ಬೆನ್ನೇರಿ ಕಾಡುವ, ಬೆನ್ನು ನೋವಿಗೆ-ಸಿಂಪಲ್ ಮನೆಮದ್ದುಗಳು...

ಒಮ್ಮೆ ಬೆನ್ನುನೋವು ಕಾಣಿಸಿಕೊಂಡರೆ ಅದರಿಂದ ಆಗುವಂತಹ ನೋವು ಅಸಹನೀಯವಾಗಿರುತ್ತದೆ. ಯಾವುದೇ ಕೆಲಸ ಕಾರ್ಯವನ್ನು ಮಾಡಲು ಇದರಿಂದ ಸಾಧ್ಯವಾಗಲ್ಲ. ಆದರೆ ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಬೆನ್ನು ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

By: manu
Subscribe to Boldsky

ಆಧುನಿಕ ಯುಗದಲ್ಲಿ ಎಲ್ಲವೂ ವೇಗವಾಗಿರುವ ಕಾರಣದಿಂದಾಗಿ ನಮ್ಮ ದೇಹದ ಆರೋಗ್ಯದ ಕಡೆ ಗಮನ ಹರಿಸುವಂತಹ ಜನರ ಸಂಖ್ಯೆ ತುಂಬಾ ಕಡಿಮೆ. ಒತ್ತಡದ ಜೀವನ ಶೈಲಿ, ದಿನಪೂರ್ತಿ ಕುಳಿತುಕೊಂಡೇ ಕೆಲಸ ಮಾಡುವುದು, ಅತಿಯಾಗಿ ದ್ವಿಚಕ್ರ ವಾಹನ ಚಾಲನೆ ಇತ್ಯಾದಿಗಳಿಂದಾಗಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಬೆನ್ನು ನೋವಿಗೆ ಚಿಕಿತ್ಸೆ ಮಾಡುವ ಮುನ್ನ ತಿಳಿಯಿರಿ ಕಾರಣ!

ಒಮ್ಮೆ ಬೆನ್ನುನೋವು ಕಾಣಿಸಿಕೊಂಡರೆ ಅದರಿಂದ ಆಗುವಂತಹ ನೋವು ಅಸಹನೀಯವಾಗಿರುತ್ತದೆ. ಯಾವುದೇ ಕೆಲಸ ಕಾರ್ಯವನ್ನು ಮಾಡಲು ಇದರಿಂದ ಸಾಧ್ಯವಾಗಲ್ಲ. ಆದರೆ ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಬೆನ್ನು ನೋವನ್ನು ಕಡಿಮೆ ಮಾಡಿಕೊಳ್ಳಬಹುದು...  

ಟಿಪ್ಸ್ #1

ಟಿವಿ ನೋಡುತ್ತಾ ಇರುವಾಗ ಬಿಸಿಯಾಗಿರುವ ನೀರಿನ ಬ್ಯಾಗ್ ಅನ್ನು ಬೆನ್ನ ಹಿಂದೆ ಇಟ್ಟುಕೊಂಡರೆ ನೋವು ತಗ್ಗುವುದು. ಬಿಸಿ ನೀರು ನೋವಿನಿಂದ ಶಮನ ನೀಡುವುದು.

ಟಿಪ್ಸ್ #2

ಸ್ನಾನಕ್ಕೆ ಹೋಗುವ ಒಂದು ಗಂಟೆ ಮೊದಲು ಸಾಸಿವೆ ಎಣ್ಣೆಯಿಂದ ಬೆನ್ನಿಗೆ ಮಸಾಜ್ ಮಾಡಿ. ಬಳಿಕ ಬಿಸಿ ನೀರಿನಿಂದ ಸ್ನಾನ ಮಾಡಿ.

ಟಿಪ್ಸ್ #3

ಒಂದು ಲೋಟ ಬಿಸಿ ಹಾಲಿಗೆ ಸ್ವಲ್ಪ ಅರಿಶಿನ ಮತ್ತು ಕೆಲವು ಹನಿ ಜೇನುತುಪ್ಪವನ್ನು ಹಾಕಿಕೊಂಡು ಪ್ರತೀ ದಿನ ಕುಡಿಯಿರಿ. ಇದು ದೇಹದ ನೋವನ್ನು ನಿವಾರಣೆ ಮಾಡುವುದು ಮಾತ್ರವಲ್ಲದೆ ಕಫ ಹಾಗೂ ಕೆಮ್ಮಿಗೆ ಇದು ಒಳ್ಳೆಯದು.

ಟಿಪ್ಸ್ #3

ಚಹಾ ಸೇವಿಸುವಾಗ ಅದಕ್ಕೆ ಶುಂಠಿ ಹಾಕಿಕೊಂಡು ಸೇವಿಸಿ. ಇದರಿಂದ ಬೆನ್ನು ನೋವು ಕಡಿಮೆಯಾಗುವುದು. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಟಿಪ್ಸ್ #3

ಬೇಗನೆ ಪರಿಹಾರ ಪಡೆಯಲು ಗಿಡಮೂಲಿಕೆ ಎಣ್ಣೆಯಿಂದ ಬೆನ್ನಿಗೆ ಮಸಾಜ್ ಮಾಡಿಕೊಳ್ಳಿ.

ಟಿಪ್ಸ್ #3

ಒಂದು ಟ್ಯೂಬ್ ಕಾಲ್ಬೀಲದಲ್ಲಿ ಅಕ್ಕಿಯನ್ನು ತುಂಬಿಕೊಳ್ಳಿ. ಅದರ ಎರಡು ಬದಿಯನ್ನು ಗಟ್ಟಿಯಾಗಿ ಕಟ್ಟಿಕೊಳ್ಳಿ. ಇದನ್ನು ಮೈಕ್ರೋಒವೆನ್‌ನಲ್ಲಿಡಿ. ನೋವು ಇರುವ ಕಡೆ ಇದರಿಂದ ಮಸಾಜ್ ಮಾಡಿದರೆ ನೋವು ಶಮನವಾಗುವುದು.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Friday, November 25, 2016, 15:38 [IST]
English summary

Top Home remedies for backaches

Stressful life, travelling, workouts or aging — all these lead to one most common health problem i.e. backache. It is one health issue which makes us restless and if not taken care of results in making our routine terrible. Here are a few home remedies to get rid of that backache:
Please Wait while comments are loading...
Subscribe Newsletter