ಮಲಬದ್ಧತೆ ಸಮಸ್ಯೆಗೆ 'ಆಲೀವ್ ಎಣ್ಣೆ'ಯೇ ದಿವ್ಯೌಷಧ

By: Jaya subramanya
Subscribe to Boldsky

ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ ದೈನಂದಿನ ಜೀವನದಲ್ಲಿ ನಾವು ತೆಗೆದುಕೊಳ್ಳುವ ಆಹಾರ ಆರೋಗ್ಯಕರವಾಗಿದ್ದರೆ ಯಾವುದೇ ರೋಗಗಳಿಂದ ನಾವು ರಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ. ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾದಲ್ಲಿ ಮಾತ್ರವೇ ದೇಹದ ಆರೋಗ್ಯ ವ್ಯವಸ್ಥೆ ಸುಲಲಿತವಾಗಿ ನಡೆಯುತ್ತದೆ. ಇದರ ಜೊತೆಗೆ ದೇಹಕ್ಕೆ ಬೇಡದೇ ಇರುವ ಅಂಶಗಳು ವಿಸರ್ಜನೆಯಾಗುವುದು ಕೂಡ ಮೂತ್ರ ರೂಪದಲ್ಲಿ ಮತ್ತು ಮಲದ ರೂಪದಲ್ಲಾಗಿದೆ.   ಮಲಬದ್ಧತೆಗೆ ಸಮಸ್ಯೆಗೆ ಮನೆಮದ್ದು-ಲೋಳೆಸರ

ಮಲವಿಸರ್ಜನೆಯು ನಿತ್ಯವೂ ಪ್ರಾತಃ ಕಾಲದಲ್ಲಿ ನಾವು ಪೂರೈಸಿಕೊಳ್ಳುವ ಕ್ರಿಯೆಯಾಗಿದೆ. ಆಹಾರ ಸೇವನೆಯ ಮುಂಚೆ ಈ ಕ್ರಿಯೆಯನ್ನು ನಡೆಸಿ ನಾವು ಶುದ್ಧರಾಗಬೇಕಾಗಿದೆ. ಆದರೆ ಮಲವಿಸರ್ಜನೆಯು ಕೆಲವೊಮ್ಮೆ ಸರಾಗವಾಗಿ ನಡೆದರೂ ಇನ್ನು ಕೆಲವೊಮ್ಮೆ ನೋವಿನ ಅನುಭವವನ್ನು ಉಂಟುಮಾಡುತ್ತದೆ. ಒಮ್ಮೊಮ್ಮೆ ಶೌಚಾಲಯದಲ್ಲಿ ಹೆಚ್ಚಿನ ಸಮಯವನ್ನು ಇದು ತೆಗೆದುಕೊಳ್ಳುವಂತೆ ಮಾಡುತ್ತದೆ.  ಮಲಬದ್ಧತೆ ಸಮಸ್ಯೆ ಬೆನ್ನು ಬಿಡದೆ ಕಾಡುತ್ತಿದೆಯೇ? ಕಾರಣ ತಿಳಿದುಕೊಳ್ಳಿ

ಹಾಗಿದ್ದರೆ ಈ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳಲಿದ್ದೇವೆ. ಇಂತಹ ನೋವಿನಿಂದ ಕೂಡಿದ ವಿಸರ್ಜನಾ ಪ್ರಕ್ರಿಯೆಗೆ ಆಲೀವ್ ಆಯಿಲ್ ಸೂಕ್ತವಾದುದು. ಈ ಎಣ್ಣೆಯನ್ನು ಇತರ ಸಾಮಾಗ್ರಿಗಳೊಂದಿಗೆ ಬಳಸಿ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಕಂಡುಕೊಳ್ಳೋಣ.....   


ಆಲೀವ್ ಆಯಿಲ್ ಮಸಾಜ್

ಆಲೀವ್ ಆಯಿಲ್ ಸೇವನೆ ನಿಮಗಿಷ್ಟವಿಲ್ಲ ಎಂದಾದಲ್ಲಿ, ಮಸಾಜ್ ರೂಪದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. 4-5 ಹನಿಗಳಷ್ಟು ಆಲೀವ್ ಆಯಿಲ್ ಅನ್ನು ತೆಗೆದುಕೊಂಡು ನಿಮ್ಮ ಹೊಕ್ಕುಳದ ಸುತ್ತ ಮಸಾಜ್ ಮಾಡಿ. ಮಲವಿಸರ್ಜನೆಯನ್ನು ಮಾಡುವ ಗಂಟೆಗೂ ಮುನ್ನ ನಿತ್ಯವೂ ಮಸಾಜ್ ಮಾಡಿ.

ಕಾಫಿಯೊಂದಿಗೆ ಆಲೀವ್ ಆಯಿಲ್!

ನಿಮಗೆ ಕಾಫಿ ಇಷ್ಟವೆಂದಾದಲ್ಲಿ, ನೀವು ಇದನ್ನು ಪ್ರಯತ್ನಿಸಬಹುದಾಗಿದೆ. ಒಂದು ಕಪ್‌ನಷ್ಟು ಕಾಫಿಗೆ ಚಮಚದಷ್ಟು ಆಲೀವ್ ಆಯಿಲ್ ಅನ್ನು ಬೆರೆಸಿ, ಮತ್ತು ಖಾಲಿ ಹೊಟ್ಟೆಗೆ ಸೇವಿಸಿ. ಇದು ಮಲವನ್ನು ಯಾವುದೇ ತೊಂದರೆಯಿಲ್ಲದೆ ಹೊರಹೋಗಲು ಅನುಮತಿಸುತ್ತದೆ.

ಬಾಳೆಹಣ್ಣಿನೊಂದಿಗೆ ಆಲೀವ್ ಆಯಿಲ್

ಬಾಳೆಹಣ್ಣಿನ ತುಂಡುಗಳೊಂದಿಗೆ ಒಂದು ಚಮಚದಷ್ಟು ಆಲೀವ್ ಆಯಿಲ್ ಅನ್ನು ಬೆರೆಸಿ. ಬಾಳೆಹಣ್ಣು ಸಾಕಷ್ಟು ಪೊಟಾಶಿಯಮ್ ಅನ್ನು ಒಳಗೊಂಡಿದ್ದು ಆಲೀವ್ ಎಣ್ಣೆಯೊಂದಿಗೆ ಇದನ್ನು ಸೇವಿಸುವುದು ಮಲಬದ್ಧತೆಯ ಸಮಸ್ಯೆಯನ್ನು ನಿಮ್ಮಿಂದ ದೂರವಾಗಿಸಲಿದೆ.

ಆಲೀವ್ ಆಯಿಲ್ ಕಿತ್ತಳೆ ಜ್ಯೂಸ್

ಒಂದು ಲೋಟದಷ್ಟು ಕಿತ್ತಳೆ ಜ್ಯೂಸ್‌ನೊಂದಿಗೆ ಒಂದು ಚಮಚದಷ್ಟು ಆಲೀವ್ ಆಯಿಲ್ ಅನ್ನು ಬೆರೆಸಿ ಮತ್ತು ಖಾಲಿಹೊಟ್ಟೆಗೆ ಇದನ್ನು ಸೇವಿಸಿ. ನಿತ್ಯವೂ ಇದರ ಸೇವನೆಯನ್ನು ಮಾಡಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.

ಆಲೀವ್ ಆಯಿಲ್ ಮತ್ತು ಲಿಂಬೆ

ಒಂದು ಚಮಚ ಆಲೀವ್ ಆಯಿಲ್‌ನೊಂದಿಗೆ ಅಷ್ಟೇ ಪ್ರಮಾಣದಲ್ಲಿ ಲಿಂಬೆ ರಸವನ್ನು ಬೆರೆಸಿ. ಬೆಳಗ್ಗೆ ಖಾಲಿ ಹೊಟ್ಟೆಗೆ ಇದರ ಸೇವನೆಯನ್ನು ಮಾಡಿ. ಕರುಳಿನ ವ್ಯೂಹದಲ್ಲಿರುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಲಿಂಬೆ ಸಹಕಾರಿಯಾಗಿದೆ.

ಮೊಸರು ಮತ್ತು ಆಲೀವ್ ಆಯಿಲ್

ನಿಮ್ಮ ದೇಹಕ್ಕೆ ಅತ್ಯಗತ್ಯವಾಗಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಯೋಗರ್ಟ್ ಪಡೆದುಕೊಂಡಿದೆ. ಮಲಬದ್ಧತೆಯನ್ನು ಚಿಕಿತ್ಸಿಸಲು, ಒಂದು ಕಪ್‌ನಷ್ಟು ಯೋಗರ್ಟ್‌ಗೆ ಆಲೀವ್ ಆಯಿಲ್ ಮಿಶ್ರ ಮಾಡಿ ಮತ್ತು ದಿನಕ್ಕೆ ಮೂರುಬಾರಿ ಸೇವಿಸಿ. ಈ ಸಮಸ್ಯೆ ಸಂಪೂರ್ಣ ಗುಣಮುಖವಾಗುವವರೆಗೆ ಇದನ್ನು ಸೇವಿಸಿ.

ಹಾಲು ಮತ್ತು ಆಲೀವ್ ಆಯಿಲ್

ಒಂದು ಗ್ಲಾಸ್‌ನಷ್ಟು ಹಾಲಿನೊಂದಿಗೆ ಆಲೀವ್ ಆಯಿಲ್ ಅನ್ನು ಬೆರೆಸಿಕೊಳ್ಳಿ. ಮತ್ತು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಇದನ್ನು ಸೇವಿಸಿ. ಉತ್ತಮ ಫಲಿತಾಂಶಕ್ಕಾಗಿ ರಾತ್ರಿ ಸಮಯದಲ್ಲೂ ಇದನ್ನು ಸೇವಿಸಿ.

ತರಕಾರಿಗಳು ಮತ್ತು ಆಲೀವ್ ಆಯಿಲ್

ಹಸಿರು ತರಕಾರಿಗಳಲ್ಲಿ ಫೈಬರ್ ಮತ್ತು ಮೆಗ್ನೇಶಿಯಮ್ ಅಂಶ ಅಧಿಕವಾಗಿರುತ್ತದೆ. ಅರೆಬೆಂದ ತರಕಾರಿಗೆ ಚಮಚದಷ್ಟು ಆಲೀವ್ ಎಣ್ಣೆಯನ್ನು ಪಸರಿಸಿ ಮತ್ತು ದಿನವೂ ಸೇವಿಸಿ.

ಅನಾನಸ್ ಮತ್ತು ಆಲೀವ್ ಆಯಿಲ್

ನೈಸರ್ಗಿಕ ಎಂಜೀಮ್‌ಗಳು ಅನಾನಸ್ ನಲ್ಲಿದ್ದು ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಪೈನಾಪಲ್ ತುಂಡಿಗೆ ಆಲೀವ್ ಎಣ್ಣೆಯನ್ನು ಹಾಕಿ ಮತ್ತು ಸೇವಿಸಿ. ಜೀರ್ಣಕ್ರಿಯೆ ವ್ಯವಸ್ಥೆಯನ್ನು ಇದು ಸರಾಗವಾಗಿಸುತ್ತದೆ.

ಎನೀಮಾ ಮತ್ತು ಆಲೀವ್ ಆಯಿಲ್

ಮಲಬದ್ಧತೆ ಸಮಸ್ಯೆಗೆ ಇದು ಕೊನೆಯ ಪರಿಹಾರ ಎಂದೆನಿಸಿದೆ. ವೈದ್ಯರುಗಳ ಸಲಹೆಯ ಮೇರೆಗೆ ಈ ಔಷಧದ ಪ್ರಯೋಗವನ್ನು ಮಾಡಬೇಕು. ಎನೀಮಾ ದ್ರಾವಣದಲ್ಲಿ ಆಲೀವ್ ಎಣ್ಣೆಯನ್ನು ಮಿಶ್ರ ಮಾಡಿ ಗುದನಾಳಕ್ಕೆ ಪಂಪ್ ಮಾಡಬೇಕು ಇದು ಕರುಳಿನ ಚಲನೆಗಳನ್ನು ಸುಸೂತ್ರಗೊಳಿಸಿ ಮಲವಿಸರ್ಜನೆಯನ್ನು ಸರಾಗವಾಗಿಸುತ್ತದೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Top 10 Methods To Use Olive Oil For Constipation

Constipation, though is not a life threatening condition, it is better to get rid of it as soon as possible. It generally occurs due to many factors like sudden changes in our diet plan, excessive intake of iron, lack of exercise and many more. Constipation is an indicator of an unclear bowel movement. It gives you a very uncomfortable day owing to the pain and uneasiness developed.
Please Wait while comments are loading...
Subscribe Newsletter