ಬಡವರ ಬಾದಾಮಿ 'ಬೇಯಿಸಿದ ಕಡಲೆಕಾಯಿ'ಯ ಪ್ರಯೋಜನಗಳು

ಕಡಲೆ ಕಾಯಿಗಳನ್ನು ಹುರಿದು ತಿನ್ನುವುದಕ್ಕಿಂತಲೂ ಉಪ್ಪುನೀರಿನಲ್ಲಿ ಕುದಿಸಿ ಸೇವಿಸುವುದೇ ಹೆಚ್ಚು ಆರೋಗ್ಯಕರ. ಇದರಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಕಡಿಮೆ ಇದ್ದು ಪೋಷಕಾಂಶಗಳು ಹೆಚ್ಚಿರುತ್ತವೆ.

By: Arshad
Subscribe to Boldsky

ಬಡವರ ಬಾದಾಮಿ ಎಂಬ ಪ್ರಖ್ಯಾತಿ ಪಡೆದಿರುವ ಸಾಮಾನ್ಯ ಕಡಲೆ ಕಾಯಿ ಅಥವಾ ಶೇಂಗಾಬೀಜವನ್ನು ನಾವೆಲ್ಲಾ ಸಾಮಾನ್ಯವಾಗಿ ಸಮಯ ಕಳೆಯುವ ಒಂದು ಆಹಾರವನ್ನಾಗಿಯೇ ಸೇವಿಸುತ್ತೇವೆ. ಹಸಿಯಾಗಿ ಸೇವಿಸುವ ಬದಲು ಬೇಯಿಸಿ ಅಥವಾ ಮರಳಿನಲ್ಲಿ ಹುರಿದು ತಿನ್ನುವ ಈ ಕಡಲೆಕಾಯಿ ಎಲ್ಲರ ಪ್ರಿಯ ತಿನಿಸಾಗಿದ್ದು ಅಗ್ಗವೂ ಆಗಿರುವ ಕಾರಣ ಇದು ಬಿಕರಿಯಾಗುವ ವೇಗಕ್ಕೆ 'ಬಿಸಿ ಬಿಸಿ ಕಡ್ಲೆಕಾಯಿಯಂತೆ ಮಾರಾಟವಾಗುವ' ವಿಶೇಷಣವನ್ನೇ ನೀಡುತ್ತೇವೆ. ಹೊಸ ಟ್ರಿಕ್ಸ್- ಮನೆಯ ಸ್ವಚ್ಛತೆಗೆ ಕಡಲೆಕಾಯಿ ಬೆಣ್ಣೆ!

ಕಡಲೆ ಕಾಯಿಗಳನ್ನು ಹುರಿದು ತಿನ್ನುವುದಕ್ಕಿಂತಲೂ ಉಪ್ಪುನೀರಿನಲ್ಲಿ ಕುದಿಸಿ ಸೇವಿಸುವುದೇ ಹೆಚ್ಚು ಆರೋಗ್ಯಕರ. ಇದರಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಕಡಿಮೆ ಇದ್ದು ಪೋಷಕಾಂಶಗಳು ಹೆಚ್ಚಿರುತ್ತವೆ. ವಿಶೇಷವಾಗಿ ಆಮ್ಲಜನಕದ ಕೊರತೆಯಿಂದ ಜೀವಕೋಶಗಳು ಬಳಲುವ ತೊಂದರೆಯಿಂದ ರಕ್ಷಿಸುತ್ತದೆ. ಬನ್ನಿ, ಬೇಯಿಸಿದ ಕಡ್ಲೆಕಾಯಿಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...

ಬಂಜೆತನ ಕಡಿಮೆಗೊಳಿಸುತ್ತದೆ

ಕಡ್ಲೆಕಾಯಿಯಲ್ಲಿರುವ ಫೋಲಿಕ್ ಆಮ್ಲ ಗರ್ಭಧರಿಸುವ ಮುನ್ನ ಮತ್ತು ಬಳಿಕ ತಾಯಿಯ ದೇಹವನ್ನು ಇನ್ನಷ್ಟು ಆರೋಗ್ಯವಂತಗೊಳಿಸುತ್ತದೆ. ಈ ಮೂಲಕ ಹುಟ್ಟುವ ಮಗುವಿನಲ್ಲಿ ನರಸಂಬಂಧಿತ ದೋಷಗಳಿರುವ ಸಾಧ್ಯತೆ 70% ಕ್ಕೂ ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.  ಮಹಿಳೆಯರ ಬಂಜೆತನ ಸಮಸ್ಯೆಗೆ ಕೆಲವೊಂದು ಮನೆ ಔಷಧಿ!

ತ್ವಚೆಯನ್ನು ರಕ್ಷಿಸುತ್ತದೆ

ಕಡ್ಲೆಕಾಯಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಇದ್ದು ವಿಶೇಷವಾಗಿ ಚರ್ಮದ ಸೂಕ್ಷ್ಮರಂಧ್ರಗಳಿರುವ ಪದರದ ಜೀವಕೋಶಗಳನ್ನು ಪೋಷಿಸುತ್ತದೆ. ಈ ಮೂಲಕ ದೇಹದಲ್ಲಿ ಪ್ರವೇಶಿಸಿರುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ಧಾಳಿಯಿಂದ ತ್ವಚೆ ಹಾಳಾಗುವುದನ್ನು ರಕ್ಷಿಸುತ್ತದೆ.

ಹೊಟ್ಟೆಯ ಕ್ಯಾನ್ಸರ್ ನಿಂದ ಕಾಪಾಡುತ್ತದೆ

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪಾಲಿ ಫಿನೋಲಿಕ್ ಆಂಟಿ ಆಕ್ಸಿಡೆಂಟುಗಳು ಆರೋಗ್ಯವನ್ನು ವೃದ್ದಿಸುತ್ತವೆ.

ಹೊಟ್ಟೆಯ ಕ್ಯಾನ್ಸರ್ ನಿಂದ ಕಾಪಾಡುತ್ತದೆ

ವಿಶೇಷವಾಗಿ P-Coumaric ಎಂಬ ಆಮ್ಲ ನೈಟ್ರಸ್ ಅಮೈನುಗಳನ್ನು ಉತ್ಪಾದಿಸಿ ಹೊಟ್ಟೆಯ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕಡ್ಲೆಕಾಯಿಯ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ಒಟ್ಟಾರೆ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಇದರಲ್ಲಿರುವ ಅಸಂತುಲಿತ ಕೊಬ್ಬಿನ ಆಮ್ಲಗಳು, ಅದರಲ್ಲಿಯೂ ವಿಶೇಷವಾಗಿ ಓಲಿಕ್ ಆಮ್ಲ ಹೃದಯ ನಾಳಗಳ ತೊಂದರೆಗಳಿಂದ ರಕ್ಷಿಸುತ್ತದೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ

ಕಡ್ಲೆಕಾಯಿಯಲ್ಲಿರುವ ಮ್ಯಾಂಗನೀಸ್ ಆಹಾರದಲ್ಲಿ ಲಭ್ಯವಿರುವ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳಿಸಿ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸಂತುಲಿತ ಮಟ್ಟದಲ್ಲಿರಿಸಲು ನೆರವಾಗುತ್ತದೆ.

ಖನಿಜಗಳ ಆಗರ

ಕಡ್ಲೆಕಾಯಿಯನ್ನು ಬಡವರ ಬಾದಾಮಿ ಎನ್ನಲಿಕ್ಕೆ ಇದರಲ್ಲಿರುವ ಮ್ಯಾಂಗನೀಸ್, ತಾಮ್ರ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಕಬ್ಬಿಣ, ಸೆಲೆನಿಯಂ ಮತು ಸತುವಿನ ಪ್ರಮಾಣ ಉತ್ತಮ ಪ್ರಮಾಣದಲ್ಲಿರುದೇ ಕಾರಣ.

ಖನಿಜಗಳ ಆಗರ

ಇವೆಲ್ಲವೂ ನಮ್ಮ ಆರೋಗ್ಯವನ್ನು ಒಂದಲ್ಲ ಒಂದು ರೀತಿಯಲ್ಲಿ ಉತ್ತಮಗೊಳಿಸುತ್ತವೆ.

 

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

What Are the Benefits of Eating Boiled Peanuts?

Boiled peanuts are made from green or raw peanuts that have been boiled in salty water, creating a legume flavor. Compared to raw or dry-roasted peanuts, boiled peanuts are lower in calories and fat and also have a higher concentration of nutrients that protect your cells from oxidation, making them a healthy addition to your diet.
Please Wait while comments are loading...
Subscribe Newsletter