For Quick Alerts
ALLOW NOTIFICATIONS  
For Daily Alerts

ಹಳ್ಳಿಗಾಡಿನ ಮನೆಮದ್ದು- ಹರಳೆಣ್ಣೆಯ ಔಷಧೀಯ ಗುಣಗಳು

|

ಮುಖ ಸಿಂಡರಿಸಿಕೊಂಡವರನ್ನು 'ಹರಳೆಣ್ಣೆ ಕುಡಿದವರಂತೆ' ಎಂಬ ಉಪಮೇಯವನ್ನು ಉಪಯೋಗಿಸುವುದನ್ನು ಬಹಳಷ್ಟು ಕೃತಿಗಳಲ್ಲಿ ನೋಡಬಹುದು. ಸಾಮಾನ್ಯವಾಗಿ ಹಿಂದೆ ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ಧತೆಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತಿತ್ತು. ಎತ್ತಿನ ಗಾಡಿಯ ಎಣ್ಣೆ ಎಂಬ ಕಾರಣಕ್ಕೇ ಹೆಚ್ಚಿನವರು ಹರಳೆಣ್ಣೆಯನ್ನು ಉಪಯೋಗಿಸದೇ ಮೂಲೆಗುಂಪಾಗಿಸಿದ್ದಾರೆ. ವಾಸ್ತವವಾಗಿ ಹರಳೆಣ್ಣೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ.

ಅದರಲ್ಲೂ ಔಷಧಿಗಳು ವಾಸಿ ಮಾಡಲಾಗದಂತಹ ಕೆಲವು ವ್ಯಾಧಿಗಳನ್ನು ಈ ಹರಳೆಣ್ಣೆ ಸುಲಭವಾಗಿ ಗುಣಪಡಿಸುತ್ತದೆ. ಚರ್ಮದ ಕಂದು ಕಲೆ, ಸೊಂಟನೋವು, ಉಳುಕಿದ ಹಿಮ್ಮಡಿ ಮೊದಲಾದವುಗಳಿಗೆ ಹರಳೆಣ್ಣೆ ಅತ್ಯುತ್ತಮವಾಗಿದೆ. ಇದರ ಇನ್ನೂ ಹಲವು ಗುಣಗಳನ್ನು ಕೆಳಗೆ ವಿವರಿಸಲಾಗಿದೆ, ಮುಂದೆ ಓದಿ... ಎಲ್ಲಾ ಬಗೆಯ ಕೂದಲಿನ ಸಮಸ್ಯೆಗೆ ಒಂದೇ ರಾಮಬಾಣ- ಹರಳೆಣ್ಣೆ

Top health benefits of Castor Oil, which should

ಗರ್ಭಿಣಿಯರಿಗೆ
ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯ ಕಡೆಯ ಎರಡು ತಿಂಗಳಲ್ಲಿ ಕೊಂಚ ಹರಳೆಣ್ಣೆಯನ್ನು ಉಬ್ಬಿದ ಹೊಟ್ಟೆಯ ಭಾಗಕ್ಕೆ ಸವರಿಕೊಳ್ಳುತ್ತಾ ಇದ್ದರೆ ಹೆರಿಗೆಯ ಬಳಿಕ ಹೊಟ್ಟೆಯಲ್ಲಿ ಸೆಳೆತದ ಗುರುತುಗಳು (stretch marks) ಅತ್ಯಂತ ಕಡಿಮೆಯಾಗುತ್ತವೆ.

ಗಾಯದ ಸಮಸ್ಯೆಗೆ
ಗಾಯ, ಜಜ್ಜಿದ, ಅಥವಾ ಚಿಕ್ಕಪುಟ್ಟ ಚರ್ಮ ತರಚಿದ ಸ್ಥಳದ ಮೇಲೆ ಕೊಂಚ ಹರಳೆಣ್ಣೆ ಸವರಿದರೆ ಬೇಗನೇ ಗುಣವಾಗುತ್ತದೆ. ಅಲ್ಲದೆ ನಡೆಯುವಾಗ ಕಾಲು ಉಳುಕಿದರೆ ತಕ್ಷಣ ಹರಳೆಣ್ಣೆ ಹಚ್ಚಿ ಇಡಿಯ ರಾತ್ರಿ ಹಾಗೇ ಬಿಟ್ಟರೆ ಬೆಳಿಗ್ಗೆದ್ದಾಗ ನೋವು ಇರುವುದಿಲ್ಲ.

ಕಿವಿಯ ಆರೈಕೆಗೆ
ಆಗಾಗ ಹರಳೆಣ್ಣೆಯ ಒಂದೆರಡು ಹನಿಗಳನ್ನು ಕಿವಿಗೆ ಬಿಟ್ಟುಕೊಳ್ಳುತ್ತಾ ಇದ್ದರೆ ಶ್ರವಣ ಶಕ್ತಿ ಕುಂದುವ ಸಾಧ್ಯತೆ ಕಡಿಮೆಯಾಗುತ್ತದೆ.

ಕಣ್ಣಿನ ಪೊರೆ
ಕಣ್ಣಿನ ಪೊರೆ (cataract) ಇದ್ದರೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಹನಿ ಹರಳೆಣ್ಣೆ ಬಿಟ್ಟರೆ ಕಡಿಮೆಯಾಗುತ್ತದೆ. ಹರಳೆಣ್ಣೆಯಲ್ಲಿದೆ ಹಲವು ಪ್ರಯೋಜನ

ಬೊಕ್ಕೆಯ ಸಮಸ್ಯೆಗೆ
ಕೆಳಬೆನ್ನ ಬಳಿ ಬೊಕ್ಕೆ (pilonidal cysts) ಇದ್ದರೆ ಹರಳೆಣ್ಣೆ ಸವರಿಕೊಳ್ಳುತ್ತಾ ಇರುವ ಮೂಲಕ ಶೀಘ್ರವೇ ಗುಣವಾಗುತ್ತದೆ.

ಹರಳೆಣ್ಣೆಯ ಮಸಾಜ್
ಚರ್ಮದ calcification or calcium deposit (ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಪ್ರಕಟಗೊಳ್ಳುವುದು) ತೊಂದರೆ ಕಂಡುಬಂದರೆ ಹರಳೆಣ್ಣೆಯಿಂದ ನಿತ್ಯವೂ ಮಸಾಜ್ ಮಾಡಿದರೆ ಕ್ರಮೇಣ ಕಡಿಮೆಯಾಗುತ್ತದೆ.

ಕಣ್ಣಿನ ಆರೈಕೆಗೆ
ಮಲಗುವ ಮುನ್ನ ಕೊಂಚ ಹರಳೆಣ್ಣೆಯಿಂದ ಕಣ್ಣುರೆಪ್ಪೆಗಳನ್ನು ಮಸಾಜ್ ಮಾಡಿಕೊಳ್ಳುತ್ತಾ ಇದ್ದರೆ ಕನ್ನಡಕ ತೊಡಬೇಕಾಗಿ ಬರುವ ತೊಂದರೆಗಳು ಕಡಿಮೆಯಾಗುತ್ತವೆ.

ಧ್ವನಿ ಗಡುಸಾಗಿದ್ದರೆ
ಧ್ವನಿ ಗಡುಸಾಗಿದ್ದರೆ ಗಂಟಲಿಗೆ ಪ್ರತಿದಿನ ಮೂರು ತಿಂಗಳುಗಳ ಕಾಲ ಹರಳೆಣ್ಣೆ ಸವರಿಕೊಳ್ಳುತ್ತಾ ಇದ್ದರೆ ಧ್ವನಿಪೆಟ್ಟಿಗೆಯ ಗಂಟು ಕರಗಿ ಗಡಸು ಅಥವಾ ಬಿದ್ದು ಹೋದ ಧ್ವನಿ ಇಲ್ಲವಾಗುತ್ತದೆ.

English summary

Top health benefits of Castor Oil, which should surprise you...

Castor oil is one of the most ancient oils, known for its powerful therapeutic properties. Let us now delve into the benefit, uses & nutritional profile of castor oil.
Story first published: Friday, February 5, 2016, 19:18 [IST]
X
Desktop Bottom Promotion