For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: 'ಹಸಿರು ಸೇಬಿನ' ಶ್ರೀಮಂತ ಗುಣಗಳು!

By Manu
|

ಹಣ್ಣುಗಳು ಹಾಗೂ ತರಕಾರಿಗಳು ಪೋಷಕಾಂಶಗಳ ಖಜಾನೆ ಎನ್ನಬಹುದು. ಇವುಗಳನ್ನು ಎಷ್ಟು ಹೆಚ್ಚು ಸೇವಿಸುತ್ತೇವೆಯೋ ಅಷ್ಟು ನಮ್ಮ ದೇಹವು ಆರೋಗ್ಯವಾಗಿರುತ್ತದೆ. ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎನ್ನುವ ಮಾತಿದೆ. ಅದರಲ್ಲೂ ಕೆಂಪು ಸೇಬಿಗಿಂತ ಹಸಿರು ಸೇಬು (ಗ್ರೀನ್ ಆಪಲ್) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೆಚ್ಚಿನವರು ಕೆಂಪು ಸೇಬನ್ನೇ ತಿನ್ನಲು ಬಳಸುತ್ತಾರೆ.

ಹಸಿರು ಸೇಬಿನಲ್ಲಿ ಸಿಹಿ ಕಡಿಮೆ ಇರುವ ಕಾರಣದಿಂದ ಇದನ್ನು ಹೆಚ್ಚಾಗಿ ಪದಾರ್ಥಗಳಲ್ಲಿ ಬಳಸುತ್ತಾರೆ. ಈಗೀಗ ಹೆಚ್ಚಾಗಿ ಹಸಿರು ಸೇಬನ್ನು ವಿವಿಧ ರೀತಿಯ ತರಕಾರಿ ಖಾದ್ಯಗಳಲ್ಲಿ ಬಳಸುತ್ತಾರೆ. ಇದರಲ್ಲಿ ಇರುವಂತಹ ಆರೋಗ್ಯ ಲಾಭಗಳನ್ನು ಈಗಾಗಲೇ ಕಂಡುಕೊಂಡಿರುವವರು ತಮ್ಮ ಆಹಾರ ಕ್ರಮದಲ್ಲಿ ಇದನ್ನು ಅಳವಡಿಸಿಕೊಂಡು ಅದರ ಲಾಭವನ್ನು ಪಡೆಯುತ್ತಾ ಇದ್ದಾರೆ. ವೈದ್ಯ ಲೋಕವನ್ನು ಅಚ್ಚರಿಗೊಳಿಸುವ ಹಸಿರು ಸೇಬಿನ ಪ್ರಯೋಜನಗಳೇನು?

ಕೆಂಪು ಸೇಬು ತುಂಬಾ ಸಿಹಿ ಮತ್ತು ಹಿಂದಿನಿಂದಲೂ ಅದನ್ನು ನಾವು ಬಳಸುತ್ತಾ ಇದ್ದೇವೆ. ಆದರೆ ಹಸಿರು ಸೇಬು ಕಚ್ಚಾ ಹಣ್ಣಿನಂತೆ ಕಾಣುವ ಕಾರಣದಿಂದ ಅದರ ಬಗ್ಗೆ ನಿರ್ಲಕ್ಷ್ಯ. ಆದರೆ ಕೆಂಪು ಸೇಬಿಗಿಂತ ಹಸಿರು ಸೇಬಿನಲ್ಲಿ ಆರೋಗ್ಯ ಲಾಭಗಳು ಅಧಿಕವಾಗಿವೆ. ಅದು ಯಾವುದೆಂದು ಮುಂದೆ ಓದುತ್ತಾ ತಿಳಿದುಕೊಳ್ಳಿ...

ಜೀರ್ಣವಾಗುವ ನಾರಿನಾಂಶ

ಜೀರ್ಣವಾಗುವ ನಾರಿನಾಂಶ

ಹಸಿರು ಸೇಬಿನ ಅತ್ಯಂತ ಮುಖ್ಯ ಲಾಭಗಳಲ್ಲಿ ಇದು ಒಂದಾಗಿದೆ. ಇದರ ಸಿಪ್ಪೆಯು ಅತ್ಯಧಿಕ ನಾರಿನಾಂಶವನ್ನು ಹೊಂದಿದ್ದು, ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ. ಇದರಿಂದ ಕರುಳಿನ ಕ್ರಿಯೆಯು ಸರಾಗವಾಗಿ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ಮೂಳೆಗಳು ಬಲಿಷ್ಠವಾಗುವುದು

ಮೂಳೆಗಳು ಬಲಿಷ್ಠವಾಗುವುದು

ಮೂಳೆಗಳ ಬೆಳವಣಿಗೆಗೆ ಬೇಕಾಗಿರುವಂತಹ ಖನಿಜಾಂಶಗಳಾದ ಕಬ್ಬಿಣ, ಕ್ಯಾಲ್ಸಿಯಂ, ಸತು, ಮೆಗ್ನಿಶಿಯಂ ಮತ್ತು ಪೊಟಾಶಿಯಂ ಇತ್ಯಾದಿ ಹಸಿರು ಸೇಬಿನಲ್ಲಿ ಸಮೃದ್ಧವಾಗಿದೆ. ಈ ಖನಿಜಾಂಶಗಳು ಮೂಳೆಗಳನ್ನು ಬಲಿಷ್ಠವಾಗಿಸುತ್ತದೆ. ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿ ಸಂಧಿವಾತವನ್ನು ತಡೆಯುವುದು.

ಕರುಳಿನ ಕ್ಯಾನ್ಸರ್ ತಡೆಯುವುದು

ಕರುಳಿನ ಕ್ಯಾನ್ಸರ್ ತಡೆಯುವುದು

ಹಸಿರು ಸೇಬನ್ನು ತಿನ್ನುವುದರಿಂದ ಆಗುವಂತಹ ಬಹುದೊಡ್ಡ ಲಾಭವಿದು. ಹಸಿರು ಸೇಬಿನಲ್ಲಿರುವ ನಾರಿನಾಂಶವು ಆರೋಗ್ಯಕ್ಕೆ ತುಂಬಾ ಲಾಭಕಾರಿ. ಇದು ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಡೆಯುವುದು.

ಯಕೃತ್‌ನ ಆರೈಕೆ

ಯಕೃತ್‌ನ ಆರೈಕೆ

ಹಸಿರು ಸೇಬಿನಲ್ಲಿ ಆರೋಗ್ಯ ಲಾಭಗಳು ತುಂಬಾ ಇದೆ. ಇದರಲ್ಲಿರುವ ಕೆಲವೊಂದು ಅಂಶಗಳು ಯಕೃತ್ ಅನ್ನು ಸರಿಯಾಗಿ ನೋಡಿಕೊಂಡು ಯಕೃತ್‌ಗೆ ಬರುವಂತಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಹಸಿರು ಸೇಬು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವುದು.

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ವಿಟಮಿನ್ ಮತ್ತು ಖನಿಜಾಂಶಗಳ ಖಜಾನೆಯಾಗಿರುವ ಹಸಿರು ಸೇಬನ್ನು ದೇವರು ಕೊಟ್ಟ ವರವೆಂದು ಕರೆಯಬಹುದು. ಯಾಕೆಂದರೆ ಇದರಲ್ಲಿರುವ ಅಂಶಗಳು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ವೈರಸ್, ಬ್ಯಾಕ್ಟೀರಿಯಾ ಇತ್ಯಾದಿಗಳ ವಿರುದ್ಧ ಹೋರಾಡಲು ದೇಹಕ್ಕೆ ನೆರವಾಗುವುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ನಿತ್ಯದ ಆಹಾರ ಕ್ರಮದಲ್ಲಿ ಹಸಿರು ಸೇಬನ್ನು ಬಳಸಿದರೆ ಅಲರ್ಜಿ ಮತ್ತು ಅಸ್ತಮಾದಂತಹ ಸಮಸ್ಯೆಯನ್ನು ದೂರವಿಡಬಹುದು.

English summary

Top Health Benefits Of Green Apple

What are the health benefits of green apples? If you have ever gone through the diet chart of celebrities and health conscious people, you will find green apples occupying an important part in their diet chart. Actually, when compared to red apples, the health benefits of green apples are more. What are the health benefits of green apples? Read on to know more.
Story first published: Thursday, August 18, 2016, 19:34 [IST]
X
Desktop Bottom Promotion