'ಕಿಡ್ನಿ'ಗೆ ತಗಲುವ ಸೋಂಕನ್ನು ಗುಣಪಡಿಸುವ ಮನೆಮದ್ದುಗಳು

ಒಂದು ವೇಳೆ ಕಿಡ್ನಿಗೆ ಏನಾದರೂ ಸೋಂಕು ತಗುಲಿದರೆ ಅದರಿಂದ ಕಿಡ್ನಿ ವೈಫಲ್ಯವಾಗುವ ಸಾಧ್ಯತೆಗಳು ಇವೆ. ಕಿಡ್ನಿಯು ವೈಫಲ್ಯಗೊಂಡರೆ ಸಂಪೂರ್ಣ ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.

By: Hemanth
Subscribe to Boldsky

ತುಂಬಾ ಸೂಕ್ಷ್ಮ ಹಾಗೂ ಅತೀ ಹೆಚ್ಚು ಕೆಲಸ ಮಾಡುವಂತಹ ಅಂಗವೆಂದರೆ ಅದು ಕಿಡ್ನಿ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕವಾಗಿ ಹೊರಗೆ ಹಾಕುವ ಕೆಲಸ ಮಾಡುವುದು. ದೇಹವು ಆರೋಗ್ಯವಾಗಿರಲು ಕಿಡ್ನಿಯ ಪಾತ್ರ ಕೂಡ ಪ್ರಾಮುಖ್ಯತೆಯನ್ನು ಪಡೆದಿದೆ. ಕಿಡ್ನಿ ಸಮಸ್ಯೆಯಿದ್ದರೆ ದಾಳಿಂಬೆ ಜ್ಯೂಸ್ ಕುಡಿಯಿರಿ

ಇದೇ ಕಿಡ್ನಿಗೆ ಏನಾದರೂ ಸೋಂಕು ತಗುಲಿದರೆ ಅದರಿಂದ ಕಿಡ್ನಿ ವೈಫಲ್ಯವಾಗುವ ಸಾಧ್ಯತೆಗಳು ಇವೆ. ಕಿಡ್ನಿಯು ವೈಫಲ್ಯಗೊಂಡರೆ ಸಂಪೂರ್ಣ ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಕಿಡ್ನಿಯನ್ನು ಆರೋಗ್ಯವಾಗಿಡಲು ಕಿಡ್ನಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ ನೋಡಿಕೊಳ್ಳಬೇಕು.  ಕಿಡ್ನಿ ಕಲ್ಲು ಕರಗಿಸುವ, ಹಿತ್ತಲ ಗಿಡದ ಮದ್ದು

ರಕ್ತದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹದಲ್ಲಿನ ನೀರಿನ ಅಂಶವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕಿಡ್ನಿ ಸೋಂಕನ್ನು ತಡೆಯುವಂತಹ ಕೆಲವೊಂದು ಮನೆಮದ್ದುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇದರ ಬಗ್ಗೆ ತಿಳಿದುಕೊಳ್ಳುವ....  


ಸರಿಯಾಗಿ ನೀರು ಕುಡಿಯಿರಿ

ಕಿಡ್ನಿಯಲ್ಲಿ ಸೋಂಕನ್ನು ಉಂಟುಮಾಡುವಂತಹ ಬ್ಯಾಕ್ಟೀರಿಯಾಗಳನ್ನು ಹೊರಗೆ ಹಾಕಬೇಕೆಂದರೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು.  ಕಿಡ್ನಿ ಆರೋಗ್ಯಕ್ಕೆ ಎಷ್ಟು ನೀರು ಕುಡಿಯಬೇಕು?

ಗಿಡಮೂಲಿಕೆ ಜ್ಯೂಸ್

ವಿಟಮಿನ್ ಗಳಿಂದ ಹಾಗೂ ರಿಬೊಫ್ಲಾವಿನ್ ನಿಂದ ಸಮೃದ್ಧವಾಗಿರುವಂತಹ ಪಾರ್ಸ್ಲಿಯು ಕಿಡ್ನಿಯ ಸೋಂಕನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡಲು ನೆರವಾಗುವುದು. ಕೆಲವು ಪಾರ್ಸ್ಲಿ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ. ಅದನ್ನು ಗಾಳಿಸಿಕೊಂಡು ನೀರು ತಣ್ಣಗಾದ ಬಳಿಕ ಕುಡಿಯಿರಿ.

ಹಣ್ಣಿನ ಜ್ಯೂಸ್

ಕಿತ್ತಳೆ, ನಿಂಬೆ ಹಾಗೂ ದ್ರಾಕ್ಷಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವುದು. ಮತ್ತು ಕಿಡ್ನಿಯನ್ನು ಸ್ವಚ್ಛವಾಗಿಟ್ಟುಕೊಂಡು ಯಾವುದೇ ಸೋಂಕು ಬರದಂತೆ ಕಾಪಾಡುವುದು.

ಅಡುಗೆ ಸೋಡಾ

ಒಂದು ಚಮಚ ಅಡುಗೆ ಸೋಡಾವನ್ನು ಒಂದು ಲೋಟ ನೀರಿಗೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಕಲಸಿ ಮತ್ತು ಕುಡಿಯಿರಿ. ಇದನ್ನು ದಿನಾಲೂ ಮಾಡುವುದರಿಂದ ಕಿಡ್ನಿ ಸೋಂಕನ್ನು ತಡೆಯಬಹುದು.    ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!

ಬೆಳ್ಳುಳ್ಳಿ

ಮೂತ್ರದ ಮೂಲಕ ಉಪ್ಪು ಹಾಗೂ ಇತರ ಕಲ್ಮಶವನ್ನು ಹೊರಹಾಕುವಲ್ಲಿ ಬೆಳ್ಳುಳ್ಳಿಯು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಿ ಅಥವಾ ಪ್ರತೀದಿನ 2-3 ಬೆಳ್ಳುಳ್ಳಿಯನ್ನು ಸೇವನೆ ಮಾಡಿ.

ಆಲಿವ್ ಆಯಿಲ್

ಒಂದು ಚಮಚ ಆಲಿವ್ ತೈಲ ಮತ್ತು ಕೆಲವು ಹನಿ ನಿಂಬೆ ರಸವನ್ನು ಒಂದು ಲೋಟ ನೀರಿಗೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ದಿನದಲ್ಲಿ ಎರಡು ಸಲ ಇದನ್ನು ಕುಡಿಯಿರಿ. ಇದು ಕಿಡ್ನಿಯಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಕಿಡ್ನಿಗೆ ಯಾವುದೇ ರೀತಿಯ ಸೋಂಕು ಬರದಂತೆ ತಡೆಯುತ್ತದೆ.

ಅಲೋವೆರಾ ಜ್ಯೂಸ್

ದಿನದಲ್ಲಿ ಎರಡು ಸಲ ಅಲೋವೆರಾ ಜ್ಯೂಸ್ ಅನ್ನು ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಅಂಶವು ಹೊರಹೋಗುತ್ತದೆ ಮತ್ತು ಕಿಡ್ನಿಯು ಸ್ವಚ್ಛವಾಗುತ್ತದೆ. ಇದರಿಂದ ಕಿಡ್ನಿಯ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಬಹುದು.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Tuesday, November 22, 2016, 12:36 [IST]
English summary

Top Home Remedies For Kidney Infection

Kidneys are one of the most vital organs of the body. These bean-shaped organs are responsible for filtering the waste products and flushing out the toxins from the blood, producing urine and maintaining the fluid level in the body. So Here is a list of top home remedies that help in curing kidney infection. Take a look.
Please Wait while comments are loading...
Subscribe Newsletter