For Quick Alerts
ALLOW NOTIFICATIONS  
For Daily Alerts

ಕಾಯಿಲೆಗಳನ್ನು ಮೆಟ್ಟಿ ನಿಲ್ಲುವ ಶಕ್ತಿ, ಈ ತರಕಾರಿಗಳು ಹೊಂದಿವೆ!

ಕೆಲವು ತರಕಾರಿ ಮತ್ತು ಹಣ್ಣುಗಳಲ್ಲಿ ವಿವಿಧ ಕಾಯಿಲೆಗಳ ವಿರುದ್ಧ ಹೋರಾಡುವ ಗುಣ ಇತರ ಆಹಾರಗಳಿಗಿಂತ ಹೆಚ್ಚಾಗಿಯೇ ಇದ್ದು ಇವುಗಳನ್ನು ಹಸಿಯಾಗಿ ಸೇವಿಸುವ ಮೂಲಕ ಆರೋಗ್ಯ ವೃದ್ದಿಸುತ್ತದೆ.

By Manu
|

ಊಟ ಬಲ್ಲವನಿಗೆ ರೋಗವಿಲ್ಲ ಎಂಬುದೊಂದು ಕನ್ನಡದ ಗಾದೆ. ವಾಸ್ತವವಾಗಿ ನಮ್ಮ ಆರೋಗ್ಯಕ್ಕೂ, ಅನಾರೋಗ್ಯಕ್ಕೂ ನಾವು ಸೇವಿಸುವ ಆಹಾರ ಮತ್ತು ಸಮಯ ಪ್ರಮುಖ ಪಾತ್ರ ವಹಿಸುತ್ತವೆ. ಇದರಲ್ಲೂ ವಿಶೇಷವಾಗಿ ತರಕಾರಿಗಳು ಆಹಾರದ ಅವಶ್ಯಕತೆ ಪೂರೈಸುವ ಜೊತೆಗೇ ಗಾಯಗಳನ್ನು ಮಾಗಿಸುವ ಮತ್ತು ವಿವಿಧ ಸೋಂಕುಗಳಿಂದ ರಕ್ಷಣೆ ನೀಡುವ ಗುಣವನ್ನೂ ಹೊಂದಿವೆ. ಅದರಲ್ಲೂ ಕೆಲವು ತರಕಾರಿಗಳು ಔಷಧೀಯ ಗುಣಗಳನ್ನು ಹೆಚ್ಚಾಗಿಯೇ ಹೊಂದಿವೆ. ತಲೆನೋವು ಶೀತಕ್ಕೆ ರಾಮಬಾಣ- ಈ ಕಹಿ ತರಕಾರಿಗಳು

ಕೆಲವು ತರಕಾರಿ ಮತ್ತು ಹಣ್ಣುಗಳಲ್ಲಿ ವಿವಿಧ ಕಾಯಿಲೆಗಳ ವಿರುದ್ಧ ಹೋರಾಡುವ ಗುಣ ಇತರ ಆಹಾರಗಳಿಗಿಂತ ಹೆಚ್ಚಾಗಿಯೇ ಇದ್ದು ಇವುಗಳನ್ನು ಹಸಿಯಾಗಿ ಸೇವಿಸುವ ಮೂಲಕ ಆರೋಗ್ಯ ವೃದ್ದಿಸುತ್ತದೆ. ಕಾಯಿಲೆ ಬಂದ ಬಳಿಕ ಚಿಕಿತ್ಸೆಗಿಂತಲೂ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ತಾಳುವುದೇ ಜಾಣತನವಾಗಿದೆ. ಈ ಜಾಣತನದ ಕ್ರಮವನ್ನು ಈ ತರಕಾರಿಗಳು ಸುಲಭವಾಗಿಸುತ್ತವೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ......

ದೊಡ್ಡ ಮೆಣಸಿನಕಾಯಿ ಅಥವಾ ಕ್ಯಾಪ್ಸಿಕಂ

ದೊಡ್ಡ ಮೆಣಸಿನಕಾಯಿ ಅಥವಾ ಕ್ಯಾಪ್ಸಿಕಂ

ಹಸಿಮೆಣಸಿನಲ್ಲಿರುವ ಲೈಕೋಪೀನ್ ದೊಣ್ಣೆ ಮೆಣಸಿನಲ್ಲಿಯೂ (ದಪ್ಪ ಮೆಣಸಿನಕಾಯಿ, ದೊಡ್ಡ ಮೆಣಸಿನಕಾಯಿ ಅಥವಾ ಕ್ಯಾಪ್ಸಿಕಂ) ಇದೆ. ಇದರೊಂದಿಗೆ ಫೋಲಿಕ್ ಆಮ್ಲ ಸಹಾ ಇದರಲ್ಲಿದೆ.

ದೊಡ್ಡ ಮೆಣಸಿನಕಾಯಿ ಅಥವಾ ಕ್ಯಾಪ್ಸಿಕಂ

ದೊಡ್ಡ ಮೆಣಸಿನಕಾಯಿ ಅಥವಾ ಕ್ಯಾಪ್ಸಿಕಂ

ಕೆಲವು ಸಂಶೋಧನೆಗಳ ಪ್ರಕಾರ ಇವೆರಡೂ ಅಂಶಗಳು ದೇಹದ ಪ್ರಮುಖ ಅಂಗಗಳಾದ ಮೂತ್ರಕೋಶ, ಕರುಳು ಮತ್ತು ಮೇದೋಜೀರಕ ಗ್ರಂಥಿಗೆ ಆವರಿಸುವ ಕ್ಯಾನ್ಸರ್ ಅನ್ನು ತಡೆಗಟ್ಟಲು ನೆರವಾಗುತ್ತದೆ. ಕ್ಯಾಪ್ಸಿಕಂ-ಮಧುಮೇಹಿಗಳ ಪಾಲಿನ ಸಂಕಷ್ಟಹರ ತರಕಾರಿ

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಹಸಿರು ಮತ್ತು ದಪ್ಪ ಸೊಪ್ಪುಗಳು ಆರೋಗ್ಯಕ್ಕೆ ಉತ್ತಮ ಎಂದು ಎಲ್ಲರೂ ಹೇಳುತ್ತಾರೆ. ಬಸಲೆ ಮತ್ತು ಪಾಲಕ್ ಸೊಪ್ಪುಗಳು ಈ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆಯುತ್ತವೆ. ಬಸಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದ ಕಬ್ಬಿಣ ಇದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಇದರೊಂದಿಗೆ ವಿವಿಧ ಖನಿಜಗಳು, ವಿಟಮಿನ್ನುಗಳು ಸಹಾ ಇದ್ದು ಇವುಗಳ ನಿಯಮಿತ ಸೇವನೆಯಿಂದ ಮೂಳೆಗಳು ಟೊಳ್ಳಾಗುವ osteoporosis, ಸಂಧಿವಾತ, ಕರುಳು ಕ್ಯಾನ್ಸರ್ ಮತ್ತು ಹೃದಯದ ತೊಂದರೆಗಳನ್ನು ದೂರವಿಡುತ್ತದೆ. ಪಾಲಕ್ ಸೊಪ್ಪು: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ಬದನೆ

ಬದನೆ

ಸಾಮಾನ್ಯವಾಗಿ ನಂಜಾಗುತ್ತದೆ ಎಂದು ಹೆಚ್ಚಿನವರು ಬದನೆ ತಿನ್ನುವುದಿಲ್ಲ. ಆದರೆ ತೊಟ್ಟಿನ ಸಹಿತ ತಿಂದರೆ ನಂಜಾಗುವುದಿಲ್ಲ. ಬದಲಿಗೆ ಇದರ ನಿಯಮಿತ ಸೇವನೆಯಿಂದ ಮರೆಗುಳಿತನ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೇ ಹೃದಯ ಸ್ತಂಭನದ ಸಾಧ್ಯತೆಯನ್ನೂ ಅಪಾರವಾಗಿ ಕಡಿಮೆಗೊಳಿಸುತ್ತದೆ.

ಈರುಳ್ಳಿ

ಈರುಳ್ಳಿ

ಈರುಳ್ಳಿಯಲ್ಲಿಯೂ ಫೋಲೇಟ್ ಮತ್ತು ವಿಟಮಿನ್ ಸಿ ಇದ್ದು ಇದರೊಂದಿಗೆ ಇತರ ಪೋಷಕಾಂಶಗಳೂ ಇವೆ. ಈ ಪೋಷಕಾಂಶಗಳು ದೇಹದಲ್ಲಿ ಆಹಾರದ ಮೂಲಕ ಆಗಮಿಸುವ ಕ್ಯಾಲ್ಸಿಯಂ ಸೋರಿಹೋಗದಂತೆ ತಡೆಯುತ್ತದೆ ಹಾಗೂ ಇದರಿಂದ ಮೂಳೆಗಳು ಟೊಳ್ಳಾಗುವ osteoporosis ಸಾಧ್ಯತೆ ಕಡಿಮೆಯಾಗುತ್ತದೆ.ಈರುಳ್ಳಿ ಹಾಕಿದ ಸಾಕ್ಸ್‌ ಧರಿಸಿ-ವ್ಯತ್ಯಾಸ ನೀವೇ ನೋಡಿ!

ಗೆಣಸು (ಸಿಹಿಗೆಣಸು)

ಗೆಣಸು (ಸಿಹಿಗೆಣಸು)

ಸಿಹಿಗೆಣಸಿನ ಸೇವನೆಯಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ ಹಾಗೂ ಇದರ ಮೂಲಕ ಒಟ್ಟಾರೆ ಆರೋಗ್ಯ ಉತ್ತಮಗೊಳ್ಳುತ್ತದೆ.

ಗೆಣಸು (ಸಿಹಿಗೆಣಸು)

ಗೆಣಸು (ಸಿಹಿಗೆಣಸು)

ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ಕರಗದ ನಾರು, ವಿಟಮಿನ್ ಸಿ ಮತ್ತು ವಿಟಮಿನ್ ಎ ಸಹಾ ಇದ್ದು ಹಲವು ತೊಂದರೆಗಳಿಂದ ರಕ್ಷಣೆ ನೀಡುತ್ತದೆ. ಏನಾಶ್ಚರ್ಯ, ಸಿಹಿ ಗೆಣಸಿನಿಂದ ಸೌಂದರ್ಯ ವೃದ್ಧಿ..!

English summary

Vegetables That Fight Disease

Some fruits, spices and even vegetables have disease-fighting abilities. Instead of eating processed foods, if you can fill your plate with such vegetables, your health will soon be better. As prevention is a wiser option than cure, let us discuss about the disease-fighting vegetables that can be included in your diet.
X
Desktop Bottom Promotion