For Quick Alerts
ALLOW NOTIFICATIONS  
For Daily Alerts

ಮೌನ ಕೊಲೆಗಾರ ಮೇದೋಜೀರಕ ಕ್ಯಾನ್ಸರ್‌‌ನ ಲಕ್ಷಣಗಳು

By Manu
|

ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಮೌನವಾಗಿಯೇ ಕೊಲ್ಲುತ್ತದೆ ಎನ್ನುವ ಮಾತಿದೆ. ಬೇರೆ ಕ್ಯಾನ್ಸರ್ ಗಳು ಆರಂಭಿಕ ಹಂತದಲ್ಲಿ ಕೆಲವೊಂದು ಸೂಚನೆಗಳನ್ನು ನೀಡಿದರೆ, ಮೇದೋಜೀರಕ ಗ್ರಂಥಿಗಳ ಕ್ಯಾನ್ಸರ್ ಅಂತಿಮ ಘಟ್ಟದಲ್ಲಿ ಮಾತ್ರ ಪತ್ತೆಯಾಗುತ್ತದೆ. ಇದರಿಂದ ಇದಕ್ಕೆ ಚಿಕಿತ್ಸೆ ನೀಡುವುದು ಕಷ್ಟ. ಹೊಟ್ಟೆಯಲ್ಲಿ ಆಗಾಗ ನೋವು ಮತ್ತು ಇತರ ಕೆಲವೊಂದು ಸೂಚನೆಗಳನ್ನು ನೀಡಿದರೂ ಇದು ಬಂದು ಹೋಗುತ್ತಿರುವ ಕಾರಣ ಇದನ್ನು ಕಡೆಗಣಿಸುವುದೇ ಹೆಚ್ಚು. ಮೊದಲ ಹಂತ ದಾಟಿದ ಬಳಿಕವಷ್ಟೇ ಇದರ ಸೂಚನೆಗಳು ಸಿಗುತ್ತದೆ. ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಸೂಕ್ತ ಆಹಾರ ಕ್ರಮ

ಆದರೆ ಕೆಲವೊಂದು ಸುಳಿವನ್ನು ನಾವು ಕಡೆಗಣಿಸಬಾರದು. ಕಡೆಗಣಿಸಿದರೆ ಅದರಿಂದ ತೊಂದರೆ ಕಟ್ಟಿಟ್ಟ ಬುತ್ತಿ. ಆರಂಭದಲ್ಲೇ ರೋಗವನ್ನು ಪತ್ತೆ ಮಾಡಿದರೆ ಅದಕ್ಕೆ ಸೂಕ್ತ ರೀತಿಯ ಚಿಕಿತ್ಸೆ ನೀಡಬಹುದಾಗಿದೆ. ಆರಂಭದಲ್ಲಿ ಕೆಲವೊಂದು ಲಕ್ಷಣಗಳು ನಮಗೆ ಸಾಮಾನ್ಯ ಹಾಗೂ ಹಾನಿಯುಂಟು ಮಾಡಲ್ಲವೆಂದು ಅನಿಸುತ್ತದೆ. ಆದರೆ ಇದನ್ನು ಕಡೆಗಣಿಸದೆ ವೈದ್ಯರಿಂದ ಚಿಕಿತ್ಸೆ ಪಡೆದರೆ ಜೀವ ಹಾನಿಯನ್ನು ತಡೆಯಬಹುದಾಗಿದೆ. ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ಹೊಟ್ಟೆಯ ಮೇಲ್ಭಾಗದಲ್ಲಿ ನೋವು

ಹೊಟ್ಟೆಯ ಮೇಲ್ಭಾಗದಲ್ಲಿ ನೋವು

ಕ್ಯಾನ್ಸರ್‌ನ ಆರಂಭಿಕ ಹಂತದಲ್ಲಿ ಹೊಟ್ಟೆಯ ಮೇಲ್ಭಾಗದಲ್ಲಿ ಕಾಣಿಸುವ ನೋವು ಬೆನ್ನಿನತ್ತ ಚಲಿಸುತ್ತದೆ. ಈ ನೋವು ಯಾವಾಗಲೊಮ್ಮೆ ಬಂದು ಹೋಗುತ್ತಾ ಇರುತ್ತದೆ. ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನ ಆರಂಭಿಕ ಹಂತದ ಲಕ್ಷಣಗಳಲ್ಲಿ ಇದು ಒಂದಾಗಿದೆ.

ಹಸಿವು ಕಡಿಮೆಯಾಗುವುದು

ಹಸಿವು ಕಡಿಮೆಯಾಗುವುದು

ಕ್ಯಾನ್ಸರ್ ಇರುವ ವ್ಯಕ್ತಿಗಳಲ್ಲಿ ಹಸಿವು ಕಡಿಮೆಯಾಗುವುದು ಅಥವಾ ಹಸಿವೇ ಆಗದಿರುವುದು ಲಕ್ಷಣಗಳಲ್ಲಿ ಒಂದಾಗಿದೆ.

ತೂಕ ಕಳಕೊಳ್ಳುವುದು

ತೂಕ ಕಳಕೊಳ್ಳುವುದು

ಯಾವುದೇ ಕಾರಣವಿಲ್ಲದೆ ಹಠಾತ್ತಾಗಿ ತೂಕ ಕಳೆದುಕೊಳ್ಳುವುದು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಮೇದೋಜೀರಕದಲ್ಲಿರುವ ಕ್ಯಾನ್ಸರ್ ಕೋಶಗಳಿಂದಾಗಿ ಹಠಾತ್ತಾಗಿ ತೂಕ ಕಳೆದುಕೊಳ್ಳಬೇಕಾಗುತ್ತದೆ.

ಕಣ್ಣು ಅಥವಾ ಚರ್ಮ ಹಳದಿಯಾಗುವುದು

ಕಣ್ಣು ಅಥವಾ ಚರ್ಮ ಹಳದಿಯಾಗುವುದು

ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಹೊಂದಿರುವ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಾಮಾಲೆ ರೋಗ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್ ಕೋಶಗಳು ಪಿತ್ತರಸ ನಾಳವನ್ನು ತಡೆಯುವುದರಿಂದ ಯಕೃತ್‌ನಲ್ಲಿ ಪಿತ್ತರಸವು ಜಮೆಯಾಗಿ ಕಾಮಾಲೆ ಕಾಣಿಸಿಕೊಳ್ಳುವುದು. ಕಣ್ಣು ಮತ್ತು ಚರ್ಮ ಹಳದಿಯಾಗುವುದು ಇದರ ಲಕ್ಷಣವಾಗಿದೆ.

ರಕ್ತದ ಸಕ್ಕರೆ ಮಟ್ಟ ಹೆಚ್ಚುವುದು

ರಕ್ತದ ಸಕ್ಕರೆ ಮಟ್ಟ ಹೆಚ್ಚುವುದು

ರಕ್ತದ ಸಕ್ಕರೆ ಮಟ್ಟದಲ್ಲಿ ಹಠಾತ್ ಆಗಿ ಹೆಚ್ಚಳವಾಗುವುದು ಮೇದೋಜೀರಕ ಗ್ರಂಥಿಗಳ ಕ್ಯಾನ್ಸರ್ ನ ಪ್ರಮುಖ ಲಕ್ಷಣವಾಗಿದೆ. ನಿಮ್ಮ ಕುಟುಂಬದಲ್ಲಿ ಯಾರಿಗೂ ಮಧುಮೇಹ ಇಲ್ಲವೆಂದಾದರೆ ಸಕ್ಕರೆ ಮಟ್ಟವು ಹೆಚ್ಚಾಗುತ್ತಾ ಇದ್ದರೆ ಇದನ್ನು ಪರೀಕ್ಷಿಸಿಕೊಳ್ಳಬೇಕು.

ಕರುಳಿನ ಚಲನೆಯಲ್ಲಿ ಸಮಸ್ಯೆ

ಕರುಳಿನ ಚಲನೆಯಲ್ಲಿ ಸಮಸ್ಯೆ

ಕೊಬ್ಬು ಇರುವ ಆಹಾರದ ಜೀರ್ಣಕ್ರಿಯೆಯನ್ನು ಕ್ಯಾನ್ಸರ್ ಕೋಶಗಳು ತಡೆಯುತ್ತದೆ. ಇದರಿಂದ ಹೊಟ್ಟೆ ಉಬ್ಬರ, ಮಲ ಬದ್ಧತೆ ಮತ್ತು ಆಗಾಗ ತೆಳುವಾದ ಮಲ ವಿಸರ್ಜನೆಯಾಗುವುದು.

ವಾಕರಿಕೆ

ವಾಕರಿಕೆ

ಮೇದೋಜೀರಕ ಗ್ರಂಥಿಗಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಹೊಟ್ಟೆಯಲ್ಲಿ ಕೆಲವೊಂದು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಆಹಾರವು ಜೀರ್ಣವಾಗಲು ತುಂಬಾ ಕಷ್ಟಪಡಬೇಕಾಗುತ್ತದೆ.ಈ ಸಮಸ್ಯೆ ಇರುವವರು ಆಹಾರ ಸೇವನೆ ಬಳಿಕ ವಾಕರಿಕೆ ಮತ್ತು ವಾಂತಿ ಬರುವುದಾಗಿ ದೂರುತ್ತಾರೆ.

English summary

Warning Signs Of Pancreatic Cancer

Pancreatic cancer is often considered as a silent cancer, as its signs and symptoms are often vague and hard to detect. The pain in the abdomen and other warning signs are usually recurring in nature, that is, they come and go, which makes them hard to be recognised. In this malady, cancerous cells form in the tissues of the pancreas. So, read on to find out more about the early warning signs of pancreatic cancer.
X
Desktop Bottom Promotion