For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್ ಜ್ಯೂಸ್ - ಕಣ್ಣಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ

By Manu
|

ಹಸಿಯಾಗಿ ತಿನ್ನಬಹುದಾದ ತರಕಾರಿಗಳಲ್ಲಿ ಕ್ಯಾರೆಟ್ ಅಥವಾ ಗಜ್ಜರಿಗೆ ಪ್ರಮುಖ ಸ್ಥಾನವಿದೆ. ಚಿಕ್ಕಂದಿನಲ್ಲಿ ನಮಗೆ ಬಲವಂತವಾಗಿ ಹಸಿ ಕ್ಯಾರೆಟ್ ತಿನ್ನಿಸಿದ್ದು ನೆನಪಿದ್ದರೆ ಇದರ ಪ್ರತಿ ಕೊಂಚ ಸೇಡು ತೀರಿಸಿಕೊಳ್ಳುವ ಮನೋಭಾವವಿರುತ್ತದೆ. ಏಕೆಂದರೆ ನಮಗೆಲ್ಲಾ ಹಸಿ ತರಕಾರಿ ತಿನ್ನುವುದು ಹಸುಗಳು ಎಂಬ ಭಾವನೆ ಬೇರೂರಿ ಬಿಟ್ಟಿದೆ. ಆದರೆ ಒಮ್ಮೆ ಈ ಹಸಿ ಕ್ಯಾರೆಟ್‌ನ ಉತ್ತಮ ಗುಣಗಳನ್ನು ಕಂಡುಕೊಂಡರೆ ಇಷ್ಟು ದಿನ ತಿನ್ನದೇ ಇದ್ದುದಕ್ಕಾಗಿ ಖಂಡಿತಾ ಪರಿತಪಿಸುವಿರಿ. ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ ಜ್ಯೂಸ್

ಕ್ಯಾರೆಟ್ ನಲ್ಲಿ ವಿಟಮಿನ್ ಎ, ಸಿ. B1, B6, ಕೆ, ಇ,ಡಿ ಸಹಿತ ಹಲವಾರು ಪೋಷಕಾಂಶಗಳಿದ್ದು ಗಾಯಗಳನ್ನು ಶೀಘ್ರವಾಗಿ ಮಾಗಿಸುವ ಗುಣ ಹೊಂದಿದೆ. ಅಲ್ಲದೇ ಲೈಕೋಪಿನ್ (ಟೊಮೇಟೊದಲ್ಲಿರುವ ಕೆಂಪುಬಣ್ಣದ ಪೋಷಕಾಂಶ), ಲ್ಯೂಟಿನ್, ಕ್ಸಾಂಥ್ರೋಫಿಲ್, ಜಿಯಾಕ್ಸಾಂಥಿನ್ ಮೊದಲಾದ ಫೈಟೋನ್ಯೂಟ್ರಿಯೆಂಟುಗಳಿವೆ. ಇವೆಲ್ಲವೂ ಪ್ರತ್ಯೇಕವಾದ ವಾಸಿಮಾಡುವ ಗುಣವನ್ನು ಹೊಂದಿದ್ದು ಆರೋಗ್ಯವನ್ನು ವೃದ್ಧಿಸುತ್ತವೆ.

ಖನಿಜಗಳಾದ ಸೋಡಿಯಂ, ಫಾಸ್ಪರಸ್, ಮೆಗ್ನೀಶಿಯಂ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಬಟೋಟಿನ್ ಗಳೂ ಉತ್ತಮ ಪ್ರಮಾಣದಲ್ಲಿವೆ. ಒಂದು ವೇಳೆ ಪೊಟ್ಯಾಶಿಯಂ ಕೊರತೆಯಿದ್ದರೆ ನೇರವಾಗಿ ಕೆಲವು ಹಸಿ ಕ್ಯಾರೆಟ್ಟುಗಳನ್ನು ತಿನ್ನುವ ಮೂಲಕ ಈ ಕೊರತೆಯನ್ನು ನೀಗಿಸಬಹುದು. ವ್ಯತಿರಿಕ್ತವಾಗಿ ಒಂದು ವೇಳೆ ಮೂತ್ರಪಿಂಡದ ತೊಂದರೆ ಇರುವ ರೋಗಿಗಳಿಗೆ ಪೊಟ್ಯಾಶಿಯಂ ಸೇವಿಸಬಾರದು ಎಂದಿದ್ದರೆ ಕ್ಯಾರೆಟ್ ಸೇವನೆ ಅವರಿಗೆ ಹಿತವಲ್ಲ! ಸ್ಕಿನ್ ಕೇರ್ ಮಾಡುವುದು ಈ ಕ್ಯಾರೆಟ್ ಜ್ಯೂಸ್

ಕ್ಯಾರೆಟ್‌ಗೆ ಕೇಸರಿ ಬಣ್ಣ ಬರಲು ಕೆರೋಟೀನ್ ಎಂಬ ಆಂಟಿ ಆಕ್ಸಿಡೆಂಟು ಕಾರಣವಾಗಿದ್ದು ದೇಹದ ರೋಗ ನಿರೋಧಕ ಶಕ್ತಿ ಮತ್ತು ಗಾಯಗಳನ್ನು ಮಾಗಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯುವ ಮೂಲಕ ಹಲವಾರು ರೋಗಗಳಿಂದ ದೂರವಿರಬಹುದು. ಆದರೆ ಇದರಲ್ಲಿ ಸಕ್ಕರೆಯ ಅಂಶವೂ ಹೆಚ್ಚಿರುವ ಕಾರಣ ಮಧುಮೇಹಿಗಳು ತಮ್ಮ ವೈದ್ಯರ ಸಲಹೆಯ ಮೇರೆಗೆ ಮಾತ್ರ ಸೇವಿಸಬಹುದು. ಬನ್ನಿ ಇದರ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ರಕ್ತದಲ್ಲಿ ಆಮ್ಲೀಯತೆ ಹೆಚ್ಚಾಗಿದ್ದರೆ ಸರಿಪಡಿಸುತ್ತದೆ

ರಕ್ತದಲ್ಲಿ ಆಮ್ಲೀಯತೆ ಹೆಚ್ಚಾಗಿದ್ದರೆ ಸರಿಪಡಿಸುತ್ತದೆ

ಕ್ಯಾರೆಟ್ ಜ್ಯೂಸ್‌ನ ಪಿಎಚ್ ಮಟ್ಟ ನೀರಿಗಿಂತ ಕೊಂಚ ಕಡಿಮೆ ಇರುವ ಕಾರಣ ಸ್ವಲ್ಪವೇ ಕ್ಷಾರೀಯವಾಗಿದೆ. ಅಂದರೆ ಇದರ ಸೇವನೆಯಿಂದ ಹೊಟ್ಟೆಯಲ್ಲಿದ್ದ ಆಮ್ಲೀಯತೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ರಕ್ತದಲ್ಲಿಯೂ ಆಮ್ಲೀಯತೆಯ ಅಂಶ ಕಡಿಮೆಯಾಗಿ ರಕ್ತಸಂಚಾರದ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಕಣ್ಣುಗಳಿಗೆ ಅತ್ಯುತ್ತಮ

ಕಣ್ಣುಗಳಿಗೆ ಅತ್ಯುತ್ತಮ

ನಿತ್ಯವೂ ಕ್ಯಾರೆಟ್ ಜ್ಯೂಸ್ ಕುಡಿಯುವ ಮೂಲಕ ಉತ್ತಮ ದೃಷ್ಟಿಯನ್ನು ಪಡೆಯಬಹುದು. ಇದರಲ್ಲಿರುವ ಲ್ಯೂಟಿನ್ ಮತ್ತು ಬೀಟಾ ಕೆರೋಟಿನ್ ಗಳು ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸಲು ನೆರವಾಗುತ್ತವೆ.

ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ

ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ

ಒಂದು ವೇಳೆ ಮಲಬದ್ಧತೆಯ ತೊಂದರೆ ಇದ್ದರೆ ಬೆಳಿಗ್ಗೆದ್ದ ಬಳಿಕ ಕೆಲವು ಕ್ಯಾರೆಟ್ ಮತ್ತು ಕೊಂಚ ಪಾಲಕ್ ಸೊಪ್ಪು ಸೇರಿಸಿ ಗೊಟಾಯಿಸಿದ ಜ್ಯೂಸ್ ಕುಡಿಯುವ ಮೂಲಕ ಮಲಬದ್ಧತೆ ನಿವಾರಣೆಯಾಗುತ್ತದೆ.

ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ

ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ

ಕ್ಯಾರೆಟ್ ನಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಉಸಿರಾಟದ ತೊಂದರೆಯನ್ನು ನಿವರಿಸುತ್ತದೆ. ಪರಿಣಾಮವಾಗಿ ಸರಾಗವಾದ ಉಸಿರಾಟ ಸಾಧ್ಯವಾಗುತ್ತದೆ.

ಉರಿಯೂತ ನಿವಾರಕವಾಗಿದೆ

ಉರಿಯೂತ ನಿವಾರಕವಾಗಿದೆ

ಉರಿಯೂತದ ಪರಿಣಾಮವಾಗಿ ಎದುರಾಗುವ ಸಂಧಿವಾತ ಮತ್ತು ಇತರ ತೊಂದರೆಗಳನ್ನು ಪ್ರತಿದಿನ ಕ್ಯಾರೆಟ್ ಸೇವನೆಯ ಮೂಲಕ ದೂರವಿರಿಸಬಹುದು.

ಹೃದಯಸ್ತಂಭನದ ಸಾಧ್ಯತೆ ಕಡಿಮೆಗೊಳಿಸುತ್ತದೆ

ಹೃದಯಸ್ತಂಭನದ ಸಾಧ್ಯತೆ ಕಡಿಮೆಗೊಳಿಸುತ್ತದೆ

ಕ್ಯಾರೆಟ್ ಜ್ಯೂಸ್ ನಲ್ಲಿರುವ ಪೋಷಕಾಂಶಗಳು ರಕ್ತ ಒಳಗೆ ಅಂಟಿಕೊಂಡಿದ್ದ ಕಣಗಳನ್ನು ಸಡಿಲಗೊಳಿಸಿ ರಕ್ತಸಂಚಾರವನ್ನು ಸುಲಭಗೊಳಿಸುತ್ತದೆ. ಪರಿಣಾಮವಾಗಿ ಹೃದಯಕ್ಕೆ ಕಡಿಮೆ ಒತ್ತಡದಲ್ಲಿ ರಕ್ತವನ್ನು ದೂಡಲು ಸಾಧ್ಯವಾಗುತ್ತದೆ. ತನ್ಮೂಲಕ ಹೃದಯ ಸ್ತಂಭನದ ಸಾಧ್ಯತೆ ಕಡಿಮೆಯಾಗುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ

ಕ್ಯಾನ್ಸರ್ ತಡೆಗಟ್ಟುತ್ತದೆ

ಕ್ಯಾನ್ಸರ್ ಬಗ್ಗೆ ನಡೆದ ಸಂಶೋಧನೆಗಳಲ್ಲಿ ಪ್ರತಿದಿನ ಒಂದು ಕ್ಯಾರೆಟ್ ಹಸಿಯಾಗಿ ತಿನ್ನುವ ಮೂಲಕ ಕೆಲವು ವಿಧದ ಕ್ಯಾನ್ಸರ್ ಗಳು ಬರದಂತೆ ತಡೆಗಟ್ಟಲು ಸಾಧ್ಯ ಎಂದು ಕಂಡುಕೊಳ್ಳಲಾಗಿದೆ.

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ

ಪ್ರತಿದಿನ ಕ್ಯಾರೆಟ್ ಜ್ಯೂಸ್ ಕುಡಿಯುವ ಮೂಲಕ ದೇಹದ ದ್ರವ ಪ್ರದಾರ್ಥಗಳು ಸ್ವಚ್ಛಗೊಳ್ಳಲು ಅಂದರೆ ಲವಣದ ಅಂಶ ಕಡಿಮೆಗೊಳ್ಳಲು ನೆರವಾಗುತ್ತದೆ. ಇದರಿಂದ ಮೂತ್ರಪಿಂಡಗಳ ಮೇಲೆ ಬೀಳುವ ಒತ್ತಡ ಕಡಿಮೆಯಾಗಿ ಮೂತ್ರಪಿಂಡ ಕ್ಷಮತೆ ಹೆಚ್ಚುತ್ತದೆ.

ಧೂಮಪಾನಿಗಳಿಗೂ ಉತ್ತಮ

ಧೂಮಪಾನಿಗಳಿಗೂ ಉತ್ತಮ

ಧೂಮಪಾನದಿಂದ ಬಿಡುಗಡೆ ಹೊಂದಬಯಸುವವರು ನಿತ್ಯವೂ ಕ್ಯಾರೆಟ್ ತಿಂದರೆ ಅವರಿಗೆ ಧೂಮಪಾನದ ಬಯಕೆಯಾಗುವುದು ಕಡಿಮೆಯಾಗುತ್ತದೆ ಎಂದು ಈಗ ಕಂಡುಕೊಳ್ಳಲಾಗಿದೆ. ಧೂಮಪಾನದ ಬಯಕೆಯಾದಾಗಲೆಲ್ಲಾ ಒಂದು ಕ್ಯಾರೆಟ್ ಹಸಿಯಾಗಿ ತಿನ್ನುವುದರಿಂದ ಮಾನಸಿಕವಾಗಿಯೂ ಈ ದುರಭ್ಯಾಸದಿಂದ ಹೊರಬರಲು ಸಾಧ್ಯವಾಗುತ್ತದೆ. ಆದರೆ ಸರಣಿ ಧೂಮಪಾನಿಗಳಿಗೆ ಕೊಂಚ ತ್ರಾಸವಾಗಬಹುದು.

ಧೂಮಪಾನಿಗಳಿಗೂ ಉತ್ತಮ

ಧೂಮಪಾನಿಗಳಿಗೂ ಉತ್ತಮ

ಆದರೂ ಕಣ್ಣೆದುರಿಗೆ ಕಾಣುವಂತೆ ಕೆಲವು ಕ್ಯಾರೆಟ್ಟುಗಳನ್ನು ತಿನ್ನಲು ಸಿದ್ಧವಾಗಿಟ್ಟು ಯಾವಾಗ ಸಿಗರೇಟು ಸೇದಲು ಮನಸ್ಸಾಗುತ್ತದೆಯೋ ಆತ ತಕ್ಷಣ ಒಂದು ಕ್ಯಾರೆಟ್ ಜಗಿದು ಇದೇ ನನಗೆ ಸಿಗರೇಟು ಎಂದು ಮನಸ್ಸಿಗೆ ನಾಟುವಂತೆ ಹೇಳುವ ಪರಿಯಿಂದ ಸರಣಿ ಧೂಮಪಾನಿಗಳು ಶೀಘ್ರವಾಗಿ ಚಟದಿಂದ ಹೊರಬರಲು ಸಾಧ್ಯವಿದೆ.

English summary

What Happens When You Drink Carrot Juice

Carrot contains certain healing properties. It contains Vitamin A, C, B1, B6, K, E, D. It also contains certain phytonutrients known as lycopene, lutein, xanthophyll and zeaxanthin. All of them contain healing properties. When it comes to minerals it contains sodium, phosphorous, magnesium, calcium, potassium and biotin. As your body needs potassium, choose carrot as its source.
X
Desktop Bottom Promotion