For Quick Alerts
ALLOW NOTIFICATIONS  
For Daily Alerts

ಲವಲವಿಕೆಯ ಆರೋಗ್ಯಕ್ಕೆ- ಬೀಟ್‌ರೂಟ್+ಲಿಂಬೆಯ ಜ್ಯೂಸ್

ಸ್ವಲ್ಪ ಶುಂಠಿ, ಲಿಂಬೆರಸ ಮತ್ತು ಬೀಟ್ ರೂಟ್ ಅನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಜ್ಯೂಸ್ ಮಾಡಿಕೊಳ್ಳಿ. ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಅನ್ನು ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

By Hemanth
|

ಆಯುರ್ವೇದ ಚಿಕಿತ್ಸೆಯನ್ನು ಹೆಚ್ಚು ನೆಚ್ಚಿಕೊಂಡಿರುವವರು ಗಿಡಮೂಲಿಕೆಗಳಿಂದ ಕೂಡಿರುವಂತಹ ಪಾನೀಯ ಹಾಗೂ ಜ್ಯೂಸ್ ಗಳಿಂದ ಹಲವಾರು ರೋಗಗಳನ್ನು ತಡೆಯಬಹುದು ಮತ್ತು ನಿವಾರಣೆ ಮಾಡಬಹುದು ಎಂದು ಭಾವಿಸಿದ್ದಾರೆ. ಇದು ನಿಜ ಕೂಡ. ಯಾಕೆಂದರೆ ತರಕಾರಿ ಅಥವಾ ಹಣ್ಣುಗಳಿಂದ ಮಾಡಿದಂತಹ ಕೆಲವೊಂದು ಜ್ಯೂಸ್‌ಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಬೀಟ್ ರೂಟ್, ಶುಂಠಿ ಮತ್ತು ಲಿಂಬೆರಸದಿಂದ ಮಾಡಿದಂತಹ ಜ್ಯೂಸ್ ಕೂಡ ಒಳಗೊಂಡಿದೆ. ಜೇನು ಬೆರೆಸಿದ ಬೀಟ್‌ರೂಟ್ ಜ್ಯೂಸ್ ಕುಡಿದರೆ ಹತ್ತಾರು ಲಾಭ!

ಸ್ವಲ್ಪ ಶುಂಠಿ, ಲಿಂಬೆರಸ ಮತ್ತು ಬೀಟ್ ರೂಟ್ ಅನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಜ್ಯೂಸ್ ಮಾಡಿಕೊಳ್ಳಿ. ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಅನ್ನು ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಶುಂಠಿ, ಲಿಂಬೆರಸ ಹಾಗೂ ಬೀಟ್ ರೂಟ್ ನಿಂದ ಮಾಡಿದ ಜ್ಯೂಸ್‌ನ ಆರೋಗ್ಯ ಲಾಭಗಳು ಏನು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಿ...

ಅತಿ ರಕ್ತದೊತ್ತಡ ನಿವಾರಣೆ

ಅತಿ ರಕ್ತದೊತ್ತಡ ನಿವಾರಣೆ

ಆರೋಗ್ಯಕರವಾದ ಈ ಜ್ಯೂಸ್ ಅತಿ ರಕ್ತದೊತ್ತಡವನ್ನು ನಿವಾರಣೆ ಮಾಡುತ್ತದೆ. ಈ ಜ್ಯೂಸ್ ನಲ್ಲಿರುವ ನೈಟ್ರೇಟ್ ರಕ್ತನಾಳಗಳನ್ನು ಹಿಗ್ಗಿಸಿ ರಕ್ತವು ಸರಿಯಾಗಿ ಸರಬರಾಜು ಆಗುವಂತೆ ನೋಡಿಕೊಳ್ಳುತ್ತದೆ. ಅಧಿಕ ರಕ್ತದೊತ್ತಡ ತಡೆಯಲು ಗಿಡಮೂಲಿಕೆಗಳು

ಪಾರ್ಶ್ವವಾಯು ತಡೆಯುವುದು

ಪಾರ್ಶ್ವವಾಯು ತಡೆಯುವುದು

ಬೀಟ್ ರೂಟ್, ಶುಂಠಿ ಮತ್ತು ನಿಂಬೆರಸದಿಂದ ಮಾಡಿದ ಜ್ಯೂಸ್ ಪಾರ್ಶ್ವವಾಯುವನ್ನು ತಡೆಯುತ್ತದೆ. ಮೆದುಳಿಗೆ ರಕ್ತವು ಸರಿಯಾಗಿ ಸಂಚಾರವಾಗುವಂತೆ ಮಾಡಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದು.

ಪ್ರತಿರಕ್ಷಣಾ ವ್ಯವಸ್ಥೆ ಸುಧಾರಣೆ

ಪ್ರತಿರಕ್ಷಣಾ ವ್ಯವಸ್ಥೆ ಸುಧಾರಣೆ

ಇದರಲ್ಲಿ ಪೋಷಕಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿರುವ ಕಾರಣದಿಂದಾಗಿ ದೇಹದಲ್ಲಿರುವ ಪ್ರತಿಯೊಂದು ಕೋಶಗಳಿಗೂ ಇದು ಪೋಷಣೆಯನ್ನು ನೀಡುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಿ ಯಾವುದೇ ರೋಗ ಬರದಂತೆ ತಡೆಯುತ್ತದೆ.

ಅಜೀರ್ಣ ನಿವಾರಣೆ

ಅಜೀರ್ಣ ನಿವಾರಣೆ

ಈ ಜ್ಯೂಸ್ ಹೊಟ್ಟೆಯಲ್ಲಿರುವ ಆಮ್ಲವು ತಟಸ್ಥವಾಗಿರುವಂತೆ ನೋಡಿಕೊಳ್ಳುತ್ತದೆ. ಇದು ಅಜೀರ್ಣ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡುತ್ತದೆ.

ಆರೋಗ್ಯಕರ ಚರ್ಮ

ಆರೋಗ್ಯಕರ ಚರ್ಮ

ಬೀಟ್ ರೂಟ್, ಶುಂಠಿ ಮತ್ತು ಲಿಂಬೆರಸವನ್ನು ಹಾಕಿರುವ ಜ್ಯೂಸ್ ಕುಡಿದರೆ ಆರೋಗ್ಯಕರ, ಕಾಂತಿಯುತ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಜ್ಯೂಸ್ ಚರ್ಮದ ಕೋಶಗಳಿಗೆ ಪೋಷಕಾಂಶವನ್ನು ನೀಡುತ್ತದೆ.

ಕರುಳನ್ನು ಸ್ವಚ್ಛತೆಗೆ

ಕರುಳನ್ನು ಸ್ವಚ್ಛತೆಗೆ

ಕರುಳಿನಲ್ಲಿ ಶೇಖರಣೆಗೊಂಡಿರುವ ತ್ಯಾಜ್ಯ ಹಾಗೂ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಇದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಿಂದ ನಿಮ್ಮ ಕರುಳು ಸ್ವಚ್ಛ ಹಾಗೂ ಆರೋಗ್ಯಕರವಾಗಿರುತ್ತದೆ.

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಸಹಕಾರಿ

ಈ ಜ್ಯೂಸ್ ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸಿ ಕ್ಯಾಲರಿ ದಹಿಸುವ ಕಾರಣದಿಂದಾಗಿ ತೂಕ ಇಳಿಸಿಕೊಳ್ಳಲು ತುಂಬಾ ಪರಿಣಾಮಕಾರಿ.

English summary

what-happens-when-you-drink-beet-juice-with-ginger

Many people who believe in natural forms of medicines depend on just herbal drinks and remedies to treat most of the ailments and there is enough proof that these remedies are quite effective! Have a look below to learn about the various health benefits of consuming beetroot juice with ginger and lemon.
X
Desktop Bottom Promotion