For Quick Alerts
ALLOW NOTIFICATIONS  
For Daily Alerts

ದಿನಂಪ್ರತಿ ಸಿಹಿಸಿಹಿ ಖರ್ಜೂರ ಸೇವಿಸಿದರೆ, ಅಪಾರ ಲಾಭ!

By manu
|

ಸಕ್ಕರೆ ಎಂದರೆ ಎಲ್ಲರಿಗೂ ಇಷ್ಟ. ಆದರೆ ಸಕ್ಕರೆಯನ್ನು ಸೇವಿಸಲು ಒಂದು ಮಿತಿ ಇದೆ. ತಜ್ಞರ ಅಭಿಪ್ರಾಯದಂತೆ ಪುರುಷರಿಗೆ 37.5 ಗ್ರಾಂ ಮತ್ತು ಮಹಿಳೆಯರಿಗೆ 25 ಗ್ರಾಂ ಸಕ್ಕರೆ ಸಾಕು. ಆದ್ದರಿಂದ ಸಕ್ಕರೆ ಹೆಚ್ಚಿರುವ ಖಾದ್ಯ ಮತ್ತು ಪದಾರ್ಥಗಳನ್ನು ಸೇವಿಸುವುದರಲ್ಲಿ ಕೊಂಚ ನಿಯಂತ್ರಣ ಅಗತ್ಯ. ಆದರೂ ಸಿಹಿ ತಿನ್ನದೇ ಇರುವುದಕ್ಕೆ ಆಗುವುದಿಲ್ಲ ಎಂದಾದಲ್ಲಿ ಸಿಹಿಯಾಗಿರುವ ಖರ್ಜೂರ ಒಂದು ಉತ್ತಮ ಆಯ್ಕೆಯಾಗಿದೆ. ಖರ್ಜೂರ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು

ಇದರಲ್ಲಿ ಉತ್ತಮ ಪ್ರಮಾಣದ ಮೆಗ್ನೇಶಿಯಂ, ತಾಮ್ರ, ಮ್ಯಾಂಗನೀಸ್, ಗಂಧಕ, ಪೊಟ್ಯಾಶಿಯಂ, ಕಬ್ಬಿಣ, ಫಾಸ್ಪರಸ್, ಕ್ಯಾಲ್ಸಿಯಂ ಮತ್ತು ಅಲ್ಪ ಪ್ರಮಾಣದಲ್ಲಿ ಎಣ್ಣೆಯೂ ಇದೆ. ಆದ್ದರಿಂದ ನಿತ್ಯವೂ ಕೊಂಚ ಖರ್ಜೂರವನ್ನು ಸೇವಿಸುವ ಮೂಲಕ ಖರ್ಜೂರದ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಇದಕ್ಕೂ ಒಂದು ಮಿತಿ ಅಗತ್ಯ. ಖರ್ಜೂರದಲ್ಲಿ ಪ್ರತಿ ನೂರು ಗ್ರಾಂನಲ್ಲಿ 63ಗ್ರಾಂ ಸಕ್ಕರೆ ಇದೆ. ಆ ಪ್ರಕಾರ ಸೂಕ್ತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಆರೋಗ್ಯದ ಆಗರ ಖರ್ಜೂರದ ಔಷಧೀಯ ಗುಣಗಳೇನು?

ಕಾಯಿಲೆಯಿಂದ ಚೇತರಿಸಿಕೊಳ್ಳುವವರಿಗೆ ಖರ್ಜೂರ ಅಮೃತಸಮಾನವಾಗಿದೆ. ನಿಯಮಿತವಾದ ಖರ್ಜೂರದ ಸೇವನೆಯಿಂದ ವಿಶೇಷವಾಗಿ ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಅಲ್ಲದೇ ಇದರಲ್ಲಿರುವ ಕರಗುವ ನಾರು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ. ಬನ್ನಿ ಖರ್ಜೂರದ ಇನ್ನಿತರ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದ್ದು, ಮುಂದೆ ಓದಿ...

ಮಲಬದ್ಧತೆಯಿಂದ ರಕ್ಷಿಸುತ್ತದೆ

ಮಲಬದ್ಧತೆಯಿಂದ ರಕ್ಷಿಸುತ್ತದೆ

ಕೆಲವು ಖರ್ಜೂರಗಳನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಈ ನೀರನ್ನು ಮತ್ತು ಖರ್ಜೂರವನ್ನು ಸೇವಿಸುವುದರಿಂದ ನಿಸರ್ಗದ ಕರೆಗೆ ಸುಲಭವಾಗಿ ಸ್ಪಂದಿಸುವಂತಾಗುತ್ತದೆ. ವಾಸ್ತವವಾಗಿ ಈ ನೀರು ಒಂದು ಉತ್ತಮ ವಿರೇಚಕವಾಗಿದೆ.

ಕಬ್ಬಿಣದ ಕೊರತೆಯನ್ನು ನೀಗಿಸುತ್ತದೆ

ಕಬ್ಬಿಣದ ಕೊರತೆಯನ್ನು ನೀಗಿಸುತ್ತದೆ

ಖರ್ಜೂರದಲ್ಲಿ ಉತ್ತಮ ಪ್ರಮಾಣದ ಕಬ್ಬಿಣ ಇರುವ ಕಾರಣ ರಕ್ತದ ಕೆಂಪುಕಣಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತವೆ.ವಿಶೇಷವಾಗಿ ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಇದು ಉತ್ತಮವಾಗಿದೆ. ಬಾಣಂತಿಯರಿಗೆ ಮತ್ತು ಮಾಸಿಕ ದಿನಗಳಲ್ಲಿ ಮಹಿಳೆಯರಿಗೆ ಖರ್ಜೂರದ ಸೇವನೆ ಉತ್ತಮ.

ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ

ಖರ್ಜೂರದ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ, ತನ್ಮೂಲಕ ನರಗಳ ಒಳಭಾಗವನ್ನು ಜಿಡ್ಡು ಮುಕ್ತವಾಗಿಸುವಲ್ಲಿ ನೆರವಾಗುತ್ತದೆ.

ಶಕ್ತಿಯನ್ನು ಹೆಚ್ಚಿಸುತ್ತದೆ

ಶಕ್ತಿಯನ್ನು ಹೆಚ್ಚಿಸುತ್ತದೆ

ಕೆಲವು ಖರ್ಜೂರಗಳನ್ನು ಕೊಂಚ ಹಾಲಿನಲ್ಲಿ ಗೊಟಾಯಿಸಿ ಕೊಂಚ ಜೇನು ಸೇರಿಸಿ ಕುಡಿದರೆ ತಕ್ಷಣ ದೇಹದಲ್ಲಿ ಶಕ್ತಿ ಸಂಚಾರವಾಗುತ್ತದೆ. ಈ ಪೇಯ ಉತ್ತಮ ವೀರ್ಯವರ್ಧಕವೂ ಆಗಿದೆ. ಆರೋಗ್ಯದ ಆಗರ ಖರ್ಜೂರದ ಔಷಧೀಯ ಗುಣಗಳೇನು?

ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ

ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗೆ ನಿತ್ಯವೂ ಮೂರರಿಂದ ನಾಲ್ಕು ಖರ್ಜೂರಗಳನ್ನು ತಿನ್ನುವ ಮೂಲಕ ನಿಧಾನವಾಗಿ ಆರೋಗ್ಯಕರ ಮಟ್ಟಕ್ಕೆ ಇಳಿಯಲು ನೆರವಾಗುತ್ತದೆ.

ಅತಿಸಾರದಿಂದ ರಕ್ಷಿಸುತ್ತದೆ

ಅತಿಸಾರದಿಂದ ರಕ್ಷಿಸುತ್ತದೆ

ಖರ್ಜೂರದಲ್ಲಿರುವ ಪೊಟ್ಯಾಶಿಯಂ ಅತಿಸಾರ ತಡೆಯುವಲ್ಲಿ ನೆರವಾಗುತ್ತದೆ. ಅಲ್ಲದೇ ಕರುಳುಗಳಲ್ಲಿ ಆಶ್ರಯ ಪಡೆದಿರುವ ಬ್ಯಾಕ್ಟೀರಿಯಾ ಮತ್ತು ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಖರ್ಜೂರದ ಸೇವನೆಯಿಂದ ಹೃದಯದ ಕ್ಷಮತೆ ಹೆಚ್ಚುತ್ತದೆ. ಇದಕ್ಕಾಗಿ ಕೆಲವು ಖರ್ಜೂರಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ನಿತ್ಯವೂ ಬೆಳಿಗ್ಗೆ ಸೇವಿಸುವ ಮೂಲಕ ಹೃದಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಕೂದಲ ಆರೋಗ್ಯಕ್ಕೆ

ಕೂದಲ ಆರೋಗ್ಯಕ್ಕೆ

ಪ್ರತಿದಿನ ಸುಮಾರು ಎರಡರಿಂದ ಮೂರು ಖರ್ಜೂರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಕೂದಲ ಬುಡಗಳು ದೃಢಗೊಳ್ಳುವ ಮೂಲಕ ಕೂದಲು ಉದುರುವ ಸಂಖ್ಯೆ ಕಡಿಮೆಯಾಗುತ್ತದೆ.

ಕೂದಲ ಆರೋಗ್ಯಕ್ಕೆ

ಕೂದಲ ಆರೋಗ್ಯಕ್ಕೆ

ಇದರಲ್ಲಿರುವ ವಿಟಮಿನ್ ಬಿ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಕೂದಲಿಗೂ ಉತ್ತಮ ಪೋಷಣೆ ದೊರೆತು ಆರೋಗ್ಯಕರವಾಗುತ್ತದೆ. ಇದು ನಿಮ್ಮ ಕೂದಲನ್ನು ಉದ್ದ ಮತ್ತು ಆರೋಗ್ಯಕರವಾಗಿಸುತ್ತದೆ.

ಹಾಲಿನೊಂದಿಗೆ ಮಿಶ್ರ ಮಾಡಿಕೊಂಡು ಸೇವಿಸಿ

ಹಾಲಿನೊಂದಿಗೆ ಮಿಶ್ರ ಮಾಡಿಕೊಂಡು ಸೇವಿಸಿ

ಸೇವಿಸಿ ನೈಸರ್ಗಿಕ ಸಕ್ಕರೆಯಾದ ಗ್ಲುಕೋಸ್, ಸುಕ್ರೋಸ್ ಮತ್ತು ಫ್ರುಕ್ಟೋಸ್ ಅನ್ನು ಖರ್ಜೂರ ಒಳಗೊಂಡಿರುವುದರಿಂದ ಶಕ್ತಿ ವರ್ಧಕ ಡ್ರೈ ಫ್ರುಟ್ ಇದಾಗಿದೆ.

ಹಾಲಿನೊಂದಿಗೆ ಮಿಶ್ರ ಮಾಡಿಕೊಂಡು ಸೇವಿಸಿ

ಹಾಲಿನೊಂದಿಗೆ ಮಿಶ್ರ ಮಾಡಿಕೊಂಡು ಸೇವಿಸಿ

ಖರ್ಜೂರದಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಇದನ್ನು ಹಾಲಿನೊಂದಿಗೆ ಮಿಶ್ರ ಮಾಡಿಕೊಂಡು ಸೇವಿಸಬೇಕು. ಇದೊಂದು ಉತ್ತಮ ನ್ಯೂಟ್ರಿಶಿಯಸ್ ಬೆರೆತ ಪೇಯವಾಗಿದೆ. ಖರ್ಜೂರದಲ್ಲಿನ ಕ್ಯಾಲೋರಿ ಅಂಶ ಕಡಿಮೆ ಇದ್ದು ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸುವವರಿಗೆ ಹೆಚ್ಚು ಹೊಂದುವ ಹಣ್ಣಾಗಿದೆ.

ವಿಟಮಿನ್‌ಗಳ ಆಗರ

ವಿಟಮಿನ್‌ಗಳ ಆಗರ

ಪ್ರೋಟೀನ್, ಜೀರ್ಣಕ್ರಿಯೆಗೆ ಸಹಾಯಕವಾಗುವ ಫೈಬರ್ ಮತ್ತು ವಿಟಮಿನ್ ಬಿ1, ಬಿ2, ಬಿ3 ಮತ್ತು ಬಿ5 ಅಲ್ಲದೆ ವಿಟಮಿನ್ ಎ1 ಮತ್ತು ಸಿ ಯಿಂದ ಸಮೃದ್ಧಗೊಂಡಿದೆ.

English summary

What Happens If You Eat Dates Everyday

If you have sugar cravings or snacking habit, then choose dates as they are better and healthier than the unhealthy snacks you eat. They contain magnesium, copper, manganese, phosphorous, potassium, iron, sulfur, calcium and oil. Eat a date daily to enjoy its health benefits. But again, don't overeat them. Now, let us discuss more about its benefits.
X
Desktop Bottom Promotion