ಹಿಂಡಿ ಹಿಪ್ಪೆ ಮಾಡುವ ಮೊಣಕಾಲು ನೋವಿಗೆ ತ್ವರಿತ ಪರಿಹಾರ...

ಮೊಣಕಾಲು ನೋವನ್ನು ಹೇಗೆ ಸ್ವಾಭಾವಿಕವಾಗಿ ಗುಣಪಡಿಸಿಕೊಳ್ಳುವುದು? ಎಂಬ ನಿಮ್ಮ ಪ್ರಶ್ನೆಗೆ ಬೋಲ್ಡ್‌ಸ್ಕೈ ಕೆಲವೊಂದು ಪರಿಣಾಮಕಾರಿಯಾದ ಮನೆಮದ್ದುಗಳನ್ನು ನಿಮ್ಮೊಂದಿಗೆ ಇಂದು ಹಂಚಿಕೊಳ್ಳುತ್ತಿದೆ....

By: Jaya subramanya
Subscribe to Boldsky

ವಯಸ್ಸಾಗುತ್ತಿದ್ದಂತೆ ಮನುಷ್ಯನನ್ನು ಹಲವಾರು ರೋಗಗಳು ಕಾಡುತ್ತವೆ. ನಮ್ಮ ದೇಹದಲ್ಲಿರುವ ಶಕ್ತಿ ಕಡಿಮೆಯಾಗಿ ಮೂಳೆಗಳು ಸ್ನಾಯುಗಳು ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಂತೆ ನಮ್ಮಲ್ಲಿ ಒಂದಿಲ್ಲೊಂದು ನೋವುಗಳು ಕಾಣಿಸಿಕೊಂಡು ಬಿಡುತ್ತದೆ. ರೋಗ ನಿರೋಧಕ ಶಕ್ತಿ ನಮ್ಮಲ್ಲಿ ದುರ್ಬಲಗೊಳ್ಳುತ್ತಾ ಹೋಗುತ್ತದೆ. ಕೈಗಳಲ್ಲಿ ನೋವು ಕಾಲುಗಳಲ್ಲಿ ನೋವು, ಮೂಳೆ ಮುರಿತ ಹೀಗೆ ಅಂಗಗಳು ಬಲಹೀನಗೊಂಡು ಬಿಡುತ್ತವೆ. ಮಂಡಿನೋವನ್ನು ಸಂಪೂರ್ಣವಾಗಿ ಗುಣಪಡಿಸುವ ಸರಳ ಮನೆಮದ್ದು

ನೋವುಗಳಲ್ಲಿ ಮಂಡಿನೋವು ಅಥವಾ ಮೊಣಕಾಲು ಯಮಯಾತನೆಯನ್ನು ಉಂಟುಮಾಡಿಬಿಡುತ್ತದೆ. ವಯಸ್ಸಾದವರನ್ನು ಮಂಡಿ ನೋವು ಬೇರೆ ರೀತಿಯಲ್ಲಿ ಕಾಡಿದರೆ ಇನ್ನು ಕೆಲವೊಮ್ಮೆ ಹದಿಹರೆಯದವರಿಗೂ ಮಂಡಿ ನೋವು ಕಾಣಿಸಿಕೊಳ್ಳುವುದಿದೆ. ಒಮ್ಮೊಮ್ಮೆ ಮಂಡಿ ಚಿಪ್ಪು ಸ್ಥಾನಪಲ್ಲಟಗೊಂಡಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿದಾಗ ಮೂಳೆ ಮುರಿತ ಉಂಟಾದಲ್ಲಿ ಹೀಗೆ ಮಂಡಿ ನೋವು ಹದಿಹರೆದವರನ್ನು ಕಾಡುತ್ತದೆ. ದೊಡ್ಡವರಲ್ಲಿ ಬಲಹೀನತೆಯಿಂದ ಕೂಡ ಮಂಡಿ ಚಿಪ್ಪು ಸವೆದು ಮಂಡಿ ನೋವು ಉಂಟಾಗುತ್ತದೆ. ಮಂಡಿ ನೋವಿಗೆ ಇಲ್ಲಿದೆ ನೋಡಿ ಸುಲಭ ಪರಿಹಾರ!

ಈ ನೋವುಗಳು ಯಮಯಾತನೆಯನ್ನು ನೀಡುತ್ತಿದ್ದರೆ ಅದಕ್ಕಾಗಿ ಮನೆಯಲ್ಲಿಯೇ ತುರ್ತು ಚಿಕಿತ್ಸೆಗಳನ್ನು ಅನುಸರಿಸಿಕೊಂಡು ಇದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಬನ್ನಿ ಆ ಮನೆಮದ್ದುಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ...

ಆಲೀವ್ ಎಣ್ಣೆ

ನೋವಿರುವ ಭಾಗದಲ್ಲಿ ಆಲೀವ್ ಎಣ್ಣೆ ಅನ್ನು ಹಚ್ಚಿಕೊಂಡು 5 ನಿಮಿಷಗಳ ಕಾಲ ಮಸಾಜ್ ಮಾಡಿ. ಒಂದು ಗಂಟೆಯಷ್ಟು ಕಾಲ ಇದನ್ನು ಹಾಗೆಯೇ ಬಿಟ್ಟು ನಂತರ ತೊಳೆದುಕೊಳ್ಳಿ. ದಿನಕ್ಕೊಮ್ಮೆ ಇದನ್ನು ಪುನರಾವರ್ತಿಸಿ. ಇದು ನೋವಿರುವ ಮತ್ತು ಬಾತಿರುವ ಮಂಡಿಯನ್ನು ಉಪಶಮನ ಮಾಡುತ್ತದೆ.

ಸಾಸಿವೆ ಎಣ್ಣೆ

ಒಂದೆರಡು ಬೆಳ್ಳುಳ್ಳಿಯನ್ನು ಸೇರಿಸಿಕೊಂಡು ಕೆಲವು ಹನಿಗಳಷ್ಟು ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. 15 ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಿ. ನಂತರ ಮಂಡಿಗೆ ಇದನ್ನು ಹಚ್ಚಿ. ಒಂದು ಗಂಟೆಯಷ್ಟು ಕಾಲ ಇದನ್ನು ಬಿಟ್ಟು ಬಿಸಿ ನೀರಿನಲ್ಲಿ ಅದ್ದಿದ ಟವೆಲ್‌ನಿಂದ ಮಂಡಿಯನ್ನು ಒರೆಸಿಕೊಳ್ಳಿ. ಇದು ನೋವನ್ನು ಉಪಶಮನ ಮಾಡುತ್ತದೆ.  ಕೂದಲು ಮತ್ತು ತ್ವಚೆ ಸೌಂದರ್ಯಕ್ಕೆ-ಸಾಸಿವೆ ಎಣ್ಣೆ

ಶುಂಠಿ ಚಹಾ

ಶುಂಠಿ, ಲಿಂಬೆ ರಸ ಮತ್ತು ಜೇನು ಬಳಸಿಕೊಂಡು ಶುಂಠಿ ಚಹಾ ತಯಾರಿಸಿ. ಪ್ರತೀ ದಿನ ಇದನ್ನು ಸೇವಿಸಿ, ಶುಂಠಿಯಲ್ಲಿರುವ ಉತ್ಪಕರ್ಷಣ ನಿರೋಧಿ ಅಂಶಗಳು ಬಾವು ಮತ್ತು ನೋವನ್ನು ಕಡಿಮೆ ಮಾಡುತ್ತದೆ.  ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಮೆಂತೆ ಬೀಜಗಳು

ಮೆಂತೆ ಬೀಜವನ್ನು ಹುರಿದುಕೊಳ್ಳಿ, ನಂತರ ಇದನ್ನು ಹುಡಿಮಾಡಿಕೊಂಡು ಸ್ವಲ್ಪ ನೀರು ಹಾಕಿ ಇದರಿಂದ ಪೇಸ್ಟ್ ತಯಾರಿಸಿ. ಮಂಡಿಗೆ ಈ ಪೇಸ್ಟ್ ಹಚ್ಚಿ ತದನಂತರ 30 ನಿಮಿಷಗಳ ಬಳಿಕ ಇದನ್ನು ತೊಳೆದುಕೊಳ್ಳಿ. ನೋವನ್ನು ಶಮನ ಮಾಡಲು ನಿತ್ಯವೂ ಹೀಗೆ ಮಾಡಿ.   ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

ದ್ರಾಕ್ಷಿ ಜ್ಯೂಸ್

ಒಂದು ಕಪ್‌ನಷ್ಟು ದ್ರಾಕ್ಷಿ ಜ್ಯೂಸ್‌ಗೆ ಅರ್ಧ ಚಮಚದಷ್ಟು ಪೆಕ್ಟಿನ್ ಅನ್ನು ಸೇರಿಸಿ ಮತ್ತು ಮೂರು ವಾರಗಳ ಕಾಲ ದಿನಕ್ಕೆ ಎರಡು ಬಾರಿ ಇದನ್ನು ಸೇವಿಸಿ. ದ್ರಾಕ್ಷಿ ಜ್ಯೂಸ್ ಪರಿಣಾಮಕಾರಿಯಾಗಿ ಮಂಡಿ ನೋವನ್ನು ಶಮನ ಮಾಡುತ್ತದೆ.  ಹುಳಿ ಸಿಹಿ ದ್ರಾಕ್ಷಿ ಜ್ಯೂಸ್‌‌ನಲ್ಲಿದೆ ಆರೋಗ್ಯಕರ ಗುಣಗಳು

ನೀಲಗಿರಿ ಎಣ್ಣೆ

5 ಹನಿಗಳಷ್ಟು ನೀಲಗಿರಿ ಎಣ್ಣೆಯನ್ನು 2 ಚಮಚ ನೀಲಗಿರಿ ಎಣ್ಣೆ ಮತ್ತು 5 ಹನಿಗಳಷ್ಟು ಪುದೀನಾ ಎಣ್ಣೆಯೊಂದಿಗೆ ಸೇರಿಸಿಕೊಂಡು ನೋವಿರುವ ಭಾಗದಲ್ಲಿ ಹಚ್ಚಿ ಮತ್ತು ಗಂಟೆಯಷ್ಟು ಕಾಲ ಹಾಗೆಯೇ ಬಿಡಿ.

ಲಿಂಬೆ

ಸಂಧಿವಾತದಿಂದ ಉಂಟಾಗುವ ನೋವಿಗೆ ಲಿಂಬೆ ಪರಿಣಾಮಕಾರಿಯಾದುದು. ಲಿಂಬೆಯ ಹೋಳು ಮಾಡಿಕೊಂಡು ಅದನ್ನು ಬಟ್ಟೆಯಿಂದ ಕಟ್ಟಿಕೊಳ್ಳಿ. ಈ ಬಟ್ಟೆಯನ್ನು ಎಳ್ಳೆಣ್ಣೆಯಲ್ಲಿ ಅದ್ದಿ ಮತ್ತು ನೋವಿರು ಮಂಡಿಯಲ್ಲಿ ಇಡಿ. 10 ನಿಮಿಷಗಳ ಕಾಲ ಹಾಗೆಯೇ ಬಿಡಿ.

ತೆಂಗಿನೆಣ್ಣೆ

ಮೂರು ನಿಮಿಷಗಳಷ್ಟು ಕಾಲ ಅರ್ಧ ಕಪ್ ತೆಂಗಿನೆಣ್ಣೆಯನ್ನು ಬಿಸಿ ಮಾಡಿಕೊಂಡು ನಿಮ್ಮ ಬೆರಳುಗಳಿಂದ ಮಂಡಿಗೆ ಹಚ್ಚಿಕೊಳ್ಳಿ. ಕೆಲವು ಗಂಟೆಗಳಷ್ಟು ಕಾಲ ಹಾಗೆಯೇ ಬಿಡಿ.

ಆಪಲ್ ಸೀಡರ್ ವಿನೇಗರ್

ಒಂದು ಕಪ್‌ನಷ್ಟು ನೀರಿಗೆ ಕೆಲವು ಹನಿಗಳಷ್ಟು ಆಪಲ್ ಸೀಡರ್ ವಿನೇಗರ್ ಅನ್ನು ಹಾಕಿಕೊಂಡು ದಿನಕ್ಕೆ ಒಂದು ಬಾರಿ ಈ ದ್ರಾವಣವನ್ನು ಕುಡಿಯಿರಿ. ಇದರಲ್ಲಿರುವ ಕ್ಷಾರ ಗುಣಗಳು ಮಂಡಿಯ ನೋವನ್ನು ಶಮನ ಮಾಡುತ್ತದೆ.

ಮೆಣಸಿನ ಹುಡಿಯೊಂದಿಗೆ ಆಲೀವ್ ಎಣ್ಣೆ

ಒಂದೂವರೆ ಕಪ್‌ನಷ್ಟು ಆಲೀವ್ ಆಯಿಲ್‌ಗೆ ಎರಡು ಚಮಚದಷ್ಟು ಮೆಣಸಿನ ಹುಡಿಯನ್ನು ಸೇರಿಸಿ. ಇದನ್ನು ಪೇಸ್ಟ್‌ನಂತೆ ಮಾಡಿಕೊಂಡು ನೋವಿರುವ ಮಂಡಿಭಾಗದಲ್ಲಿ ಹಚ್ಚಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿ. ಮೆಣಸಿನಲ್ಲಿ ಕ್ಯಾಪ್ಸೈಸಿನ್ ಎಂಬ ಆಕ್ಟೀವ್ ಅಂಶವಿದ್ದು ಇದು ನೋವು ನಿವಾರಕವಾಗಿದೆ ಮತ್ತು ಮಂಡಿಯ ಊತವನ್ನು ಕಡಿಮೆ ಮಾಡುತ್ತದೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Thursday, December 1, 2016, 8:01 [IST]
English summary

Take Up These 10 Home Remedies & Say Goodbye To Knee Pain!

Knee pain affects most of the people during some point in their lives. It occurs due to certain activities that we do not perform on an everyday basis. Here we have listed home remedies for knee pain that you must surely make use of. Suddenly engaging in sports and other activities can cause pain in the knee due to muscle strain. Sometimes, knee pain can reach an unbearable level and it can limit a person from performing daily activities.
Please Wait while comments are loading...
Subscribe Newsletter