ಸತತ ಬಾಯಾರಿಕೆ ಆಗುತ್ತಿದ್ದರೆ, ಇದು ಅನಾರೋಗ್ಯದ ಲಕ್ಷಣ!

ಕೆಲವೊಮ್ಮೆ ಸಾಕಷ್ಟು ನೀರು ಕುಡಿದಿದ್ದರೂ ಸತತವಾಗಿ ಬಾಯಾರಿಕೆಯ ಸೂಚನೆಯನ್ನು ನಮ್ಮ ಮೆದುಳು ನೀಡುತ್ತಲೇ ಇದ್ದರೆ ಇದಕ್ಕೆ ದೇಹದಲ್ಲಿ ನೀರಿನ ಕೊರತೆಯ ಹೊರತಾದ ಬೇರೆಯೇ ಕಾರಣಗಳಿರಬಹುದು...

By: Arshad
Subscribe to Boldsky

ನಿತ್ಯವೂ ಎಂಟು ಲೋಟಗಳಷ್ಟು ನೀರು ಕುಡಿಯುವುದರ ಮಹತ್ವವನ್ನು ನಾವೆಲ್ಲರೂ ಅರಿತೇ ಇದ್ದೇವೆ. ಉತ್ತಮ ಆರೋಗ್ಯ ಕಾಪಾಡಿಕೊಂಡು ಬರಲು ದೇಹದಲ್ಲಿ ಸತತವಾಗಿ ನೀರಿನ ಪೂರೈಕೆ ಆಗುತ್ತಲೇ ಇರಬೇಕು. ಇಲ್ಲದಿದ್ದರೆ ದೇಹದಲ್ಲಿ ನೀರಿನ ಕೊರತೆಯಾಗುತ್ತದೆ. ಇದನ್ನೇ ನಿರ್ಜಲೀಕರಣ ಎಂದು ಕರೆಯುತ್ತೇವೆ.

ದೇಹದಲ್ಲಿ ನೀರಿನ ಕೊರತೆಯಾದಾಗಲೆಲ್ಲಾ, ಅಥವಾ ಕ್ರೀಡೆ, ದೈಹಿಕ ಶ್ರಮದ ಕೆಲಸ, ಮಾನಸಿಕ ಒತ್ತಡದ ಕೆಲಸಗಳ ಬಳಿಕ ನೀರು ಬೇಕೆಂದು ಮೆದುಳು ಬಾಯಾರಿಕೆಯ ಮೂಲಕ ಸೂಚನೆಯನ್ನೂ ನೀಡುತ್ತದೆ. ಈ ಸೂಚನೆಯನ್ನು ಅಲಕ್ಷಿಸದೇ ಸಾಧ್ಯವಾದಷ್ಟು ಬೇಗನೇ ನೀರು ಕುಡಿಯುವ ಮೂಲಕ ಬಳಲಿದ್ದ ದೇಹಕ್ಕೆ ಮತ್ತೆ ಚೈತನ್ಯ ತುಂಬಿಸಬಹುದು. ಇದು ನಮಗೆ ಊಟವಾದ ಬಳಿಕ ತಿನ್ನುವ ಸಿಹಿಯ ಮೂಲಕ ಪಡೆಯುವಂತಹ ತೃಪ್ತಿಭಾವವನ್ನೇ ಕೊಡುತ್ತದೆ.  ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ನೀರಿನ ಕೊರತೆ ಹೆಚ್ಚುತ್ತಾ ಹೋದಂತೆ ಮೆದುಳು ಬಾಯಾರಿಕೆಯ ಸೂಚನೆಗಳನ್ನೂ ಹೆಚ್ಚಿಸುತ್ತಾ ಹೋಗುತ್ತದೆ. ಈ ಸೂಚನೆ ಗರಿಷ್ಠ ಮಟ್ಟ ಮುಟ್ಟಿದಾಗ ಬಾಯಿ ಒಣಗಲು ತೊಡಗುತ್ತದೆ. ಈ ಭೂಮಿಯಲ್ಲಿ ಅತ್ಯಂತ ಬೆಲೆಬಾಳುವ ವಸ್ತುವೊಂದು ಇದ್ದರೆ ಅದು ನೀರೇ ಅನ್ನಿಸುತ್ತದೆ. ಆಗ ನೀರು ಸಿಕ್ಕರೆ ನಾವೆಲ್ಲಾ ಗಟಗಟೆನೇ ಕೊಡಗಟ್ಟಲೇ ಕುಡಿದು ಬಿಡುತ್ತೇವೆ.

ನೀರನ್ನು ಸಾವಕಾಶವಾಗಿ ಕೊಂಚಕೊಂಚವಾಗಿ ಇಡಿಯ ದಿನ ಕುಡಿಯುತ್ತಿರುವುದು ಅತ್ಯಂತ ಆರೋಗ್ಯಕರ. ಒಮ್ಮೆಲೇ ಭಾರೀ ಪ್ರಮಾಣದಲ್ಲಿ ನೀರು ಕುಡಿಯುವುದು ಅಷ್ಟೊಂದು ಕ್ಷೇಮವಲ್ಲ. ಆದರೆ ಕೆಲವೊಮ್ಮೆ ಸಾಕಷ್ಟು ನೀರು ಕುಡಿದಿದ್ದರೂ ಸತತವಾಗಿ ಬಾಯಾರಿಕೆಯ ಸೂಚನೆಯನ್ನು ನಮ್ಮ ಮೆದುಳು ನೀಡುತ್ತಲೇ ಇದ್ದರೆ ಇದಕ್ಕೆ ದೇಹದಲ್ಲಿ ನೀರಿನ ಕೊರತೆಯ ಹೊರತಾದ ಬೇರೆಯೇ ಕಾರಣಗಳಿರಬಹುದು.  ನೀರು ಕುಡಿಯುವುದು ಕಡಿಮೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಒಂದು ವೇಳೆ ಪ್ರಯಾಣದ ನಡುವೆ, ಸಭಾಕಾರ್ಯಕ್ರಮದ ನಡುವೆ ಬಾಯಾರಿಕೆಯಾದರೆ ಇದಕ್ಕೆ ಆ ಸಂದರ್ಭಗಳು ಕಾರಣವಾಗಿರಬಹುದು. ಇದಕ್ಕೂ ಹೊರತಾಗಿ ನೀರು ಬೇಕೆನ್ನಿಸಿದರೆ ಕೆಳಗಿನ ಮಾಹಿತಿ ಮೂಲಕ ನೀಡಲಾಗಿರುವ ಕಾರಣಗಳು ಇದಕ್ಕೆ ಕಾರಣವಾಗಿರಬಹುದು...  

ದೇಹದಲ್ಲಿ ಹೆಚ್ಚಾಗಿರುವ ಉಪ್ಪು

ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಗಾದೆ ಬಂದಿರುವುದೇ ಈ ಕಾರಣಕ್ಕೆ. ಆಹಾರದಲ್ಲಿ ಉಪ್ಪು ಹೆಚ್ಚಾಗಿದ್ದರೆ ಈ ಉಪ್ಪನ್ನು ಹೊರಹಾಕಲು ಹೆಚ್ಚಿನ ನೀರಿನ ಅಗತ್ಯವಿದೆ. ಈ ನೀರನ್ನು ಪ್ರತಿ ಜೀವಕೋಶದಿಂದ ಪಡೆಯಲಾಗುತ್ತದೆ. ಈಗ ಜೀವಕೋಶಗಳೆಲ್ಲಾ ನೀರಿಗಾಗಿ ಹಪಹಪಿಸುತ್ತವೆ. ಈ ಹಪಾಹಪಿಯನ್ನು ಕೇಳಿಸಿಕೊಂಡ ಮೆದುಳು ಬಾಯಾರಿಕೆಯ ಸೂಚನೆಯ ಮೂಲಕ 'ನೀರು ಕಳಿಸಿ' ಎಂಬ ಆಜ್ಞೆ ನೀಡುತ್ತದೆ.

ಬೆಳಗ್ಗಿನ ವ್ಯಾಯಾಮ

ಬೆಳಗ್ಗಿನ ವ್ಯಾಯಾಮ ಅತ್ಯುತ್ತಮವಾದ ಅಭ್ಯಾಸವಾಗಿದೆ. ಆದರೆ ಈ ಅಭ್ಯಾಸವೇ ದಿನವಿಡೀ ಬಾಯಾರಿಕೆಯಿಂದಿರಲೂ ಕಾರಣವಾಗುತ್ತದೆ. ಏಕೆಂದರೆ ಈ ವ್ಯಾಯಾಮದ ಮೂಲಕ ಹೆಚ್ಚಿನ ನೀರು ಮತ್ತು ಎಲೆಕ್ಟ್ರೋಲೈಟುಗಳು ಬೆವರಿನ ರೂಪದಲ್ಲಿ ಹರಿದುಹೋಗುತ್ತದೆ. ನಂತರದ ಚಟುವಟಿಕೆಗಳಿಗೂ ನೀರು ಅಗತ್ಯವಿರುವ ಕಾರಣ ಹೆಚ್ಚಿನ ನೀರನ್ನು ದಿನವಿಡೀ ಕುಡಿಯಬೇಕಾಗುತ್ತದೆ.

ಮಧುಮೇಹ

ಒಂದು ವೇಳೆ ಹೆಚ್ಚಿನ ವ್ಯಾಯಾಮವೂ ಇಲ್ಲದೇ ಹೆಚ್ಚಿನ ಉಪ್ಪನ್ನೂ ಸೇವಿಸದೇ ದಿನವಿಡೀ ಬಾಯಾರಿಕೆಯಾಗುತ್ತಿದ್ದು ಸತತವಾಗಿ ಮೂತ್ರಕ್ಕೂ ಅವಸರವಾಗುತ್ತಿದ್ದರೆ ಮಧುಮೇಹದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಏಕೆಂದರೆ ಇವು ಮಧುಮೇಹದ ಸ್ಪಷ್ಟ ಸೂಚನೆಗಳಾಗಿದ್ದು ಇದನ್ನು ವೈದ್ಯರು ದೃಢೀಕರಿಸುತ್ತಾರೆ.  ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು

ಬಾಯಿ ಒಣಗುವುದು (Xerostomia)

ನಮ್ಮ ಬಾಯಿಯಲ್ಲಿ ಸತತವಾಗಿ ಜೊಲ್ಲು ಉತ್ಪಾದನೆಯಾಗುತ್ತಲೇ ಇರುತ್ತದೆ. ಆಹಾರ ಬಾಯಿಯಲ್ಲಿದ್ದಾಗ ಇದು ಹೆಚ್ಚುತ್ತದೆ. ಉದ್ವೇಗದ ಸಮಯದಲ್ಲಿಯೂ ಹೆಚ್ಚುತ್ತದೆ. ಆದರೆ ಇದಕ್ಕೆ ತದ್ವಿರುದ್ದವಾಗಿ ಜೊಲ್ಲು ಕಡಿಮೆಯಾದರೆ ಬಾಯಿ ಒಣಗುತ್ತದೆ. ಆಹಾರ ಜಗಿಯಲು ಕಷ್ಟವಾಗುತ್ತದೆ. ಈ ಪರಿಸ್ಥಿತಿ ಇದ್ದಾಗ ದೇಹ ಹೆಚ್ಚು ನೀರನ್ನು ಸತತವಾಗಿ ಕುಡಿಯುತ್ತಿರುವಂತೆ ಸೂಚನೆ ನೀಡುತ್ತದೆ.

ರಕ್ತಹೀನತೆ (Anaemia)

ಒಂದು ವೇಳೆ ನಿಮ್ಮ ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿ ಅನೀಮಿಯಾ ಸ್ಥಿತಿಗೆ ಒಳಗಾಗಿದ್ದರೆ ದೇಹದ ಎಲ್ಲಾ ಜೀವಕೋಶಗಳಿಗೆ ನೀರು ಕೂಡಾ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಸಾಕಷ್ಟು ನೀರು ಕುಡಿದಿದ್ದರೂ ದಿನವಿಡೀ ಬಾಯಾರಿಕೆಯಾಗುತ್ತಿರುತ್ತದೆ.

ಔಷಧಿಗಳ ಅಡ್ಡಪರಿಣಾಮ

ಕೆಲವು ಔಷಧಿಗಳು, ವಿಶೇಷವಾಗಿ ಉದ್ವೇಗ, ಉನ್ಮಾದವನ್ನು ಕಡಿಮೆ ಮಾಡುವ, ಅಂಟಿಬಯಾಟಿಕ್ ಔಷಧಿಗಳು ದೇಹದ ನೀರನ್ನು ಕಬಳಿಸುವ ಮೂಲಕ ದೇಹದಲ್ಲಿ ನೀರಿನ ಕೊರತೆಗೆ ಕಾರಣವಾಗುತ್ತವೆ. ಇದು ಹೆಚ್ಚಿನ ನೀರಿಗೆ ಸತತವಾಗಿ ಬೇಡಿಕೆ ಇಡುವ ಕಾರಣ ಬಾಯಾರಿಕೆಯಾಗುತ್ತಿರುತ್ತದೆ.

ಹೆಚ್ಚು ಹೊತ್ತು ಬಿಸಿಲಿನಲ್ಲಿರುವುದು

ಹೊಲದಲ್ಲಿ, ಬಿಸಿಲಿನಲ್ಲಿ ಕೆಲಸ ಮಾಡುವವರು ಹೆಚ್ಚು ಕಾಲ ಬಿಸಿಲಿನ ಕಿರಣಗಳಿಗೆ ಮೈ ಒಡ್ದುತ್ತಾರೆ. ನಡಿಗೆ, ಓಟ, ಬಸ್ಸಿಗೆ ಕಾಯುವುದು, ಒಟ್ಟಾರೆ ಬಿಸಿಲಿನಲ್ಲಿ ಹೆಚ್ಚು ಹೊತ್ತು ಇದ್ದಷ್ಟೂ ಬಿಸಿಲಿನ ಝಳಕ್ಕೆ ದೇಹ ಬೆವರಿನ ಮೂಲಕ ನೀರನ್ನು ಕಳೆದುಕೊಳ್ಳುತ್ತದೆ. ಇದು ಬಾಯಾರಿಕೆಗೆ ಕಾರಣವಾಗಿದೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Thursday, October 20, 2016, 13:12 [IST]
English summary

Surprising Reasons That Make You Feel Thirsty All The Time!

Most of us would already be aware of the importance of drinking water and how an optimum level of water is needed in order to maintain a healthy body. As we know, adults should drink at least 2 litres of water in a day. Otherwise, one can suffer from various ailments caused by dehydration.
Please Wait while comments are loading...
Subscribe Newsletter