ನೆನಪಿರಲಿ ತರಕಾರಿ-ಹಣ್ಣುಗಳನ್ನು ತೊಳೆಯುವುದಕ್ಕೂ ಟ್ರಿಕ್ಸ್ ಇದೆ!

By: Arshad
Subscribe to Boldsky

ಹಸಿ ಆಹಾರಗಳು ಎಂದರೆ ಹಸಿ ತರಕಾರಿ, ಹಸಿ ಸೊಪ್ಪು, ಹಣ್ಣುಗಳು, ತಾಜಾ ಮಾಂಸ, ತಾಜಾ ಮೀನು ಮೊದಲಾದವುಗಳನ್ನು ಪರಿಗಣಿಸಬಹುದು. ಆದರೆ ಬಾಳೆಹಣ್ಣು ಮೊದಲಾದ ಸಿಪ್ಪೆ ಸುಲಿದು ತಿನ್ನಬಹುದಾದ ಹಣ್ಣುಗಳ ಹೊರತಾಗಿ ಇತರ ಯಾವುದೇ ಹಸಿ ಆಹಾರಗಳನ್ನು ಬೇಯಿಸದೇ ಅಥವಾ ಸ್ವಚ್ಛವಾಗಿ ತೊಳೆಯದೇ ತಿನ್ನುವುದು ಅಪಾಯಕ್ಕೆ ನೇರವಾದ ಆಹ್ವಾನವಾಗಿದೆ.

ವಿಶೇಷವಾಗಿ ಸಿಪ್ಪೆ ಸಹಿತ ತಿನ್ನುವ ಹಣ್ಣುಗಳಾದ ಸೇಬು, ಪೇರಲೆ, ಅಥವಾ ಸೀಬೆ ಹಣ್ಣು ದ್ರಾಕ್ಷಿ ಮೊದಲಾದವು. ಈ ಹಣ್ಣುಗಳನ್ನು ನೋಡಿದ ಬಳಿಕ ತಿನ್ನದೇ ಇರಲಿಕ್ಕಾಗದೇ ಒಂದು ಹಣ್ಣನ್ನಾದರೂ ತಿನ್ನುವುದು ಹೆಚ್ಚಿನವರೆಲ್ಲರೂ ಅನುಸರಿಸುವ ಅಭ್ಯಾಸ. ಆದರೆ ಈ ಹಣ್ಣುಗಳನ್ನು ಬೆಳೆಯುವಾಗ ಉಪಯೋಗಿಸುವ ಕೀಟನಾಶಕಗಳು ತೆಳುವಾದ ಪದರದ ರೂಪದಲ್ಲಿದ್ದು ತೊಳೆಯದೇ ಹೋಗುವುದೇ ಇಲ್ಲ.  ತರಕಾರಿ ತೊಳೆಯುವುದು ಎಂದರೆ ನೀರು ಕುಡಿದಷ್ಟು ಸುಲಭವಲ್ಲ!

ಇನ್ನು ದ್ರಾಕ್ಷಿ ಹಣ್ಣಿನಲ್ಲಿರುವ ಕೀಟನಾಶಕವಂತೂ ಕೊಂಚಕಾಲ ನೀರಿನಲ್ಲಿ ಮುಳುಗಿಸಿಟ್ಟರೂ ಹೋಗದಷ್ಟು ಗಟ್ಟಿಯಾಗಿ ಅಂಟಿಕೊಡಿರುತ್ತದೆ. ಇವು ಹೊಟ್ಟೆಗೆ ಹೋದರೆ ಹಲವು ರೀತಿಯ ತೊಂದರೆಗಳು ಎದುರಾಗುತ್ತವೆ. ಅಲ್ಲದೇ ಮಾಂಸ, ತರಕಾರಿಗಳಲ್ಲಿರುವ ಬ್ಯಾಕ್ಟೀರಿಯಾಗಳು ಹಸಿಯಾಗಿ ಸೇವಿಸಿದಾಗ ಹೊಟ್ಟೆ ಕೆಡಿಸುತ್ತವೆ. ಕೆಲವು ಬ್ಯಾಕ್ಟೀರಿಯಾಗಳು ಮತ್ತು ಕೀಟನಾಶಕಗಳಂತೂ ತೊಳೆದರೂ ಹೋಗದೇ ಗಟ್ಟಿಯಾಗಿ ಅಂಟಿಕೊಂಡುಬಿಟ್ಟಿರುತ್ತವೆ.   ಲವಲವಿಕೆಯ ಆರೋಗ್ಯಕ್ಕೆ 'ತರಕಾರಿ ಜ್ಯೂಸ್' ಸಹಕಾರಿ

ಈ ಹಠಮಾರಿ ಬ್ಯಾಕ್ಟೀರಿಯಾ ಮತ್ತು ಕೀಟನಾಶಕಗಳನ್ನು ನಿವಾರಿಸಲೆಂದೇ ಇಂದು ಮಾರುಕಟ್ಟೆಯಲ್ಲಿ ಕೆಲವು ದ್ರಾವಣಗಳು ಲಭ್ಯವಿವೆ. ಆದರೆ ದುಬಾರಿಯಾದ ಈ ದ್ರಾವಣಗಳ ಬದಲು ಸುಲಭವಾಗಿ ಲಭ್ಯವಾಗುವ ಮತ್ತು ಅಗ್ಗವಾದ ನೈಸರ್ಗಿಕ ವಿಧಾನಗಳ ಮೂಲಕವೂ ಈ ಹಠಮಾರಿಗಳನ್ನು ತೊಲಗಿಸಬಹುದು. ಬನ್ನಿ, ಅವು ಹೇಗೆ ಎಂಬುದನ್ನು ಮುಂದೆ ಓದಿ...

ಅರಿಶಿನ

ಅರಿಶಿನವೂ ಒಂದು ಅತ್ಯುತ್ತಮ ಕೀಟನಾಶಕ ಎಂದು ನಿಮಗೆ ಗೊತ್ತಿತ್ತೇ? ವಿಶೇಷವಾಗಿ ಹಸಿಮಾಂಸ ಮತ್ತು ಮೀನಿನ ಮೇಲೆ ಕೊಂಚ ಅರಿಶಿನ ಚಿಮುಕಿಸಿದರೆ ಸಾಕು, ಇದರಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳೆಲ್ಲಾ ನಾಶವಾಗುತ್ತವೆ.

ಅರಿಶಿನ

ಆದ್ದರಿಂದ ಮಾಂಸ ಮತ್ತು ಮೀನನ್ನು ತೊಳೆದ ಬಳಿಕ ಅರಿಶಿನದ ಲೇಪನವನ್ನು ತೆಳುವಾಗಿ ಹಚ್ಚಿ ಫ್ರಿಜ್ಜಿನಲ್ಲಿ ಶೇಖರಿಸಿ ಅಥವಾ ಆಗಲೇ ಅಡುಗೆಗೆ ಬಳಸುವುದಾದರೆ ಇದಕ್ಕೆ ಹಚ್ಚುವ ಮಸಾಲೆಯೊಂದಿಗೆ ಅರಿಶಿನವನ್ನು ಬೆರೆಸಿ ಕೊಂಚ ಕಾಲ ಇಟ್ಟ ಬಳಿಕವೇ ಉಪಯೋಗಿಸಿ.

ಉಪ್ಪು

ಹಣ್ಣು ತರಕಾರಿಗಳ ಹೊರಪದರದಲ್ಲಿ ಕೀಟನಾಶಕ ತೆಳುವಾಗಿ ಒಣಗಿ ಅಂಟಿಕೊಂಡಿದ್ದು ಒರೆಸಿದರೆ ಹೋಗುವಂತಿದ್ದರೆ ಎಲ್ಲಾ ಹಣ್ಣುಗಳ ಮೇಲಿನ ಪದರವನ್ನು ಒರೆಸಿ ತೊಲಗಿಸುವುದು ಅಪಾರ ಶ್ರಮದಾಯಕ ಕೆಲಸವಾಗಿದೆ.

ಉಪ್ಪು

ಬದಲಿಗೆ ಒಂದು ಪಾತ್ರೆಯಲ್ಲಿ ಕೊಂಚ ಉಪ್ಪನ್ನು ಸೇರಿಸಿ ಈ ನೀರಿನಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಕೊಂಚ ಕಾಲ ಮುಳುಗಿಸಿಟ್ಟು ಬಳಿಕ ಸ್ವಚ್ಛನೀರಿನಿಂದ ತೊಳೆದರೆ ಈ ಪದರವೆಲ್ಲಾ ಉಪ್ಪಿನಲ್ಲಿ ಕರಗಿ ಹೋಗಿರುವುದು ಕಂಡುಬರುತ್ತದೆ.

ಶಿರ್ಕಾ

ಇದು ಕೊಂಚ ಕ್ಷಾರೀಯವಾದ ದ್ರಾವಣವಾದ ಕಾರಣ ಹಸಿ ತರಕಾರಿಯಲ್ಲಿರುವ ಕೀಟನಾಶಕ ಹಾಗೂ ಕ್ರಿಮಿಗಳನ್ನು ತೊಲಗಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಒಂದು ಕಪ್ ಶಿರ್ಕಾವನ್ನು ಒಂದು ಪಾತ್ರೆ ನೀರಿಗೆ ಬೆರೆಸಿ ಈ ನೀರಿನಲ್ಲಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ತರಕಾರಿ ಮತ್ತು ಹಣ್ಣುಗಳನ್ನು ನೆನೆಸಿಡಿ.

ಶಿರ್ಕಾ

ಬಳಿಕ ಇವನ್ನು ಮತ್ತೊಮ್ಮೆ ಸಾದಾನೀರಿನಿಂದ ತೊಳೆದು ಅಡುಗೆಗೆ ಬಳಸಿ ಅಥವಾ ಪ್ಲಾಸ್ಟಿಕ್ ತೊಟ್ಟೆಯೊಂದರಲ್ಲಿ ಹಾಕಿ ಗಂಟುಕಟ್ಟಿ ಫ್ರಿಜ್ಜಿನಲ್ಲಿಡಿ.

ಲಿಂಬೆ ರಸ

ಲಿಂಬೆಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಹಸಿ ತರಕಾರಿ ಮತ್ತು ಮಾಂಸದಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ನೆರವಾಗುತ್ತದೆ.

ಲಿಂಬೆ ರಸ

ಒಂದು ಲಿಂಬೆಯ ರಸವನ್ನು ಒಂದು ಚಿಕ್ಕ ಪಾತ್ರೆಯಷ್ಟು ನೀರಿಗೆ ಬೆರೆಸಿ ಈ ನೀರಿನಲ್ಲಿ ಹಸಿ ತರಕಾರಿಗಳು, ಹಣ್ಣು ಹಂಪಲುಗಳನ್ನು ಸುಮಾರು ಐದು ನಿಮಿಷ ನೆನೆಸಿಡಿ. ಬಳಿಕ ಇನ್ನೊಮ್ಮೆ ತೊಳೆದು ಶೇಖರಿಸಿ ಅಥವಾ ಅಡುಗೆಗೆ ಬಳಸಿ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Top natural ways to kill germs in raw foods

Thoroughly washing fruits, vegetables, meat and fish before cooking can help remove the germs but that is not it. Some pesticides and bacteria still thrive in foods despite the washing. According to nutritionist these natural ingredients can help kill the germs in foods.
Please Wait while comments are loading...
Subscribe Newsletter