ಮುಟ್ಟಿನ ನೋವಿಗೆ ಸಾಂತ್ವನ ನೀಡುವ ನುಗ್ಗೆ ಸೊಪ್ಪಿನ ಜ್ಯೂಸ್

ಛೇ! ನಾನು ಹೆಣ್ಣಾಗಿ ಹುಟ್ಟಿದ್ದೆ ತಪ್ಪು. ಇಂತಹ ನೋವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ಈ ಯಾತನೆ ಯಾರಿಗೂ ಬರದಿರಲಿ ದೇವರೇ ಎಂದು ಮುಟ್ಟಿನ ಅವಧಿಯಲ್ಲಿ ಮಹಿಳೆಯರು ತಮ್ಮ ನೋವನ್ನು ಹೇಳಿಕೊಳ್ಳುವುದುಂಟು...

By: manu
Subscribe to Boldsky

ಹುಡುಗಿಯರು ಸಾಧಾರಣವಾಗಿ 12-13 ವರ್ಷದವರಾದಾಗ ಅವರ ದೇಹದಲ್ಲಿ ಪ್ರಕೃತಿದತ್ತವಾಗಿ ಬದಲಾವಣೆಗಳು ಆಗುವುದು ಸಹಜ. ತಿಂಗಳ ಮುಟ್ಟು ಕೂಡ ಇದರಲ್ಲಿ ಒಂದಾಗಿದೆ. ತಿಂಗಳ ಮುಟ್ಟು ಕೆಲವರಲ್ಲಿ ಯಾವುದೇ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ. ಆದರೆ ಇನ್ನು ಕೆಲವರಿಗೆ ಇದು ತುಂಬಾ ಅಸಹನೀಯವಾಗಿರುತ್ತದೆ. 

Drumstick leaves
 

ತಿಂಗಳ ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ನೋವನ್ನು ಸಹಿಸಲು ಅಸಾಧ್ಯವಾಗಿರುತ್ತದೆ. ಇದರಿಂದಾಗಿ ತಿಂಗಳ ಮುಟ್ಟಿನ ವೇಳೆ ಕೆಲವು ಹುಡುಗಿಯರು ಖಿನ್ನತೆಗೆ ಒಳಗಾಗುತ್ತಾರೆ. ಊತ-ಸ್ನಾಯು ಸೆಳೆತಕ್ಕೆ, ಹಿಡಿಯಷ್ಟು 'ನುಗ್ಗೆ ಸೊಪ್ಪು' ಸಾಕು!  

Drumstick leaves
 

ಒಂದು ವೇಳೆ ತಿಂಗಳ ಮುಟ್ಟಿನ ವೇಳೆ ಅತಿಯಾದ ನೋವನ್ನು ಅನುಭವಿಸುವವರು ಮನೆಮದ್ದನ್ನು ಉಪಯೋಗಿಸಬೇಕೆಂದು ಬಯಸುವುದಾದರೆ ನುಗ್ಗೆ ಕಾಯಿ ಮರದ ಎಲೆಗಳಿಂದ ಮಾಡಿದ ಜ್ಯೂಸ್ ಅನ್ನು ಕುಡಿಯಬೇಕು. ನುಗ್ಗೆ ಕಾಯಿ ಮರದ ಎಲೆಗಳ ಅಥವಾ ನುಗ್ಗೆ ಸೊಪ್ಪಿನ ಜ್ಯೂಸ್ ಅನ್ನು ಕುಡಿಯುವುದರಿಂದ ದೇಹದಲ್ಲಿ ಕಬ್ಬಿನಾಂಶವು ಹೆಚ್ಚಾಗುತ್ತದೆ. ಇದು ದೇಹಕ್ಕೆ ಪೋಷಕಾಂಶವನ್ನು ನೀಡಿ ದೇಹದಲ್ಲಿ ರಕ್ತವು ಸರಿಯಾಗಿ ಸರಬರಾಜು ಆಗಲು ನೆರವಾಗುತ್ತದೆ. ಇದರಿಂದ ನೋವು ಕಡಿಮೆಯಾಗುವುದು. ಮುಟ್ಟಿನ ನೋವು, ಎಂಬ ಮಹಿಳೆಯರ ಕೊರಗು....  

Drumstick leaves
 

ನುಗ್ಗೆ ಸೊಪ್ಪಿನ ಜ್ಯೂಸ್ ಮಾಡಿಕೊಳ್ಳುವುದು ಹೇಗೆ?
1. ನುಗ್ಗೆ ಸೊಪ್ಪಿನ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಸರಿಯಾಗಿ ತೊಳೆಯಿರಿ.
2. ಎಲೆಗಳನ್ನು ರುಬ್ಬಿಕೊಂಡು ಅದರ ಜ್ಯೂಸ್ ತೆಗೆಯಿರಿ.
3. ಜ್ಯೂಸ್ ಅನ್ನು ಗಾಳಿಸಿಕೊಂಡು ¼ ಕಪ್ ಜ್ಯೂಸ್‌ಗೆ ಒಂದು ಚಮಚ ಜೇನುತುಪ್ಪ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

Drumstick leaves juice

4.ತಿಂಗಳ ಮುಟ್ಟಿನ ಮೊದಲ ಎರಡು ದಿನ ಈ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ.
5. ತಿಂಗಳ ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ನೋವು ಇದರಿಂದ ಕಡಿಮೆಯಾಗುವುದು.

ಎಚ್ಚರಿಕೆ:

Drumstick leaves

ತಿಂಗಳ ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ನೋವನ್ನು ಕಡಿಮೆ ಮಾಡುವಲ್ಲಿ ನುಗ್ಗೆಕಾಯಿ ಎಲೆ ಜ್ಯೂಸ್ ತುಂಬಾ ಪರಿಣಾಮಕಾರಿ. ಆದರೆ ಎಚ್ಚರಿಕೆ ತುಂಬಾ ಅಗತ್ಯ. ನೋವು ತುಂಬಾ ಅಧಿಕವಾಗಿದ್ದರೆ ಮತ್ತು ಅದು ಬಿಡದೆ ನಿಮ್ಮನ್ನು ಕಾಡುತ್ತಾ ಇದ್ದರೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

This One Natural Remedy Helps Ease Menstrual Pain!

Drumstick leaves juice is one of the best natural ingredients that helps to build up the iron content in the body and replenish the body with nutrients. This helps in regulating the proper blood flow and thus eases the pain.
Please Wait while comments are loading...
Subscribe Newsletter