For Quick Alerts
ALLOW NOTIFICATIONS  
For Daily Alerts

ಡೊಳ್ಳು ಹೊಟ್ಟೆ ಕರಗಿಸಲು-ಬಾಳೆ ಹಣ್ಣು+ಶುಂಠಿ ಸಾಕು!

ಹೊಟ್ಟೆಯ ಕೊಬ್ಬನ್ನು ಕರಗಿಸಿ ಹೊಟ್ಟೆಯನ್ನು ಮತ್ತೆ ಸಪಾಟಾಗಿಸಲು ನಿಸರ್ಗ ಎರಡು ಸಾಮಾಗ್ರಿಗಳನ್ನು ನೀಡಿದೆ. ಇವೇ ಬಾಳೆಹಣ್ಣು ಮತ್ತು ಶುಂಠಿ.....ಮಾಹಿತಿಗಾಗಿ ಮುಂದೆ ಓದಿ

By Manu
|

ಸ್ಥೂಲಕಾಯದ ನೇರ ಪರಿಣಾಮವನ್ನು ಡೊಳ್ಳು ಹೊಟ್ಟೆ ನೇರವಾಗಿ ಪ್ರಕಟಿಸುತ್ತದೆ. ದೇಹ ದಪ್ಪನಾಗಿರದಿದ್ದರೂ ಹೊಟ್ಟೆ ಮುಂದೆ ಬರುವುದು ಸಹಜ ಮೈಕಟ್ಟಿನ ಸೌಂದರ್ಯವನ್ನೇ ಕೆಡಿಸುತ್ತದೆ. ಮುಂದೆ ಬಂದ ಹೊಟ್ಟೆಯನ್ನುಕರಗಿಸಲು ನೀವು ಈಗಾಗಲೇ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರು ಸೂಚಿಸಿದ ಹಲವು ಕ್ರಮಗಳನ್ನು ಅನುಸರಿಸಿದ್ದು ಇದುವರೆಗೆ ಯಾವುದೂ ಫಲ ನೀಡಲಿಲ್ಲವೇ?

ಮುಂದೆ ಬಂದ ಹೊಟ್ಟೆಯ ಕೊಬ್ಬನ್ನು ಕರಗಿಸಿ ಹೊಟ್ಟೆಯನ್ನು ಮತ್ತೆ ಸಪಾಟಾಗಿಸಲು ನಿಸರ್ಗ ಎರಡು ಸಾಮಾಗ್ರಿಗಳನ್ನು ನೀಡಿದೆ. ಇವೇ ಬಾಳೆಹಣ್ಣು ಮತ್ತು ಶುಂಠಿ. ಇವುಗಳ ಸರಿಯಾದ ಬಳಕೆಯಿಂದ ನಿಮ್ಮನ್ನು ಅವಹೇಳನ ಮಾಡುತ್ತಿದ್ದವರಿಗೆ ಸರಿಯಾಗಿ ಬುದ್ಧಿ ಕಲಿಸಲು ಇವುಗಳ ಸಹಾಯ ಪಡೆಯುವುದೇ ಉತ್ತಮ. ದಿನಕ್ಕೊಂದು ಗ್ಲಾಸ್ ಬಾಳೆಹಣ್ಣಿನ ಜ್ಯೂಸ್ ಕುಡಿದರೆ-ಹತ್ತಾರು ಲಾಭ!

ಬಾಳೆಹಣ್ಣು ಮತ್ತು ಶುಂಠಿಯನ್ನು ಕಡೆದು ಸ್ಮೂಥಿಯ ರೂಪದಲ್ಲಿ ಸೇವಿಸುವ ಮೂಲಕ ಹೊಟ್ಟೆಯ ಕೊಬ್ಬನ್ನು ಸಮರ್ಥವಾಗಿ ಕರಗಿಸಬಹುದು. ಇದರೊಂದಿಗೆ ಕೊಂಚ ಅಗಸೆ ಬೀಜ ಮತ್ತು ಪಾಲಕ್ ಅಥವಾ ಬಸಲೆ ಸೊಪ್ಪಿನ ನೆರವೂ ಬೇಕು. ಒಟ್ಟಾರೆ ಈ ನಾಲ್ಕೂ ಸಾಮಾಗ್ರಿಗಳನ್ನು ಒಳಗೊಂಡ ಸ್ಮೂಥಿ ನಿಮ್ಮ ಹೊಟ್ಟೆಯನ್ನು ಕರಗಿಸುವ ಹೊಣೆಯನ್ನು ಹೊತ್ತುಕೊಳ್ಳುತ್ತವೆ....

ಈ ಸ್ಮೂಥಿ ತಯಾರಿಸುವ ವಿಧಾನ

ಈ ಸ್ಮೂಥಿ ತಯಾರಿಸುವ ವಿಧಾನ

1. ಒಂದು ಚೆನ್ನಾಗಿ ಕಳಿತ (ಸಿಪ್ಪೆಯಲ್ಲಿ ಚುಕ್ಕೆ ಬಿದ್ದಿರುವ) ಬಾಳೆಹಣ್ಣಿನ ತಿರುಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ

ಈ ಸ್ಮೂಥಿ ತಯಾರಿಸುವ ವಿಧಾನ

ಈ ಸ್ಮೂಥಿ ತಯಾರಿಸುವ ವಿಧಾನ

2. ಸುಮಾರು ಒಂದಿಂಚಿನಷ್ಟು ದೊಡ್ಡ ಹಸಿಶುಂಠಿಯನ್ನು ಸಿಪ್ಪೆ ಸುಲಿದು ಚಿಕ್ಕದಾಗಿ ಹೆಚ್ಚಿ. ಅಂದರೆ ಹೆಚ್ಚಿದ ಬಳಿಕ ಇದು ಒಂದು ದೊಡ್ಡ ಚಮಚಕ್ಕೆ ಕಡಿಮೆ ಇರಬಾರದು. ಇದನ್ನೂ ಬ್ಲೆಂಡರಿಗೆ ಸೇರಿಸಿ.

ಈ ಸ್ಮೂಥಿ ತಯಾರಿಸುವ ವಿಧಾನ

ಈ ಸ್ಮೂಥಿ ತಯಾರಿಸುವ ವಿಧಾನ

3. ಎರಡು ದೊಡ್ಡ ಚಮಚದಷ್ಟು ಅಗಸೆ ಬೀಜಗಳನ್ನು ಹಾಕಿ. ಅಗಸೆ ಬೀಜದಲ್ಲಿ ಉರಿಯೂತ ನಿವಾರಕ ಗುಣ ಮತ್ತು ಆಂಟಿ ಆಕ್ಸಿಡೆಂಟು ಗುಣ ಆರೋಗ್ಯ ವೃದ್ದಿಸುವುದಲ್ಲದೇ ಕೊಬ್ಬನ್ನೂ ಕರಗಿಸುತ್ತದೆ. ಅಗಸೆ ಬೀಜದ ಆರೋಗ್ಯಕರ ಲಾಭಗಳು

ಈ ಸ್ಮೂಥಿ ತಯಾರಿಸುವ ವಿಧಾನ

ಈ ಸ್ಮೂಥಿ ತಯಾರಿಸುವ ವಿಧಾನ

4. ಸುಮಾರು ಒಂದು ದೊಡ್ಡ ಚಮಚದಷ್ಟು ಚಿಕ್ಕದಾಗಿ ತುರಿದ ಬಸಲೆ ಅಥವಾ ಪಾಲಕ್ ಸೊಪ್ಪುಗಳನ್ನು ಸೇರಿಸಿ.

ಈ ಸ್ಮೂಥಿ ತಯಾರಿಸುವ ವಿಧಾನ

ಈ ಸ್ಮೂಥಿ ತಯಾರಿಸುವ ವಿಧಾನ

5. ಎಲ್ಲವನ್ನೂ ಚೆನ್ನಾಗಿ ಮಿಕ್ಸಿಯಲ್ಲಿ ಗೊಟಾಯಿಸಿ. ನಿಮಗೆ ಸೂಕ್ತವೆನಿಸುವಷ್ಟು ನೀರನ್ನು ಬೆರೆಸಬಹುದು.

ಈ ಸ್ಮೂಥಿ ತಯಾರಿಸುವ ವಿಧಾನ

ಈ ಸ್ಮೂಥಿ ತಯಾರಿಸುವ ವಿಧಾನ

ಈ ಸ್ಮೂಥಿಯನ್ನು ನಿಮ್ಮ ನಿತ್ಯದ ಬೆಳಗ್ಗಿನ ಉಪಾಹಾರದ ಬದಲು ನಿತ್ಯವೂ ಸೇವಿಸಿ. ಸುಮಾರು ಎರಡು ವಾರಗಳಲ್ಲಿ ನಿಮ್ಮ ಹೊಟ್ಟೆ ಸಾಕಷ್ಟು ಸಪಾಟಾಗಿರುವುದನ್ನು ಗಮನಿಸಬಹುದು.

English summary

how banana ginger smoothie help burn stomach fat

Several natural ways known to get rid of belly fat, there are these two natural ingredients - banana and ginger when consumed in the form ofa smoothie is known to burn stomach fat very efficiently. In order to prepare the smoothie all that one needs is one ripe banana, grated ginger, flaxseed powder and spinach. Have these four ingredients in hand and half of your work is done.
X
Desktop Bottom Promotion