ನೆನಪಿರಲಿ- ಹೋಟೆಲ್‌ ಊಟ ಕೆಡುವುದು ಆರೋಗ್ಯ!

ಹೋಟೆಲ್‌ನ ಊಟ ಎಷ್ಟೇ ಸುಂದರವಾಗಿರಲಿ, ಆದರೆ ಇದು ಆರೋಗ್ಯಕರವಾಗಿರಬೇಕು ಎಂದೇನೂ ಇಲ್ಲ. ಆಹಾರ ತಯಾರಿಸುವ ಸ್ಥಳದ ಸ್ವಚ್ಛತೆ ಹೇಗಿರುತ್ತದೆ ಎಂದು ನಾವೆಂದೂ ಹೋಗಿ ನೋಡಿಲ್ಲ. ಹಾಗಾಗಿ ಕೆಲವು ಆಹಾರಗಳನ್ನು ಆರ್ಡರ್ ಮಾಡದಿರುವುದೇ ವಾಸಿ....

By: Arshad
Subscribe to Boldsky

ಜಗತ್ತಿನಲ್ಲಿ ಅತ್ಯಂತ ಆರೋಗ್ಯಕರ ಊಟ ಎಂದಿದ್ದರೆ ಅದು ಅಮ್ಮನ ಅಡುಗೆ ಮಾತ್ರ. ಇದಕ್ಕೆ ಯಾವುದೇ ಪಂಚತಾರಾ ಹೋಟೆಲಿನ ಊಟವೂ ಸಮನಲ್ಲ, ಎಷ್ಟೇ ದುಬಾರಿಯಾಗಿದ್ದರೂ ಸಹಾ. ಆದರೆ ಎಲ್ಲರಿಗೂ ಮನೆಯ ಊಟ ಮಾಡುವ ಭಾಗ್ಯ ಇರುವುದಿಲ್ಲ. ಆಗ ಹೋಟೆಲೇ ಗತಿಯಾಗುತ್ತದೆ.   ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!

ಇಂದು ಹೋಟೆಲುಗಳು ಸಹಾ ಅಪ್ಪಟ ವ್ಯಾಪಾರಿ ಕೇಂದ್ರಗಳಾಗುತ್ತಿವೆ. ಯಾವಾಗ ದೊಡ್ಡ ದೊಡ್ಡ ಸಂಸ್ಥೆಗಳೂ ಆಹಾರ ಕ್ಷೇತ್ರಕ್ಕೆ ಇಳಿದವೋ. ಆಗ ಆಹಾರದ ವೈಭವೀಕರಣವೂ ವ್ಯಾಪಕಗೊಂಡಿದೆ. ಇಂದು ಅಬ್ಬರದ ಪ್ರಚಾರದ ದುಬಾರಿ ಊಟ ಅಥವಾ ಖಾದ್ಯಗಳ ರುಚಿಯನ್ನು ನೋಡದಿದ್ದವರೇ ಅನಾಗರಿಕರು ಎಂಬ ಭಾವನೆ ನಮ್ಮ ನಗರದ ಜನರಲ್ಲಿ ಮೂಡಿಬಿಟ್ಟಿದೆ. ಕೆಲವರು ಸಮಯಬಾಹುಳ್ಯದಿಂದ ಹೋಟೆಲಿನ ಊಟವನ್ನು ಮಾಡಿದರೆ ಉಳಿದವರು ಪ್ರತಿಷ್ಠೆಯನ್ನು ಮೆರೆಯಲೆಂದೇ ದುಬಾರಿ ಊಟ ತರಿಸುತ್ತಾರೆ.    ಹೋಟೆಲ್ ಊಟ ಆರೋಗ್ಯಕ್ಕೆ ಮಾರಕ ಹೇಗೆ?

ಊಟ ಎಷ್ಟೇ ಸುಂದರವಾಗಿರಲಿ, ಆದರೆ ಇದು ಆರೋಗ್ಯಕರವಾಗಿರಬೇಕು ಎಂದೇನೂ ಇಲ್ಲ. ಆಹಾರ ತಯಾರಿಸುವ ಸ್ಥಳದ ಸ್ವಚ್ಛತೆ ಹೇಗಿರುತ್ತದೆ ಎಂದು ನಾವೆಂದೂ ಹೋಗಿ ನೋಡಿಲ್ಲ. ಹುಬ್ಬಳ್ಳಿಯ ಬಲು ಪ್ರಖ್ಯಾತ ಹೋಟೆಲಿನಲ್ಲಿ ಆರ್ಡರ್ ಮಾಡಿದ ತಿಂಡಿಯಲ್ಲಿ ಜಿರಲೆ ಸಿಕ್ಕಿದ್ದನ್ನು ಅಧಿಕಾರಿಗಳಿಗೆ ತಿಳಿಸಿದ ಗ್ರಾಹಕರೊಬ್ಬರ ದೂರನ್ನು ಅನುಸರಿಸಿ ಆ ಹೋಟೆಲಿಗೆ ಹೋಗಿ ತಪಾಸಣೆ ಮಾಡಿದಾಗ ಕಂಡು ಬಂದದ್ದೆಂದರೆ ಅಪಾರ ಸಂಖ್ಯೆಯ ಜಿರಲೆ, ಇರುವೆ, ಸೊಳ್ಳೆಗಳು. ತಕ್ಷಣವೇ ಹೋಟೆಲನ್ನು ಬಂದ್ ಮಾಡಿಸಲಾಗಿದೆ. ಆಹಾರಗಳನ್ನು ಫ್ರಿಜ್ಜಿನಲ್ಲಿ ಇಟ್ಟ ಮಾತ್ರಕ್ಕೆ ಅದು ಸುರಕ್ಷಿತವೇ?

ಅಲ್ಲದೇ ಲಾಭವನ್ನೇ ಮುಖ್ಯ ಗುರಿಯಾಗಿಸಿಕೊಂಡಿರುವ ಹೋಟೆಲುಗಳು ಖಾದ್ಯಗಳನ್ನು ತಯಾರಿಸಲು ಬಳಸುವ ಸಾಮಾಗ್ರಿಗಳನ್ನೂ ಉತ್ತಮ ಗುಣಮಟ್ಟದ್ದನ್ನೇ ಬಳಸುತ್ತಾರೆ ಎಂದು ಖಡಾಖಂಡಿತವಾಗಿ ಹೇಳುವಂತಿಲ್ಲ. ಆದರೂ ಕೆಲವು ಆಹಾರಗಳನ್ನು ಯಾವುದೇ ಹೋಟೆಲಾದರೂ ಆರ್ಡರ್ ಮಾಡದಿರುವುದೇ ವಾಸಿ. ಬನ್ನಿ, ಈ ಆಹಾರಗಳು ಯಾವುವು ಎಂಬುದನ್ನು ನೋಡೋಣ.....  

ಮೀನು

ಮೀನು ಎಲ್ಲರಿಗೂ ತಿನ್ನಲು ಇಷ್ಟವಾದರೂ ಇದನ್ನು ಸ್ವಚ್ಛಗೊಳಿಸಲು ಮಾತ್ರ ಯಾರೂ ಮುಂದೆ ಬರುವುದಿಲ್ಲ. ಹೋಟೆಲಿನಲ್ಲಿ ಹೆಚ್ಚಿನ ಪ್ರಮಾಣದ ಮೀನು ತಯಾರಿಸುತ್ತಾರೆ ಆದರೆ ಇದನ್ನು ಸ್ವಚ್ಛಗೊಳಿಸುವವರು ಪೂರ್ಣ ಪ್ರಮಾಣದ ನ್ಯಾಯ ಒದಗಿಸುತ್ತಾರೆ ಎಂದು ನಂಬಲು ಸಾಧ್ಯವಿಲ್ಲ.   ಮೀನು ಪ್ರಿಯರಿಗಾಗಿ 8 ಬಗೆಯ ಮೀನಿನ ರೆಸಿಪಿ

ಮೀನು

ಕೆಲವೊಮ್ಮೆ ಲಗುಬಗೆಯಲ್ಲಿ ಕತ್ತರಿಸುವ ಮೇಳೆ ಕೆಲವು ಮೂಳೆ, ಮುಳ್ಳುಗಳ ಚೂರುಗಳು ನಡುವಲ್ಲಿ ಉಳಿದು ತಿನ್ನುವವರ ಗಂಟಲಿಗೆ ಸಿಕ್ಕಿಕೊಳ್ಳುವ ಅಪಾಯವಿರುತ್ತದೆ. ಅಲ್ಲದೇ ತಾಜಾ ಮೀನನ್ನೇ ಇವರು ಖರೀದಿಸುತ್ತಾರೆ ಎಂಬ ಬಗ್ಗೆ ಯಾವುದೇ ಪುರಾವೆ ಇಲ್ಲ. ಎಲ್ಲರೂ ಖರೀದಿಸಿ ಬಿಟ್ಟ ಅಥವಾ ಶೀತಲೀಕರಿಸಿದ ಮೀನನ್ನೇ ಹೋಟೆಲುಗಳಲ್ಲಿ ನೀಡಲಾಗುತ್ತದೆ. ಇವು ಕೆಲವೊಮ್ಮೆ ವಿಷಕಾರಿಯೂ ಆಗಿರಬಹುದು.

ಗೋಬಿ ಮಂಚೂರಿ

ರಸ್ತೆಬದಿಯಲ್ಲಿ ಸಿಗುವ ಆಹಾರಗಳು ಅಗ್ಗವಾದರೂ ಅನಾರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆಯುತ್ತವೆ. ಅದರಲ್ಲೂ ಗೋಬಿ ಮಂಚೂರಿ ತಿನ್ನಲೇಬಾರದ ತಿಂಡಿ. ಮೊದಲಿಗೆ ಹೂಕೋಸಿನ ಒಳಗಿರುವ ಹುಳಗಳನ್ನು ಇವರು ತೆಗೆಯುವ ಗೋಜಿಗೇ ಹೋಗುವುದಿಲ್ಲ. ಎರಡನೆಯದಾಗಿ ಇವರು ಹುರಿಯಲು ಬಳಸುವುದು ಪಾಮ್ ಎಣ್ಣೆ. ಇದು ಅತ್ಯಂತ ಅಪಾಯಕಾರಿ ಎಣ್ಣೆಯಾಗಿದ್ದು ಇದರಲ್ಲಿ ಕರಿದ ಗೋಬಿ ಮಂಚೂರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಳಿದಿರುತ್ತದೆ. ಮುಂದುವರೆದ ದೇಶಗಳು ತಮಗೆ ಬೇಡ ಎಂದು ಬಿಟ್ಟ ಎಣ್ಣೆ ಅಗ್ಗ ಎಂಬ ಒಂದೇ ಕಾರಣಕ್ಕೆ ಇವರು ಬಳಸುತ್ತಾರೆ. ಆದರೆ ಆಗ್ಗ ಎಂದು ವಿಷವನ್ನು ಸೇವಿಸಲಾಗುತ್ತದೆಯೇ? ಹಾಗಾದರೆ ಗೋಬಿ ಮಂಚೂರಿ ಏಕೆ ಸೇವಿಸಬೇಕು?

ಹುರಿದ ತಿಂಡಿಗಳು

ಒಂದು ಕಾಲದಲ್ಲಿ ಹೋಟೆಲುಗಳಲ್ಲಿ ಮಾತ್ರ ಹುರಿದ ತಿಂಡಿಗಳು ಸಿಗುತ್ತಿದ್ದವು. ಇದು ಬಿಟ್ಟರೆ ರಸ್ತೆ ಬದಿಯ ಗಾಡಿಯಲ್ಲಿ ಬಜೆ ಮತ್ತು ಆಮ್ಲೆಟ್ ಮಾತ್ರ. ಇಂದು ಬಹುತೇಕ ಎಲ್ಲಾ ತಿಂಡಿಗಳು ರಸ್ತೆಬದಿಯಲ್ಲಿ ಸಿಗುತ್ತಿವೆ. ಇವುಗಳಿಗೆ ಪೈಪೋಟಿ ಎಂಬಂತೆ ಹೋಟೆಲುಗಳಲ್ಲಿಯೂ ತರಹೇವಾರಿ ತಿಂಡಿಗಳನ್ನು ಹುರಿದು ಇದರ ಚಿತ್ರಗಳನ್ನು ದೊಡ್ಡದಾಗಿ ಮುದ್ರಿಸಿ ಗ್ರಾಹಕನಿಗೆ ಕೊಳ್ಳುವಂತೆ ಪ್ರೇರೇಪಿಸಲಾಗುತ್ತದೆ. ಸುಂದರವಾಗಿ ಕಾಣುವ ಹುರಿದ ಪದಾರ್ಥಕ್ಕೆ ಹುರಿಯಲು ಬಳಸಿದ ಎಣ್ಣೆ ಆರೋಗ್ಯಕರ ಎಂದು ಖಂಡಿತವಾಗಿ ಹೇಳಲು ಬರುವುದಿಲ್ಲ. ಇವರೂ ಅನಾರೋಗ್ಯಕರ ಪಾಮ್ ಎಣ್ಣೆಯನ್ನೇ ಬಳಸಿರಬಹುದು.

ಚಾಟ್ಸ್

ಮೈಸೂರಿಗೆ ಬಂದ ಹೊಸಬರಿಗೆ ಅರಮನೆಯಷ್ಟೇ ಆಕರ್ಷಕವಾಗಿ ಕಾಣುವುದು ಸಾಲಾಗಿ ನಿಲ್ಲಿಸಿರುವ ಪಾನಿಪೂರಿ ಅಂಗಡಿಗಳು. ಇವುಗಳ ಜನಪ್ರಿಯತೆ ಕಂಡುಕೊಂಡ ಇತರ ಹೋಟೆಲುಗಳು ಸಹಾ ದಹಿ ಪೂರಿ, ಪಾನಿ ಪೂರಿಗಳನ್ನು ಮಾರುತ್ತಿವೆ. ಆದರೆ ಇದಕ್ಕೆ ಬಳಸಲಾಗಿರುವ ತರಕಾರಿಗಳು, ಮೊಸರು, ನೀರು ಮೊದಲಾದವುಗಳನ್ನು ಮೊದಲು ಬಿಸಿ ಮಾಡಿರುತ್ತಾರೋ ಎಂಬುದು ಖಚಿತವಿಲ್ಲ. ಹೆಚ್ಚಿನವರು ಪಾನಿಪೂರಿಯ ಪಾನಿ ತಯಾರಿಸಲು ನಲ್ಲಿಯ ನೀರನ್ನೇ ಬಳಸುತ್ತಾರೆ. ಹೊರಊರಿಗೆ ಬಂದಾಗ ನೀರನ್ನು ಕುಡಿಯಲು ಅನುಮಾನಿಸಿ ಬಾಟಲಿ ನೀರಿನ ಮೊರೆ ಹೋಗುವವರೂ ಪಾನಿಪೂರಿಯ ನೀರನ್ನು ಯಾವುದೇ ಅಳುಕಿಲ್ಲದೇ ಕುಡಿದು ಹಲವು ರೋಗಗಳು ಹಬ್ಬಿಕೊಳ್ಳಲು ಕಾರಣವಾಗಬಹುದು.   ನವನವೀನ ಪಾನಿಪುರಿ- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

ಸಾಲಾಡ್

ಹೋಟೆಲಿನಲ್ಲಿ ನೀಡುವ ಸಾಲಾಡ್ ಗಳನ್ನು ಕೊಂಚ ಗಮನಿಸಿ. ಇದರಲ್ಲಿ ಸೌತೆ ಮೊದಲಾದವುಗಳನ್ನು ಸಿಪ್ಪೆ ಸುಲಿದೇ ನೀಡಲಾಗಿರುತ್ತದೆ. ಏಕೆಂದರೆ ಅಪ್ಪಟ ವ್ಯಾಪಾರೀ ಮನೋಭಾವದ ಹೋಟೆಲುಗಳು ಎಲ್ಲರೂ ಕೊಂಡ ಬಳಿಕ ಉಳಿದ ತರಕಾರಿ ಹಣ್ಣುಗಳನ್ನೇ ಆರಿಸಿ ಇದರ ಕಳೆಗುಂದಿದ ಸಿಪ್ಪೆಗಳನ್ನು ಸುಲಿದು, ಹಣ್ಣುಗಳ ಕೊಳೆತ ಭಾವನ್ನು ನಿವಾರಿಸಿ ಉಳಿದ ತಿರುಳನ್ನು ಸುಂದರವಾಗಿ ಕತ್ತರಿಸಿ ನೀಡುತ್ತಾರೆ. ಇವುಗಳನ್ನು ಸ್ವಚ್ಛವಾಗಿ ತೊಳೆದಿರುತ್ತಾರೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಇವುಗಳಲ್ಲಿಯೂ ಹೆಚ್ಚಿನ ಪ್ರಮಾಣದ ಧೂಳು, ಬ್ಯಾಕ್ಟೀರಿಯಗಳಿರಬಹುದು.

ಗ್ರಿಲ್ ಮಾಡಿದ ಖಾದ್ಯಗಳು

ಇಂದು ಗ್ರಾಹಕರನ್ನು ಆಕರ್ಷಿಸಲು ಹೆಚ್ಚಿನ ಹೋಟೆಲುಗಳಲ್ಲಿ, ವಿಶೇಷವಾಗಿ ಮಾಂಸಾಹಾರಿ ಹೋಟೆಲುಗಳಲ್ಲಿ ದೊಡ್ಡ ಗಾತ್ರದ ಗ್ರಿಲ್ ಮಾಡುವ ಉಪಕರಣವನ್ನು ಕಣ್ಣಿಗೆ ಕಾಣುವಂತೆ ಎದುರಿಗೇ ಇರಿಸಲಾಗುತ್ತದೆ. ಆದರೆ ಇವುಗಳನ್ನು ಗ್ರಿಲ್ ಮಾಡುವ ಮುನ್ನ ಸ್ವಚ್ಛವಾಗಿ ತೊಳೆದಿರುವುದು ಮಾತ್ರ ಅನುಮಾನ. ಅಲ್ಲದೇ ಇದಕ್ಕೆ ಬಳಸಿರುವ ಕಲ್ಲಿದ್ದಲು ಸಹಾ ಹಳೆಯದಾಗಿದ್ದು ಬೂದಿ ಗಾಳಿಯ ಮೇಲೇರಿ ಆಹಾರದ ಮೇಲೆ ಕುಳಿತಿರಬಹುದು. ಅಥವಾ ಅಗತ್ಯಕ್ಕೂ ಹೆಚ್ಚು ಹುರಿದಿರಬಹುದು.

ಹಣ್ಣುಗಳ ರಸ

ಹಣ್ಣುಗಳ ರಸ ಅತ್ಯುತ್ತಮ ಎಂಬುದು ಯಾವುದೇ ಅನುಮಾನವಿಲ್ಲದ ಸಂಗತಿ. ಆದರೆ ಇವರು ಯಾವ ಹಣ್ಣನ್ನು ಉಪಯೋಗಿಸುತ್ತಾರೆ ಎಂಬುದು ಮಾತ್ರ ಅನುಮಾನದ ಸಂಗತಿ. ಏಕೆಂದರೆ ಕಣ್ಣಿಗೆ ಕಾಣುವಂತೆ ಸುಂದರ, ತಾಜಾ ಹಣ್ಣುಗಳನ್ನು ಇರಿಸಿದರೂ ಜ್ಯೂಸ್ ಮಾಡುವಾಗ ಇವರು ಹಿಂದಿರುವ ಹಳೆಯ, ಒಂದು ಭಾಗ ಕೊಳೆತ, ಸರಿಯಾಗಿ ಸ್ವಚ್ಛ ಮಾಡಿರದ ಹಣ್ಣುಗಳನ್ನೇ ಆಯ್ದುಕೊಳ್ಳಬಹುದು. ಅಲ್ಲದೇ ಇದರಲ್ಲಿ ಬೆರೆಸುವ ನೀರು ಮತ್ತು ಐಸ್ ಸಹಾ ನಲ್ಲಿಯ ನೀರಾಗಿರಬಹುದು. ಈ ಜ್ಯೂಸ್ ನೋಡಲು ಮಾತ್ರ ಚೆಂದವೇ ಹೊರತು ಆರೋಗ್ಯಕರವಲ್ಲ!

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Things You Must Never Order In Restaurants

Restaurants, today, offer various cuisines ranging from Indian to continental, so it can be quite hard for food lovers to resist eating at restaurants whenever they head out. Also, many people who have no time to cook for themselves, due to busy schedules, end up eating out most of the time. So, here is a list of foods you must never order in restaurants if you want to stay healthy, have a look.
Please Wait while comments are loading...
Subscribe Newsletter