For Quick Alerts
ALLOW NOTIFICATIONS  
For Daily Alerts

ಸೋರೆಕಾಯಿ ಜ್ಯೂಸ್‌ಗೆ ಜೇನು ಬೆರೆಸಿ ಕುಡಿದು ನೋಡಿ...

By Manu
|

ಆರೋಗ್ಯವೇ ಭಾಗ್ಯ ಎಂಬುದು ಗಾದೆ. ಆರೋಗ್ಯ ಇದ್ದರೆ ಉಳಿದೆಲ್ಲವನ್ನೂ ಅನುಭವಿಸಲು ಸಾಧ್ಯ. ಆರೋಗ್ಯದ ವೃದ್ಧಿಗೆ ಮನೆಯಲ್ಲಿಯೇ ತಯಾರಿಸಿದ ಪೇಯಗಳು ಅತ್ಯುತ್ತಮವಾಗಿವೆ. ಸಾಮಾನ್ಯವಾಗಿ ತರಕಾರಿಯ ರೂಪದಲ್ಲಿ ಬಳಸಲಾಗುವ ಸೋರೆಕಾಯಿಯನ್ನು ಚಿಕ್ಕದಾಗಿ ತುರಿದು ಹಿಂಡಿ ಸಂಗ್ರಹಿಸಿದ ರಸವನ್ನು ಕೊಂಚ ಜೇನಿನೊಂದಿಗೆ ಬೆರೆಸಿ ಸೇವಿಸಿದರೆ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇವುಗಳು ಕನಿಷ್ಠ ಏಳು ಬಗೆಯ ತೊಂದರೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆರೋಗ್ಯಕ್ಕೆ ಆಸರೆಯಾಗೋ ತರಕಾರಿ- ಸೋರೆಕಾಯಿ

ಇನ್ನೊಂದು ವಿಧಾನವೆಂದರೆ ಸೋರೆಕಾಯಿಯ ಚಿಕ್ಕ ಚಿಕ್ಕ ತುಂಡುಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಗೊಟಾಯಿಸಿ ರಸವನ್ನು ಸಂಗ್ರಹಿಸಬಹುದು. ಈ ರಸವನ್ನು ಸೋಸಬಾರದು. ಒಂದು ಕಪ್ ಸೋರೆಕಾಯಿ ರಸಕ್ಕೆ ಒಂದು ದೊಡ್ಡಚಮಚ ಜೇನು ಸೇರಿಸಿ ಕಲಕಿ. ಈಗ ಈ ಪೇಯ ಕುಡಿಯಲು ಸಿದ್ಧವಾಗಿದೆ. ಪ್ರತಿದಿನ ಒಂದು ಕಪ್ ಸೇವಿಸುವುದರಿಂದ ಯಾವ ರೀತಿಯ ಪ್ರಯೋಜನಗಳು ದೊರಕಲಿವೆ ಎಂಬುದನ್ನು ಮುಂದೆ ಓದಿ... ಸೋರೆಕಾಯಿಯಲ್ಲಿದೆ ಅನೇಕ ಆರೋಗ್ಯಕರ ಗುಣಗಳು

ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ

ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ

ಈ ನೈಸರ್ಗಿಕ ಪೇಯ ನಮ್ಮ ಜಠರದಲ್ಲಿರುವ ಜೀರ್ಣರಸದ ಆಮ್ಲೀಯತೆಯನ್ನು ಕಡಿಮೆಗೊಳಿಸಿ ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ. ಪರಿಣಾಮವಾಗಿ ಹೊಟ್ಟೆಯುರಿ, ಹುಳಿತೇಗು, ಮಲಬದ್ದತೆ ಮೊದಲಾದ ತೊಂದರೆಗಳಾಗದಂತೆ ತಡೆಯುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಈ ಪೇಯವನ್ನು ನಿಯಮಿತವಾಗಿ ಕುಡಿಯುವ ಮೂಲಕ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ. ಇದರಿಂದ ಕೊಬ್ಬು ಕರಗಿಸುವ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಪರಿಣಾಮವಾಗಿ ತೂಕ ಇಳಿಯಲು ನೆರವಾಗುತ್ತದೆ.

ಮೂತ್ರನಾಳದ ಸೋಂಕನ್ನು ಗುಣಪಡಿಸುತ್ತದೆ

ಮೂತ್ರನಾಳದ ಸೋಂಕನ್ನು ಗುಣಪಡಿಸುತ್ತದೆ

ಈ ಪಾನೀಯ ಅತ್ಯಂತ ಉತ್ತಮವಾದ ಮೂತ್ರವರ್ಧಕವಾಗಿದ್ದು ಮೂತ್ರದ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಹಾಗೂ ವಿಶೇಷವಾಗಿ ಮೂತ್ರನಾಳದಲ್ಲಿ ಸೋಂಕು ಆಗಿದ್ದರೆ ಶೀಘ್ರವಾಗಿ ಗುಣಪಡಿಸುತ್ತದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಅಧಿಕ ರಕ್ತದೊತ್ತಡ ಕಡಿಮೆ ಮಾಡಲು ಇದು ಅತ್ಯುತ್ತಮವಾದ ಮನೆಯಲ್ಲಿ ತಯಾರಿಸಬಹುದಾದ ಔಷಧಿಯಾಗಿದೆ. ಸೋರೆ ಮತ್ತು ಜೇನಿನ ಪೇಯ ಕುಡಿಯುವ ಮೂಲಕ ರಕ್ತನಾಳಗಳನ್ನು ಸಡಿಲಿಸಿ ರಕ್ತಸಂಚಾರವನ್ನು ಸುಗಮಗೊಳಿಸುತ್ತದೆ.

ಗರ್ಭಾವಸ್ಥೆಯಲ್ಲಿ ಅತ್ಯುತ್ತಮ ಆಹಾರವಾಗಿದೆ

ಗರ್ಭಾವಸ್ಥೆಯಲ್ಲಿ ಅತ್ಯುತ್ತಮ ಆಹಾರವಾಗಿದೆ

ಗರ್ಭಾವಸ್ಥೆಯಲ್ಲಿ ಹೆಚ್ಚಿನ ವಿಟಮಿನ್ನುಗಳು, ಕ್ಯಾಲ್ಸಿಯಂ ಮತ್ತು ಫೋಲೇಟ್ ಗಳ ಅವಶ್ಯವಿದೆ. ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಈ ಅಧ್ಬುತ ಪಾನೀಯದಲ್ಲಿ ಈ ಎಲ್ಲಾ ಅಂಶಗಳು ಉತ್ತಮ ಪ್ರಮಾಣದಲ್ಲಿರುವ ಕಾರಣ ಗರ್ಭಿಣಿಯರಿಗೆ ಅತ್ಯುತ್ತಮವಾದ ಆಹಾರವಾಗಿದೆ. ಆದರೆ ಇದನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆದು ಮುಂದುವರೆಯುವುದು ಅಗತ್ಯ.

 ಯಕೃತ್‌ನ ಉರಿಯೂತವನ್ನು ನಿವಾರಿಸುತ್ತದೆ

ಯಕೃತ್‌ನ ಉರಿಯೂತವನ್ನು ನಿವಾರಿಸುತ್ತದೆ

ಆಯುರ್ವೇದ ಪಂಡಿತರ ಪ್ರಕಾರ ಈ ಮನೆಮದ್ದು ಸೇವಿಸುವುದರಿಂದ ಯಕೃತ್ ಅನ್ನು ಒಳಗಿನಿಂದ ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಯಕೃತ್‌ನ ಕ್ಷಮತೆ ಹೆಚ್ಚಿಸುತ್ತದೆ ಹಾಗೂ ಒಂದು ವೇಳೆ ಉರಿಯೂತದ ತೊಂದರೆ ಇದ್ದರೆ ಇದನ್ನು ಗುಣಪಡಿಸಲು ನೆರವಾಗುತ್ತದೆ.

ನಿದ್ರಾಹೀನತೆ

ನಿದ್ರಾಹೀನತೆ

ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಮಲಗುವ ಒಂದು ಗಂಟೆ ಮೊದಲು ಕುಡಿಯಿರಿ. ಇದು ನಿಮಗೆ ಸುಖ ನಿದ್ದೆ ಬರುವಂತೆ ಮಾಡುತ್ತದೆ.

English summary

What Happens When You Drink Bottle Gourd Juice With Honey?

Just add a few freshly peeled and cut pieces of lauki in a blender, grind it well to obtain the juice, now collect the juice in a cup without straining. Add a tablespoon of honey to the juice, and your natural health drink is now ready for consumption. So, find out about the health benefits of lauki and honey juice, here!
X
Desktop Bottom Promotion