For Quick Alerts
ALLOW NOTIFICATIONS  
For Daily Alerts

ಬರೀ ಎರಡೇ ಎರಡು ವಾರದಲ್ಲಿ ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ!

ಇಂದಿನ ದಿನಗಳಲ್ಲಿ 30 ಹರೆಯದ ಬಳಿಕ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಕೊಲೆಸ್ಟ್ರಾಲ್ ಉತ್ಪತ್ತಿಯಾಗುತ್ತಿದ್ದು, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ. ಅಲ್ಲದೆ ಇದರಿಂದಾಗಿ ಅನೇಕ ರೀತಿ ಕಾಯಿಲೆಗಳೂ ಹುಟ್ಟಿಕೊಳ್ಳುತ್ತಿವೆ....

By manu
|

ಆರೋಗ್ಯದ ಬಗ್ಗೆ ತುಂಬಾ ನಿಗಾ ವಹಿಸುವಂತಹ ಇಂದಿನ ದಿನಗಳಲ್ಲಿ ದೇಹದಲ್ಲಿ ಉತ್ಪತ್ತಿಯಾಗುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತದೆ. ಇಂದಿನ ದಿನಗಳಲ್ಲಿ ಕೊಲೆಸ್ಟ್ರಾಲ್‌ನಿಂದ ಆಗುವಂತಹ ಆರೋಗ್ಯ ಸಮಸ್ಯೆಗಳೇ ಇದಕ್ಕೆ ಕಾರಣವಾಗಿದೆ. ಮೌನ ಕೊಲೆಗಾರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಸೂತ್ರ

Cholesterol

ಕೊಲೆಸ್ಟ್ರಾಲ್‌ನಿಂದಾಗಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅದರಲ್ಲೂ ಕೊಲೆಸ್ಟ್ರಾಲ್ ನಿಂದ ಹೃದಯಸಂಬಂಧಿ ಕಾಯಿಲೆಗಳು ಬೇಗನೆ ದೇಹವನ್ನು ಕಾಡುತ್ತದೆ. ಕೊಲೆಸ್ಟ್ರಾಲ್ ಉತ್ಪತ್ತಿಯಾಗುವುದು ನಮ್ಮ ದೇಹದಲ್ಲಿಯೇ. ಇದು ಜೀರ್ಣ ಕ್ರಿಯೆಗೆ ಬೇಕಾಗುವ ಪಿತ್ತರಸ ಆಮ್ಲವನ್ನು ಉತ್ಪಾದಿಸಿ, ಕೋಶಗಳು ವಿಟಮಿನ್ ಡಿಯನ್ನು ಹೀರಿಕೊಳ್ಳಲು ಮತ್ತು ಕೆಲವೊಂದು ಹಾರ್ಮೋನುಗಳು ದೇಹದಲ್ಲಿ ಬಿಡುಗಡೆಯಾಗಲು ಇದು ಉತ್ತೇಜಿಸುತ್ತದೆ.

ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಕೊಲೆಸ್ಟ್ರಾಲ್ ದೇಹದಲ್ಲಿ ಇದ್ದರೆ ಆಗ ಆರೋಗ್ಯ ಸಮಸ್ಯೆಗಳು ಕಾಡುವುದು ಖಚಿತ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದಾಗ ಅಪಧಮನಿಗಳಲ್ಲಿ ಅದು ಶೇಖರಣೆಗೊಂಡು ರಕ್ತನಾಳಗಳಲ್ಲಿ ರಕ್ತಸಂಚಾರವಾಗದಂತೆ ಮಾಡುತ್ತದೆ. ನಿಮ್ಮೊಳಗಿನ ಶತ್ರು ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುವುದು ಹೇಗೆ?

ಇದರಿಂದ ದೇಹದ ಇತರ ಅಂಗಾಂಗಗಳಿಗೆ ರಕ್ತ ಸರಬರಾಜು ಆಗುವುದಿಲ್ಲ. ರಕ್ತನಾಳದಲ್ಲಿ ರಕ್ತ ತಡೆಯಲ್ಪಟ್ಟರೆ ಆಗ ಹೃದಯಕಾಯಿಲೆಗಳು ಹಾಗೂ ಕ್ಯಾನ್ಸರ್ ಕೂಡ ಕಾಣಿಸಿಕೊಳ್ಳಬಹುದು. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂದು ನೀವು ಬಯಸುತ್ತಿರುವುದಾದರೆ ಕೆಲವೊಂದು ಮನೆಮದ್ದನ್ನು ಬಳಸಬಹುದು.

ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು
*ಬೆಳ್ಳುಳ್ಳಿ 4-5 ಎಸಲು
*ಶುಂಠಿ ಒಂದು ಚಮಚ
*ಲಿಂಬೆರಸ ಎರಡು ಚಮಚ ಖಳನಾಯಕ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಿಂಪಲ್ ಮನೆಮದ್ದು

ತಯಾರಿಸುವ ಹಾಗೂ ಬಳಸುವ ವಿಧಾನ
*ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಒಂದು ಮಿಕ್ಸಿಗೆ ಹಾಕಿಕೊಳ್ಳಿ.
*ಇದನ್ನು ಸರಿಯಾಗಿ ರುಬ್ಬಿಕೊಂಡು ಜ್ಯೂಸ್ ಮಾಡಿಕೊಳ್ಳಿ.
*ಇನ್ನು ಜ್ಯೂಸ್ ಅನ್ನು ಗಾಳಿಸಿಕೊಂಡು ನೀರನ್ನು ಉಳಿಸಿ.


*ಈಗ ಆರೋಗ್ಯಕರ ಪಾನೀಯವನ್ನು ಕುಡಿಯಬಹುದು.
*ಪ್ರತೀ ದಿನ ಬೆಳಗ್ಗೆ ಉಪಹಾರಕ್ಕೆ ಮೂರು ಗಂಟೆ ಮೊದಲು ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಕುಡಿಯಬಹುದು.
ಈ ಮನೆಮದ್ದನ್ನು ಪ್ರಯತ್ನಿಸಿ ಕೊಲೆಸ್ಟ್ರಾಲ್ ಕಡಿಮೆ ಮಾಡಿ. ಮಾರಕ ಕೊಲೆಸ್ಟ್ರಾಲ್ ಬಗ್ಗೆ ಇರುವ ಅಚ್ಚರಿಯ ಸಂಗತಿಗಳು
English summary

This Home Remedy Can Reduce Cholesterol In 2 Weeks!

Many of us would already be aware of the various health risks of having high cholesterol levels in the body, right? Well, if your cholesterol levels are high, this natural remedy to reduce cholesterol can be of great help! So, if you are looking for a natural remedy to help you reduce the high cholesterol levels in your body, learn how to make this home remedy!
Story first published: Monday, October 17, 2016, 13:28 [IST]
X
Desktop Bottom Promotion