For Quick Alerts
ALLOW NOTIFICATIONS  
For Daily Alerts

ಜೇನು-ಲಿಂಬೆ ನೀರಿನ ಮಿಶ್ರಣ, ಆರೋಗ್ಯಕ್ಕೆ ಸಿದ್ಧೌಷಧ

By CM prasad
|

ಆರೋಗ್ಯ ಸಂರಕ್ಷಣೆಗೆ ಅನೇಕ ಪದ್ಧತಿಗಳು ಚಾಲ್ತಿಯಲ್ಲಿವೆ. ಅನೇಕರು ಇದಕ್ಕಾಗಿ ಸಮಯ ಮತ್ತು ಹಣವನ್ನು ವ್ಯರ್ಥಮಾಡುತ್ತಿದ್ದಾರೆ. ಇರುವ ಆರೋಗ್ಯವನ್ನು ಉಳಿಸಿ ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಆರೋಗ್ಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಎದುರಾಗಿದೆ.

ಬನ್ನಿ ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ಆಶ್ಚರ್ಯಕರ ರೀತಿಯಲ್ಲಿ ನಿಮ್ಮ ಅರೋಗ್ಯದ ಆರೈಕೆಯನ್ನು ಮಾಡಬಹುದಾದ ಕೆಲ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ. ನಿಮ್ಮ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಲು ಬೆಚ್ಚನೆಯ ನೀರಿನೊಂದಿಗೆ ಜೇನು ಮತ್ತು ಲಿಂಬೆ ರಸವನ್ನು ಮಿಶ್ರಣ ಮಾಡಿ ಪ್ರತಿ ಬೆಳಗಿನ ಜಾವ ಸೇವಿಸಿ. ಇದರ ಫಲಿತಾಂಶ ತಿಳಿಯಲು ಹೆಚ್ಚು ದಿನ ಬೇಕಾಗುವುದಿಲ್ಲ. ಈ ಮಿಶ್ರಣದ ಇತರೆ ಪ್ರಯೋಜನಗಳ ಬಗ್ಗೆ ವಿವರಗಳಿಗೆ ಮುಂದೆ ಓದಿ...

ಜಠರವು ಕರುಳುಗಳ ಆರೈಕೆಗೆ

ಜಠರವು ಕರುಳುಗಳ ಆರೈಕೆಗೆ

ಆಯುರ್ವೇದದ ಪ್ರಕಾರ ನಮ್ಮ ಜಠರದಲ್ಲಿ ನಿನ್ನೆಯ ಊಟದ ಜೀರ್ಣವಾಗದೇ ಉಳಿದ ಭಾಗ, ಕರುಳಿನ ಕೆಲವು ಜೀವಕೋಶಗಳು ಕಳಚಿ ಬಿದ್ದು ಹಾಗೂ ಸತ್ತ ಬ್ಯಾಕ್ಟೀರಿಯಾಗಳ ಕೋಶಗಳು ಒಂದಾಗಿ ಒಂದು ಬಗೆಯ ಅಂಟುಅಂಟಾದ ದ್ರವ ಜಠರದ ಒಳಗೋಡೆಗಳಿಗೆ ಅಂಟಿಕೊಂಡಿರುತ್ತದೆ. ಜಠರರಸ ತಳಭಾಗದಲ್ಲಿರುವ ಕಾರಣ ಪಕ್ಕದ ಮತ್ತು ಮೇಲ್ಭಾಗದ ಭಾಗ ಈ ದ್ರವದಿಂದ ಮುಕ್ತವಾಗುವುದಿಲ್ಲ. ಆಯುರ್ವೇದದಲ್ಲಿ ಈ ಪದಾರ್ಥಕ್ಕೆ 'ಆಮ' ಎಂದು ಕರೆಯಲಾಗುತ್ತದೆ. ಒಂದು ವೇಳೆ ಈ ದ್ರವ ಹಾಗೇ ಉಳಿದರೆ ಹಲವು ತೊಂದರೆಗಳು ಎದುರಾಗುತ್ತವೆ. ಜೇನು ಮತ್ತು ಲಿಂಬೆಯ ರಸದ ಪೇಯ ಕುಡಿಯುವುದರಿಂದ ಈ ಆಮ ಕರಗಿ ಕರುಳುಗಳಿಗೆ ರವಾನೆಯಾಗುತ್ತದೆ. ಇದೇ ದ್ರವ ಮುಂದೆ ಕರುಳುಗಳ ಮೂಲಕ ಸಾಗಿದಾಗ, ಅಲ್ಲೂ ಉಳಿದಿರಬಹುದಾಗ ಉಳಿದ ಕಲ್ಮಶಗಳು ದೊಡ್ಡಕರುಳಿಗೆ ರವಾನೆಯಾಗಿ ದೇಹದಿಂದ ವಿಸರ್ಜಿಸಲ್ಪಡುತ್ತದೆ.

ದೇಹದ ತೂಕ ಇಳಿಸಲು ನೆರವಾಗುತ್ತದೆ

ದೇಹದ ತೂಕ ಇಳಿಸಲು ನೆರವಾಗುತ್ತದೆ

ಈ ಮಿಶ್ರಣವು ಯಕೃತ್ತನ್ನು ಶುಚಿಗೊಳಿಸಿ ದೇಹದಲ್ಲಿರುವ ಹಾನಿಕಾರಕ ಮತ್ತು ಅನುಪಯುಕ್ತ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ. ಈ ಅನುಪಯುಕ್ತ ಅಂಶಗಳು ಹೊರಹೋಗುವುದರಿಂದ ನಿಮ್ಮ ದೇಹದ ಸಂಚಲನ ವ್ಯವಸ್ಥೆಯು ಸುಸ್ಥಿತಿಗೊಂಡು ದೇಹದ ಸಾಮರ್ಥ್ಯವು ಹೆಚ್ಚಾಗುತ್ತದೆ.

ವಿಟಮಿನ್ ಮತ್ತು ಖನಿಜ ಸತ್ವಗಳು

ವಿಟಮಿನ್ ಮತ್ತು ಖನಿಜ ಸತ್ವಗಳು

ಈ ಮಿಶ್ರಣವನ್ನು ಪ್ರತಿದಿನ ಸೇವಿಸಿದರೆ ನಿಮ್ಮ ದೇಹದ ಸಂಚಲನ ವ್ಯವಸ್ಥೆಯ ವೇಗವನ್ನು ಹೆಚ್ಚಿಸಿ ದಿನದ ಪ್ರಾರಂಭದಲ್ಲೇ ನಿಮಗೆ ಅವಶ್ಯವಿರುವ ಪೌಷ್ಠಿಕಾಂಶಗಳು ಮತ್ತು ಖನಿಜ ಸತ್ವಗಳನ್ನು ನೀಡುತ್ತದೆ. ಈ ಮಿಶ್ರಣದಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಮ್ಯಾಗ್ನೀಷಿಯಮ್, ಕ್ಯಾಲ್ಷಿಯಮ್ ಮತ್ತು ಫಾಸ್ಫರಸ್ ಅಂಶಗಳು ಅಡಗಿವೆ. ಈ ಮಿಶ್ರಣದ ಸೇವನೆಯಿಂದ ಬೆಳಗಿನ ಜಾವದಲ್ಲೇ ನಿಮಗೆ ಪೌಷ್ಠಿಕಾಂಶ ಸತ್ವಗಳನ್ನು ನೀಡಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.

ಚರ್ಮದ ಕಾಂತಿ ಹೆಚ್ಚುತ್ತದೆ

ಚರ್ಮದ ಕಾಂತಿ ಹೆಚ್ಚುತ್ತದೆ

ಲಿಂಬೆ ಹಾಗೂ ಜೇನಿನಲ್ಲಿ ರಕ್ತಶುದ್ಧಿಗೊಳಿಸಲು ಪ್ರತ್ಯೇಕವಾಗಿ ಹಲವು ಪೋಷಕಾಂಶಗಳಿವೆ. ಇವೆರಡರ ಸಮ್ಮಿಲನದಿಂದ ರಕ್ತ ಶುದ್ದೀಕರಣ ಭರದಿಂದ ಸಾಗುತ್ತದೆ ಹಾಗೂ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತದೆ. ಈ ಹೊಸರಕ್ತ ದೇಹದಲ್ಲಿರುವ ಸತ್ತ ಜೀವಕೋಶಗಳನ್ನು ರವಾನಿಸಿ ಹೊಸ ಜೀವಕೋಶಗಳು ಬೆಳೆಯುವಂತೆ ಮಾಡುತ್ತದೆ.

ದೇಹಕ್ಕೆ ಶಕ್ತಿ ಮತ್ತು ಚೈತನ್ಯ ನೀಡುತ್ತದೆ

ದೇಹಕ್ಕೆ ಶಕ್ತಿ ಮತ್ತು ಚೈತನ್ಯ ನೀಡುತ್ತದೆ

ಬೆಳಿಗ್ಗೆದ್ದ ಕೂಡಲೇ ಈ ಪೇಯ ಕುಡಿದು ದಿನದ ವ್ಯಾಯಾಮ ಹಾಗೂ ಇತರ ಚಟುವಟಿಕೆಗಳನ್ನು ನಡೆಸುವಾಗ ಮುಂಚಿನಷ್ಟು ಸುಸ್ತಾಗುವುದಿಲ್ಲ. ಏಕೆಂದರೆ ಈ ಪೇಯದಲ್ಲಿರುವ ಪೋಷಕಾಂಶಗಳು ತಕ್ಷಣವೇ ರಕ್ತಕ್ಕೆ ಪೂರೈಕೆಯಾಗಿ ಪ್ರತಿ ಜೀವಕೋಶ ಪೂರ್ಣವಾಗಿ ಕೆಲಸ ಮಾಡುವ ಸಾಮರ್ಥ್ಯ ಪಡೆಯುತ್ತದೆ. ಬೆಳಗ್ಗಿನ ಈ ಚಟುವಟಿಕೆಯ ಕಾರಣ ಮನಸ್ಸು ಇಡಿಯ ದಿನ ಪ್ರಫುಲ್ಲವಾಗಿರುತ್ತದೆ.

ಮೂತ್ರದಲ್ಲಿ ದ್ರವದ ಅಂಶವನ್ನು ಹೆಚ್ಚಿಸುತ್ತದೆ

ಮೂತ್ರದಲ್ಲಿ ದ್ರವದ ಅಂಶವನ್ನು ಹೆಚ್ಚಿಸುತ್ತದೆ

ನಮ್ಮ ಮೂತ್ರಪಿಂಡಗಳು ಸತತವಾಗಿ ದೇಹದ ವಿಷಕಾರಕ ವಸ್ತುಗಳನ್ನು ಮೂತ್ರದ ರೂಪದಲ್ಲಿ ಮೂತ್ರಕೋಶದಲ್ಲಿ ಸಂಗ್ರಹಿಸುತ್ತಾ ಇರುತ್ತದೆ ಹಾಗೂ ಆಗಾಗ ಮೂತ್ರವಿಸರ್ಜನೆಯ ಮೂಲಕ ದೇಹದಿಂದ ವಿಸರ್ಜಿಸಲ್ಪಡುತ್ತವೆ. ಒಂದು ವೇಳೆ ಸೇವಿಸಿದ ನೀರಿನ ಪ್ರಮಾಣ ಕಡಿಮೆಯಾದರೆ ಮೂತ್ರಕೋಶದ ಈ ದ್ರವ ಹೆಚ್ಚು ವಿಷಕಾರಿಯಾಗಿದ್ದು ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆಗ ಮೂತ್ರದಲ್ಲಿ ಉರಿ, ಮೂತ್ರಕೋಶಗಳ ಕಾರ್ಯದಲ್ಲಿ ತೊಡಕು ಉಂಟಾಗುತ್ತದೆ. ಬೆಳಗ್ಗಿನ ಲಿಂಬೆ ಮತ್ತು ಜೇನಿನ ಪೇಯ ಜೀವಿರೋಧಿ (antibacterial agent) ಯಂತೆ ಕಾರ್ಯನಿರ್ವಹಿಸುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳ್ಳುವುದು

ಜೀರ್ಣಕ್ರಿಯೆ ಉತ್ತಮಗೊಳ್ಳುವುದು

ನಮ್ಮ ದೇಹದಲ್ಲಿ ಹಲವು ಅನೈಚ್ಛಿಕ ಕಾರ್ಯಗಳು ನಾವು ಪವಡಿಸಿದ ಬಳಿಕ ಆಗುತ್ತವೆ. ಅದರಲ್ಲಿ ಜೀರ್ಣಕ್ರಿಯೆಯ ಅಂತಿಮ ಭಾಗವೂ ಒಂದು. ಜಠರ ಸಂಪೂರ್ಣವಾಗಿ ಖಾಲಿಯಾಗಿ ಜಠರಾಮ್ಲದ ಹೊಸ ದಾಸ್ತಾನು ಆಗಮಿಸಿ ಮುಂದಿನ ಆಹಾರದ ನಿರೀಕ್ಷೆಯಲ್ಲಿರುತ್ತದೆ.

English summary

The truth about lemon-honey-water concoction!

Most of us drink the warm water mixed with honey and lemon juice concoction every morning to help reduce weight. Here's what all this magical mix does for your body and why you should drink it, if you're not already!
Story first published: Monday, February 8, 2016, 20:45 [IST]
X
Desktop Bottom Promotion