For Quick Alerts
ALLOW NOTIFICATIONS  
For Daily Alerts

ಈ ಪುಟ್ಟ ಜೀರಿಗೆಯಲ್ಲಿದೆ, ಬೆಟ್ಟದಷ್ಟು ಗುಣಗಳು...

By Arshad
|

ಭಾರತೀಯ ಪಾರಿಭಾಷೆಯಲ್ಲಿ ಜೀರಿಗೆಯನ್ನು ಜೀರಾ ಎ೦ದು ಕರೆಯಲಾಗುತ್ತದೆ. ಭಾರತೀಯ ಶೈಲಿಯ ಆಹಾರಪದಾರ್ಥಗಳನ್ನು ಸ್ವಾದಿಷ್ಟವನ್ನಾಗಿಸುವುದರಲ್ಲಿ ಜೀರಿಗೆ ಕಾಳುಗಳು ಮಹತ್ವದ ಪಾತ್ರವಹಿಸುತ್ತವೆ. ಆಹಾರಪದಾರ್ಥಗಳಿಗೆ ವಿಶೇಷವಾದ ರುಚಿಯನ್ನು ನೀಡುವುದರೊ೦ದಿಗೆ, ಜೀರಿಗೆ ಕಾಳುಗಳು ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನೂ ಒಳಗೊ೦ಡಿವೆ. ಈ ಕಾಳುಗಳು ಕ೦ದುಬಣ್ಣವನ್ನು ಹೊ೦ದಿದ್ದು, ಗಾತ್ರದಲ್ಲಿ ಸಾಕಷ್ಟು ಚಿಕ್ಕದಾಗಿರುತ್ತವೆ. ಜೀರಿಗೆಯನ್ನು ನೇರವಾಗಿ ಇಲ್ಲವೇ ಪುಡಿಯ ರೂಪದಲ್ಲಿಯೂ ಸಹ ಬಳಸಿಕೊಳ್ಳಬಹುದು. ಜೀರಿಗೆಯು ಜೀರ್ಣಕ್ರಿಯೆಗೆ ಪೂರಕವಾಗಿರುವುದರಿ೦ದ, ಜೀರಿಗೆಯನ್ನು ಭಾರತೀಯ ಶೈಲಿಯ ಹೆಚ್ಚುಕಡಿಮೆ ಎಲ್ಲಾ ಆಹಾರಪದಾರ್ಥಗಳಲ್ಲಿಯೂ ಬಳಸಿಕೊಳ್ಳುತ್ತಾರೆ.

ಇನ್ನು ಜೀರಿಗೆಯ ಆರೋಗ್ಯಕರ ಗುಣಗಳಲ್ಲಿ ಪ್ರಮುಖವಾದುದನ್ನು ಹೆಸರಿಸುವುದಾದರೆ ಮಧುಮೇಹವನ್ನು ತಡೆಗಟ್ಟುವುದು, ದುರ್ಮಾಂಸ, ಶಿಲೀಂಧ್ರದ ಸೋಂಕು ಮೊದಲಾದವನ್ನು ಪರಿಗಣಿಸಬಹುದು. ಇದರ ಆರೋಗ್ಯಕರ ಪರಿಣಾಮಗಳನ್ನು ಕಂಡುಕೊಂಡ ನಮ್ಮ ಹಿರಿಯರು ಪ್ರತಿದಿನ ಒಂದು ಔಷಧಿಯಂತೆ ಉಪಯೋಗಿಸುತ್ತಿದ್ದರು. ಕೇರಳ ಮತ್ತು ತಮಿಳುನಾಡುಗಳಲ್ಲಂತೂ ಹೋಟೆಲುಗಳಲ್ಲಿ ಮತ್ತು ಮನೆಗಳಲ್ಲಿ ಕುಡಿಯಲು ಜೀರಿಗೆ ಕುದಿಸಿ ಸೋಸಿದ ನೀರನ್ನೇ ಕುಡಿಯಲು ನೀಡುತ್ತಾರೆ. ಶೀತ, ಗಂಟಲು ಕೆರೆತ ಸಮಸ್ಯೆಗೆ, ಜೀರಿಗೆ ಕಷಾಯ ಸಾಕು

ಈ ನೀರನ್ನು ತಯಾರಿಸುವುದೇನೂ ಕಷ್ಟಕರವಲ್ಲ. ಕೊಂಚ ನೀರನ್ನು ಕುದಿಯಲು ಪ್ರಾರಂಭಿಸಿದ ಬಳಿಕ ಹತ್ತು ನಿಮಿಷದವರೆಗೆ ಕುದಿಯಲು ಬಿಟ್ಟು ಬಳಿಕ ಕೊಂಚ ಜೀರಿಗೆಯನ್ನು ಹಾಕಿ ಮತ್ತೂ ಹತ್ತು ನಿಮಿಷ ಕುದಿಯಲು ಬಿಡಬೇಕು. ಬಳಿಕ ಜೀರಿಗೆಯನ್ನು ಸೋಸಿ ತಣಿಯಲು ಬಿಡಿ, ಉಗುರು ಬೆಚ್ಚಗಿರುವಂತೆಯೇ ಕುಡಿಯಲು ಪ್ರಾರಂಭಿಸಿ. ಈ ನೀರನ್ನು ಊಟಕ್ಕೂ ಮೊದಲು ಸೂಪ್‌ನಂತೆಯೂ ಸೇವಿಸಬಹುದು. ಈ ನೀರಿನ ಗುಣವನ್ನು ಹೆಚ್ಚಿಸಲು ಪ್ರಮುಖವಾದ ಪೋಷಕಾಂಶವೆಂದರೆ cuminaldehyde ಎಂಬ ಫೈಟೋಕೆಮಿಕಲ್. ಜೀರಿಗೆಯ ರುಚಿಗೂ ಈ ಪೋಷಕಾಂಶವೇ ಕಾರಣ. ಬನ್ನಿ, ಈ ಪುಟ್ಟ ಜೀರಿಗೆಯ ದೊಡ್ಡ ಗುಣಗಳನ್ನು ನೋಡೋಣ...

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ದೇಹಕ್ಕೆ ಹಾನಿಕರವಾದ ಫ್ರೀ ರ್‍ಯಾಡಿಕಲ್ ಕಣಗಳನ್ನು ಮತ್ತು ಕೆಲವು ಸೋಂಕುಗಳನ್ನು ತಡೆಗಟ್ಟುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ.

ಮೂತ್ರಪಿಂಡಗಳಿಗೆ ಉತ್ತಮ

ಮೂತ್ರಪಿಂಡಗಳಿಗೆ ಉತ್ತಮ

ಜೀರಿಗೆ ನೀರನ್ನು ನಿಯಮಿತವಾಗಿ ಕುಡಿಯುವ ಮೂಲಕ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ ಎಂಬುದನ್ನು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ.

ರಕ್ತಹೀನತೆಯಿಂದ ಕಾಪಾಡುತ್ತದೆ

ರಕ್ತಹೀನತೆಯಿಂದ ಕಾಪಾಡುತ್ತದೆ

ಜೀರಿಗೆ ನೀರಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಕಬ್ಬಿಣ ರಕ್ತದಲ್ಲಿನ ಹೀಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ ರಕ್ತಹೀನತೆಯಿಂದ ಕಾಪಾಡುತ್ತದೆ.

ಕೆಲವು ವಿಧದ ಕ್ಯಾನ್ಸರ್ ತಡೆಗಟ್ಟುತ್ತದೆ

ಕೆಲವು ವಿಧದ ಕ್ಯಾನ್ಸರ್ ತಡೆಗಟ್ಟುತ್ತದೆ

ಜೀರಿಗೆ ನೀರಿನ ನಿಯಮಿತ ಸೇವನೆಯಿಂದ ಸ್ತನ ಕ್ಯಾನ್ಸರ್, ಯಕೃತ್ ಕ್ಯಾನ್ಸರ್, ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ. ಜೀರಿಗೆಯ ಕ್ಯಾನ್ಸರ್ ನಿವಾರಕ ಗುಣವೇ ಇದಕ್ಕೆ ಕಾರಣ.

ನಿದ್ರಾಹೀನತೆಯನ್ನು ತೊಡೆಯುತ್ತದೆ

ನಿದ್ರಾಹೀನತೆಯನ್ನು ತೊಡೆಯುತ್ತದೆ

ನಿದ್ದೆ ಬರದೇ ಹೊರಳಾಡುವ ತೊಂದರೆಯಿಂದ ಮುಕ್ತಿ ಪಡೆಯಲು ರಾತ್ರಿ ಊಟದ ಬಳಿಕ ಸಾಕಷ್ಟು ಜೀರಿಗೆ ನೀರು ಕುಡಿದು ಕೊಂಚಕಾಲ ಅಡ್ಡಾಡಿ ಬಳಿಕ ಮಲಗಿದರೆ ತಡೆರಹಿತ ನಿದ್ದೆ ಆವರಿಸುತ್ತದೆ.

ಜೀರ್ಣಕ್ರಿಯೆಗೆ ಸಹಕರಿಸುತ್ತದೆ

ಜೀರ್ಣಕ್ರಿಯೆಗೆ ಸಹಕರಿಸುತ್ತದೆ

ಊಟದ ಮುನ್ನ ಮತ್ತು ಬಳಿಕ ಜೀರಿಗೆ ನೀರನ್ನು ಕುಡಿಯುವ ಮೂಲಕ ಬಾಯಿಯಲ್ಲಿ ಲಾಲಾರಸ ಹೆಚ್ಚಿಸುವ ಮತ್ತು ಹೊಟ್ಟೆಯಲ್ಲಿ ಜೀರ್ಣರಸಗಳಿಗೆ ನೆರವಾಗುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳಲು ಸಹಕರಿಸುತ್ತದೆ.

ಗಂಟಲ ಬೇನೆ ಕಡಿಮೆಗೊಳಿಸುತ್ತದೆ

ಗಂಟಲ ಬೇನೆ ಕಡಿಮೆಗೊಳಿಸುತ್ತದೆ

ಗಂಟಲ ಬೇನೆ, ಗಂಟಲ ಕೆರೆತ ಮೊದಲಾದ ತೊಂದರೆಗಳಿಗೆ ಜೀರಿಗೆ ನೀರನ್ನು ಕುಡಿಯುವುದರಿಂದ ಕೊಂಚ ಪರಿಹಾರ ದೊರಕುತ್ತದೆ. ಆದರೆ ಉತ್ತಮ ಪರಿಹಾರ ಬೇಕೆಂದರೆ ಕೊಂಚ ನೀರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಜೀರಿಗೆಯನ್ನು ಹೆಚ್ಚು ಕಾಲ ಕುದಿಸಿ ಗಾಢವಾಗಿಸಿ ಬಳಿಕ ಸೋಸಿ ಉಗುರುಬೆಚ್ಚಗಾಗುವಷ್ಟು ತಣಿಸಿ ಗಳಗಳ ಮಾಡಿ ಉಗುಳಬೇಕು. ಇದು ಗಂಟಲಕೆರೆತವನ್ನು ತಕ್ಷಣವೇ ನಿಲ್ಲಿಸುತ್ತದೆ.

ಅಧಿಕ ರಕ್ತದೊತ್ತಡದಿಂದ ರಕ್ಷಿಸುತ್ತದೆ

ಅಧಿಕ ರಕ್ತದೊತ್ತಡದಿಂದ ರಕ್ಷಿಸುತ್ತದೆ

ಜೀರಿಗೆ ನೀರನ್ನು ನಿಯಮಿತವಾಗಿ ಕುಡಿಯುತ್ತಾ ಬರುವ ಮೂಲಕ ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡಬಹುದು ಹಾಗೂ ಆರೋಗ್ಯಕರ ಮಟ್ಟದಲ್ಲಿರಿಸಲು ಸಾಧ್ಯವಾಗುತ್ತದೆ.

ದೇಹಕ್ಕೆ ಉತ್ತಮ ನೀರನ್ನು ಒದಗಿಸುತ್ತದೆ

ದೇಹಕ್ಕೆ ಉತ್ತಮ ನೀರನ್ನು ಒದಗಿಸುತ್ತದೆ

ಸಾಮಾನ್ಯ ನೀರಿಗಿಂತಲೂ ಜೀರಿಗೆ ಕುದಿಸಿದ ನೀರು ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರು ಒದಗಿಸಲು ಸಾಧ್ಯವಾಗುತ್ತದೆ. ಅಲ್ಲದೇ ಇದರ ಆರೋಗ್ಯಕರ ಗುಣಗಳು ನೀರಿನ ಅಗತ್ಯವನ್ನು ಉತ್ತಮವಾಗಿ ಪೂರೈಸುತ್ತವೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ

ಜೀರಿಗೆನೀರನ್ನು ನಿಯಮಿತವಾಗಿ ಕುಡಿಯುವ ಮೂಲಕ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ.

ಕೆಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತದೆ

ಕೆಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತದೆ

ಕೆಲವು ಚಿಕ್ಕ ಪುಟ್ಟ ದೊಂದರೆಗಳಾದ ಹಲ್ಲುನೋವು, ಕಣ್ಣಿನಲ್ಲಿ ತುರಿಕೆ, ಕರುಳಿನಲ್ಲಿಉರಿ, ಸಂಧಿವಾತ, ಉಸಿರಾಟದಲ್ಲಿ ಕಷ್ಟವಾಗುವುದು, ಊತ, ನಡುಕ ಮೊದಲಾದ ತೊಂದರೆಗಳು ಜೀರಿಗೆ ನೀರನ್ನು ನಿಯಮಿತವಾಗಿ ಕುಡಿಯುತ್ತಿದ್ದರೆ ಕಾಡುವುದಿಲ್ಲ.

ಎದೆಹಾಲನ್ನು ಹೆಚ್ಚಿಸುತ್ತದೆ

ಎದೆಹಾಲನ್ನು ಹೆಚ್ಚಿಸುತ್ತದೆ

ಬಾಣಂತಿಯರು ಜೀರಿಗೆ ನೀರನ್ನು ನಿಯಮಿತವಾಗಿ ಕುಡಿಯುವ ಮೂಲಕ ಎದೆಹಾಲಿನಲ್ಲಿ ಹೆಚ್ಚಳವಾಗುತ್ತದೆ.

English summary

Ways Jeera Water Benefits Your Health

Jeera is the Indian name for cumin seeds. These seeds contain medicinal properties. Though they have a slightly spicy taste, they have many health benefits. In fact, cumin seeds are part of many Indian recipes. There is a compound known as cuminaldehyde present in cumin seeds which is a phytochemical. In fact, the peculiar taste and smell of cumin seeds come from this compound. Now, let us know about the benefits of jeera water.
X
Desktop Bottom Promotion