ಬಾಯಿ ದುರ್ವಾಸನೆ ತಡೆಗೆ, ಮುನ್ನೆಚ್ಚರಿಕೆ ಕ್ರಮಗಳೇನು?

ಕೆಲವೊಮ್ಮೆ ನಮಗರಿವಿಲ್ಲದಂತೆಯೇ ನಮ್ಮ ಬಾಯಿಯಿಂದ ದುರ್ವಾಸನೆ ಸೂಸುತ್ತಿದ್ದು ಎದುರಿನವರಿಗೆ ವಾಕರಿಕೆ ಹಾಗೂ ನಮಗೆ ಬಹಳಷ್ಟು ಮುಜುಗರ ಉಂಟಾಗಬಹುದು. ಬಾಯಿಯ ದುರ್ಗಂಧಕ್ಕೆ ಹಲವಾರು ಕಾರಣಗಳಿವೆ... ಮುಂದೆ ಓದಿ....

By: Arshad
Subscribe to Boldsky

ನಮ್ಮನ್ನು ಮುಜುಗರಕ್ಕೀಡು ಮಾಡುವ ಕೆಲವು ಸಂಗತಿಗಳಲ್ಲಿ ಬಾಯಿಯ ದುರ್ವಾಸನೆಯೂ ಒಂದು. ಮಾತನಾಡುವಾಗ ಎದುರಿನ ವ್ಯಕ್ತಿ ಮುಖ ಸಿಂಡರಿಸಿಕೊಂಡಾಗ ನಮಗೆ ಗೊತ್ತಾಗದೇ ನಮ್ಮ ಬಾಯಿಯಿಂದ ದುರ್ವಾಸನೆ ಹೊಮ್ಮುತ್ತಿರುವುದು ಗೊತ್ತಾದರೆ ಅತ್ಯಂತ ಮುಜುಗರ ಎದುರಾಗುತ್ತದೆ.

ವಾಸ್ತವವಾಗಿ ಇದಕ್ಕೆ ನಮ್ಮ ಸೋಮಾರಿತನವೇ ಕಾರಣ. ಏಕೆಂದರೆ ನಮ್ಮ ನಾಲಿಗೆ, ಕೆನ್ನೆಯ ಒಳಭಾಗ, ಗಂಟಲ ಮೇಲ್ಭಾಗ, ಒಸಡು, ಹಲ್ಲುಗಳ ನಡುವೆ ಮೊದಲಾದೆಡೆ ತೆಳುವಾಗಿ ಆವರಿಸಿರುವ ಆಹಾರದ ಕಣಗಳಲ್ಲಿ ಕೆಲವು ಬ್ಯಾಕ್ಟೀರಿಯಾಗಳು ಮನೆಮಾಡಿ ಆಹಾರವನ್ನು ಆಮ್ಲಜನಕದ ಅಗತ್ಯವೇ ಇಲ್ಲದೇ ಶೀಘ್ರವಾಗಿ ಕೊಳೆಸಿ ದುರ್ವಾಸನೆ ಹೊರಡಿಸಲು ಕಾರಣವಾಗುತ್ತವೆ. ಬಾಯಿ ದುರ್ವಾಸನೆ ತಡೆಗೆ, ಸ್ಟೆಪ್ ಬೈ ಸ್ಟೆಪ್ ಟಿಪ್ಸ್   

Bad Breath
 

ವಿಶೇಷವಾಗಿ ಸಿಹಿತಿಂಡಿ, ಮದ್ಯ, ಮದ್ಯ ಆಧಾರಿತ ಪಾನೀಯ, ತಂಬಾಕಿನ ಸೇವನೆ, ಈರುಳ್ಳಿ, ಕೋಸು, ಬೆಳ್ಳುಳ್ಳಿ ಮೊದಲಾದ ಆಹಾರಗಳನ್ನು ಸೇವಿಸಿದ ಬಳಿಕ ಈ ದುರ್ವಾಸನೆ ಹೆಚ್ಚಾಗಿ ವ್ಯಾಪಿಸುತ್ತದೆ. ಈ ಸ್ಥಿತಿಗೆ halitosis ಎಂದು ಕರೆಯುತ್ತಾರೆ. ಊಟ ಮಾಡಿದ ಬಳಿಕ ಸ್ವಚ್ಛವಾಗಿ ಮುಕ್ಕಳಿಸಿ ತೊಳೆದುಕೊಳ್ಳದೇ ಇರುವ ಮೂಲಕ ಈ ಸ್ಥಿತಿಯನ್ನು ಹೆಚ್ಚೂ ಕಡಿಮೆ ಪ್ರತಿಯೊಬ್ಬರೂ ಅನುಭವಿಸುತ್ತಾರೆ.

ಇದೇ ಕಾರಣಕ್ಕೆ ದುಬಾರಿ ಬೆಲೆಯ ಸಿದ್ಧ ಆಹಾರಗಳನ್ನು ತಿಂದವರು ಮುಖ ಮುಕ್ಕಳಿಸದೇ ಕೇವಲ ಟಿಶ್ಯೂ ಪೇಪರ್ ನಲ್ಲಿ ಕೈ ಒರೆಸಿಕೊಂಡು ಬಂದ ನಂತರ ದುರ್ವಾಸನೆ ಹೊರಡಿಸುತ್ತಾ ಪ್ರತಿಷ್ಠೆ ಮೆರೆಯುತ್ತಾರೆ. ಗಂಧಕದ ಅಂಶ ಹೆಚ್ಚಿರುವ ಬೆಳ್ಳುಳ್ಳಿ ಮತ್ತು ಕೋಸು ತಿಂದ ಬಳಿಕವಂತೂ ಕೆಲವೇ ನಿಮಿಷಗಳಲ್ಲೇ ದುರ್ವಾಸನೆ ಪ್ರಾರಂಭವಾಗುತ್ತದೆ.

ಗಂಧಕದ ಅಂಶ ಹೆಚ್ಚಿರುವ ಆಹಾರ ಇಷ್ಟು ಶೀಘ್ರವಾಗಿ ವಾಸನೆ ಬರಲಿಕ್ಕೆ ಕಾರಣವೆಂದರೆ ಆಹಾರ ಹೊಟ್ಟೆಯಲ್ಲಿ ಜೀರ್ಣವಾಗುತ್ತಿದ್ದಂತೆಯೇ ಗಂಧಕದ ಡೈ ಆಕ್ಸೈಡ್ ಮತ್ತು ಇತರ ಗಂಧಕದ ಸಂಯೋಜನೆಯ ರಕ್ತದ ಮೂಲಕ ಶ್ವಾಸಕೋಶಕ್ಕೆ ತಲುಪಿ ಅಲ್ಲಿಂದ ನಿಃಶ್ವಾಸದ ಉಸಿರಿನ ಮೂಲಕ ಹೊರಹಾಕುತ್ತವೆ.

Onion
 

ಗಂಧಕ ದುರ್ಗಂಧ ಬೀರುವ ವಸ್ತುವಾದ ಕಾರಣ ತಕ್ಷಣವೇ ವಾಸನೆ ಹೊಡೆಯಲು ಪ್ರಾರಂಭವಾಗುತ್ತದೆ. ಬಾಯಿಯಲ್ಲಿ ಉಳಿದಿರುವ ಆಹಾರವನ್ನು ಬ್ಯಾಕ್ಟೀರಿಯಾಗಳು ವಿಭಜಿಸಿ ಕೆಲವು ಗಂಧಕದ ಸಂಯೋಜಕಗಳನ್ನು ಉತ್ಪತ್ತಿಮಾಡುತ್ತವೆ. ಈ ಕಣಗಳು ಹಗುರವಾಗಿದ್ದು ಗಾಳಿಯಲ್ಲಿ ಹಾರಾಡುತ್ತವೆ. ಉಸಿರಿನ ಮೂಲಕ ಹೊರಬರುವ ಈ ದುರ್ಗಂಧಯುಕ್ತ ಕಣಗಳು ದುರ್ಗಂಧದಿಂದ ಕೂಡಿರುತ್ತವೆ.

ನಮ್ಮ ಲಾಲಾರಸದಿಂದ ಪಾರಾಗಲು ಈ ಸೂಕ್ಷ್ಮಜೀವಿಗಳು ನಾಲಿಗೆಯ ಮೇಲಿನ ತೆಳುವಾದ ಪದರದ ಅಡಿಯಲ್ಲಿ ಅವಿತುಕೊಳ್ಳುತ್ತವೆ. ಇಲ್ಲಿ ಆಮ್ಲಜನಕ ಸಿಗದ ಕಾರಣ ಇವು ಯಥೇಚ್ಛವಾಗಿ ವಂಶಾಭಿವೃದ್ಧಿಗೊಳಿಸುತ್ತವೆ. ವಿಶೇಷವಾಗಿ ಹಲ್ಲುಗಳ ನಡುವಣ ಸಂಧುಗಳಲ್ಲಿ, ನಾಲಿಗೆಯ ಸೂಕ್ಷ್ಮ ಬಿರುಕುಗಳಲ್ಲೆಲ್ಲಾ ಅವಿತಿರುತ್ತವೆ.  

Garlic
 

ಬಾಯಿಯ ದುರ್ವಾಸನೆಗೆ ಮೇಲಿನ ಎರಡು ಕಾರಣಗಳಿಗೆ ಹೊರತಾಗಿ ಇತರ ಕಾರಣಗಳೂ ಇವೆ. ನಮ್ಮ ಬಾಯಿಯಲ್ಲಿ ಲಾಲಾರಸ ಸತತವಾಗಿ ಉತ್ಪತ್ತಿಯಾಗುತ್ತಾ ಇರಬೇಕು. ಉಪವಾಸ ಅಥವಾ ಇನ್ನಾವುದೋ ಕಾರಣದಿಂದ ಸಾಕಷ್ಟು ಉತ್ಪತ್ತಿಯಾಗದೇ ಇದ್ದರೂ ದುರ್ವಾಸನೆಗೆ ಕಾರಣವಾಗುತ್ತದೆ.  ಬಾಯಿ ದುರ್ವಾಸನೆಗೆ ನೈಸರ್ಗಿಕ ಮೌತ್‎ವಾಶ್

ಅಲ್ಲದೇ ವಿಟಮಿನ್ ಬಿ, ಆಹಾರದಲ್ಲಿ ಸತುವಿನ ಕೊರತೆಯೂ ಇನ್ನೊಂದು ಕಾರಣವಾಗಿದೆ. ನಾಲಿಗೆಯನ್ನು ಆಗಾಗ ಕೆರೆದು ಸ್ವಚ್ಛಗೊಳಿಸದೇ ಇರುವುದೂ ಇನ್ನೊಂದು ಕಾರಣ. ಕೆಲವು ಔಷಧಿಗಳ ಅಡ್ಡಪರಿಣಾಮ, ಮದ್ಯಪಾನ, ವ್ಯಾಯಾಮದ ಹೊತ್ತಿನಲ್ಲಿ ಕೇವಲ ಮೂಗಿನಿಂದ ಉಸಿರಾಡಿ ಬಾಯಿ ಒಣಗುವಂತಾದರೂ ದುರ್ವಾಸನೆ ಮೂಡಬಹುದು. ತೂಕ ಇಳಿಸುವ ಕ್ರಮಗಳು, ಬಹಳ ಹೊತ್ತು ನೀರು ಕುಡಿಯದೇ ಇರುವುದು ಸಹಾ ಇದಕ್ಕೆ ಕಾರಣವಾಗಬಹುದು. ಬಾಯಿ ದುರ್ವಾಸನೆಗೆ ಕೆಲ ಅಚ್ಚರಿಯ ಕಾರಣಗಳು!   

Drinking water
 

ಇದಕ್ಕೆ ನೇರವಾದ ಪರಿಹಾರವೆಂದರೆ ಬಾಯಿಯ ಸ್ವಚ್ಛತೆ. ಪ್ರತಿಬಾರಿ ಊಟದ ಬಳಿಕ ಮುಕ್ಕಳಿಸುವುದು, ಸಾಕಷ್ಟು ನೀರು ಕುಡಿಯುವುದು, ಆಹಾರವನ್ನು ಪೂರ್ಣವಾಗಿ ಜಗಿದು ನುಂಗುವುದು, ದಿನಕ್ಕೆರಡು ಬಾರಿ ಹಲ್ಲುಜ್ಜುವುದು ಮತ್ತು ಒಂದು ಬಾರಿ ನಾಲಿಗೆಯನ್ನು ಕೆರೆದು ಸ್ವಚ್ಛಗೊಳಿಸುವುದು, ದಿನದ ಕೆಲಹೊತ್ತಾದರೂ ಮೂಗಿನಿಂದ ಉಚ್ಛ್ವಾಸ ಮತ್ತು ಬಾಯಿಯಿಂದ ನಿಃಶ್ವಾಸ ಬಿಡುವ ಕ್ರಮವನ್ನು ಅನುಸರಿಸುವುದು ಇತ್ಯಾದಿಗಳಿಂದ ಈ ಸ್ಥಿತಿ ಬರದೇ ಇರುವಂತೆ ನೋಡಿಕೊಳ್ಳುವುದೇ ಆರೋಗ್ಯಕರ ಮತ್ತು ಜಾಣತನದ ಮಾರ್ಗವಾಗಿದೆ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Thursday, November 3, 2016, 12:47 [IST]
English summary

What Causes Bad Breath?

Halitosis or bad breath is caused by anaerobic bacteria that reside on the surface of the tongue and throat and create smelly sulphur compounds when they come in contact with proteins. If you do not clean the mouth after consuming alcoholic beverages and tobacco, smoking cigarettes and eating foods like onions, cabbage, garlic, etc. this issue can surface.
Please Wait while comments are loading...
Subscribe Newsletter