಿ, ಈ ಅದ್ಭುತ ಸಂಯೋಜನೆ ಇನ್ನೂ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡೋಣ:

ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ

ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ

ಪಪ್ಪಾಯಿ ಮತ್ತು ಲಿಂಬೆ ಎರಡರಲ್ಲಿಯೂ ಉತ್ತಮ ಪ್ರಮಾಣದಲ್ಲಿ ವಿಟಮಿನ್ C, B ಮತ್ತು ಆಂಟಿ ಆಕ್ಸಿಡೆಂಟುಗಳಿವೆ. ಇವು ರಕ್ತಪರಿಚಲನೆಯನ್ನು ಉತ್ತಮಗೊಳಿಸಿ ರಕ್ತದಲ್ಲಿರುವ ಕೊಬ್ಬಿನ ಅಂಶವನ್ನು ತಗ್ಗಿಸಲು ನೆರವಾಗುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ

ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ

ಇದರಿಂದ ರಕ್ತನಾಳಗಳ ಒಳಗೆ ಕೊಬ್ಬು ಅಥವಾ ಜಿಡ್ಡು ಅಂಟಿಕೊಳ್ಳುವ atherosclerosis ಎಂಬ ಸ್ಥಿತಿಯಿಂದ ರಕ್ಷಣೆ ಪಡೆದಂತಾಗುತ್ತದೆ ಹಾಗೂ ವಿವಿಧ ರಕ್ತಪರಿಚಲನೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಹೃದಯದ ತೊಂದರೆಗಳಿಂದ ಕಾಪಾಡುತ್ತವೆ.

ಜೀವ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಜೀವ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಈ ಅದ್ಭುತ ಸಂಯೋಜನೆಯಲ್ಲಿ ವಿಟಮಿನ್ನುಗಳು, ಖನಿಜಗಳು, ಫೋಲೇಟ್, ಪೊಟ್ಯಾಶಿಯಂ ಮೊದಲಾ ಜೀವ ನಿರೋಧಕ ಶಕ್ತಿಗೆ ಅಗತ್ಯವಾದ ಪೋಷಕಾಂಶಗಳು ಹೇರಳ ಪ್ರಮಾಣದಲ್ಲಿರುವ ಕಾರಣ ಜೀವ ನಿರೋಧಕ ಶಕ್ತಿ ಇನ್ನಷ್ಟು ಉತ್ತಮಗೊಳ್ಳುತ್ತದೆ.

ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ

ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ

ಈ ರಸದಲ್ಲಿರುವ ಬೀಟಾ ಕ್ಯಾರೋಟೀನ್ ಮತ್ತು ವಿಟಮಿನ್ನುಗಳ್ಳು ಹೊಟ್ಟೆಯಲ್ಲಿ ಮತ್ತು ಕರುಳುಗಳಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವ ಬ್ಯಾಕ್ಟೀರಿಯಾಗಳಿಗೂ ಉತ್ತಮವಾಗಿರುವ ಕಾರಣ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಆಮ್ಲೀಯತೆ ಕಡಿಮೆಯಾಗಿಸುತ್ತದೆ. ಇದರಿಂದ ಹೊಟ್ಟೆಯಲ್ಲಿ ಸಾಮಾನ್ಯವಾಗಿ ಕಾಣಬರುವ ಹಲವಾರು ತೊಂದರೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ

ಕ್ಯಾನ್ಸರ್ ತಡೆಗಟ್ಟುತ್ತದೆ

ಈ ಅದ್ಭುತ ಸಂಯೋಜನೆಗೆ ಹಲವು ವಿಧದ ಕ್ಯಾನ್ಸರ್ ಬರುವುದರಿಂದ ತಡೆಗಟ್ಟುವ ಶಕ್ತಿಯಿದೆ. ಪ್ರಮುಖವಾಗಿ ಕರುಳಿನ ಕ್ಯಾನ್ಸರ್, ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಹಾಗೂ ರಕ್ತದ ಕ್ಯಾನ್ಸರ್. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕ್ಯಾನ್ಸರ್ ತಡೆಗಟ್ಟುತ್ತದೆ

ಕ್ಯಾನ್ಸರ್ ತಡೆಗಟ್ಟುತ್ತದೆ

ಕ್ಯಾನ್ಸರ್ ಪ್ರಾರಂಭವಾಗಲು ಕಾರಣವಾಗುವ ಅನಿಯಂತ್ರಿತ ಜೀವಕೋಶಗಳ ಬೆಳವಣಿಗೆಗೆ ಈ ರಸ ತಡೆಯೊಡ್ಡುವ ಮೂಲಕ ಹಾಗೂ ಈ ಸ್ಥಿತಿಗೆ ಕಾರಣವಾಗುವ ವಿಷಕಾರಿ ಕಣಗಳನ್ನು ನಿವಾರಿಸಿ ವಿಸರ್ಜಿಸುವ ಮೂಲಕ ಈ ಕ್ಯಾನ್ಸರ್ ಗಳನ್ನು ಬಾರದಂತೆ ದೇಹವನ್ನು ಕಾಪಾಡುತ್ತದೆ.

ಸಂಧಿವಾತವನ್ನು ಗುಣಪಡಿಸುತ್ತದೆ

ಸಂಧಿವಾತವನ್ನು ಗುಣಪಡಿಸುತ್ತದೆ

ಈ ಸಂಯೋಜನೆಯೊಂದು ಅದ್ಭುತ ಉರಿಯೂತ ನಿವಾರಕವಾಗಿರುವ ಕಾರಣ ರಕ್ತಪರಿಚಲನೆ ಹೆಚ್ಚಿಸಲು ಮತ್ತು ದೇಹದ ಒಳಗೆ ಪ್ರಾರಂಭವಾಗಿರುವ ಊತಗಳನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಮೂಳೆಗಳ ಸಂದುಗಳಲ್ಲಿ ಪ್ರಾರಂಭವಾಗಿರುವ ನೋವಿನಿಂದ ಕೂಡಿದ ಸಂಧಿವಾತ, ತಲೆನೋವು ಮೊದಲಾದವುಗಳನ್ನು ಕಡಿಮೆಗೊಳಿಸುತ್ತದೆ.

ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸುತ್ತದೆ

ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸುತ್ತದೆ

ಈ ರಸದಲ್ಲಿ ವಿಟಮಿನ್ ಎ ಮತ್ತು ಸಿ ಉತ್ತಮ ಪ್ರಮಾಣದಲ್ಲಿದ್ದು ದೃಷ್ಟಿನರದ ಪೋಷಣೆಗೆ ನೆರವಾಗುತ್ತದೆ. ತನ್ಮೂಲಕ ಕಣ್ಣಿನ ಆರೋಗ್ಯ ಉತ್ತಮವಾಗಿರುವಂತೆನೋಡಿಕೊಳ್ಳುತ್ತದೆ. ಅಂತೆಯೇ ಕಣ್ಣಿನ ದೃಷ್ಟಿದೋಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಿವಾರಿಸಲು ನೆರವಾಗುತ್ತದೆ.

ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಈ ರಸದಲ್ಲಿರುವ ವಿಟಮಿನ್ ಸಿ ಮೆದುಳಿನ ಒತ್ತಡವನ್ನು ನಿಯಂತ್ರಿಸುವ ಹಾರ್ಮೋನುಗಳ ಪ್ರಮಾಣವನ್ನು ನಿಯಂತ್ರಿಸುವ ಕ್ಷಮತೆ ಹೊಂದಿದೆ. ಪರಿಣಾಮವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗದಿರಲು ಸಾಧ್ಯವಾಗುತ್ತದೆ.

English summary

What Happens To Your Body When You Drink Papaya Juice With Lemon?

Do you like to enjoy the sweet taste of the papaya fruit once in a while? Well, whether you are a fan of papaya or not, the fact is that it comes with numerous health benefits and must be made a part of your regular diet. Many a times, we forget about the healthy ingredients that are present in our own kitchens and completely rely upon expensive doctors who prescribe chemically synthesised medicines.
Story first published: Saturday, June 11, 2016, 19:18 [IST]
X
Desktop Bottom Promotion