For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಶುಂಠಿ ಸೋಸಿದ ನೀರು, ಆಯಸ್ಸು ನೂರು!

By Arshad
|

ನೀರಿನಲ್ಲಿ ನೆನೆಸಿಟ್ಟ ತರಕಾರಿ ಮತ್ತು ಹಣ್ಣುಗಳ ಶಕ್ತಿ ಏನು ಎಂಬುದನ್ನು ನಾವು ಅರಿತಿದ್ದೇವೆ. ಅಂತೆಯೇ ನಮ್ಮ ಅಡುಗೆಯ ನೆಚ್ಚಿನ ಸಾಂಬಾರ ಪದಾರ್ಥವಾದ ಹಸಿಶುಂಠಿಯನ್ನೂ ನೆನೆಸಿಟ್ಟು ಇದರ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಬಹುದು. ಹಸಿಶುಂಠಿಯಲ್ಲಿ ಹಲವು ಆರೋಗ್ಯಕರ ಗುಣಗಳಿದ್ದು ಹಲವು ಕಾಯೆಲೆಗಳಿಗೆ ಔಷಧದ ರೂಪದಲ್ಲಿ ಬಳಸಬಹುದು.

ಇದರ ಇನ್ನೊಂದು ಹೆಗ್ಗಳಿಕೆ ಎಂದರೆ ಹಸಿಯಾಗಿದ್ದಾಗ ಇದ್ದ ಗುಣಗಳು ಇದನ್ನು ಒಣಗಿಸಿ ಪುಡಿಮಾಡಿದ ಬಳಿಕವೂ ಕಡಿಮೆಯಾಗುವುದಿಲ್ಲ. ಆದರೆ ಇದರ ಗರಿಷ್ಟ ಉಪಯೋಗವನ್ನು ಪಡೆಯಬೇಕಾದರೆ ಇದನ್ನು ನೀರಿನಲ್ಲಿ ನೆನೆಸಿಟ್ಟು ಈ ನೀರನ್ನು ಕುಡಿಯಬೇಕು. ತೂಕ ಇಳಿಸುವ ಇರಾದೆಯುಳ್ಳವರಿಗಂತೂ ಈ ನೀರು ಅತ್ಯುತ್ತಮವಾದ ಆಹಾರ+ಔಷಧವಾಗಿದೆ. ಮುಂಜಾನೆ ಎದ್ದು ಶುಂಠಿ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

ನಿಯಮಿತವಾಗಿ ಈ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ವಿಶೇಷವಾಗಿ ಹೊಟ್ಟೆಯ ಕಲ್ಮಶಗಳನ್ನು ನಿವಾರಿಸುವಲ್ಲಿ, ದಿನವಿಡೀ ಚಟುವಟಿಕೆಯಿಂದಿರಲು ಮತ್ತು ತಾಜಾತನ ಅನುಭವಿಸಲು ನೆರವಾಗುತ್ತದೆ. ಇದನ್ನು ತಯಾರಿಸುವುದೇನೂ ಕಷ್ಟವಲ್ಲ. ಒಂದು ಲೀಟರ್ ನೀರನ್ನು ಒಂದು ಪಾತ್ರೆಯಲ್ಲಿ ಬಿಸಿಮಾಡಿ. ನೀರು ಕುದಿಯಲು ಬಂದೊಡನೇ ಸುಮಾರು ಒಂದಿಂಚಿನಷ್ಟು ಹಸಿಶುಂಠಿಯ ತುಂಡನ್ನು ಜಜ್ಜಿ ಈ ನೀರಿಗೆ ಸೇರಿಸಿ ಮುಂದಿನ ಹದಿನೈದು ನಿಮಿಷ ಕಾಲ ಚಿಕ್ಕ ಉರಿಯಲ್ಲಿ ಕುದಿಸುವುದನ್ನು ಮುಂದುವರೆಸಿ. ಬಳಿಕ ಉರಿ ಆರಿಸಿ ತನ್ನಿಂತಾನೇ ತಣಿಯಲು ಬಿಡಿ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ರಾತ್ರಿ ಕುದಿಸಿ ಬೆಳಿಗ್ಗೆ ತಣಿದಿರುವಾದ ಸೋಸಿದರೆ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ಇದನ್ನು ಸೋಸಿ ನೀರನ್ನು ಲೋಟದಲ್ಲಿ ಸಂಗ್ರಹಿಸಿ ಇದಕ್ಕೆ ಒಂದು ಲಿಂಬೆಯ ರಸವನ್ನು ಸೇರಿಸಿ ಮಿಶ್ರಣ ಮಾಡಿ ದಿನವೆಲ್ಲಾ ಕೊಂಚ ಕೊಂಚವಾಗಿ ಕುಡಿಯುತ್ತಿರಿ. ಇಷ್ಟು ವ್ಯವಧಾನ ಇಲ್ಲದಿದ್ದರೆ ತಣ್ಣೀರಿಗೇ ಒಂದಿಂಚಿನಷ್ಟು ಹಸಿಶುಂಠಿಯ ತುಂಡುಗಳನ್ನು ಸೇರಿಸಿ ಚೆನ್ನಾಗಿ ಕಲಕಿ ನಾಲ್ಕು ಗಂಟೆಗಳ ಕಾಲ ಫ್ರಿಜ್ಜಿನಲ್ಲಿಡಿ. ಬಳಿಕ ಇದನ್ನು ಹೊರತೆಗೆದು ದಿನವಿಡೀ ಕೊಂಚಕೊಂಚವಾಗಿ ಕುಡಿಯುತ್ತಿರಿ. ಈ ನೀರನ್ನು ಮರುದಿನ ಬಳಸುವಂತಿಲ್ಲ, ಆ ದಿನವೇ ಖಾಲಿ ಮಾಡಿಬಿಡಬೇಕು. ಬನ್ನಿ, ಈ ನೀರಿನ ಪ್ರಯೋಜನಗಳೇನು ಎಂಬುದನ್ನು ನೋಡೋಣ...

ಪ್ರಯೋಜನ #1

ಪ್ರಯೋಜನ #1

ಉರಿಯೂತದ ಕಾರಣ ಮೂಳೆಗಳ ಸಂಧುಗಳಲ್ಲಿ ಉರಿ, ಸಂಧಿವಾತದ ತೊಂದರೆ ಇರುವವರು ಈ ನೀರನ್ನು ನಿಯಮಿತವಾಗಿ ಕುಡಿಯುತ್ತಿರುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಟೊಳ್ಳಾಗಿಸುವ osteoporosis ಎಂಬ ಸ್ಥಿತಿಯಿಂದಲೂ ಈ ನೀರು ರಕ್ಷಿಸುತ್ತದೆ.

ಪ್ರಯೋಜನ #2

ಪ್ರಯೋಜನ #2

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತುಂಬಿಕೊಂಡಿದೆ ಎಂಬ ವರದಿ ಬಂದಿದ್ದರೆ ಈ ನೀರನ್ನು ನಿತ್ಯವೂ ಕುಡಿಯಲು ಪ್ರಾರಂಭಿಸಿ. ಇದರಿಂದ ಕೊಲೆಸ್ಟಾಲ್ ಮಟ್ಟ ಸಮರ್ಪಕವಾಗಿರುವಂತೆ ಮಾಡುತ್ತದೆ ಹಾಗೂ ಈ ಮೂಲಕ ಬರಬಹುದಾಗಿದ್ದ ತೊಂದರೆಗಳಿಂದ ರಕ್ಷಣೆ ಪಡೆದಂತಾಗುತ್ತದೆ.

ಪ್ರಯೋಜನ #3

ಪ್ರಯೋಜನ #3

ಇತರ ಪ್ರಯೋಜನಗಳ ಜೊತೆಗೇ ಇದು ಹಲವು ವಿಧದ ಕ್ಯಾನ್ಸರ್ ಬರುವುದರಿಂದಲೂ ತಡೆಯುತ್ತದೆ. ಇದರ ಉತ್ತಮ ಪರಿಣಾಮ ಪಡೆಯಲು ಈ ನೀರನ್ನು ದಿನದ ಪ್ರಥಮ ಆಹಾರವಾಗಿ ಖಾಲಿಹೊಟ್ಟೆಯಲ್ಲಿ ಸೇವಿಸಿ ಮುಂದಿನ ಒಂದು ಗಂಟೆ ಏನನ್ನೂ ಸೇವಿಸಬಾರದು.

ಪ್ರಯೋಜನ #4

ಪ್ರಯೋಜನ #4

ಅಧಿಕ ರಕ್ತದೊತ್ತಡದವರಿಗೆ ಈ ನೀರು ಅತ್ಯುತ್ತಮವಾಗಿದ್ದು ಕ್ರಮೇಣವಾಗಿ ಒತ್ತಡವನ್ನು ಆರೋಗ್ಯಕರ ಮಟ್ಟಕ್ಕೆ ತರುವಲ್ಲಿ ನೆರವಾಗುತ್ತದೆ. ಅಲ್ಲದೇ ರಕ್ತವನ್ನು ತಿಳಿಗೊಳಿಸಲೂ ನೆರವಾಗುತ್ತದೆ.

ಪ್ರಯೋಜನ #5

ಪ್ರಯೋಜನ #5

ಇದರಲ್ಲಿರುವ ಹಲವು ಪ್ರಬಲ ಆಂಟಿ ಆಕ್ಸಿಡೆಂಟುಗಳ ನೆರವಿನಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಹಾಗೂ ಕ್ಯಾನ್ಸರ್ ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಚಟುವಟಿಕೆಯನ್ನು ನಿಯಂತ್ರಿಸುವುದು ಹಾಗೂ ಕಲ್ಮಶಗಳನ್ನು ನಿವಾರಿಸುವ ಮೂಲಕ ಆರೋಗ್ಯ ವೃದ್ಧಿಸುತ್ತದೆ.

ಪ್ರಯೋಜನ #6

ಪ್ರಯೋಜನ #6

ನಿತ್ಯವೂ ಈ ನೀರನ್ನು ಸೇವಿಸುವ ಮೂಲಕ ವಾಕರಿಕೆ, ಸುಸ್ತು ಮೊದಲಾದ ತೊಂದರೆಗಳಿಂದ ಮುಕ್ತಿ ದೊರಕುತ್ತದೆ. ಕೆಲವು ಮಾಹಿತಿಗಳ ಪ್ರಕಾರ ಸ್ನಾಯುಗಳ ನೋವು ಮತ್ತು ಅನಾಸಕ್ತಿಯನ್ನೂ ನಿವಾರಿಸುತ್ತದೆ.

ಪ್ರಯೋಜನ #7

ಪ್ರಯೋಜನ #7

ಇದರಲ್ಲಿ ಜಿಂಜರಾಲ್ ಎಂಬ ಪೋಷಕಾಂಶವಿದೆ. (ಜಿಂಜರ್ ಎಂಬ ಹೆಸರು ಬರಲಿಕ್ಕೆ ಇದೇ ಕಾರಣ). ಈ ಪೋಷಕಾಂಶದಲ್ಲಿ ಹಲವಾರು ಔಷಧೀಯ ಗುಣವಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ.

English summary

The Power Of Ginger-Infused Water

We all know about the power of fruit infused water and vegetable infused water. Today, let us discuss about ginger water. Infusion is all about soaking ginger in water. Ginger has many medicinal properties and can be consumed in any form. But if you are bored to consume it in any other form, try infusing it in water. Yes, it can also be used for weight loss too.
Story first published: Saturday, May 28, 2016, 13:40 [IST]
X
Desktop Bottom Promotion