For Quick Alerts
ALLOW NOTIFICATIONS  
For Daily Alerts

ಪರ್ಫೆಕ್ಟ್ ಆರೋಗ್ಯಕ್ಕೆ ಸೇವಿಸಲೇಬೇಕು ಕ್ಯಾರೆಟ್

By Cm Prasad
|

ಆರೋಗ್ಯದ ಸಮರ್ಪಕ ಆರೈಕೆಗೆ ಅನೇಕ ರೀತಿಯ ವಿಧಾನಗಳನ್ನು ಅನುಸರಿಸಲಾಗುತ್ತದೆ. ಈ ವಿಧಾನಗಳಲ್ಲಿ ವೈವಿಧ್ಯಮಯ ಆಹಾರ ಪದ್ಧತಿಗಳೂ ಸಹ ಒಂದು ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ನಮಗೆ ಸುಲಭವಾಗಿ ಸಿಗುವ ಪೌಷ್ಠಿಕಾಂಶಯುಕ್ತ ಪ್ರಾಕೃತಿಕ ಆಹಾರಗಳನ್ನು ಸೇವಿಸುವ ಬದಲು ಸಂಸ್ಕರಿಸಿ ಮತ್ತು ರುಚಿಗೆ ಹೆಚ್ಚು ಆದ್ಯತೆ ನೀಡುವ ತಿನಿಸುಗಳತ್ತ ಮುಖ ಮಾಡುತ್ತಿದ್ದೇವೆ. ಇದು ನಿಜಕ್ಕೂ ಕಳಕವಳಕಾರಿ ಬೆಳವಣಿಗೆ. ಆದ್ದರಿಂದ ಇಂದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಉಪಯೋಗವಾಗುವ ಆಹಾರದ ಬಗ್ಗೆ ತಿಳಿಸುತ್ತಿದ್ದು, ಈ ಲೇಖನದ ಕಥಾವಸ್ತು ಕ್ಯಾರೆಟ್. ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್ ಜ್ಯೂಸ್

ಹೌದು! ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಎಲ್ಲರೂ ಸೇವಿಸಬಹುದಾದ ಆರೋಗ್ಯಕ್ಕೆ ನೆರವಾಗುವ ತರಕಾರಿಗಳಲ್ಲಿ ಕ್ಯಾರೆಟ್ ಅನ್ನು ಕಡೆಗಣಿಸುವಂತಿಲ್ಲ. ಕ್ಯಾರೆಟ್‌ನಿಂದ ಸಂತಾನೋತ್ಪತ್ತಿಯ ಶಕ್ತಿ ಅಧಿಕಗೊಂಡು, ವೀರ್ಯದ ಗುಣ ಮತ್ತು ಪ್ರಮಾಣವನ್ನು ಹೆಚ್ಚಿಸಲು ನೆರವಾಗಲಿದ್ದು, ಇದನ್ನು ಒಳ್ಳೆಯ ಸೂಪರ್ ಫುಡ್ ಎಂದು ಪರಿಗಣಿಸಲಾಗಿದೆ. ಕ್ಯಾರೆಟ್‌ನ ಆರು ವಿವಿಧ ಉಪಯೋಗಗಳನ್ನು ಈ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ. ಇದರಿಂದ ನಿಮ್ಮ ಆರೋಗ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ವಿವರಗಳಿಗೆ ಮುಂದೆ ಓದಿ...

ತಾರುಣ್ಯ ಕಾಪಾಡಲು

ತಾರುಣ್ಯ ಕಾಪಾಡಲು

ಕ್ಯಾರೆಟ್‌ನಿಂದ ವಯಸ್ಸಾಗುವಿಕೆಯಿಂದ ದೇಹದ ಮೇಲೆ ಆಗುವಂತಹ ಪರಿಣಾಮಗಳನ್ನು ನಿಯಂತ್ರಿಸಬಹುದು. ಅದರಲ್ಲಿರುವ ಬೀಟಾ-ಕ್ಯಾರೊಟೀನ್ ಎಂಬ ಉತ್ಕರ್ಷಣ ನಿರೋಧಕ ಸತ್ವವು ಫ್ರೀ ರಾಡಿಕಲ್ಸ್ ಜೊತೆಗೆ ಹೋರಾಡುತ್ತವೆ.

ಸೌಂದರ್ಯವನ್ನು ಹೆಚ್ಚಿಸುತ್ತದೆ

ಸೌಂದರ್ಯವನ್ನು ಹೆಚ್ಚಿಸುತ್ತದೆ

ಕ್ಯಾರೆಟ್‌ನಲ್ಲಿ ಉತ್ಕರ್ಷಣ ನಿರೋಧಕ ಸತ್ವಗಳು ಮತ್ತು ವಿಟಮಿನ್ ಎ ಸತ್ವಗಳು ಯಥೇಚ್ಛವಾಗಿದ್ದು, ಚರ್ಮದ, ಕೇಶದ ಮತ್ತು ಉಗುರುಗಳ ಆರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕ್ಯಾರೆಟ್ ಫೇಸ್ ಪ್ಯಾಕ್-ತ್ವಚೆಯ ಸುಕ್ಕುಗಳಿಗೆ ಗೇಟ್ ಪಾಸ್!

ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ

ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ

ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೊಟೀನ್, ಆಲ್ಫಾ-ಕ್ಯಾರೊಟೀನ್ ಮತ್ತು ಲುಟೀನ್ ಎಂಬ ಉತ್ಕರ್ಷಣ ನಿರೋಧಕ ಸತ್ವಗಳು ಇದ್ದು, ಈ ಸತ್ವಗಳು ಬೊಜ್ಜಿನೊಂದಿಗೆ ಹೋರಾಡುತ್ತವೆ. ಅಲ್ಲದೆ ಇದರಲ್ಲಿರುವ ನಾರಿನ ಅಂಶವು ದೇಹದಲ್ಲಿನ ಅನುಪಯುಕ್ತ ಬೊಜ್ಜನ್ನು ಹೊರಹಾಕುತ್ತದೆ.

ದಂತದ ಆರೈಕೆ

ದಂತದ ಆರೈಕೆ

ಕ್ಯಾರೆಟ್ ಅನ್ನು ಹೆಚ್ಚು ಸೇವಿಸಿದರೆ ದಂತದ ಆರೋಗ್ಯ ಹೆಚ್ಚಲಿದ್ದು, ಹಲ್ಲುಗಳು ಕಾಂತಿಯುತವಾಗುತ್ತವೆ. ಕ್ಯಾರೆಟ್ ಅನ್ನು ಹಸಿಯಾಗಿ ಕಚ್ಚುತ್ತಾ ಸೇವಿಸಿದರೆ ಸಲೈವಾ ಅಂಶವು ಹೆಚ್ಚು ಉತ್ಪತ್ತಿಯಾಗಿ ಆಮ್ಲದ ಪ್ರಮಾಣವನ್ನು ಸಮತೋಲನದಲ್ಲಿರಿಸುವುದಲ್ಲದೇ ಹಾನಿಯುಂಟಾಗುವ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುತ್ತದೆ.

ಲಿವರ್‌ನ ಅರೋಗ್ಯವನ್ನು ಹೆಚ್ಚಿಸಲಿದೆ

ಲಿವರ್‌ನ ಅರೋಗ್ಯವನ್ನು ಹೆಚ್ಚಿಸಲಿದೆ

ಕ್ಯಾರೆಟ್ ಅನ್ನು ಡಿಟಾಕ್ಸ್ ಫುಡ್ ಎಂದು ಪರಿಗಣಿಸಲಾಗಿದೆ. ಇದು ನಿಮ್ಮ ಲಿವರ್ ಅನ್ನು ಶುದ್ಧೀಕರಿಸಿ, ಲಿವರ್ ನಲ್ಲಿನ ಪಿತ್ತರಸದ ಉತ್ಪತ್ತಿಯನ್ನು ಕಡಿಮೆ ಮಾಡಿ ಬೊಜ್ಜು ಶೇಖರಣೆಯಾಗುವುದನ್ನು ತಡೆಯಲು ನೆರವಾಗುತ್ತದೆ.

English summary

What Are the Health Benefits of Carrots?

Carrots are a popular snack and good addition to soups and stews, but did you know that it contains a lot of nutrients that are good for your ..
Story first published: Saturday, February 6, 2016, 17:27 [IST]
X
Desktop Bottom Promotion