ಮನೆಮದ್ದು: ಹೊಟ್ಟೆಯ ಬೊಜ್ಜು ಕರಗಿಸುವ, ಅದ್ಭುತ ಜ್ಯೂಸ್

ಹೆಚ್ಚಿದ ಸ್ಥೂಲಕಾಯ ಮತ್ತು ಉಬ್ಬಿದ ಹೊಟ್ಟೆ ಇಂದು ಹೆಚ್ಚಿನ ಜನರಲ್ಲಿ ಕಂಡುಬರುತ್ತಿರುವ ಕಳವಳವಾಗಿದೆ. ಏನು ಮಾಡಿದರೂ ಹೊಟ್ಟೆ ಕಡಿಮೆಯಾಗುವುದಿಲ್ಲವಲ್ಲ ಎಂಬುದೇ ಹೆಚ್ಚಿನವರ ಕಾಳಜಿಯಾಗಿದೆ.

By: manu
Subscribe to Boldsky

ಕರಗಿಸಲು ಅತ್ಯಂತ ಕಷ್ಟವಾದ ಕೊಬ್ಬು ಎಂದರೆ ಸೊಂಟದ ಸುತ್ತ ತುಂಬಿರುವ ಕೊಬ್ಬು. ಪುರುಷರಿಗಿಂತ ಮಹಿಳೆಯರಲ್ಲಿ ಈ ಕೊಬ್ಬು ಹೆಚ್ಚಾಗಿದ್ದು ಸಹಜ ಸೌಂದರ್ಯವನ್ನೇ ಕಸಿದುಬಿಡುತ್ತದೆ. ಒಂದು ವೇಳೆ ನಿಮಗೂ ಈ ತೊಂದರೆ ಇದ್ದರೆ ಇನ್ನು ಮುಂದೆ ಬಿಗಿ ಟಾಪ್ ಧರಿಸದಿರಲು ನೆಪಗಳನ್ನು ಹುಡುಕಬೇಕಾಗಿಲ್ಲ.   ಬರೀ 15 ದಿನಗಳಲ್ಲಿಯೇ ಬೊಜ್ಜು ಕರಗಿಸುವ 'ಅದ್ಭುತ ಜ್ಯೂಸ್'

ಒಂದೇ ವಾರದಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸಬಲ್ಲ ವಿಧಾನವೊಂದನ್ನು ಅನುಸರಿಸಿದರೆ ಸಾಕು. ಇನ್ನು ಮೇಲೆ ಟಿವಿ, ವೀಡಿಯೋಗಳಲ್ಲಿ ಕಾಣುವ ತೆಳುಹೊಟ್ಟೆಯ ಲಲನೆಯರನ್ನು ಕಂಡು ಹೊಟ್ಟೆ ಉರಿಸಿಕೊಳ್ಳಬೇಕಾಗಿಲ್ಲ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಕೊಬ್ಬು ಕರಗಲು ಹೆಚ್ಚಿನ ದೈಹಿಕ ಶ್ರಮ ಅಗತ್ಯ. ಆದರೆ ಈ ವಿಧಾನದಲ್ಲಿ ಕೆಲವು ಆಹಾರಗಳನ್ನು ಸೇವಿಸಿ ಇದನ್ನು ಜೀರ್ಣಿಸಿಕೊಳ್ಳಲು ಹೊಟ್ಟೆಯ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ಖಾಲಿ ಮಾಡುವುದೇ ಇದರ ತಂತ್ರ. ಬನ್ನಿ, ಈ ವಿಧಾನ ಯಾವುದು ಎಂಬುದನ್ನು ನೋಡೋಣ...

ಹೊಟ್ಟೆ ಕರಗಿಸುವ ಜ್ಯೂಸ್ ರೆಸಿಪಿ

*ಅಗತ್ಯವಿರುವ ಸಾಮಾಗ್ರಿಗಳು:
*ಪಾರ್ಸ್ಲೆ ಎಲೆಗಳು: ಒಂದು ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಸೌತೆಕಾಯಿ: ಕೆಲವು ಬಿಲ್ಲೆಗಳು
*ಅನಾನಸ್: ಎರಡು ಬಿಲ್ಲೆಗಳು

ಹೊಟ್ಟೆ ಕರಗಿಸುವ ಜ್ಯೂಸ್ ರೆಸಿಪಿ

ಈ ಸಾಮಾಗ್ರಿಗಳನ್ನು ಬೆರೆಸಿ ನಿತ್ಯವೂ ಕುಡಿದ ಬಳಿಕ ಹೊಟ್ಟೆಯ ಕೊಬ್ಬು ಒಂದೇ ವಾರದಲ್ಲಿ ಸಾಕಷ್ಟು ಕಡಿಮೆಯಾಗಿರುವುದನ್ನು ಕಾಣಬಹುದು. ಒಂದು ವೇಳೆ ಈ ಜ್ಯೂಸ್ ಸೇವನೆಯ ಜೊತೆಗೇ ಆರೋಗ್ಯಕರ ಜೀವನಶೈಲಿ, ಕೊಂಚ ವ್ಯಾಯಾಮ, ಸಂತುಲಿತ ಆಹಾರಗಳನ್ನೂ ಸೇವಿಸಿದರೆ ಈ ಕೊಬ್ಬು ಇನ್ನಷ್ಟು ಹೆಚ್ಚು ಕರಗುತ್ತದೆ.

ಹೊಟ್ಟೆ ಕರಗಿಸುವ ಜ್ಯೂಸ್ ರೆಸಿಪಿ

ಈ ಮೂರೂ ಸಾಮಾಗ್ರಿಗಳಲ್ಲಿ ಅತ್ಯುತ್ತಮ ಪ್ರಮಾಣದ ಪೋಷಕಾಂಶಗಳೂ ಆಂಟಿ ಆಕ್ಸಿಡೆಂಟುಗಳೂ ಇದ್ದು ದೇಹಕ್ಕೆ ಅಗತ್ಯ ಪೋಷಣೆಯನ್ನು ನೀಡುವ ಜೊತೆಗೇ ಜೀವರಾಸಾಯನಿಕ ಕ್ರಿಯೆಯನ್ನೂ ಚುರುಕುಗೊಳಿಸುತ್ತದೆ. ಅದೂ ಕೆಲವೇ ದಿನಗಳಲ್ಲಿ.

ಹೊಟ್ಟೆ ಕರಗಿಸುವ ಜ್ಯೂಸ್ ರೆಸಿಪಿ

ಈ ಜ್ಯೂಸ್‌ನಲ್ಲಿ ದೇಹದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ಸೋಸಿ ವಿಸರ್ಜಿಸುವ ಕ್ಷಮತೆಯೂ ಇದೆ. ಇದರ ಮೂಲಕವೂ ದೇಹದ ತೂಕ ಕಡಿಮೆಯಾಗಲು ಸಹಕಾರ ಸಿಗುತ್ತದೆ. ವಿಶೇಷವಾಗಿ ಪಾರ್ಸ್ಲೆ ಎಲೆಗಳನ್ನು ಜೀರ್ಣಿಸಿಕೊಳ್ಳಲು ಹಾಗೂ ಸೊಂಟದ ಸುತ್ತ ತುಂಬಿರುವ ಕೊಬ್ಬನ್ನು ಬಳಸಲಾಗುವ ಕಾರಣ ಕಷ್ಟಕರ ಎನಿಸಿದ್ದ ಸೊಂಟದ ಕೊಬ್ಬು ಇಳಿಯಲು ಪ್ರಾರಂಭವಾಗುತ್ತದೆ. ಈ ಜ್ಯೂಸ್ ಅನ್ನು ಪ್ರತಿದಿನ ತಾಜಾರೂಪದಲ್ಲಿ ಮನೆಯಲ್ಲಿಯೇ ತಯಾರಿಸಿಕೊಂಡು ಕುಡಿಯುವ ಮೂಲಕ ಅತಿ ಹೆಚ್ಚಿನ ಪ್ರಯೋಜನ ಪಡೆಯಬಹುದು.   ಐದೇ ದಿನದಲ್ಲಿ ಬೊಜ್ಜು ನಿಯಂತ್ರಣಕ್ಕೆ! ಈ ಟಿಪ್ಸ್ ಪಾಲಿಸಿ

ಈ ಅದ್ಭುತ ಜ್ಯೂಸ್ ತಯಾರಿಸುವ ಮತ್ತು ಸೇವನೆಯ ಬಗೆ

*ಮೇಲೆ ತಿಳಿಸಿದ ಮೂರೂ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಕೊಂಚ ನೀರಿನೊಂದಿಗೆ ಚೆನ್ನಾಗಿ ಗೊಟಾಯಿಸಿ
*ಈ ದ್ರವವನ್ನು ಸೋಸದೇ ಒಂದು ದೊಡ್ಡ ಲೋಟದಲ್ಲಿ ಸಂಗ್ರಹಿಸಿ

ಈ ಅದ್ಭುತ ಜ್ಯೂಸ್ ತಯಾರಿಸುವ ಮತ್ತು ಸೇವನೆಯ ಬಗೆ

* ಇನ್ನು ಈ ಜ್ಯೂಸ್ ಅನ್ನು ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಕುಡಿಯಿರಿ.
*ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ. ಈ ಸಮಯದಲ್ಲಿ ಸಾಕಷ್ಟು ನಡೆದಾಡಿ.
*ದಿನದ ಇತರ ಆಹಾರಗಳಲ್ಲಿ ಹೆಚ್ಚಿನ ನಾರಿನಂಶ ಇರುವಂತೆ ನೋಡಿಕೊಳ್ಳಿ.  ಐದೇ ದಿನದಲ್ಲಿ ಬೊಜ್ಜು ನಿಯಂತ್ರಣಕ್ಕೆ! ಈ ಟಿಪ್ಸ್ ಪಾಲಿಸಿ

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Monday, October 17, 2016, 10:13 [IST]
English summary

This Simple Homemade Juice Can Reduce Belly Fat In A Week!

Do you feel embarrassed to wear cute crop tops because of your belly fat issues? If yes, then worry not! There is a natural remedy that can help you reduce belly fat in about a week! When you look at pictures or videos of celebrities, you notice that most of them have toned, flat tummies, which makes them look attractive and fit in any outfit they wear! Naturally, most of us would yearn to have a flat, toned stomach, especially if you are someone who likes to wear trendy clothes, or even sarees, right?
Please Wait while comments are loading...
Subscribe Newsletter