For Quick Alerts
ALLOW NOTIFICATIONS  
For Daily Alerts

ದಿಂಬಿನಡಿ ಬೆಳ್ಳುಳ್ಳಿ ಇಟ್ಟು ಮಲಗಿದರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ!

By manu
|

ಅಡುಗೆಯ ರುಚಿ ಹೆಚ್ಚಿಸುವ ಬೆಳ್ಳುಳ್ಳಿ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ವಿಶೇಷವಾಗಿ ಜೀರ್ಣಶಕ್ತಿಯನ್ನು ಹೆಚ್ಚಿಸುವ ಮೂಲಕ ಅಜೀರ್ಣತೆ ಮತ್ತು ಇದರ ಮೂಲಕ ಎದುರಾಗುವ ಹಲವಾರು ತೊಂದರೆಗಳಿಂದ ರಕ್ಷಿಸುತ್ತದೆ.

ಅಷ್ಟೇ ಅಲ್ಲ, ಇದರಲ್ಲಿರುವ ಪೋಷಕಾಂಶಗಳು ಯಕೃತ್ ಕಾಯಿಲೆ, ಬಕ್ಕತಲೆ, ರಕ್ತನಾಳಗಳ ಒಳಗೆ ಜಿಡ್ದು ಕಟ್ಟಿಕೊಂಡಿರುವುದು, ಶೀತ, ಫ್ಲೂ ಜ್ವರ, ಶ್ವಾಸ ಸಂಬಂಧಿ ತೊಂದರೆಗಳು ಮೊದಲಾದ ಹತ್ತು ಹಲವು ಕಾಯಿಲೆಗಳನ್ನು ಗುಣಪಡಿಸಲು ಮತ್ತು ಇದರ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲೂ ನೆರವಾಗುತ್ತದೆ. ಇದೇ ಕಾರಣಕ್ಕೆ ಬೆಳ್ಳುಳ್ಳಿಯನ್ನು ನಿತ್ಯವೂ ಹಸಿಯಾಗಿ ಒಂದೆರಡು ಕಾಳುಗಳನ್ನಾದರೂ ತಿನ್ನುವಂತೆ ಆಯುರ್ವೇದ ಸೂಚಿಸುತ್ತದೆ. ಬೆಳ್ಳುಳ್ಳಿಯಲ್ಲಿ ಇಷ್ಟೆಲ್ಲಾ ಗುಣಗಳಿವೆಯೇ? ನಂಬಿಕೆಯೇ ಬರುತ್ತಿಲ್ಲ!

ಆದರೆ ಬೆಳ್ಳುಳ್ಳಿಯನ್ನು ತಲೆದಿಂಬಿನ ಅಡಿ ಇರಿಸುವ ಬಗ್ಗೆ ಎಂದಾದರೂ ಕೇಳಿದ್ದೀರೇ? ಪ್ರಾಯಶಃ ಇಲ್ಲ. ಏಕೆಂದರೆ ಇದರ ಬಗ್ಗೆ ತಿಳಿದುಬಂದಿದ್ದೇ ತೀರಾ ಇತ್ತೀಚೆಗೆ. ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ತಲೆದಿಂಬಿನಡಿ ಇರಿಸಿ ಮಲಗಿದರೆ ಸುಖನಿದ್ದೆ ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಕೆಲವರಂತೂ ಅದೃಷ್ಟ ತರುತ್ತದೆ ಎಂಬ ನಂಬಿಕೆಯಿಂದ ಕೆಲವು ಬೆಳ್ಳುಳ್ಳಿ ಎಸಳುಗಳನ್ನು ತಮ್ಮ ಜೇಬಿನಲ್ಲಿರಿಸಿಕೊಂಡೇ ಓಡಾಡುತ್ತಾರೆ. ಜ್ವರ ಶೀತಕ್ಕೆ ಸಿದ್ಧೌಷಧ-ಬೆಳ್ಳುಳ್ಳಿ ಕರಿಮೆಣಸು ರಸಂ

ಕೆಲವರು ಬೆಳ್ಳುಳ್ಳಿಯ ಎಸಳುಗಳಿಂದ ತಮ್ಮ ಶರಾಯಿ ಮತ್ತು ಇತರ ಬಟ್ಟೆಗಳಿಗೆ ಒರೆಸಿಕೊಳ್ಳುವ ಮೂಲಕ ದುರಾದೃಷ್ಟ ಬಾಧಿಸದು ಎಂದು ನಂಬುತ್ತಾರೆ. ಆದರೆ ಸುಖನಿದ್ದೆ ಪಡೆದವರ ಅನುಭವವನ್ನು ನಂಬಬಹುದಾದರೆ ಕೆಲವು ಬೆಳ್ಳುಳ್ಳಿಯ ಎಸಳುಗಳನ್ನು ತಲೆದಿಂಬಿನಡಿ ಅಥವಾ ರಾತ್ರಿ ಮಲಗುವ ಉಡುಗೆಯ ಜೇಬಿನಲ್ಲಿರಿಸಿ ಮಲಗುವ ಮೂಲಕ ಗಾಢನಿದ್ದೆಗೆ ಜಾರಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈಗ ನೋಡೋಣ....

ಸುಖನಿದ್ದೆಗೆ ಸಹಕಾರಿ

ಸುಖನಿದ್ದೆಗೆ ಸಹಕಾರಿ

ಸಾಮಾನ್ಯವಾಗಿ ಬೆಳ್ಳುಳ್ಳಿಯ ಖಾರವಾದ ಮತ್ತು ಘಾಟು ವಾಸನೆಯನ್ನು ಯಾರೂ ಸಹಿಸುವುದಿಲ್ಲ. ಆದರೆ ಈ ಘಾಟು ಆರೋಗ್ಯಕ್ಕೆ ಉತ್ತಮವಾಗಿದ್ದು ಇದನ್ನು ಕೊಂಚ ಸಹಿಸಬೇಕಾಗಿರುವುದು ಅಗತ್ಯವಾಗಿದೆ. ಈ ಘಾಟು ವಾಸನೆ ನಮಗೆ ಹೇಗೆ ಸಹ್ಯವಲ್ಲವೋ ಹಾಗೇ ಋಣಾತ್ಮಕ ಶಕ್ತಿಗಳಿಯೂ ಸಹ್ಯವಲ್ಲ.

ಸುಖನಿದ್ದೆಗೆ ಸಹಕಾರಿ

ಸುಖನಿದ್ದೆಗೆ ಸಹಕಾರಿ

ಒಂದೆರಡು ಎಸಳು ಬೆಳ್ಳುಳ್ಳಿಯನ್ನು ತಲೆದಿಂಬಿನಡಿ ಅಥವಾ ಜೇಬಿನಲ್ಲಿರಿಸಿದರೆ ಈ ಶಕ್ತಿಗಳು ಹತ್ತಿರ ಬರದೇ ಸುಖನಿದ್ದೆಗೆ ಯಾವುದೇ ತಡೆ ಇಲ್ಲವಾಗುತ್ತದೆ.

ಸಣ್ಣ-ಪುಟ್ಟ ಕಾಯಿಲೆಗಳಿಗೆ ರಾಮಬಾಣ...

ಸಣ್ಣ-ಪುಟ್ಟ ಕಾಯಿಲೆಗಳಿಗೆ ರಾಮಬಾಣ...

ಬೆಳ್ಳುಳ್ಳಿಯನ್ನು ಆಹಾರ ಮತ್ತು ಔಷಧಿಯ ರೂಪವಾಗಿ ಸಾವಿರಾರು ವರ್ಷಗಳಿಂದ ಬಳಸ್ಪಡುತ್ತಾ ಬರಲಾಗಿದೆ. ಇದರ ಔಷಧೀಯ ಗುಣಗಳ ಬಗ್ಗೆ ವಿಜ್ಞಾನಿಗಳು ತಿಳಿದುಕೊಳ್ಳಲು ಪ್ರಾರಂಭಿಸಿದ್ದು ತೀರಾ ಇತ್ತೀಚೆಗೆ. ಸಾಮಾನ್ಯ ನೆಗಡಿ, ಶೀತ, ರಕ್ತಜಿನುಗುವ ಒಸಡುಗಳು, ಕೆಮ್ಮು ಮತ್ತು ಕೆಲವು ಬಗೆಯ ಕ್ಯಾನ್ಸರ್‌ಗಳಿಗೆ ಬೆಳ್ಳುಳ್ಳಿ ಉತ್ತಮ ಔಷಧಿಯಾಗಿದೆ.

ಉತ್ತಮ ಬ್ಯಾಕ್ಟೀರಿಯಾನಿವಾರಕವಾಗಿದೆ

ಉತ್ತಮ ಬ್ಯಾಕ್ಟೀರಿಯಾನಿವಾರಕವಾಗಿದೆ

ಬೆಳ್ಳುಳ್ಳಿಯನ್ನು ಔಷಧಿ, ಆಹಾರಗಳ ಹೊರತಾಗಿ ನಮ್ಮ ಹಿರಿಯರು ದುಷ್ಟಶಕ್ತಿಗಳನ್ನು ದೂರ ಓಡಿಸಲೂ, ಋಣಾತ್ಮಕ ಶಕ್ತಿಗಳನ್ನು ತಡೆಗಟ್ಟಲೂ ಬಳಸುತ್ತಿದ್ದರು. ಇಂದು ಬೆಳ್ಳುಳ್ಳಿಯ ಈ ಶಕ್ತಿಯ ಬಗ್ಗೆ ವಿಜ್ಞಾನದಲ್ಲಿ ಸೂಕ್ತ ವಿವರಣೆ ಇದೆ. ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಪೋಷಕಾಂಶವಿದೆ. ಇದು ಉತ್ತಮ ಬ್ಯಾಕ್ಟೀರಿಯಾನಿವಾರಕವಾಗಿದೆ.

ಆರೋಗ್ಯದ ಆಗರ...

ಆರೋಗ್ಯದ ಆಗರ...

ಬೆಳ್ಳುಳ್ಳಿಯನ್ನು ಒಂದು ಗೊಂಚಲಾಗಿಸಿ ಮನೆಯ ಹೊರಗೆ ಕಟ್ಟುವ ಮೂಲಕ ಇದರ ವಾಸನೆಯನ್ನು ಪಸರಿಸುವಂತೆ ಮಾಡುತ್ತಿದ್ದರು. ನಿಧಾನವಾಗಿ ಗಾಳಿಯಲ್ಲಿ ಬೆರೆಯುವ ಆಲಿಸಿನ್ ಆ ಸ್ಥಳದಲ್ಲಿ ಕೀಟಾಣು, ಬ್ಯಾಕ್ಟೀರಿಯಾಗಳನ್ನು ಬರದಂತೆ ತಡೆಯುತ್ತದೆ. ಪರಿಣಾಮವಾಗಿ ಆರೋಗ್ಯ ವೃದ್ಧಿಸುತ್ತದೆ. ಔಷಧೀಯ ಗುಣಗಳ ಆಗರ-ಬಿಳಿ ಬಿಳಿ ಬೆಳ್ಳುಳ್ಳಿ

ಸಾಲಾಡ್ ಜೊತೆ...

ಸಾಲಾಡ್ ಜೊತೆ...

ಕೆಲವರು ತಮ್ಮ ಸಾಲಾಡ್‌ನಲ್ಲಿ ಕೆಲವು ಹಸಿ ಬೆಳ್ಳುಳ್ಳಿಗಳ ಎಸಳುಗಳನ್ನು ಸೇರಿಸಿ ಸೇವಿಸುತ್ತಾರೆ. ಹಸಿ ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಬೇಯಿಸಿದ ಬೆಳ್ಳುಳ್ಳಿಗಿಂತಲೂ ಹೆಚ್ಚು ಪ್ರಬಲವಾಗಿರುತ್ತದೆ ಹಾಗೂ ಗುಣಪಡಿಸುವ ಕ್ಷಮತೆ ಕಡಿಮೆಯಾಗುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಸಾಲಾಡ್ ಜೊತೆ...

ಸಾಲಾಡ್ ಜೊತೆ...

ಆದ್ದರಿಂದ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಇದರ ಘಾಟನ್ನು ಸಹಿಸಿ ಹಸಿಯಾಗಿ ಒಂದೆರಡು ಎಸಳು ಸೇವಿಸಲು ತೊಡಗಿದ ಬಳಿಕ ಆರೋಗ್ಯದಲ್ಲಿ ವೃದ್ಧಿಯಾಗುವುದನ್ನು ಕೆಲವೇ ದಿನಗಳಲ್ಲಿ ಗಮನಿಸಬಹುದು... ಆದರೆ ಸೇವಿಸುವ ಮೊದಲು ಒಮ್ಮೆ ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ...

ದಿಂಬಿನಡಿ ಇಟ್ಟು ಮಲಗಿ

ದಿಂಬಿನಡಿ ಇಟ್ಟು ಮಲಗಿ

ರಾತ್ರಿ ಮಲಗುವಾಗ ದಿಂಬಿನಡಿ ಇಟ್ಟು ಮಲಗಿ... ಇದರ ಘಾಟು ನವಿರಾಗಿ ಗಾಳಿಯಲ್ಲಿ ಹರಡುತ್ತಿದ್ದಂತೆಯೇ ಶ್ವಾಸ ನಿರಾಳವಾಗಿ ನಿದ್ದೆ ಸುಖಕರವಾಗುತ್ತದೆ. ಹಿರಿಯರು ಈ ಘಾಟು ದುಷ್ಟಶಕ್ತಿಗಳನ್ನು ದೂರವಿಸಿರುತ್ತದೆ ಎಂದು ನಂಬುತ್ತಾರೆ.

ಅದೃಷ್ಟ ಪರೀಕ್ಷೆಗೆ ಮುಂದಾಗಿ....

ಅದೃಷ್ಟ ಪರೀಕ್ಷೆಗೆ ಮುಂದಾಗಿ....

ಕೆಲವರು ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಸದಾ ಜೇಬಿನಲ್ಲಿರಿಸಿರುತ್ತಾರೆ. ಇದರಿಂದ ಅದೃಷ್ಟ ಒಲಿಯುತ್ತದೆ ಎನ್ನಲಾಗುತ್ತದೆ. ಈಗ ಬೆಳ್ಳುಳ್ಳಿಯನ್ನು ಸೇವಿಸುವ, ತಲೆದಿಂಬಿನಡಿ ಇಡುವ, ಜೇಬಿನಲ್ಲಿಡುವ ಪ್ರಯೋಜನಗಳನ್ನು ನೀವು ಅರಿತಿರುವ ಕಾರಣ ಇದರಲ್ಲೊಂದು ವಿಧಾನವನ್ನು ಖಂಡಿತಾ ಅನುಸರಿಸಿ.


English summary

What happen if you put Garlic under your Pillow

Have ever heard something about putting a garlic under pillow? Well there are people that do that and you may want to know the reason why. People believe that if you put a garlic under your pillow you will improve your sleep significantly.... read more....
X
Desktop Bottom Promotion