For Quick Alerts
ALLOW NOTIFICATIONS  
For Daily Alerts

ಊಹೆಗೂ ನಿಲುಕದ ಪ್ರಯೋಜನ-ಈ ಎಲೆಕೋಸಿನಲ್ಲಿದೆ!

ಎಲೆ ಕೋಸು ಇದ್ದರೆ ಏನು ಮಾಡಬಹುದು. ಒಂದು ಪಲ್ಯ, ಒಂದು ಉಪ್ಪು ಸಾರು ಅಷ್ಟೇ ತಾನೇ ಎಂಬ ಯೋಚನೆ ಹಲವರಿಗೆ. ಇನ್ನು ಕೆಲವರು ಇದನ್ನು ಸೇವಿಸುವುದರಿಂದ ಉಷ್ಣ ಹಾಗೆ ಹೀಗೆ! ಆದರೆ ಇದರಲ್ಲಿ ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳಿವೆ.....

By Manu
|

ಎಲೆಕೋಸು ಎಂದರೆ ಹೆಚ್ಚಿನವರು ಮುಖ ಸಿಂಡರಿಸುತ್ತಾರೆ. ಏಕೆಂದರೆ ಇದರ ಕೊಂಚ ಒಗರಾದ ರುಚಿ, ಅಷ್ಟೇನೂ ಹಿತಕರವಲ್ಲದ ಪರಿಮಳ, ಕತ್ತರಿಸಿದ ಬಳಿಕ ಅಡ್ಡಾದಿಡ್ಡಿಯಾಗಿರುವ ನೂಲಿನಂತಿರುವ ಪರಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಅಲ್ಲದೇ ಒಂದು ವೇಳೆ ಸರಿಯಾಗಿ ಬೆಂದಿರದಿದ್ದರೆ ಅಥವಾ ಇತರ ಮಸಾಲೆಗಳನ್ನು ಸಮಪ್ರಮಾಣದಲ್ಲಿ ಹಾಕಿರದೇ ಇದ್ದರೆ ಇದರ ರುಚಿಯನ್ನು ಹೆಚ್ಚಿನವರು ಇಷ್ಟಪಡುವುದೂ ಇಲ್ಲ. ಆಹಾ...! ಕ್ಯಾಬೇಜ್ ಜ್ಯೂಸ್‌ನ ಪ್ರಯೋಜನಗಳು ಒ೦ದೇ, ಎರಡೇ..?

ಆದರೆ ಎಲೆಕೋಸನ್ನು ಹಿತಮಿತವಾಗಿ ಸೇವಿಸುವುದರಿಂದ ಹಲವಾರು ರೀತಿಯ ಆರೋಗ್ಯಕಾರಿ ಲಾಭಗಳು ಇವೆ. ಅದರಲ್ಲೂ ಮಧುಮೇಹಿಗಳಿಗೆ ಅಥವಾ ಡೊಳ್ಳುಹೊಟ್ಟೆಯ ಸಮಸ್ಯೆ ಇದ್ದರೆ (metabolic syndrome) ಇದು ನಿಮ್ಮ ಪ್ರಥಮ ಆದ್ಯತೆಯ ತರಕಾರಿಯಾಗಬೇಕು! ಏಕೆಂದರೆ ನಿಮಗೆ ಕೋಸು ರುಚಿಗಿಂತಲೂ ಹೆಚ್ಚಾಗಿ ಆರೋಗ್ಯವನ್ನು ನೀಡುತ್ತದೆ.... ಬನ್ನಿ ಎಲೆಕೋಸಿನಿಂದ ಯಾವ್ಯಾವ ಆರೋಗ್ಯ ಲಾಭಗಳು ಇದೆ ಎಂದು ಲೇಖನದಲ್ಲಿ ಮುಂದೆ ತಿಳಿದುಕೊಳ್ಳಿ.......

ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ

ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ

ಕೋಸು ರಕ್ತದಲ್ಲಿ ಸೇರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವ ಜೊತೆಗೇ ಮೂತ್ರಪಿಂಡದ ಕ್ಷಮತೆಯನ್ನೂ ಹೆಚ್ಚಿಸುತ್ತದೆ. ಒಂದು ವೇಳೆ ಮಧುಮೇಹಿಯ ರಕ್ತದಲ್ಲಿ ಸಕ್ಕರೆ ವಿಪರೀತವಾಗಿದ್ದರೆ (ಅಂದರೆ 600 mg/dlಕ್ಕೂ ಹೆಚ್ಚು) ಇದು ಅಪಾಯಕಾರಿಯಾಗಿದ್ದು ಈ ಸ್ಥಿತಿಯಲ್ಲಿ ಮೂತ್ರಪಿಂಡಗಳು ಹೆಚ್ಚಿನ ಸಕ್ಕರೆಯನ್ನು ಮೂತ್ರದ ಮೂಲಕ ಹೊರಹಾಕಲು ಯತ್ನಿಸುತ್ತವೆ. ಇದು ದೇಹದಿಂದ ಅತಿ ಹೆಚ್ಚು ದ್ರವ ಹೊರಹೋಗಲು ಕಾರಣವಾಗಿ ದೇಹದಲ್ಲಿ ದ್ರವದ ಕೊರತೆಯಾಗುತ್ತದೆ.

ಕಣ್ಣಿನ ಪೊರೆಯನ್ನು ನಿವಾರಿಸುತ್ತದೆ

ಕಣ್ಣಿನ ಪೊರೆಯನ್ನು ನಿವಾರಿಸುತ್ತದೆ

ಎಲೆಕೋಸಿನಲ್ಲಿರುವ ಬೀಟಾ ಕೆರೊಟಿನ್ ಕಣ್ಣಿನ ರಕ್ಷಣೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಇದು ಮ್ಯಾಕುಲರ್ ಡಿಜನರೇಷನ್ ಉಂಟಾಗದಂತೆ ಕಾಪಾಡುತ್ತದೆ. ಆಗಾಗಿ ಕಣ್ಣಿನ ಪೊರೆ ಉಂಟಾಗುವುದಿಲ್ಲ.

ಅಲ್ಞೈಮರ್ಸ್ ರೋಗ ಬರದಂತೆ ತಡೆಯುತ್ತದೆ....

ಅಲ್ಞೈಮರ್ಸ್ ರೋಗ ಬರದಂತೆ ತಡೆಯುತ್ತದೆ....

ಭವಿಷ್ಯದಲ್ಲಿ ಅಲ್ಞೈಮರ್ಸ್ ರೋಗ ಬರದಂತೆ ತಡೆಯುತ್ತದೆ ಇತ್ತೀಚಿನ ಅಧ್ಯಯನಗಳ ಪ್ರಕಾರ ಎಲೆಕೋಸು, ಅದರಲ್ಲಿಯೂ ಕೆಂಪು ಬಣ್ಣದ ಎಲೆಕೋಸನ್ನು ಸೇವಿಸುವುದರಿಂದ ಭವಿಷ್ಯದಲ್ಲಿ ಅಲ್ಜೀಮರ್ ರೋಗ ಬರದಂತೆ ತಡೆಯಬಹುದು. ಇದಕ್ಕೆ ಇದರಲ್ಲಿರುವ ವಿಟಮಿನ್ ಕೆ ಜೀವಸತ್ವವೇ ಕಾರಣ.

ಜೀರ್ಣ ಕ್ರಿಯೆ ಸುಧಾರಿಸುವುದು

ಜೀರ್ಣ ಕ್ರಿಯೆ ಸುಧಾರಿಸುವುದು

ಎಲೆಕೋಸಿನಲ್ಲಿ ನಾರಿನಾಂಶವು ಸಮೃದ್ಧವಾಗಿರುವ ಕಾರಣದಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ನಾರಿನಾಂಶವು ಮಲಬದ್ಧತೆ, ಸೆಳೆತ ಮತ್ತು ಹೊಟ್ಟೆಯುಬ್ಬರ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಎಲೆಕೋಸು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆಯಾ ಎಂದರೆ ಖಂಡಿತವಾಗಿಯೂ ಹೌದು ಎನ್ನಬಹುದು.

ಶಕ್ತಿ ನೀಡುವುದು...

ಶಕ್ತಿ ನೀಡುವುದು...

ಎಲೆಕೋಸಿನಲ್ಲಿ ಕಬ್ಬಿನಾಂಶವು ಇರುವ ಕಾರಣದಿಂದ ಇದು ದೇಹಕ್ಕೆ ಶಕ್ತಿಯನ್ನು ಒದಗಿಸುವುದು. ಇದು ರಕ್ತಸಂಚಾರ ಉತ್ತಮಪಡಿಸಿ ಚಯಾಪಚಾಯ ಕ್ರಿಯೆ ಉತ್ತಮಪಡಿಸುವುದು.

ಪ್ರತಿರೋಧಕ ಶಕ್ತಿ ಮರುಸ್ಥಾಪಿಸುವುದು

ಪ್ರತಿರೋಧಕ ಶಕ್ತಿ ಮರುಸ್ಥಾಪಿಸುವುದು

ವಿಟಮಿನ್ ಸಿಯಿಂದ ಸಮೃದ್ಧವಾಗಿರುವ ಎಲೆಕೋಸು ಪ್ರತಿರೋಧಕ ಶಕ್ತಿಯನ್ನು ವೃದ್ಧಿಸಿ ಹಲವಾರು ರೀತಿಯ ರೋಗಗಳು ಬರದಂತೆ ತಡೆಯಲು ನೆರವಾಗುವುದು.

ಮೂಳೆಗಳನ್ನು ಬಲಗೊಳಿಸುವುದು

ಮೂಳೆಗಳನ್ನು ಬಲಗೊಳಿಸುವುದು

ಎಲೆಕೋಸಿನ ಪ್ರಮುಖ ಆರೋಗ್ಯ ಲಾಭವೆಂದರೆ ಇದು ಮೂಳೆಗಳನ್ನು ಬಲಗೊಳಿಸುವುದು. ಇದರಲ್ಲಿರುವ ವಿಟಮಿನ್ ಕೆ ಮೂಲೆಗಳಿಗೆ ಬಲ ನೀಡುವುದು. ಇದು ಪ್ರೋಟೀನ್ ಅನ್ನು ಬಿಡುಗಡೆ ಮಾಡಿ ಮೂಳೆಗಳ ಖನಿಜಾಂಶಗಳನ್ನು ಕಾಪಾಡಿಕೊಳ್ಳುವುದು.

ಆರೋಗ್ಯಕರ ಕೋಸಿನ ಆಯ್ಕೆ ಹೇಗೆ?

ಆರೋಗ್ಯಕರ ಕೋಸಿನ ಆಯ್ಕೆ ಹೇಗೆ?

ಮಾರುಕಟ್ಟೆಯಲ್ಲಿ ಕೋಸಿನ ಹೊರಎಲೆಗಳನ್ನು ನಿವಾರಿಸಿ ಒಳಭಾಗದ ಎಳೆಯ ಭಾಗವನ್ನೇ ಇಡುತ್ತಾರೆ. ಕೋಸಿನ ಮೇಲ್ಭಾಗದ (ಅಂದರೆ ಕೆಳಗಿನ ಕಾಂಡದ ವಿರುದ್ಧ ಭಾಗ) ಮೇಲೆ ಬೆರಳಿನಿಂದ ಒತ್ತಿ. ಇದು ಕಲ್ಲಿನಂತೆ ಗಟ್ಟಿಯಾಗಿರಬೇಕು. ಇದು ಉತ್ತಮವಾದುದು. ಒಳಗಡೆ ಖಾಲಿ ಇದ್ದಂತೆ ಬೆರಳು ಒಳಗೆ ಒತ್ತಲು ಸಾಧ್ಯವಾದರೆ ಈ ಕೋಸು ಅಷ್ಟೊಂದು ಉತ್ತಮವಲ್ಲ.

English summary

Top Health Benefits Of Cabbage

Cabbages are known to have several health benefits. Eating cabbage will help reduce the risk of diabetes, obesity and even prevent heart diseases. Cabbages have been in use for several centuries to treat swelling and bruising of the skin. They are known for their anti-inflammatory properties that help to treat joint pain due to arthritis.
X
Desktop Bottom Promotion