For Quick Alerts
ALLOW NOTIFICATIONS  
For Daily Alerts

ದಿನವಿಡೀ ನೀರನ್ನೇ ಕುಡಿಯಿರಿ, ಆರೋಗ್ಯ ಪಡೆಯಿರಿ

By Super
|

ಇಂದು ನಮಗೆ ಲಭ್ಯವಾಗಿರುವ ಸೌಲಭ್ಯಗಳ ಕಾರಣ ನಮ್ಮ ದಿನಚರಿಯೇ ಬದಲಾಗಿದೆ. ಅಂತೆಯೇ ನಮ್ಮ ಆಹಾರಕ್ರಮಗಳೂ ಬದಲಾಗಿವೆ. ದಿನದ ನೀರಿನ ಅಗತ್ಯವನ್ನು ದ್ರವಾಹಾರಗಳ ಮೂಲಕ ಪೂರ್ಣಗೊಳಿಸುತ್ತಿದ್ದೇವೆ. ಬೆಳಿಗ್ಗೆ ಎದ್ದ ಬಳಿಕ ಟೀ ಅಥವಾ ಕಾಫಿ, ದಿನದ ಇತರ ಹೊತ್ತಿನಲ್ಲಿ ಬಾಯಾರಿಕೆಯಾದಾಗಲೆಲ್ಲಾ ಹಣ್ಣಿನ ಜ್ಯೂಸ್, ಲಘುಪಾನೀಯ ಮೊದಲಾದ ಸಕ್ಕರೆ ಆಧಾರಿತ ಪೇಯಗಳನ್ನು ಕುಡಿಯುತ್ತೇವೆ. ಕೆಲಸದ ಹೊತ್ತಿನಲ್ಲಿ ನಿದ್ದೆಯನ್ನು ಓಡಿಸಲು ಕಾಫಿ ಟೀ ಗಳನ್ನು ಒಂದಾದ ಮೇಲೊಂದರಂತೆ ಸೇವಿಸುತ್ತಾ ಹೋಗುತ್ತೇವೆ. ಸಂಜೆಯಾಗುತ್ತಿದ್ದಂತೆ ಅಪಾಯಕಾರಿಯಾದ ಅಮಲಿನ ಪೇಯಗಳನ್ನು ಹಲವರು ಸೇವಿಸುತ್ತಾರೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ಹಾಗಾದರೆ ನೀರನ್ನು ಯಾವಾಗ ಕುಡಿಯುತ್ತೇವೆ? ತಲೆ ತುರಿಸಿಕೊಂಡು ಯೋಚಿಸಿದರೆ ಊಟದ ಹೊತ್ತಿನಲ್ಲಿ ಕೊಂಚ ನೀರು ಕುಡಿಯುವ ನೆನಪು ಬರುತ್ತದೆ. ವಾಸ್ತವವಾಗಿ ನಮ್ಮ ದೇಹಕ್ಕೆ ನೀರು ಅಗತ್ಯವೇ ಹೊರತು ದ್ರವಾಹಾರ ಅಥವಾ ಪೇಯಗಳಲ್ಲ. ಇವೆಲ್ಲಾ ಊಟಕ್ಕೆ ಉಪ್ಪಿನಕಾಯಿಯಂತಿರಬೇಕೇ ಹೊರತು ಊಟವಾಗಬಾರದು. ಹಾಗಾದರೆ ಇಡಿಯ ದಿನದ ನೀರಿನ ಬೇಡಿಕೆಯನ್ನು ಕೇವಲ ನೀರಿನ ಮೂಲಕ ಪೂರ್ಣಗೊಳಿಸಿದರೆ ಹೇಗೆ? ಕಲ್ಪನೆ ಸೊಗಸಾಗಿದೆ ಅಲ್ಲವೇ? ಆದರೆ ಇದು ಅತ್ಯಂತ ಆರೋಗ್ಯಕರ ವಿಧಾನವಾಗಿದೆ. ಜೇನು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು

ನಮ್ಮ ದೇಹದ ಪ್ರತಿ ಜೀವಕೋಶ, ಸ್ನಾಯು, ಅಂಗಾಂಶಗಳಿಗೆ ನೀರು ಅಗತ್ಯ. ನೀರನ್ನೇ ಕುಡಿಯುವ ಮೂಲಕ ಪೂರ್ಣಪ್ರಮಾಣದಲ್ಲಿ ನೀರು ಲಭ್ಯವಾಗುತ್ತದೆ. ಒಂದು ವೇಳೆ ದಿನವಿಡೀ ಕೇವಲ ನೀರನ್ನೇ ಕುಡಿದರೆ ಮತ್ತು ಇತರ ಪೇಯಗಳನ್ನು ಕನಿಷ್ಠಕ್ಕಿಳಿಸಿದರೆ ದೇಹದಲ್ಲಿ ಹಲವಾರು ಚಿಕ್ಕಪುಟ್ಟ ಬದಲಾವಣೆಗಳನ್ನು ಗಮನಿಸಬಹುದು. ಆದರೆ ದೇಹದ ಆಳದಿಂದ ನೋಡಿದರೆ ಈ ವಿಧಾನ ಬಹಳಷ್ಟು ಉಪಯೋಗವನ್ನು ನೀಡಿರುತ್ತದೆ. ದೇಹದ ಒಳಗೆ ಏನು ಬದಲಾವಣೆಯಾಗುತ್ತದೆ ಎಂಬ ಕುತೂಹಲ ಮೂಡಿತೇ? ಬನ್ನಿ ಕೆಳಗಿನ ಸ್ಲೈಡ್ ಶೋ ನಿಮ್ಮ ಕುತೂಹಲವನ್ನು ತಣಿಸಲಿದೆ...

ನಿಮ್ಮ ಕಾರ್ಯಕ್ಷಮತೆ ಮತ್ತು ಕ್ರಿಯಾತ್ಮಕತೆ ಹೆಚ್ಚುತ್ತದೆ

ನಿಮ್ಮ ಕಾರ್ಯಕ್ಷಮತೆ ಮತ್ತು ಕ್ರಿಯಾತ್ಮಕತೆ ಹೆಚ್ಚುತ್ತದೆ

ಒಂದು ಸಂಶೋಧನೆಯಲ್ಲಿ ಕೆಲವು ಭಿನ್ನ ಅಭಿರುಚಿಯ ವ್ಯಕ್ತಿಗಳಿಗೆ ಕೇವಲ ನೀರನ್ನೇ ಕುಡಿಸಿ ಅವರ ಚರ್ಯೆಗಳಲ್ಲಿ ಆಗುವ ಬದಲಾವಣೆಗಳನ್ನು ಕಲೆಹಾಕಲಾಯಿತು. ಅಂಕಿ ಅಂಶಗಳನ್ನು ಕಲೆಹಾಕಿದ ಬಳಿಕ ಹಲವು ರೋಚಕ ಸಂಗತಿಗಳು ಕಂಡುಬಂದವು. ಮುಂಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮ ಕಾರ್ಯಕ್ಷಮತೆ ಮತ್ತು ಕ್ರಿಯಾತ್ಮಕತೆ ಹೆಚ್ಚುತ್ತದೆ

ನಿಮ್ಮ ಕಾರ್ಯಕ್ಷಮತೆ ಮತ್ತು ಕ್ರಿಯಾತ್ಮಕತೆ ಹೆಚ್ಚುತ್ತದೆ

ಅಲ್ಲದೆಇವರ ಮೆದುಳು ಹೆಚ್ಚಿನ ಚುರುಕುತನ ತೋರಿದ್ದು ಮುನ್ನರಿವನ್ನು ಪಡೆಯುವ, ಅಂದರೆ ಮುಂದೆ ಏನಾಗಬಹುದು ಎಂದು ಊಹಿಸಿ ಅದಕ್ಕನುಗುಣವಾಗಿ ವರ್ತಿಸುವ ಕ್ಷಮತೆ ಹೆಚ್ಚಿತ್ತು. ಇವರಲ್ಲಿ ಕ್ರಿಯಾಶೀಲತೆ ಇತರ ಹೊತ್ತಿಗಿಂತ ಹೆಚ್ಚಾಗಿದ್ದುದನ್ನು ಗಮನಿಸಲಾಯಿತು. ಏಕೆಂದರೆ ಮೆದುಳಿಗೆ ಹೆಚ್ಚಿನ ಆಮ್ಲಜನಕ ಲಭ್ಯವಾಗಿ ತಮ್ಮ ಕಾರ್ಯದಲ್ಲಿ ಹೆಚ್ಚಿನ ಏಕಾಗ್ರತೆಯಿಂದ ಅಸ್ಥೆವಹಿಸಲು ಸಾಧ್ಯವಾಗಿತ್ತು.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಕೆಲವು ಸಂಶೋಧನೆಗಳ ಪ್ರಕಾರ ನೀರು ಒಂದು ಔಷಧಿಯಂತೆ ಕೆಲಸ ಮಾಡುತ್ತದೆ. ದಿನವಿಡೀ ಕೇವಲ ನೀರನ್ನು ಮಾತ್ರ ಕುಡಿಯುವ ಮೂಲಕ ಮೂತ್ರಪಿಂಡಗಳು ಮತ್ತು ಯಕೃತ್ ನ ಕಾರ್ಯಕ್ಷಮತೆ ಹೆಚ್ಚುತ್ತದೆ ಹಾಗೂ ದೇಹದ ಕಲ್ಮಶಗಳನ್ನು ಇನ್ನೂ ಸಮರ್ಥವಾಗಿ ಹೊರಹಾಕುತ್ತವೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪರಿಣಾಮವಾಗಿ ದೇಹದ ಹಲವು ಕಾಯಿಲೆಗಳು ದೂರವಾಗುತ್ತವೆ.

ದೇಹದಲ್ಲಿ ಕ್ಯಾಲೋರಿಗಳು ಕಡಿಮೆಯಾಗುತ್ತವೆ

ದೇಹದಲ್ಲಿ ಕ್ಯಾಲೋರಿಗಳು ಕಡಿಮೆಯಾಗುತ್ತವೆ

ಒಂದು ಸಂಶೋಧನೆಯ ಪ್ರಕಾರ ಓರ್ವ ವ್ಯಕ್ತಿ ಟೀ, ಕಾಫಿ ಮೊದಲಾದ ದ್ರವಾಹಾರಗಳ ಮೂಲಕ ದಿನವಿಡೀ ಸೇವಿಸುವ ಆಹಾರ ಸುಮಾರು 300-500 ಕ್ಯಾಲೋರಿಗಳಷ್ಟು ಶಕ್ತಿಯನ್ನು ನೀಡುತ್ತದೆ. ಒಂದು ವೇಳೆ ಕೇವಲ ನೀರನ್ನು ಕುಡಿದರೆ ಇಷ್ಟೂ ಕ್ಯಾಲೋರಿಗಳು ಇಲ್ಲವಾಗುತ್ತವೆ. ಪರಿಣಾಮವಾಗಿ ಸ್ಥೂಲಕಾಯ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ಮೂಳೆಸಂದುಗಳಿಗೆ ಉತ್ತಮ

ಮೂಳೆಸಂದುಗಳಿಗೆ ಉತ್ತಮ

ಮೂಳೆಸಂದುಗಳಲ್ಲಿ ಕಾರ್ಟಿಲೇಜ್ (cartilage) ಎಂಬ ಮೆದುವಾದ ಮೂಳೆ ಇರುತ್ತದೆ. ಮೂಳೆಗಳು ಜಾರಲು Synovial fluid ಎಂಬ ದ್ರವ ನೆರವಾಗುತ್ತದೆ. ನಮ್ಮ ಪ್ರತಿ ಚಲನೆಗೂ ಇವೆರಡೂ ಭಾಗಗಳು ಸಮರ್ಪಕವಾಗಿ ಕೆಲಸ ಮಾಡುವುದು ಅಗತ್ಯ. ಇವೆರಡಕ್ಕೂ ನೀರು ಅತ್ಯಗತ್ಯವಾಗಿ ಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೂಳೆಸಂದುಗಳಿಗೆ ಉತ್ತಮ

ಮೂಳೆಸಂದುಗಳಿಗೆ ಉತ್ತಮ

ಅದರಲ್ಲೂ ದಿನವಿಡೀ ನೀರು ಕುಡಿಯುತ್ತಿದ್ದರೆ ನಮ್ಮ ಶರೀರದ ಪ್ರತಿಯೊಂದೂ ಮೂಳೆಸಂದುಗಳು ನಿರಾಳವಾಗಿ ಕಾರ್ಯನಿರ್ವಹಿಸುತ್ತವೆ. ನೀರಿನ ಕೊರತೆಯಿಂದ ದ್ರವ ಕಡಿಮೆಯಾಗುವ ಮೂಲಕ ಎರಡು ಮೂಳೆಗಳ ಕಾರ್ಟಿಲೇಜುಗಳು ಒಂದಕ್ಕೊಂದು ಉಜ್ಜಿ ನೋವು ತರಿಸುತ್ತವೆ.

ಹೃದಯಕ್ಕೂ ಉತ್ತಮ

ಹೃದಯಕ್ಕೂ ಉತ್ತಮ

ದಿನವಿಡೀ ಬೇರೆ ದ್ರವಗಳಿಂದ ದೂರವಿದ್ದು ಕೇವಲ ನೀರನ್ನು ಮಾತ್ರ ಕುಡಿಯುವ ಮೂಲಕ ರಕ್ತದಲ್ಲಿಯೂ ನೀರಿನ ಅಂಶ ಹೆಚ್ಚಲು ನೆರವಾಗುತ್ತದೆ. ಪರಿಣಾಮವಾಗಿ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಆದ್ದರಿಂದಲೇ ಮಲಗುವ ಮುನ್ನ ಮತ್ತು ಬೆಳಿಗ್ಗೆ ಎದ್ದ ಬಳಿಕ ಪ್ರಥಮ ಆಹಾರವಾಗಿ ನೀರನ್ನು ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ಹೃದಯ ಸ್ತಂಭನಕ್ಕೆ ಒಳಗಾಗುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ.

ಶಕ್ತಿ ಮತ್ತು ಸಾಮರ್ಥ್ಯಗಳು ಇಡಿಯ ದಿನ ಏಕಸಮಾನವಾಗಿರುತ್ತದೆ

ಶಕ್ತಿ ಮತ್ತು ಸಾಮರ್ಥ್ಯಗಳು ಇಡಿಯ ದಿನ ಏಕಸಮಾನವಾಗಿರುತ್ತದೆ

ಸಾಮಾನ್ಯವಾಗಿ ಕೆಫೀನ್ ಇರುವ ಸಕ್ಕರೆಭರಿತ ಪೇಯಗಳನ್ನು ಕುಡಿದ ತಕ್ಷಣ ಮೈಯಲ್ಲೆಲ್ಲಾ ಹುರುಪು ಮತ್ತು ಶಕ್ತಿ ಬಂದಂತಾಗುತ್ತದೆ. ಪರಿಣಾಮವಾಗಿ ಕೆಲಸದಲ್ಲಿ ಹೆಚ್ಚು ಚುರುಕುತನ ತೋರಲು ಸಾಧ್ಯವಾಗುತ್ತದೆ. ಆದರೆ ಈ ಸಂಭ್ರಮ ಕೆಲಹೊತ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಶಕ್ತಿ ಖಾಲಿಯಾದ ಬಳಿಕ ಮತ್ತೆ ಸುಸ್ತು ಮತ್ತು ಆಲಸಿತನ ಆವರಿಸುತ್ತದೆ. ದಿನವಿಡೀ ಕಾಫಿ ಕುಡಿಯುತ್ತಲೇ ಇರಬೇಕು ಎಂದು ಅನ್ನಿಸುವುದಕ್ಕೆ ಇದೇ ಕಾರಣ.

ಶಕ್ತಿ ಮತ್ತು ಸಾಮರ್ಥ್ಯಗಳು ಇಡಿಯ ದಿನ ಏಕಸಮಾನವಾಗಿರುತ್ತದೆ

ಶಕ್ತಿ ಮತ್ತು ಸಾಮರ್ಥ್ಯಗಳು ಇಡಿಯ ದಿನ ಏಕಸಮಾನವಾಗಿರುತ್ತದೆ

ಬದಲಿಗೆ ನೀರನ್ನು ಮಾತ್ರ ಕುಡಿಯುತ್ತಿದ್ದರೆ ದೇಹ ಅನಿವಾರ್ಯವಾಗಿ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ಇದರಿಂದ ದಿನವಿಡೀ ಶಕ್ತಿ ಏಕ ಸಮಾನವಾಗಿರುತ್ತದೆ ಹಾಗೂ ನಿಧಾನವಾಗಿ ಸ್ಥೂಲಕಾಯವೂ ಕರಗುತ್ತಾ ಬರುತ್ತದೆ.

ವೃದ್ಧಾಪ್ಯ ಆವರಿಸುವುದು ತಡವಾಗುತ್ತದೆ

ವೃದ್ಧಾಪ್ಯ ಆವರಿಸುವುದು ತಡವಾಗುತ್ತದೆ

ದಿನಿವಿಡೀ ನೀರು ಕುಡಿಯುವ ಮೂಲಕ ಚರ್ಮಕ್ಕೆ ಆರ್ದ್ರತೆ ಅತಿ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತದೆ. ಅಲ್ಲದೇ ದಿನದ ಕೆಫೀನ್ ಮತ್ತು ಮಾದಕ ಪಾನೀಯಗಳನ್ನು ಕುಡಿಯದೇ ಇರುವ ಮೂಲಕ ಚರ್ಮಕ್ಕೆ ಲಭಿಸುತ್ತಿದ್ದ ಹಾನಿಕಾರಕ ಕಣಗಳೂ ಇಲ್ಲವಾಗಿ ಚರ್ಮ ಉತ್ತಮ ಪೋಷಣೆ ಪಡೆಯುತ್ತದೆ. ಚರ್ಮದ ರಂಧ್ರಗಳಿಂದ ಬೆವರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತದೆ. ಆರೋಗ್ಯಕರ, ಸೆಳೆತವಿರುವ ಮತ್ತು ಕೋಮಲ ಚರ್ಮ ಪಡೆಯುವ ಮೂಲಕ ನೆರಿಗೆ ಇಲ್ಲವಾಗಿ ವೃದ್ದಾಪ್ಯದ ಚಿಹ್ನೆಗಳು ಬಹುಕಾಲದವರೆಗೆ ಕಾಡದೇ ನವತಾರುಣ್ಯ ಕಾಪಾಡುತ್ತದೆ.

ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ

ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ

ನಿಮ್ಮ ನಿತ್ಯದ ಘನಾಹಾರದಲ್ಲಿ ಬದಲಾವಣೆ ಮಾಡದೇ ಕೇವಲ ದ್ರವಾಹಾರವನ್ನು ಮಾತ್ರ ಕೇವಲ ನೀರಿಗೆ ನಿಗದಿಪಡಿಸಿದರೆ ಜೀವರಾಸಾಯನಿಕ ಕ್ರಿಯೆ ಉತ್ತಮಗೊಂಡಿರುವುದು ಸಂಶೋಧನೆಗಳ ಮೂಲಕ ಸಾಬೀತಾಗಿದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ನೀರಿನ ಪ್ರಮಾಣ ಹೆಚ್ಚುವ ಮೂಲಕ ದೇಹದಲ್ಲಿ ಅನಗತ್ಯ ಕಲ್ಮಶ ಮತ್ತು ಇತರ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಅಲ್ಲದೇ ಕೊಬ್ಬು ಕರಗಲು ಸಹಾ ಸಾಧ್ಯವಾಗುತ್ತದೆ. ಪರಿಣಾಮವಾಗಿ ಒಟ್ಟಾರೆ ಶರೀರದ ವ್ಯವಸ್ಥೆ ಉತ್ತಮಗೊಳ್ಳುತ್ತದೆ ಮತ್ತು ನಿಧಾನವಾಗಿ ತೂಕ ಕಡಿಮೆಯಾಗುತ್ತಾ ಬರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಅದರಲ್ಲೂ ಊಟಕ್ಕೂ ಸ್ವಲ್ಪ ಹೊತ್ತು ಮೊದಲು ಹೊಟ್ಟೆ ತುಂಬಾ ನೀರು ಕುಡಿಯುವ ಮೂಲಕ ಊಟದ ಪ್ರಮಾಣ ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ. ಇದು ತೂಕ ಇಳಿಸುವವರಿಗೆ ವರದಾನವಾಗಿದೆ.

English summary

What Happens When You Drink Only Water?

As soon as we get up, we kick-start the day with a coffee or tea. And then whenever we feel thirsty in the day, we tend to drink sugary drinks. And when you feel sleepy in your office, you drink a few cups of coffee. In the evening, while unwinding, you drink some alcohol. What are those changes and what are the health benefits of drinking only water without making any change to your current diet or activity levels? Read on...
X
Desktop Bottom Promotion