For Quick Alerts
ALLOW NOTIFICATIONS  
For Daily Alerts

ಇದೇ ಕಾರಣಕ್ಕೆ 'ಅಸಿಡಿಟಿ' ಕಾಣಿಸಿಕೊಳ್ಳುವುದು, ನೆನಪಿಡಿ....

By Super Admin
|

ಅಸಿಡಿಟಿ ಅಥವಾ ಹೊಟ್ಟೆಯಲ್ಲಿ ಹುಳಿ ಹುಳಿಯಾದಂತಾಗುವ ಅನುಭವವು ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ಬಾರಿ ಕಾಟ ನೀಡಿರುತ್ತದೆ. ಸಾಮಾನ್ಯವಾಗಿ ಮಿತಿ ಮೀರಿ ತಿಂದಾಗ ಈ ಸಮಸ್ಯೆ ಕಾಡುವುದು ಸಹಜ. ಆದರೆ ಇದರಿಂದಾಗುವ ಸಮಸ್ಯೆಗಳು ಮಾತ್ರ ಅಷ್ಟಿಷ್ಟಲ್ಲ ಅಸಿಡಿಟಿ ಸಮಸ್ಯೆಯ ಹೆಡೆಮುರಿ ಕಟ್ಟಿಹಾಕುವ ಮನೆಮದ್ದು

ಕೆಲವೊಮ್ಮೆ ಎದೆಯ ಭಾಗದಲ್ಲಿ ಉರಿ, ವಾಕರಿಕೆ, ವಾಂತಿ, ತೇಗು, ಹುಳಿತೇಗು ಇತ್ಯಾದಿಗಳು ಎದುರಾಗುತ್ತವೆ. ಇದರೊಂದಿಗೆ ಹೊಟ್ಟೆಯಲ್ಲಿ ನೋವು, ತಲೆಸಿಡಿತ ಮೊದಲಾದವೂ ಉಂಟಾಗಬಹುದು. ಅಸಿಡಿಟಿಯ ಈ ಅಸಾಮಾನ್ಯ ಲಕ್ಷಣಗಳನ್ನು ಕಡೆಗಣಿಸಬೇಡಿ

ಆದರೆ ಈ ಸ್ಥಿತಿಗೆ ಕೆಲವು ಆಹಾರಗಳು ಮಾತ್ರವೇ ಕಾರಣವಲ್ಲ, ನಮ್ಮ ಕೆಲವು ಅಭ್ಯಾಸಗಳೂ ಕಾರಣವಾಗಿರಬಹುದು. ಬನ್ನಿ, ಈ ಬಗ್ಗೆ ಕೆಲವು ಅಚ್ಚರಿಯ ಮಾಹಿತಿಗಳನ್ನು ನೋಡೋಣ:

ಕಾಫಿ

ಕಾಫಿ

ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಖಾಲಿಹೊಟ್ಟೆಯಲ್ಲಿ ಕಾಫಿ ಕುಡಿಯುವ ಮೂಲಕ ಆಮ್ಲೀಯತೆ ಇನ್ನಷ್ಟು ಹೆಚ್ಚುತ್ತದೆ.

ಮದ್ಯಪಾನ

ಮದ್ಯಪಾನ

ಹುಳಿತೇಗು, ವಾಕರಿಕೆ ಮೊದಲಾದವುಗಳಿಗೆ ಮದ್ಯಪಾನ ನೇರವಾಗಿ ಕಾರಣವಾಗಿದೆ. ನಿಯಮಿತವಾಗಿ ಸೇವಿಸುವವರೂ ಆಗಾಗ ಸೇವಿಸುವವರೂ ಆಮ್ಲೀಯತೆಗೆ ಒಳಗಾಗುತ್ತಾರೆ. ರಾತ್ರಿ ಮಲಗುವ ಮುನ್ನ ಮದ್ಯಪಾನದ ಅಭ್ಯಾಸವಿರುವವರಿಗೆ ಮರುದಿನ ಆಮ್ಲೀಯತೆ ಖಾತರಿಯಾಗಿದೆ. ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!

ಚ್ಯೂಯಿಂಗ್ ಗಮ್ ಮೆಲ್ಲುವುದು

ಚ್ಯೂಯಿಂಗ್ ಗಮ್ ಮೆಲ್ಲುವುದು

ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ದಿನದ ಹೆಚ್ಚಿನ ಸಮಯ ಚ್ಯೂಯಿಂಗ್ ಗಮ್ ಮೆಲ್ಲುವ ಅಭ್ಯಾಸವುಳ್ಳವರು ಆಮ್ಲೀಯತೆಗೆ ಒಳಗಾಗುತ್ತಾರೆ. ವಿಶೇಷವಾಗಿ ಪುದೀನಾ ಅಥವಾ ಮಿಂಟ್ ಸ್ವಾದದ ಗಮ್ ಮೆಲ್ಲುವವರಲ್ಲಿ ಈ ಪ್ರಮಾಣ ಅತ್ಯಧಿಕವಿರುತ್ತದೆ.

ತಡರಾತ್ರಿ ಆಹಾರ ಸೇವನೆ

ತಡರಾತ್ರಿ ಆಹಾರ ಸೇವನೆ

ಇನ್ನೊಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ತಡರಾತ್ರಿಯವರೆಗೆ ಎಚ್ಚರಾಗಿದ್ದು ಅನಾರೋಗ್ಯಕರ ಆಹಾರ ಸೇವಿಸುವುದು ಅಥವಾ ಊಟದ ತಕ್ಷಣ ಮಲಗುವುದು ಆಮ್ಲೀಯತೆ ಹೆಚ್ಚಿಸುತ್ತದೆ. ಏಕೆಂದರೆ ಮಲಗಿದ ಬಳಿಕ ಅಡ್ದಲಾಗಿದ್ದ ಅನ್ನನಾಳದಿಂದ ಅರೆಜೀರ್ಣಗೊಂಡ ಆಹಾರ ಹಿಂದೆ ಬರಲು ಸುಲಭವಾಗುತ್ತದೆ. ಇದು ಎದೆಯುರಿ ಮತ್ತು ಹುಳಿತೇಗಿಗೆ ಕಾರಣವಾಗುತ್ತದೆ.

ಲಗುಬಗನೇ ತಿನ್ನುವುದು

ಲಗುಬಗನೇ ತಿನ್ನುವುದು

ಕೆಲಸದ, ಪ್ರಯಾಣ, ಬೇಗ ತಲುಪುವ ಆತುರದಲ್ಲಿ ಲಗುಬಗನೇ ತಿನ್ನುವ ಮೂಲಕವೂ ಆಮ್ಲೀಯತೆಯುಂಟಾಗುತ್ತದೆ. ಏಕೆಂಅರೆ ಈ ಮೂಲಕ ಆಹಾರ ಲಾಲಾರಸದಲ್ಲಿ ಸಾಕಷ್ಟು ಬೆರೆತಿರುವುದಿಲ್ಲ. ಅರ್ಧಬರ್ಧ ಅರೆದಿದ್ದ ಆಹಾರ ಹೊಟ್ಟೆ ಸೇರಿದಾಗ ಇಲ್ಲಿಯೂ ಅಜೀರ್ಣವಾಗಿ ಆಮ್ಲೀಯತೆ ಉಂಟಾಗುತ್ತದೆ.

ಧೂಮಪಾನ

ಧೂಮಪಾನ

ಆಮ್ಲೀಯತೆಗೆ ಧೂಮಪಾನವೂ ಇನ್ನೊಂದು ಕಾರಣವಾಗಿದೆ. ಹೊಗೆ ಶ್ವಾಸಕೋಶಗಳಿಗೆ ತಲುಪಿದರೂ ಬೂದಿ ಮತ್ತು ಇತರ ಕಣಗಳು ಹೊಟ್ಟೆ ಸೇರಬಹುದು. ಇದು ಹೊಟ್ಟೆಯಲ್ಲಿ ಆಮ್ಲೀಯತೆಗೆ ಕಾರಣವಾಗುತ್ತದೆ.

English summary

Surprising Things That Make Acidity Worse!

Acidity comprises of these common symptoms such as abdominal pain, burning sensation in the chest area, nausea, vomiting, belching, bitter taste in the mouth, etc. Many a times, people tend to associate acidity with its most common causes as mentioned earlier. However, there are certain other things that can make acid reflux worse, to know what they are, have a look below.
X
Desktop Bottom Promotion