ಏನೇ ಆಗಲಿ ದಿನನಿತ್ಯ ಎಂಟು ಲೋಟಗಳಷ್ಟು ನೀರು ಕುಡಿಯಿರಿ

ನಮ್ಮ ದೇಹಕ್ಕೆ ಪ್ರತಿದಿನ ಎಂಟು ಲೋಟದಷ್ಟು ಶುದ್ಧವಾದ ನೀರಿನ ಅಗತ್ಯವಿದೆ. ಆದರೆ ಹೆಚ್ಚಿನವರು ಈ ಮಾತನ್ನು ಉಪೇಕ್ಷಿಸಿ ಕುಡಿಯದಿದ್ದರೆ ಏನಾಗುತ್ತದೆ ಎಂಬ ಮೊಂಡು ಹಠವನ್ನು ಹಿಡಿಯುತ್ತಾರೆ, ಆದರೆ ಇದರಿಂದಾಗುವ ಪರಿಣಾಮ ನೋಡಿ....

By: manu
Subscribe to Boldsky

ಪ್ರತಿದಿನವೂ ಸುಮಾರು ಎಂಟು ಲೋಟಗಳಷ್ಟು ನೀರು ಕುಡಿಯಲೇಬೇಕು ಎಂಬ ಮಾತಿಗೆ ಯಾವುದೇ ತಕರಾರಿಲ್ಲ. ನಮ್ಮ ದೇಹದ ಪ್ರತಿ ಅಂಗಗಳಿಗೆ ನೀರು ಬೇಕೇ ಬೇಕು. ಆದರೆ ಕೆಲವರು ತಮ್ಮ ಕೆಲಸಬಾಹುಳ್ಯಕ್ಕೇ ಹೆಚ್ಚಿನ ಆದ್ಯತೆ ನೀಡಿ ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ಕೆಲವರು ಇತರ ಕಾರಣಗಳಿಗೆ ಹೆದರಿ ನೀರು ಕುಡಿಯುವುದಿಲ್ಲ.

ಉದಾಹರಣೆಗೆ ಶೌಚಾಲಯ ವ್ಯವಸ್ಥೆ ಇಲ್ಲದೆಡೆ ಕೆಲಸ ಮಾಡುವ ಮಹಿಳೆಯರು ನಿಸರ್ಗ ಕರೆಗೆ ಓಗೊಡಲು ಅಸಾಧ್ಯವಾಗುತ್ತದೆ ಎಂಬ ಮುಜುಗರದಿಂದ ನೀರನ್ನೇ ಕುಡಿಯುವುದಿಲ್ಲ. ಕೆಲವರು ಪ್ರಯಾಣದ ಅವಧಿಯಲ್ಲಿ ಬಸ್ಸು ಮಧ್ಯೆ ನಿಲ್ಲಿಸುವುದಿಲ್ಲ ಎಂದು ನೀರನ್ನೇ ಕುಡಿಯುವುದಿಲ್ಲ. ಆದರೆ 65% ಅಪ್ಪಟ ನೀರಾಗಿರುವ ನಮ್ಮ ದೇಹ ಈ ವಾದವನ್ನು ಕೇಳುವುದಿಲ್ಲ.  ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ವಿಶೇಷವಾಗಿ ನಮ್ಮ ಮೆದುಳು. ಒಂದು ವೇಳೆ ನಿತ್ಯದ ನೀರಿನ ಪ್ರಮಾಣ ಕಡಿಮೆಯಾದರೆ ರಕ್ತ ಗಾಢವಾಗುವುದು, ಪ್ರತಿ ಜೀವಕೋಶ ನೀರಿಲ್ಲದೇ ಒಣಗುವುದು ಮತ್ತು ಜೀರ್ಣಾಂಗಗಳು ಅತಿ ಹೆಚ್ಚು ಆಮ್ಲೀಯವಾಗುವುದು ಮೊದಲಾದ ಹತ್ತು ಹಲವು ಕಾರಣಗಳಿಂದ ಆರೋಗ್ಯ ಕೆಡುತ್ತದೆ.       ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರು ಸುರಕ್ಷಿತವೇ?

ಒಂದು ವೇಳೆ ನೀರಿನ ಕೊರತೆ ದೇಹ ತಾಳುವ ಮಿತಿಗಿಂತ ಮೀರಿದರೆ ಕೆಲವು ಸೂಕ್ಷ್ಮ ಅಂಗಗಳು ವಿಫಲಗೊಳ್ಳುವ ಮೂಲಕ ಸಾವೂ ಸಂಭವಿಸಬಹುದು. ನೀವು ಅಗತ್ಯವಿದ್ದಷ್ಟು ನೀರನ್ನು ಕುಡಿಯುತ್ತಿಲ್ಲ ಎಂದು ಯಾರಾದರೂ ಹೇಳಿದರೆ ಅವರನ್ನು ನಂಬದ ನೀವು ನಿಮ್ಮ ದೇಹವೇ ಸೂಚಿಸುವ ಈ ಸಂಜ್ಞೆಗಳನ್ನು ಮಾತ್ರ ನಂಬಲೇಬೇಕು. ಈ ಸಂಜ್ಞೆಗಳು ಯಾವುವು ಎಂಬ ಕುತೂಹಲ ಮೂಡಿತೇ? ಮುಂದೆ ಓದಿ...  

ಬಾಯಿಯಲ್ಲಿ ದುರ್ವಾಸನೆ

ನೀವು ಮಾತನಾಡುವಾಗ ಎದುರಿನವರು ಮುಖ ಸಿಂಡರಿಸಿದರೆ ನಿಮ್ಮ ಬಾಯಿಯಿಂದ ದುರ್ವಾಸನೆ ಹೊಮ್ಮುತ್ತಿರಬಹುದು. ನೀರಿನ ಕೊರತೆಯಿಂದ ಬಾಯಿ ಒಣಗಿ ಕಡಿಮೆ ಜೊಲ್ಲು ಉತ್ಪತ್ತಿಯಾಗುತ್ತದೆ. ಇಲ್ಲಿ ಬ್ಯಾಕ್ಟೀರಿಯಾಗಳು ವೃದ್ಧಿಗೊಂಡು ದುರ್ವಾಸನೆ ಮೂಡಿಸುತ್ತವೆ.   ಬಾಯಿ ದುರ್ವಾಸನೆ ತಡೆಗೆ, ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಒಣಚರ್ಮ

ನೀರಿನ ಪ್ರಮಾಣ ಕಡಿಮೆಯಾದರೆ ದೇಹದ ಚರ್ಮದ ಹೊರಪದರಕ್ಕೆ ಅತಿ ಕಡಿಮೆ ನೀರು ಲಭಿಸುತ್ತದೆ. ಆರ್ದ್ರತೆಯ ಕೊರತೆಯಿಂದ ಈ ಪದರ ಶೀಘ್ರವಾಗಿ ಒಣಗುತ್ತದೆ. ಇದು ಪಕಳೆಯಂತೆ ಏಳುವ ಮತ್ತು ತುರಿಕೆಯುಂಟುಮಾಡುವಂತಹದ್ದಾಗಿರುತ್ತದೆ.

ಸ್ನಾಯುಗಳ ಸೆಡೆತ

ದೇಹಕ್ಕೆ ಸೂಕ್ತ ಪ್ರಮಾಣದ ನೀರು ದೊರಕದೇ ಇದ್ದರೆ ಸ್ನಾಯುಗಳೂ ಬಳಲುತ್ತವೆ. ವಿಶೇಷವಾಗಿ ಮಾಂಸಖಂಡಗಳು ಸಂಕುಚಿತಗೊಂಡು ಪೆಡಸಾಗುತ್ತವೆ. ಇದನ್ನೇ ಸೆಡೆತ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಅತಿಹೆಚ್ಚು ವ್ಯಾಯಾಮ ಮಾಡುವ ವ್ಯಕ್ತಿಗಳ ಸ್ನಾಯುಗಳು ಹೀಗೆ ಸೆಳೆತಕ್ಕೆ ಒಳಗಾಗುತ್ತವೆ.

ಜ್ವರ

ಅನಾರೋಗ್ಯದ ಸೂಚನೆಯಾಗಿರುವ ಜ್ವರ ನೀರಿನ ಕೊರತೆಯಿಂದಲೂ ಬಂದಿರಬಹುದು. ಏಕೆಂದರೆ ನೀರು ಕಡಿಮೆಯಾದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯೂ ಕುಂದುತ್ತದೆ. ಇದರಿಂದ ರೋಗಾಣುಗಳು ಸುಲಭವಾಗಿ ಧಾಳಿ ಇಡುತ್ತವೆ. ಅನಿವಾರ್ಯವಾಗಿ ದೇಹ ತಾಪಮಾನವನ್ನು ಏರಿಸಿ ಈ ಧಾಳಿಯನ್ನು ಎದುರಿಸಬೇಕಾಗುತ್ತದೆ.

ಹೆಚ್ಚು ತಿನ್ನುವ ಬಯಕೆ

ನೀರು ಕುಡಿಯುವುದು ಕಡಿಮೆಯಾದರೆ ವಿಚಿತ್ರವೋ ಎಂಬಂತೆ ದೇಹ ನೀರಡಿಕೆಯ ಬದಲು ಸಿಹಿ ತಿನ್ನಲು ಪ್ರೇರಣೆ ನೀಡುತ್ತದೆ. ಏಕೆಂದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗಿದ್ದು ಈ ಸಕ್ಕರೆಯನ್ನು ಪೂರ್ಣಗೊಳಿಸಲು ದೇಹ ಬೇಡಿಕೆ ಇಡುತ್ತದೆ. ಇದು ನಿರ್ಜಲೀಕರಣದ ಸ್ಪಷ್ಟ ಸೂಚನೆಯಾಗಿದೆ.

ತಲೆನೋವು

ಒಂದು ವೇಳೆ ಸಾಕಷ್ಟು ನೀರು ಕುಡಿಯದೇ ಇದ್ದರೆ ಮೆದುಳಿಗೆ ಪೂರೈಕೆಯಾಗುವ ರಕ್ತದ ಪ್ರಮಾಣವೂ ಕಡಿಮೆಯಾಗುತ್ತದೆ. ಅಲ್ಲದೇ ರಕ್ತ ಹೆಚ್ಚು ಗಾಢವೂ ಆಗಿರುತ್ತದೆ. ಇದು ಮೆದುಳಿನಲ್ಲಿ ಕೆಲವು ಪ್ರಚೋದನೆ ನೀಡುವ ಮೂಲಕ ಭಾರೀ ತಲೆನೋವು ಮೂಡಿಸುತ್ತದೆ. ಇದು ಬರೆಯ ನೀರು ಕುಡಿಯದಿರುವಾಗ ಮಾತ್ರವಲ್ಲ, ಸೂಕ್ತ ಸಮಯದಲ್ಲಿ ಆಹಾರವನ್ನು, ವಿಶೇಷವಾಗಿ ಬೆಳಗ್ಗಿನ ಉಪಾಹಾರವನ್ನು ಸೇವಿಸದೇ ಇದ್ದಾಗಲೂ ತಲೆನೋವು ಎದುರಾಗುತ್ತದೆ.

ಏಕಾಗ್ರತೆಯ ಕೊರತೆ

ಒಂದು ವೇಳೆ ದೇಹಕ್ಕೆ ನೀರಿನ ಕೊರತೆಯಾದರೆ ಮೆದುಳು ನೀರನ್ನು ಪಡೆಯುವ ಬಗ್ಗೆ ಹೆಚ್ಚು ಯೋಚಿಸಲು ಸೂಚನೆಗಳನ್ನು ನೀಡತೊಡಗುತ್ತದೆ. ಪರಿಣಾಮವಾಗಿ ಇತರ ಕೆಲಸದ ಕಡೆ ಪೂರ್ಣವಾಗಿ ಗಮನ ಹರಿಸಲು ಸಾಧ್ಯವಾಗದೇ ಏಕಾಗ್ರತೆ ಕಡಿಮೆಯಾಗುತ್ತದೆ. ಆದ್ದರಿಂದ ನಿತ್ಯವೂ ಸಾಕಷ್ಟು ನೀರು ಕುಡಿಯುವುದು ಅತಿ ಅಗತ್ಯ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Thursday, October 13, 2016, 14:58 [IST]
English summary

Unusual Signs That Say You Are Not Drinking Enough Water

Time and again, we are advised to drink an optimum level of water every day, so obviously, it is very much essential to remain healthy! Did you know about certain unusual signs of dehydration? The human body is made up of about 65% of water, so water is one of the main compounds that is required for the normal functioning of the human body.
Please Wait while comments are loading...
Subscribe Newsletter