For Quick Alerts
ALLOW NOTIFICATIONS  
For Daily Alerts

ಚಿಕ್ಕ ವಯಸ್ಸಿನಲ್ಲಿಯೇ ಕಿವಿ ಚುಚ್ಚಿದರೆ, ಪುಟಾಣಿಗಳ ಆರೋಗ್ಯ ವೃದ್ಧಿ

By Arshad
|

ದೇಹದ ಕೆಲವು ಅಂಗಗಳಲ್ಲಿ ಚಿಕ್ಕ ತೂತು ಮಾಡಿ ಅದರಲ್ಲಿ ಆಭರಣವನ್ನು ಧರಿಸಿ ಅಲಂಕರಿಸಿಕೊಳ್ಳುವುದು ಸಾಮಾನ್ಯವಾಗಿ ಎಲ್ಲಾ ಧರ್ಮಗಳಲ್ಲೂ ಇದೆ. ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಕಿವಿ, ಮೂಗುಗಳಲ್ಲಿ ಚುಚ್ಚಿಸಿಕೊಂಡು ಚಿನ್ನದ ಆಭರಣಗಳನ್ನು ಧರಿಸುತ್ತಾರೆ. ಹೆಣ್ಣುಮಕ್ಕಳಿಗೂ ಚಿಕ್ಕಂದಿನಲ್ಲಿಯೇ ಕಿವಿ ಚುಚ್ಚಿಸಿ ಕಿವಿಯೋಲೆ ಧರಿಸಲಾಗುತ್ತದೆ.

ಆದರೆ ಪುರುಷರಲ್ಲಿ ಕೆಲವರು ಮಾತ್ರ ಈ ನಿಟ್ಟಿನಲ್ಲಿ ಉತ್ಸುಕತೆ ತೋರಿ ಕಿವಿಗೋ, ತುಟಿಗೋ ಚುಚ್ಚಿಸಿಕೊಂಡು ಆಭರಣವೊಂದನ್ನು ಧರಿಸುತ್ತಾರೆ. ಕಿವಿ ಚುಚ್ಚಿಸಿಕೊಳ್ಳುವುದು ಹಲವು ಧರ್ಮಗಳಲ್ಲಿ ಒಂದು ವಿಧಿಯೂ ಆಗಿದೆ. ಆದರೆ ಕೆಲವರು ಇದರ ಹುಚ್ಚನ್ನು ಅತಿರೇಕಕ್ಕೇರಿಸಿಕೊಂಡು ದೇಹಕ್ಕೆಲ್ಲಾ ಚುಚ್ಚಿಸಿ ಬೋಲ್ಟು ನಟ್ಟುಗಳ ಯಂತ್ರಮಾನವನಂತೆ ತೋರುತ್ತಾರೆ. ವಾಸ್ತವವಾಗಿ ಈ ಚುಚ್ಚಿಸಿಕೊಳ್ಳುವುದರಲ್ಲಿ ಒಂದು ನಿಯಮವನ್ನು ಪಾಲಿಸಬೇಕಾಗುತ್ತದೆ.

ಚುಚ್ಚುವ ಭಾಗದಲ್ಲಿ ನರಾಗ್ರಗಳು ಅತಿ ಕಡಿಮೆ ಇರಬೇಕು, ಇದರಿಂದ ನರಸಂವೇದನೆ ಮತ್ತು ನರವ್ಯವಸ್ಥೆಗೆ ಪೆಟ್ಟಾಗಬಾರದು. ಧರಿಸುವ ಆಭರಣದ ಲೋಹ ಅಲರ್ಜಿಕಾರಕವಾಗಿರಬಾರದು, ಲೋಹ ದೇಹವನ್ನು ತಾಕುವ ಸ್ಥಳದಲ್ಲಿ ಋಣಾತ್ಮಕ ಶಕ್ತಿಯನ್ನು ಹೇರುವಂತಾಗಬಾರದು ಎಂಬೆಲ್ಲಾ ನಿಯಮಗಳಿವೆ. ಒಂದು ವೇಳೆ ಈ ನಿಯಮಗಳನ್ನು ಮೀರಿ ಯಾವುದೋ ಭಾಗಕ್ಕೆ ಚುಚ್ಚಿಕೊಂಡರೆ ಇದರಿಂದ ದೈಹಿಕವಾಗಿಯೂ ಭಾವನಾತ್ಮಕವಾಗಿಯೂ ತೊಂದರೆ ಉಂಟಾಗಬಹುದು.

ಭಾರತದಲ್ಲಿ ಮಕ್ಕಳಿಗೆ, ಅದರಲ್ಲೂ ಹೆಣ್ಣು ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ಕಿವಿಗೆ ಚುಚ್ಚಿಸಿ ಚಿಕ್ಕ ಕಿವಿಯೋಲೆಗಳನ್ನು ಧರಿಸಿ ಬಿಡುತ್ತಾರೆ. ಆಯುರ್ವೇದದಲ್ಲಿ ತಿಳಿಸಿರುವ ಪ್ರಕಾರ ಹುಟ್ಟಿದ ಕೆಲವೇ ದಿನಗಳಲ್ಲಿ ಮಗುವಿಗೆ ಕಿವಿ ಚುಚ್ಚಿಸುವ ಮೂಲಕ ಮಗುವಿನ ಭವಿಷ್ಯ ಉಜ್ವಲವಾಗುತ್ತದೆ. ಆದರೆ ಇಷ್ಟು ಚಿಕ್ಕ ಮಗುವಿಗೆ ನೋವು ಕೊಡಲು ಯಾವುದೇ ತಾಯಂದಿರು ಬಯಸುವುದಿಲ್ಲ. ಆದರೆ ಇದಕ್ಕೆ ಆಯುರ್ವೇದ ತನ್ನದೇ ಕಾರಣಗಳನ್ನು ತಿಳಿಸುತ್ತದೆ. ಬನ್ನಿ, ಈ ಕಾರಣಗಳೇನು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಜನನಾಂಗಗಳ ರಕ್ಷಣೆ ಮತ್ತು ಆರೋಗ್ಯಕರ ಋತುಚಕ್ರ

ಜನನಾಂಗಗಳ ರಕ್ಷಣೆ ಮತ್ತು ಆರೋಗ್ಯಕರ ಋತುಚಕ್ರ

ಕಿವಿಯ ಕೆಳಗಿನ ಮೃದುಭಾಗದ ನಟ್ಟ ನಡುವೆ ಇರುವ ನರಾಗ್ರಗಳು ಮೆದುಳಿನ ಮಧ್ಯಭಾಗಕ್ಕೆ ನೇರ ಸಂಪರ್ಕ ಹೊಂದಿದೆ. ಈ ಭಾಗ ಮಗುವಿನ ಜನನಾಂಗಗಳನ್ನು ಸುಸ್ಥಿತಿಯಲ್ಲಿರಿಸಲು ಹಾಗೂ ಹೆಣ್ಣುಮಕ್ಕಳು ಪ್ರೌಢವಯಸ್ಕರಾದಾದ ಋತುಚಕ್ರ ಆರೋಗ್ಯಕರವಾಗಿರಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜನನಾಂಗಗಳ ರಕ್ಷಣೆ ಮತ್ತು ಆರೋಗ್ಯಕರ ಋತುಚಕ್ರ

ಜನನಾಂಗಗಳ ರಕ್ಷಣೆ ಮತ್ತು ಆರೋಗ್ಯಕರ ಋತುಚಕ್ರ

ಅಲ್ಲದೇ ಗಂಡುಮಕ್ಕಳಲ್ಲಿಯೂ ಜನನಾಂಗಳ ಬೆಳವಣಿಗೆ ಮತ್ತು ಪ್ರಾಪ್ತವಯಸ್ಸಿನಲ್ಲಿ ಸಂತಾನೋತ್ಪತ್ತಿಯ ಕ್ಷಮತೆಯನ್ನೂ ಹೆಚ್ಚಿಸುತ್ತದೆ.

ಮೆದುಳಿನ ಬೆಳವಣಿಗೆಯಲ್ಲಿ ಸಹಕರಿಸುತ್ತದೆ

ಮೆದುಳಿನ ಬೆಳವಣಿಗೆಯಲ್ಲಿ ಸಹಕರಿಸುತ್ತದೆ

ತಜ್ಞರ ಪ್ರಕಾರ ಕಿವಿಯ ಚುಚ್ಚುವ ಮೂಲಕ ಈ ಭಾಗದಲ್ಲಿರುವ ನರಗಳು ಮೆದುಳಿನ ಕೆಲವು ಭಾಗಗಳಿಗೆ ಸತತವಾಗಿ ಪ್ರಚೋದನೆ ನೀಡುತ್ತಿರುತ್ತವೆ. ಈ ಪ್ರಚೋದನೆ ಮೆದುಳಿನ ಉತ್ತಮ ಬೆಳವಣಿಗೆಗೆ ನೆರವಾಗುತ್ತದೆ. ಇದೇ ವಿಷಯವನ್ನು ಕಂಡುಕೊಂಡ ಚೀನೀಯರು ನರಾಗ್ರಗಳಿರುವ ಕೆಲವು ಸೂಕ್ಷ್ಮ ಭಾಗಗಳಲಿ ಸೂಜಿ ಚುಚ್ಚುವ ಮೂಲಕ ಚಿಕಿತ್ಸೆಯನ್ನು ನೀಡುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೆದುಳಿನ ಬೆಳವಣಿಗೆಯಲ್ಲಿ ಸಹಕರಿಸುತ್ತದೆ

ಮೆದುಳಿನ ಬೆಳವಣಿಗೆಯಲ್ಲಿ ಸಹಕರಿಸುತ್ತದೆ

ಈ ನರಾಗ್ರಗಳ ಭಾಗಗಳಲ್ಲಿ ಒತ್ತಡ ನೀಡುವ ಮೂಲಕ ಮೆದುಳಿಗೆ ಹೆಚ್ಚಿನ ಸಂವೇದನೆ ದೊರೆತು ಮೆದುಳಿನ ಕ್ಷಮತೆ, ಸ್ಮರಣಶಕ್ತಿ ಮತ್ತು ಬೆಳವಣಿಗೆ ಹೆಚ್ಚುತ್ತದೆ. ಇದನ್ನೇ ಆಯುರ್ವೇದದಲ್ಲಿ ಮುದ್ರೆಗಳು ಎನ್ನಲಾಗುತ್ತದೆ. ಆದ್ದರಿಂದ ಆಯುರ್ವೇದದ ಪ್ರಕಾರ ಮಗುವಿನ ಮೆದುಳು ಬೆಳವಣಿಗೆಯ ಹಂತದಲ್ಲಿರುವಾಗ, ಅಂದರೆ ಸುಮಾರು ಎಂಟು ತಿಂಗಳ ವಯಸ್ಸಿನೊಳಗೇ ಕಿವಿ ಚುಚ್ಚಿಸುವುದು ಉತ್ತಮವಾಗಿದೆ.

ಕಣ್ಣುಗಳನ್ನು ಚುರುಕುಗೊಳಿಸುತ್ತದೆ

ಕಣ್ಣುಗಳನ್ನು ಚುರುಕುಗೊಳಿಸುತ್ತದೆ

ಚೀನಿಯರು ಕಂಡುಕೊಂಡ ಆಕ್ಯುಪಂಕ್ಚರ್ ವಿಧಾನದ ಪ್ರಕಾರ ಕಿವಿ ಚುಚ್ಚುವ ಭಾಗದಲ್ಲಿ ದೃಷ್ಟಿಯ ಕೇಂದ್ರದ ನರವೂ ಹಾದುಹೋಗಿದೆ. ಆದ್ದರಿಂದ ಈ ಭಾಗದಲ್ಲಿ ಕೊಂಚ ಒತ್ತಡ ಅಥವಾ ಪ್ರಚೋದನೆ ನೀಡುವ ಮೂಲಕ ಕಣ್ಣಿನ ದೃಷ್ಟಿ ಉತ್ತಮವಾಗಿರುತ್ತದೆ. ಇದೇ ವಿಷಯವನ್ನು ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಹೇಳಲಾಗಿದೆ.

ಕಿವಿಗಳ ಆರೋಗ್ಯವನ್ನೂ ಉತ್ತಮವಾಗಿಡುತ್ತದೆ

ಕಿವಿಗಳ ಆರೋಗ್ಯವನ್ನೂ ಉತ್ತಮವಾಗಿಡುತ್ತದೆ

ಕಿವಿಗಳಲ್ಲಿ ಚುಚ್ಚುವ ಭಾಗದಲ್ಲಿ ಎರಡು ಒತ್ತಡ ಕೇಂದ್ರ (acupressure points) ಗಳಿವೆ. ಇವು ಮೆದುಳಿನ ಪ್ರಮುಖ ಭಾಗಗಳಾದ master sensorial ಮತ್ತು master cerebral points ಎಂಬ ಭಾಗಗಳಿಗೆ ಪ್ರಚೋದನೆ ನೀಡುತ್ತದೆ. ಈ ಕೇಂದ್ರಗಳು ವಿಶೇಷವಾಗಿ ಮಗುವಿನ ಶ್ರವಣಶಕ್ತಿಯನ್ನು ಬೆಳೆಸುವಲ್ಲಿ ಮತ್ತು ತೀಕ್ಷ್ಣಗೊಳಿಸುವಲ್ಲಿ ನೆರವಾಗುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಿವಿಗಳ ಆರೋಗ್ಯವನ್ನೂ ಉತ್ತಮವಾಗಿಡುತ್ತದೆ

ಕಿವಿಗಳ ಆರೋಗ್ಯವನ್ನೂ ಉತ್ತಮವಾಗಿಡುತ್ತದೆ

ಆದ್ದರಿಂದ ಆಕ್ಯುಪ್ರೆಶರ್ ಚಿಕಿತ್ಸೆ ನೀಡುವ ಪರಿಣಿತರು ಕಿವಿಯಲ್ಲಿ ರಿಂಗಣಿಸುವ ತೊಂದರೆ (tinnitus) ಇದ್ದವರಿಗೆ ಈ ಭಾಗದಲ್ಲಿ ಪ್ರಚೋದನೆ ಅಥವಾ ಸಂವೇದನೆ ನೀಡುವ ಮೂಲಕ ಉತ್ತಮ ಪರಿಣಾಮ ಪಡೆಯಬಹುದು ಎಂದು ತಿಳಿಸುತ್ತಾರೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಕಿವಿಯ ತೂತಿಗೂ ಜೀರ್ಣಕ್ರಿಯೆಯೂ ಎತ್ತಣ ಮಾಮರ ಎತ್ತಣ ಕೋಗಿಲೆಯ ಸಂಬಂಧವೇ? ಆದರೆ ಆಕ್ಯುಪ್ರೆಶರ್ ಚಿಕಿತ್ಸೆ ನೀಡುವ ಪರಿಣಿತರ ಪ್ರಕಾರ ಈ ಕೇಂದ್ರದಲ್ಲಿ ಹಸಿವಿನ ಕೇಂದ್ರವೂ ಅಡಗಿದ್ದು ಜೀರ್ಣಕ್ರಿಯೆಗೆ ಅಗತ್ಯವಾದ ಸೂಚನೆ ಮತ್ತು ಸಂವೇದನೆಗಳನ್ನು ನೀಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಆದ್ದರಿಂದ ಕಿವಿ ಚುಚ್ಚಿಸಿಕೊಂಡ ಮಕ್ಕಳು ಅತಿ ಹೆಚ್ಚು ತಿನ್ನದೇ ಅಗತ್ಯವಿದ್ದಷ್ಟು ಮಾತ್ರ ತಿಂದು ಪೂರ್ಣವಾಗಿ ಜೀರ್ಣಿಸಿಕೊಂಡು ಹದವಾದ ಮೈಕಟ್ಟು ಮತ್ತು ಸುದೃಢ ಶರೀರ ಹೊಂದಿರುತ್ತಾರೆ. ಇದರಿಂದ ಸ್ಥೂಲಕಾಯ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ಉದ್ವೇಗ, ಆತಂಕ, OCD, ಹೆದರಿಕೆ ಮೊದಲಾದ ನರಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ

ಉದ್ವೇಗ, ಆತಂಕ, OCD, ಹೆದರಿಕೆ ಮೊದಲಾದ ನರಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ

ತಜ್ಞರ ಪ್ರಕಾರ ಕಿವಿ ಚುಚ್ಚಿಸಿಕೊಳ್ಳುವ ಮೂಲಕ ಮಕ್ಕಳು ಮಾನಸಿಕರಾಗಿ ಹೆಚ್ಚು ಸ್ಥೈರ್ಯವುಳ್ಳವರಾಗಿರುತ್ತಾರೆ. ನರವ್ಯವಸ್ಥೆ ಹಾಗೂ ಮೆದುಳಿನ ಕ್ಷಮತೆ ಹೆಚ್ಚುವುದರಿಂದ ನರಸಂಬಂಧಿ ತೊಂದರೆಗಳಾದ ಉದ್ವೇಗ, ಆತಂಕ, ಒಂದೇ ಕಾರ್ಯವನ್ನು ಅಥವಾ ಯೋಚನೆಯನ್ನು ಪದೇ ಪದೇ ಪುನರಾವರ್ತಿಸುವ Obsessive-Compulsive Disorder (OCD), ಹೆದರಿಕೆ, ಅಧೈರ್ಯ ಮೊದಲಾದ ತೊಂದರೆಗಳನ್ನು ನಿವಾರಿಸಬಹುದು.

ಉದ್ವೇಗ, ಆತಂಕ, OCD, ಹೆದರಿಕೆ ಮೊದಲಾದ ನರಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ

ಉದ್ವೇಗ, ಆತಂಕ, OCD, ಹೆದರಿಕೆ ಮೊದಲಾದ ನರಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ

ಅಷ್ಟೇ ಅಲ್ಲ, ಹುಚ್ಚು ಹಿಡಿಯಲು ಪ್ರೇರೇಪಿಸುವ ಉನ್ಮಾದವನ್ನೂ ತಡೆಗಟ್ಟಬಹುದು. ಆಕ್ಯುಪ್ರೆಶರ್ ಚಿಕಿತ್ಸೆ ನೀಡುವ ಪರಿಣಿತರ ಪ್ರಕಾರ ಕಿವಿ ಚುಚ್ಚಿಸಿಕೊಳ್ಳುವ ಮೂಲಕ ಮೆದುಳಿನ ಯೋಚನಾಲಹರಿಯನ್ನು ಬದಲಿಸಲು, ತನ್ಮೂಲಕ ಹಲವು ಕಾಯಿಲೆಗಳು ಕಡಿಮೆಯಾಗಲು ಅಥವಾ ಬಾರದಂತಿರಲು ಸಾಧ್ಯವಾಗುತ್ತದೆ.

ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಏಕಪ್ರಕಾರವಾಗಿ ಪ್ರಭಾವ ಬೀರುತ್ತದೆಯೇ?

ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಏಕಪ್ರಕಾರವಾಗಿ ಪ್ರಭಾವ ಬೀರುತ್ತದೆಯೇ?

ಕಿವಿ ಚುಚ್ಚಿಸಿಕೊಂಡ ಗಂಡು ಮಕ್ಕಳನ್ನು ಕೊಂಚ ಗಮನಿಸಿದರೆ ಇವರಲ್ಲಿ ಕೇವಲ ಒಂದು ಕಿವಿ ಮಾತ್ರ ಚುಚ್ಚಿಸಿಕೊಂಡಿರುವುದನ್ನು ಕಾಣಬಹುದು. ಆಯುರ್ವೇದದ ಪ್ರಕಾರ ಗಂಡು ಮಗುವಿನ ಬಲಗಿವಿ ಮತ್ತು ಹೆಣ್ಣುಮಗುವಿನ ಎಡಕಿವಿಗೆ ಚುಚ್ಚುವುದು ಫಲಕಾರಿಯಾಗಿದೆ. ಏಕೆಂದರೆ ಮಕ್ಕಳ ಲಿಂಗಕ್ಕನುಗುಣವಾಗಿ ಅವರ ಮೆದುಳಿನ ಸಂವೇದನಾ ಕೇಂದ್ರಗಳೂ ಅದಲು ಬದಲಾಗಿರುತ್ತವೆ. ಆಯುರ್ವೇದದ ಪ್ರಕಾರ

ಗಂಡುಮಕ್ಕಳ ಎಡಭಾಗ ಅಥವಾ ಬಲಮೆದುಳು, ಮತ್ತು ಹೆಣ್ಣುಮಕ್ಕಳ ಬಲಭಾಗ ಅಥವಾ ಎಡಮೆದುಳು ಹೆಚ್ಚು ಸಬಲವಾಗಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಏಕಪ್ರಕಾರವಾಗಿ ಪ್ರಭಾವ ಬೀರುತ್ತದೆಯೇ?

ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಏಕಪ್ರಕಾರವಾಗಿ ಪ್ರಭಾವ ಬೀರುತ್ತದೆಯೇ?

ಆ ಪ್ರಕಾರ ಗಂಡು ಮಕ್ಕಳಿಗೆ ಬಲಗಿವಿಗೆ ಮತ್ತು ಹೆಣ್ಣುಮಕ್ಕಳಿಗೆ ಎಡಗಿವಿಗೆ ಪ್ರಮುಖವಾಗಿ ಚುಚ್ಚಲಾಗುತ್ತದೆ. ಅಚ್ಚರಿಯ ವಿಷಯವೆಂದರೆ ನಮ್ಮ ಬಲಮೆದುಳು ಎಡಭಾಗದ ದೇಹವನ್ನೂ, ಎಡಮೆದುಳು ಬಲಭಾಗದ ದೇಹವನ್ನೂ ನಿಯಂತ್ರಿಸುತ್ತದೆ.

ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಏಕಪ್ರಕಾರವಾಗಿ ಪ್ರಭಾವ ಬೀರುತ್ತದೆಯೇ?

ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಏಕಪ್ರಕಾರವಾಗಿ ಪ್ರಭಾವ ಬೀರುತ್ತದೆಯೇ?

ಚೀನೀಯರ ಪ್ರಕಾರ ಗಂಡು ಮಕ್ಕಳ ಯಿನ್ ಅಂಗಗಳ ತೊಂದರೆಯಿಂದ ಕಾಪಾಡಲು ಬಲಗಿವಿಗೂ, ಹೆಣ್ಣುಮಕ್ಕಳ ಯಾಂಗ್ ಅಂಗಗಳ ತೊಂದರೆಯಿಂದ ಕಾಪಾಡಲು ಎಡಗಿವಿವೂ ಚುಚ್ಚಲಾಗುತ್ತದೆ. ಆದರೆ ಸಾಮಾನ್ಯವಾಗಿ ಹೆಣ್ಣುಮಕ್ಕಳಲ್ಲಿ ಒಂದೇ ಕಿವಿಗೆ ಚುಚ್ಚಿದರೆ ಸೌಂದರ್ಯ ಕುಂದುವ ಕಾರಣ ಎರಡೂ ಕಿವಿಗಳಿಗೆ ಸಮಾನವಾಗಿ ಚುಚ್ಚಲಾಗುತ್ತದೆ. ಅದೇ ಗಂಡುಮಕ್ಕಳ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡದ ಕಾರಣ ಒಂದೇ ಕಿವಿಗೆ ಚುಚ್ಚಲಾಗುತ್ತದೆ.

English summary

Health benefits of piercing ears

Now a days It is a common practice in India to have one’s child’s ears pierced when they are very young. According to Vedic rites, parents usually get their child’s ears pierced when they are merely a few days old. While the custom seems quite a painful process and it looks like quite a terrible thing to do to your baby, the tradition does have some health benefits for your child. But according to the Hindu Vedic rituals, piercing has many health benefits as well.
X
Desktop Bottom Promotion