For Quick Alerts
ALLOW NOTIFICATIONS  
For Daily Alerts

ಸರ್ವರೋಗ ನಿಯಂತ್ರಣಕ್ಕೆ- ಬಾಳೆಹಣ್ಣಿನ ಚಹಾ!

By Manu
|

ಜಗ್ಗೇಶ್ ಅಭಿನಯದ ಒಂದು ಕನ್ನಡ ಸಿನೆಮಾದಲ್ಲಿ ಬಾಳೆಹಣ್ಣಿನ ಸಿಪ್ಪೆಯಿಂದ ದೊಡ್ಡ ರೋಗವೊಂದು ಗುಣವಾಗುತ್ತದೆ ಎಂದು ಜಾಹೀರಾತು ನೀಡಲಾಗುತ್ತದೆ. ಇಂತಹ ಜಾತಿಯ ಬಾಳೆಹಣ್ಣಿನ ಸಿಪ್ಪೆಯಲ್ಲಿ ಮಾತ್ರ ಆ ಗುಣವಿದೆ ಎಂದು ಹೇಳಲಾಗುತ್ತಿದೆ. ಪ್ರತಿಯೊಬ್ಬರು ಹಣ್ಣನ್ನು ಬಿಟ್ಟು ಸಿಪ್ಪೆ ತಿನ್ನಲು ಪ್ರಾರಂಭಿಸುತ್ತಾರೆ! ಇದು ಸಿನಿಮಾದ ಕಾಮಿಡಿ ದೃಶ್ಯ. ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಆದರೆ ನಿಜವಾಗಿಯೂ ಬಾಳೆಹಣ್ಣಿನ ಸಿಪ್ಪೆಯಲ್ಲಿ ಕೂಡ ಮೆಗ್ನೆಶಿಯಂ ಮತ್ತು ಪೊಟಾಶಿಯಂ ಇದೆಯೆನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ. ಹಾಗಾದರೆ ಸಿಪ್ಪೆಯನ್ನು ತಿನ್ನುವುದು ಹೇಗೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಲು ಆರಂಭಿಸಿರಬಹುದು. ಹಾಗಾದರೆ ಮುಂದೆ ಓದಿಕೊಳ್ಳಿ.

ಸಿಪ್ಪೆಯಲ್ಲಿರುವ ಖನಿಜಾಂಶಗಳಾದ ಪೊಟಾಶಿಯಂ ಮತ್ತು ಮೆಗ್ನಿಶಿಯಂನ ಲಾಭ ಪಡೆಯಬೇಕಾದರೆ ನೀವು ಬಾಳೆಹಣ್ಣಿನ ಸಿಪ್ಪೆಯ ಚಹಾ ಕುಡಿಯಬೇಕು. ನಿದ್ರಾಹೀನತೆ ನಿಮ್ಮನ್ನು ಕಾಡುತ್ತಿದ್ದರೆ ನೀವು ಇದನ್ನು ಬಳಸುವುದು ಉತ್ತಮ. ಬಾಳೆಹಣ್ಣಿನ ಸಿಪ್ಪೆಯ ಚಹಾವನ್ನು ಕುಡಿದಾಗ ಅದರಲ್ಲಿನ ಪೊಟಾಶಿಯಂ ಮತ್ತು ಮೆಗ್ನಿಶಿಯಂ ಸ್ನಾಯುಗಳಿಗೆ ಆರಾಮವನ್ನು ನೀಡುತ್ತದೆ. ಇದರಿಂದ ನಿಮ್ಮ ನಿದ್ರೆ ಹೆಚ್ಚುವುದು. ಆದರೆ ಬಾಳೆಹಣ್ಣಿನ ಸಿಪ್ಪೆಯನ್ನು ಬಳಸುವಾಗ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು

ಮಾರುಕಟ್ಟೆಯಲ್ಲಿ ಸಿಗುವ ಬಾಳೆಹಣ್ಣನ್ನು ಬಳಸುವ ಬದಲು ಸಾವಯವ ರೀತಿಯಲ್ಲಿ ಬೆಳೆಸಿದ ಬಾಳೆಹಣ್ಣುಗಳ ಸಿಪ್ಪೆಯನ್ನು ಬಳಸಿ. ಮಾರುಕಟ್ಟೆಯಲ್ಲಿ ಸಿಗುವಂತಹ ಬಾಳೆಹಣ್ಣಿನಲ್ಲಿ ಹಲವಾರು ರೀತಿಯ ರಾಸಾಯನಿಕಗಳಿರುತ್ತದೆ. ಇದನ್ನು ಬೇಯಿಸುವುದು ತುಂಬಾ ಅಪಾಯಕಾರಿ, ಹಾಗಾಗಿ ಇದರ ಬಗ್ಗೆ ಕೊಂಚ ಎಚ್ಚರಿಕೆಯಿರಲಿ. ಬಾಳೆಹಣ್ಣನ್ನು ಸಿಪ್ಪೆಯ ಸಹಿತ ಸಣ್ಣಸಣ್ಣ ತುಂಡುಗಳಾಗಿ ಮಾಡಿ ಅದನ್ನು ಕುದಿಸಿ, ಬಳಿಕ ನೀರನ್ನು ಕುಡಿದು ಹಣ್ಣನ್ನು ತಿಂದರೆ ನಿಮಗೆ ಉತ್ತಮ ನಿದ್ರೆ ಲಭ್ಯವಾಗುವುದು.

ಕಣ್ಣುಗಳಿಗೆ ಒಳ್ಳೆಯದು

ಕಣ್ಣುಗಳಿಗೆ ಒಳ್ಳೆಯದು

ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಲುಟೈನ್ ಎನ್ನುವ ಅಂಶವು ಕಣ್ಣಿಗೆ ಒಳ್ಳೆಯದು. ಇದು ಕಣ್ಣಿನ ಹಲವಾರು ರೋಗಗಳನ್ನು ನಿವಾರಿಸಿ ದೃಷ್ಟಿಯನ್ನು ಹೆಚ್ಚಿಸುವುದು.

ಕ್ಯಾನ್ಸರ್ ತಡೆಗಟ್ಟುವುದು

ಕ್ಯಾನ್ಸರ್ ತಡೆಗಟ್ಟುವುದು

ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಕೆಲವೊಂದು ರೀತಿಯ ಕ್ಯಾನ್ಸರ್ ಬರದಂತೆ ತಡೆಯುವುದು.

ರಕ್ತ ಕಣಗಳಿಗೆ ಒಳ್ಳೆಯದು

ರಕ್ತ ಕಣಗಳಿಗೆ ಒಳ್ಳೆಯದು

ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಪೋಷಕಾಂಶಗಳು ರಕ್ತಕಣಗಳನ್ನು ರಕ್ಷಿಸುತ್ತದೆ.

ಪೊಟಾಶಿಯಂ

ಪೊಟಾಶಿಯಂ

ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಪೊಟಾಶಿಯಂ ದೇಹದಲ್ಲಿ ಪಿಎಚ್ ಸರಿಯಾದ ಮಟ್ಟದಲ್ಲಿರುವಂತೆ ನೋಡಿಕೊಳ್ಳುವುದು ಮತ್ತು ಸ್ನಾಯುಗಳನ್ನು ಬಲಪಡಿಸುವುದು.

ನಿದ್ರೆ

ನಿದ್ರೆ

ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಪೋಷಕಾಂಶಗಳು ನಿದ್ರೆಯ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸುವುದು.

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

ಬಾಳೆಹಣ್ಣಿನಲ್ಲಿರುವ ನಾರಿನಾಂಶವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯವನ್ನು ರಕ್ಷಿಸುತ್ತದೆ.

ಖಿನ್ನತೆ ತಡೆಯುವುದು

ಖಿನ್ನತೆ ತಡೆಯುವುದು

ಬಾಳೆಹಣ್ಣಿನ ಸಿಪ್ಪೆಯ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ಖಿನ್ನತೆಯನ್ನು ತಡೆಯಬಹುದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಇದು ನಿಮ್ಮ ಮೂಡ್ ನ್ನು ಉತ್ತಮಪಡಿಸುವುದು.


English summary

Try The Banana Tea!!

Bananas are actually loaded with both magnesium and potassium. Generally, we throw away the peels but they too contain those minerals. But how do we eat those peels? That is why you must try the banana tea. If you are suffering from sleeplessness then you must try this remedy.
X
Desktop Bottom Promotion