For Quick Alerts
ALLOW NOTIFICATIONS  
For Daily Alerts

ಮನಸ್ಸನ್ನು ಹಿಂಡುವ ಖಿನ್ನತೆಯ ನಿಯಂತ್ರಣಕ್ಕೆ- ಅರಿಶಿನ ಜ್ಯೂಸ್

By Jaya subramanya
|

ಖಿನ್ನತೆಯು ಹೆಚ್ಚಿನ ಜನರನ್ನು ಕಾಡುವ ಒಂದು ಮಾನಸಿಕ ಸಮಸ್ಯೆಯಾಗಿದೆ. ತಜ್ಞರು ಹೇಳುವಂತೆ ಖಿನ್ನತೆಯು ಹಲವಾರು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಉಂಟುಮಾಡುವುದರ ಮೂಲಕ ಸಾವಿಗೂ ಕಾರಣವಾಗುತ್ತದೆ ಎಂದಾಗಿದೆ. ಹೃದಯಾಘಾತ ಹಾಗೂ

ಪಕ್ಷಪಾತದಂತಹ ಭೀಕರ ದುರಂತಗಳಿಗೂ ಖಿನ್ನತೆ ಕಾರಣ. ಖಿನ್ನತೆಯನ್ನು ನಿಯಂತ್ರಿಸದೇ ಅದನ್ನು ಹಾಗೆಯೇ ಬಿಟ್ಟಲ್ಲಿ ರೋಗಿಗೆ ಅಪಾಯ ತಪ್ಪಿದ್ದಲ್ಲ. ಖಿನ್ನತೆಯನ್ನು ದೂರಾಗಿಸಲು ಮಾನಸಿಕ ಶಾಂತಿ ಮತ್ತು ಆರೋಗ್ಯವಂತ ಚಟುವಟಿಕೆಗಳೊಂದಿಗೆ ಖಿನ್ನತೆ ಪರಿಹರಿಸುವ ಪಾನೀಯವನ್ನು ನೀವು ಸೇವಿಸುವುದು ಉತ್ತಮ ಪರಿಹಾರವಾಗಿದೆ. ಈ ಪಾನೀಯವು ಅರಿಶಿನ, ಜೇನು ಹಾಗೂ ಹುಣಸೆ ಪೇಸ್ಟ್ ಮತ್ತು ನೀರನ್ನು ಒಳಗೊಂಡಿದೆ.

Turmeric Juice Cures Depression?

ಈ ಪಾನೀಯದಲ್ಲಿರುವ ಮುಖ್ಯ ಅಂಶವೇ ಅರಿಶಿನವಾಗಿದ್ದು, ನರದ ವ್ಯವಸ್ಥೆಯನ್ನು ಶಾಂತವಾಗಿಸುವ ಗುಣ ಅರಿಶಿನಕ್ಕಿದೆ. ನಿಮ್ಮ ಖಿನ್ನತೆಯನ್ನು ದೂರಮಾಡಿ ನಿಮ್ಮ ಮೂಡ್ ಅನ್ನು ಅರಿಶಿನ ಸರಿಮಾಡುತ್ತದೆ. ನಿತ್ಯವೂ ಈ ಪಾನೀಯದ ಸೇವನೆ ಮಾಡುವುದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಹತ್ತಿರ ಸುಳಿಯಲೂ ಬಿಡುವುದಿಲ್ಲ ಅಂತೆಯೇ ಅತಿ ಮುಖ್ಯವಾಗಿ ನಿಮ್ಮ ಹೃದಯದ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಅರಿಶಿನವು ನಂಜುನಿರೋಧಕ ಸಾಂಬಾರು ಪದಾರ್ಥವಾಗಿರುವುದರಿಂದ ನೀವು ಅನುಭವಿಸುತ್ತಿರುವ ಸೋಂಕಿನಿಂದ ನಿಮಗೆ ಸಂರಕ್ಷಣೆಯನ್ನು ಒದಗಿಸುತ್ತದೆ. ಆದ್ದರಿಂದ ನಿತ್ಯದ ಜೀವನದಲ್ಲಿ ಈ ಪಾನೀಯವನ್ನು ಅತಿಮುಖ್ಯವಾಗಿ ನೀವು ಸೇವಿಸಲೇಬೇಕು. ಮಾನಸಿಕ ಖಿನ್ನತೆಗೆ ಎದೆಗುಂದುವುದು ಸರಿಯೇ?

ನೈಸರ್ಗಿಕ ಪದಾರ್ಥಗಳನ್ನು ಸೇರಿಸಿ ನಿಮ್ಮ ಮೂಡ್ ಅನ್ನು ಸರಿಪಡಿಸಿಕೊಳ್ಳಬಹುದು. ಡಾರ್ಕ್ ಚಾಕಲೇಟ್ ಇನ್ನೊಂದು ಉತ್ತಮ ಆಹಾರವಾಗಿದ್ದು ನಿಮ್ಮನ್ನು ಇದು ಖುಷಿಪಡಿಸುತ್ತದೆ. ಚಾಕಲೇಟ್‍‎ನಲ್ಲಿರುವ ಕೋಕಾ ಖಿನ್ನತೆಯ ಪರಿಹಾರಕ್ಕೆ ಹೇಳಿಮಾಡಿಸಿದ ಮದ್ದಾಗಿದೆ. ನಿಮ್ಮ ಮನಸ್ಸು ಸ್ಥಿಮಿತದಲ್ಲಿಲ್ಲ ಎಂಬಂತಹ ಸಂದರ್ಭದಲ್ಲಿ ಎರಡು ತುಂಡು ಚಾಕಲೇಟ್ ಸೇವಿಸಿ. ಕೋಕಾ ನಿಮ್ಮ ಮೆದುಳಿನ ಕೋಶಗಳನ್ನು ಸಂವಹಿಸಿ ನಿಮ್ಮನ್ನು ಸಂತಸದಿಂದ ತೇಲುವಂತೆ ಮಾಡುತ್ತದೆ.

ಇದರ ಜೊತೆಗೆ ಇತರೆ ಪಾನೀಯಗಳನ್ನು ನಿಮ್ಮ ಮೂಡ್ ಸರಿಪಡಿಸಲು ನಿಮಗೆ ಸೇವಿಸಿಕೊಳ್ಳಬಹುದಾಗಿದೆ. ಲಿಂಬೆ ರಸಕ್ಕೆ ಸ್ವಲ್ಪ ಜೇನು ಮತ್ತು ದಾಲ್ಚಿನ್ನಿ ಪುಡಿಯನ್ನು ಸೇರಿಸಿ ನಿಮ್ಮ ಮೂಡ್ ಅನ್ನು ಉತ್ತಮಪಡಿಸಿಕೊಳ್ಳಬಹುದು. ಹಾಗಿದ್ದರೆ ಸಮಯ ಹಾಳು ಮಾಡದೇ ಈ ಪಾನೀಯವನ್ನು ಹೇಗೆ ಸಿದ್ಧಪಡಿಸಿಕೊಳ್ಳುವುದು ಎಂಬುದನ್ನು ಕೆಳಗಿನ ಸ್ಲೈಡರ್‎ಗಳ ಮೂಲಕ ಅರಿತುಕೊಳ್ಳಿ.

ಖಿನ್ನತೆ ನಿವಾರಣೆ ಜ್ಯೂಸ್ ತಯಾರಿಸಲು
*ಜೇನು - 2 ಚಮಚ
*ನೀರು - 1 ಲೋಟ
*ಲಿಂಬೆ - 2
*ಅರಿಶಿನ ಹುಡಿ - 1 ಚಮಚ
*ಹುಣಸೆ ಪೇಸ್ಟ್ - 1 ಚಮಚ

ತಯಾರಿ:
*ಅರಿಶಿನವನ್ನು ನೀರಿಗೆ ಹಾಕಿ. ನಂತರ 20 ನಿಮಷಗಳ ಕಾಲ ಅರಿಶಿನ ನೀರನ್ನು ಕುದಿಸಿಕೊಳ್ಳಿ. ಆದ ನಂತರ ಸ್ಟವ್‎ನಿಂದ ಅದನ್ನು ಇಳಿಸಿಕೊಂಡು ಆರೋಗ್ಯಕರ ಅರಿಶಿನ ನೀರನ್ನು ಬಸಿದುಕೊಳ್ಳಿ. ಮಿಕ್ಸರ್‎ನಲ್ಲಿ ಅರಿಶಿನ ನೀರು, ಹುಣಸೆ ಪೇಸ್ಟ್ ಅನ್ನು ಹಾಕಿ.
*ಅಂತೆಯೇ ಮಿಕ್ಸರ್‎ಗೆ ಲಿಂಬೆ ರಸವನ್ನು ಬೆರೆಸಿಕೊಳ್ಳಿ. 5 ನಿಮಿಷಗಳ ಕಾಲ ಇದನ್ನು ತಿರುಗಿಸಿ. ನಿಮ್ಮ ಆರೋಗ್ಯಕರ ಅರಿಶಿನ ನೀರು ಸೇವಿಸಲು ಸಿದ್ಧವಾಗಿದೆ.
*ನಿಮ್ಮ ಖಿನ್ನತೆ ಮಟ್ಟ ತುಂಬಾ ಕೆಳಮಟ್ಟದಲ್ಲಿದೆ ಎಂದಾದಲ್ಲಿ, ದಿನದಲ್ಲಿ ಎರಡು ಬಾರಿ ಈ ಜ್ಯೂಸ್ ಅನ್ನು ನೀವು ಸೇವಿಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಕೆಲವೊಂದು ಸಂದರ್ಭಗಳಲ್ಲಿ ಈ ಪಾನೀಯವನ್ನು ನೀವು ಆಗಾಗ್ಗೆ ಸೇವಿಸುತ್ತೀರಿ ಎಂದಾದಲ್ಲಿ ಖಿನ್ನತೆ ಶಮನಕಾರಿ ಗುಳಿಗೆಗಳನ್ನು ನೀವು ಸೇವಿಸಬೇಕಾಗಿಲ್ಲ.

English summary

Turmeric Juice Cures Depression?

Depression is one of the main things that affects the lives of many people. According to experts, depression can lead to multiple health problems, which can also add up to death. Depression is linked to major ailments like heart attack and stroke; and if the depression is not controlled and brought down, a patient can be in severe trouble.
X
Desktop Bottom Promotion