For Quick Alerts
ALLOW NOTIFICATIONS  
For Daily Alerts

ಊಟದ ಬಳಿಕ ಇಂತಹ ಕೆಟ್ಟ ಅಭ್ಯಾಸಗಳನ್ನು ಇಂದೇ ನಿಲ್ಲಿಸಿ!

|

ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು ನಾವು ತಿನ್ನುವಂತಹ ಆಹಾರ. ನಾವು ತಿನ್ನುವ ಆಹಾರವು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿದ್ದರೆ ಅದು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ವೇಗದ ಜೀವನ ಶೈಲಿಯಿಂದ ತಿನ್ನುವಂತಹ ಆಹಾರವು ವೇಗವಾಗಿ ದೊರೆಯುವಂತಾಗಿದೆ. ಇಂತಹ ಆಹಾರಗಳಿಂದ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿರುವ ನಾವು ಕೆಲವೊಂದು ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ.

ಸರಿಯಾಗಿ ಆಹಾರ ಕ್ರಮವನ್ನು ಪಾಲಿಸದೆ ಇರುವುದು, ಸರಿಯಾಗಿ ನಿದ್ರೆ ಮಾಡದಿರುವುದು ಹೀಗೆ ಹಲವಾರು. ಆದರೆ ಊಟವಾದ ಬಳಿಕ ಕೆಲವೊಂದು ತಪ್ಪುಗಳನ್ನು ನಾವು ಮಾಡುತ್ತಿರುತ್ತೇವೆ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದು ಏನೆಂದು ತಿಳಿದುಕೊಳ್ಳಬೇಕಾದರೆ ಮುಂದೆ ಓದಿಕೊಳ್ಳಿ ಮತ್ತು ಇಂತಹ ತಪ್ಪುಗಳನ್ನು ಕಡೆಗಣಿಸಿ.....

ಧೂಮಪಾನ

ಧೂಮಪಾನ

ಊಟವಾದ ಬಳಿಕ ಪಾಲಿಸಬೇಕಾದ ಆರೋಗ್ಯ ಕ್ರಮಗಳಲ್ಲಿ ಧೂಮಪಾನ ಮಾಡದೆ ಇರುವುದು ಮೊದಲನೇಯದಾಗಿದೆ. ಸಿಗರೇಟಿನಲ್ಲಿರುವ ನಿಕೋಟಿನ್ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು ಮತ್ತು ದೇಹದಿಂದ ಹೆಚ್ಚಿನ ಕಾರ್ಸಿನೋನೆಜ್ಸ್ ಹೀರಿಕೊಳ್ಳುವುದು.

ಸ್ನಾನ

ಸ್ನಾನ

ಊಟದ ಮೊದಲು ಸ್ನಾನ ಮಾಡಬೇಕು. ಊಟದ ಬಳಿಕ ಸ್ನಾನ ಮಾಡಿದರೆ ಅದು ಜೀರ್ಣಕ್ರಿಯೆಯನ್ನು ಕುಗ್ಗಿಸುತ್ತದೆ. ಸ್ನಾನ ಮಾಡಿದಾಗ ದೇಹದಲ್ಲಿ ರಕ್ತ ಪರಿಚಲನೆಯು ಕಡಿಮೆಯಾಗುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಬೇಕಾಗವಷ್ಟು ರಕ್ತ ಸಿಗದೆ ಇರಬಹುದು. ಊಟದ ನಂತರ ಸ್ನಾನ, ತೊಂದರೆಗೆ ಆಹ್ವಾನ!

ಹಣ್ಣುಗಳನ್ನು ತಿನ್ನುವುದು

ಹಣ್ಣುಗಳನ್ನು ತಿನ್ನುವುದು

ಊಟದ ಬಳಿಕ ಹಣ್ಣುಗಳನ್ನು ತಿನ್ನುವುದನ್ನು ಕಡೆಗಣಿಸಬೇಕು. ಯಾಕೆಂದರೆ ಹಣ್ಣುಗಳು ಜೀರ್ಣವಾಗಲು ಹೆಚ್ಚಿನ ಕಿಣ್ವಗಳು ಬೇಕಾಗುತ್ತದೆ. ಊಟವಾದ ತಕ್ಷಣ ಹಣ್ಣುಗಳನ್ನು ತಿಂದರೆ ದೇಹಕ್ಕೆ ಅದನ್ನು ಹೀರಿಕೊಳ್ಳುವುದು ತುಂಬಾ ಕಷ್ಟವಾಗಬಹುದು.

ಚಹಾ ಕುಡಿಯುವುದು

ಚಹಾ ಕುಡಿಯುವುದು

ಊಟದ ಬಳಿಕ ಚಹಾ ಕುಡಿಯದೆ ಇರುವುದು ಪಾಲಿಸಿಕೊಂಡು ಹೋಗಬೇಕಾದ ಆರೋಗ್ಯ ಕ್ರಮಗಳು. ಚಹಾ ಕುಡಿದರೆ ನೀವು ಸೇವಿಸಿದ ಆಹಾರದಲ್ಲಿರುವ ಕಬ್ಬಿನಾಂಶವನ್ನು ಹೀರಿಕೊಳ್ಳಲು ದೇಹಕ್ಕೆ ಕಷ್ಟವಾಗಬಹುದು.

ದೀರ್ಘ ಸಮಯ ಕುಳಿತುಕೊಂಡಿರುವುದು

ದೀರ್ಘ ಸಮಯ ಕುಳಿತುಕೊಂಡಿರುವುದು

ಊಟವಾದ ಬಳಿಕ ಲಘುವಾಗಿ ನಡೆದಾಡಿದರೆ ಒಳ್ಳೆಯದು. ಕುಳಿತುಕೊಂಡೇ ಇದ್ದರೆ ಅದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಉಂಟಾಗಬಹುದು.

ವ್ಯಾಯಾಮ

ವ್ಯಾಯಾಮ

ಊಟವಾದ ತಕ್ಷಣ ವ್ಯಾಯಾಮ ಮಾಡುವುದನ್ನು ಖಂಡಿತವಾಗಿಯೂ ಕಡೆಗಣಿಸಲೇಬೇಕು. ಇದರಿಂದ ಆಮ್ಲ ಹಿಮ್ಮುಖವಾಗಿ ಹರಿಯಬಹುದು, ಬಿಕ್ಕಳಿಕೆ, ವಾಕರಿಕೆ ಮತ್ತು ನಿಶ್ಯಕ್ತಿ ಕಾಣಿಸಬಹುದು.

ಮಲಗುವುದು

ಮಲಗುವುದು

ಊಟವಾದ ತಕ್ಷಣ ಮಲಗುವುದನ್ನು ಕಡೆಗಣಿಸಬೇಕು. ಊಟದ ಬಳಿಕ ಮಲಗಿದರೆ ಜೀರ್ಣಾಂಗ ವ್ಯವಸ್ಥೆಗೆ ಆಹಾರ ಸಾಗಲು ತೊಂದರೆಯಾಗುತ್ತದೆ ಮತ್ತು ಆಮ್ಲವು ಹಿಮ್ಮುಖವಾಗಿ ಹರಿಯಬಹುದು.

English summary

Things You Must Never Do After Eating!

You just had a sumptuous meal, what do you do next? Well, we can't really answer that question, as we all do different things, right? Did you know that there are certain things you must completely avoid after eating? So, here is a list of things you must completely avoid doing right after eating, read along.
X
Desktop Bottom Promotion