ಮೂತ್ರದ ಬಗ್ಗೆ ನೀವು ತಿಳಿಯದೇ ಇದ್ದ ಅಚ್ಚರಿಯ ಸಂಗತಿಗಳು!

ಮೂತ್ರದಲ್ಲಿ ಪ್ರಮುಖವಾಗಿ ಯೂರಿಕ್ ಆಮ್ಲ, ಸೋಡಿಯಂ ಕ್ಲೋರೈಡ್, ಉಪ್ಪು ಮತ್ತು ಸಂಗ್ರಹವಾದ ವಿಷಕಾರಿ ವಸ್ತುಗಳು ನೀರಿನಲ್ಲಿ ಕರಗಿರುತ್ತವೆ. ಕೆಲವೊಮ್ಮೆ ನಾವು ಸೇವಿಸಿದ ಆಹಾರಗಳಿಂದ ಮೂತ್ರದ ಬಣ್ಣ ಬದಲಾಗುತ್ತದೆ ಹಾಗೂ ಕೆಟ್ಟ ವಾಸನೆ ಬರುತ್ತದೆ...

By: manu
Subscribe to Boldsky

ಮೂತ್ರವಿಸರ್ಜನೆ ಆರೋಗ್ಯಕರ ಕ್ರಿಯೆಯಾಗಿದ್ದು ನಿಯಮಿತವಾಗಿ ದೇಹದ ಕಲ್ಮಶಗಳು ಹೊರಹೋಗುತ್ತಿರುವ ವಿಧಾನವಾಗಿದೆ. ರಕ್ತವನ್ನು ಸತತವಾಗಿ ಶೋಧಿಸುವ ಮೂತ್ರಪಿಂಡಗಳು ಕಲ್ಮಶ, ವಿಷಕಾರಿ ವಸ್ತುಗಳನ್ನು ಪ್ರತ್ಯೇಕಿಸಿ ದ್ರವರೂಪದಲ್ಲಿ ಮೂತ್ರಕೋಶದಲ್ಲಿ ಸಂಗ್ರಹಿಸುತ್ತಾ ಬರುತ್ತದೆ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆಯೇ?

ಮೂತ್ರಕೋಶಕ್ಕೆ ಈ ದ್ರವವನ್ನು ಹಿಡಿದಿಡುವ ಒಂದು ಸಾಮರ್ಥ್ಯವಿದೆ. ಈ ಸಾಮರ್ಥ್ಯ ಮೀರುವ ಹಂತಕ್ಕೂ ಮೊದಲು ಇದನ್ನು ಖಾಲಿ ಮಾಡಲು ಮೆದುಳು ಸೂಚನೆ ನೀಡುತ್ತದೆ. ಈ ಸೂಚನೆ ದಿನಕ್ಕೆಷ್ಟು ಬಾರಿ ಆಗುತ್ತದೆ ಎಂದು ನಿಮಗೆ ಗೊತ್ತಿದೆಯೇ? ಹೆಚ್ಚಿನವರಿಗೆ ಗೊತ್ತಿಲ್ಲ, ಅಥವಾ ಇದಕ್ಕೂ ಮುಂಚೆ ಈ ಬಗ್ಗೆ ಗಮನ ಹರಿಸಿಯೇ ಇಲ್ಲ. ಪದೇ-ಪದೇ ಮೂತ್ರ ವಿಸರ್ಜನೆ ಅಪಾಯದ ಸೂಚನೆ

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ನಮ್ಮ ಮೂತ್ರದ ಬಗ್ಗೆ ಕೆಲವು ವಿಷಯಗಳನ್ನು ತಿಳಿದಿರಲೇಬೇಕು. ಇದರಲ್ಲಿ ಮುಖ್ಯವಾದುದು ಮೂತ್ರದ ಬಣ್ಣ. ಮೂತ್ರವಿಸರ್ಜಿಸಲು ತಡಮಾಡಿದಷ್ಟೂ ಬಣ್ಣ ಹಳದಿಯಾಗುತ್ತಾ ಹೋಗುತ್ತದೆ. ಮೂತ್ರ ಉರಿಯೇ? ಇಲ್ಲಿದೆ ಮನೆಮದ್ದು

ದಿನದಲ್ಲಿ ಎಷ್ಟು ಬಾರಿ ಮೂತ್ರವಿಸರ್ಜನೆ ಆಗುತ್ತದೆ ಎಂಬ ಮಾಹಿತಿ ಅರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾದ ಮಾನದಂಡವಾಗಿದ್ದು ಈ ಪ್ರಮಾಣ ಕಡಿಮೆಯಾದಷ್ಟೂ ಆರೋಗ್ಯ ಕೆಡುವ ಸಾಧ್ಯತೆಯೂ ಹೆಚ್ಚುತ್ತದೆ. ಬನ್ನಿ, ಎಲ್ಲರೂ ಕಡ್ಡಾಯವಾಗಿ ತಿಳಿದಿರಲೇಬೇಕಾದ ಮತ್ತು ಅಚ್ಚರಿಯ ಮಾಹಿತಿಗಳನ್ನು ನೋಡೋಣ..... 

ಮಾಹಿತಿ #1

ಸಾಮಾನ್ಯ ಮೈಕಟ್ಟಿನ ವ್ಯಕ್ತಿ ಪ್ರತಿದಿನ 2 ರಿಂದ 2.5 ಲೀಟರ್ ನಷ್ಟು ಪ್ರಮಾಣದ ಮೂತ್ರವನ್ನು ದೇಹದಿಂದ ಹೊರಹಾಕಬೇಕು. ನಾವು ಪ್ರತಿದಿನ ಸುಮಾರು ಎರಡು ಲೀಟರಿನಷ್ಟು ನೀರನ್ನು ಕುಡಿಯುತ್ತೇವೆ. ಹಾಗಾದರೆ ಈ ಹೆಚ್ಚುವರಿ ಅರ್ಧ ಲೀಟರ್ ಬಂದಿದ್ದೆಲ್ಲಿಂದ?

ಮಾಹಿತಿ #1

ವಾಸ್ತವವಾಗಿ ಈ ಎರಡೂವರೆ ಲೀಟರಿನಲ್ಲಿ ಅರ್ಧದಷ್ಟು ಮಾತ್ರ ನೀರಿನ ಪ್ರಮಾಣವಾಗಿದ್ದು ಉಳಿದದ್ದೆಲ್ಲಾ ಇದರಲ್ಲಿ ಕರಗಿರುವ ಲವಣ ಮತ್ತು ಕಲ್ಮಶಗಳೇ ಆಗಿವೆ. ನಾವು ಬೆವರಿನ ಮತ್ತು ಮಲವಿಸರ್ಜನೆಯ ಮೂಲಕವೂ ನೀರನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ ನಾವು ಕುಡಿದ ಆಷ್ಟೂ ನೀರು ಬರೆ ಮೂತ್ರವಿಸರ್ಜನೆಯಿಂದ ಮಾತ್ರವೇ ಹೊರಹೋಗದು.

ಮಾಹಿತಿ #2

ಮೂತ್ರವಿಸರ್ಜನೆ ನಮ್ಮ ದೇಹದ ಕಲ್ಮಶ ಮತ್ತು ವಿಷಕಾರಿ ವಸ್ತುಗಳನ್ನು ಹೊರಕಾಕುವ ಒಂದು ಅತ್ಯುತ್ತಮ ಸ್ವಚ್ಛತಾ ವ್ಯವಸ್ಥೆಯಾಗಿದೆ. ದಿನದಲ್ಲಿ ನಿಯಮಿತವಾಗಿ ಮೂತ್ರವಿಸರ್ಜಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳು, ತ್ಯಾಜ್ಯಗಳು, ಸೂಕ್ಷ್ಮಜೀವಿಗಳನ್ನು ಹೊರಹಾಕಬಹುದು.

ಮಾಹಿತಿ #3

ಇನ್ನೊಬ್ಬರು ಗಮನಿಸುತ್ತಿದ್ದರೆ ಮೂತ್ರ ವಿಸರ್ಜಿಸಲು ಮುಂದಾಗದ ವ್ಯಕ್ತಿಗಳಿದ್ದಾರೆ. ಇದೊಂದು ತರಹದ ಮಾನಸಿಕ ಕಾಯಿಲೆಯಾಗಿದ್ದು ಇದಕ್ಕೆ Paruresis ಎಂದು ಕರೆಯುತ್ತಾರೆ.

ಮಾಹಿತಿ #3

ಇವರಿಗೆ ಸಾರ್ವಜನಿಕ ಸ್ಥಳದಲ್ಲಿ, ಮುಚ್ಚಿದ ಬಾಗಿಲಿನ ಶೌಚಾಲಯದಲ್ಲಿಯೂ, ಒಂದು ವೇಳೆ ಪಕ್ಕದ ಮೂತ್ರಾಲಯದಲ್ಲಿ ಇನ್ನೊಬ್ಬರಿದ್ದರೆ ಮೂತ್ರ ವಿಸರ್ಜಿಸಲು ಸಾಧ್ಯವಾಗದು.

ಮಾಹಿತಿ #4

micturition syncope ಎಂಬ ಅತ್ಯಪರೂಪದ ಕಾಯಿಲೆ ಇರುವ ವ್ಯಕ್ತಿಗಳು ಮೂತ್ರ ವಿಸರ್ಜಿಸಿದ ತಕ್ಷಣ ತಲೆ ತಿರುಗಿ ಬೀಳುತ್ತಾರೆ. ಇದಕ್ಕೆ ಏನು ಕಾರಣ ಎಂದು ಇದುವರೆಗೆ ಗೊತ್ತಾಗದೇ ಇದ್ದರೂ ಈ ಬಗ್ಗೆ ತಲೆಕೆಡಿಸಿಕೊಂಡ ಕೆಲವು ತಜ್ಞರ ಪ್ರಕಾರ ಮೂತ್ರವಿಸರ್ಜನೆಯ ವೇಳೆ ರಕ್ತದ ಬಿಂದುವೊಂದನ್ನು ನೋಡಿ ಇವರಿಗೆ ತಲೆ ತಿರುಗಿರಬಹುದು.

ಮಾಹಿತಿ #5

ಎಚ್ಚರಿದ್ದಷ್ಟು ಹೊತ್ತು ಸುಮಾರು ಆರರಿಂದ ಎಂಟು ಬಾರಿ ಮೂತ್ರವಿಸರ್ಜನೆಗೆ ಹೋಗುವುದು ಆರೋಗ್ಯಕರ ಲಕ್ಷಣವಾಗಿದೆ. ಅಂದರೆ ದಿನದಲ್ಲಿ ಎಂಟು ಗಂಟೆ ನಿದ್ದೆಯ ಸಮಯ ಬಿಟ್ಟು ಹದಿನಾರು ಗಂಟೆ ಎಚ್ಚರಿರುವ ವ್ಯಕ್ತಿ ಪ್ರತಿ ಎರಡು ಗಂಟೆಗಳಿಗೊಮ್ಮೆ ನಿಸರ್ಗದ ಕರೆಗೆ ಓಗೊಡಬೇಕು.

ಮಾಹಿತಿ #5

ಒಂದು ವೇಳೆ ಈ ಅವಧಿ ಇದಕ್ಕೂ ಕಡಿಮೆಯಾದರೆ ಅಂದರೆ ಪ್ರತಿ ಗಂಟೆ ಅಥವಾ ಅರ್ಧ ಗಂಟೆಗೆ ಮೂತ್ರಕ್ಕೆ ಅವಸರವಾದರೆ ಇದು ಮಧುಮೇಹ, ಅತಿ ಕ್ರಿಯಾತ್ಮಕ ಮೂತ್ರಕೋಶ, ಮೂತ್ರಕೋಶದ ಸೋಂಕು ಮೊದಲಾದ ತೊಂದರೆಗಳನ್ನು ಸೂಚಿಸುವ ಸಂಜ್ಞೆಯಾಗಿರಬಹುದು.

ಮಾಹಿತಿ #6

Acute urinary retention ಎಂಬ ಸ್ಥಿತಿಗೆ ತಲುಪಿರುವ ವ್ಯಕ್ತಿಗಳು ಮೂತ್ರವನ್ನು ವಿಸರ್ಜಿಸುವುದೇ ಇಲ್ಲ. ಇದೊಂದು ಅಪಾಯಕರ ಸ್ಥಿತಿಯಾಗಿದ್ದು ಮೂತ್ರ ಮೂತ್ರಕೋಶದಲ್ಲಿ ಸಂಗ್ರಹವಾಗದೇ ರಕ್ತದಲ್ಲಿ ಮಿಶ್ರಣವಾಗಿ ದೇಹವೆಲ್ಲಾ ತಿರುಗುತ್ತಿರುತ್ತದೆ. ತಕ್ಷಣವೇ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯ ಅವಶ್ಯಕತೆ ಇದ್ದು ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವ ಅಶ್ಯಕತೆ ಇದೆ.

ಮಾಹಿತಿ #7

ಮೂತ್ರ ವಿಸರ್ಜಿಸಿದ ಬಳಿಕ ಮೂತ್ರ ಬಿದ್ದಲ್ಲಿ ನೀರಿನ ಗುಳ್ಳೆಗಳು ಮೂಡುತ್ತವೆ. ಈ ಗುಳ್ಳೆಗಳು ಕೆಲವೇ ಸೆಕೆಂಡುಗಳಲ್ಲಿ ಒಡೆದು ಹೋಗಬೇಕು. ಆಗ ಆರೋಗ್ಯ ಉತ್ತಮವಾಗಿದೆ ಎಂದು ಅರ್ಥೈಸಿಕೊಳ್ಳಬಹುದು.

ಮಾಹಿತಿ #7

ದಲಿಗೆ ಈ ನೊರೆ ಸಾಬೂನಿನ ಗಟ್ಟಿನೊರೆಯಂತಿದ್ದು ಒಡೆಯಲು ತುಂಬಾ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದರೆ ಇದೂ ಸಹಾ ಆರೋಗ್ಯದಲ್ಲಿ ಏರುಪೇರಿನ ಸ್ಪಷ್ಟ ಸಂಕೇತವಾಗಿದ್ದು ತಕ್ಷಣ ಮೂತ್ರವನ್ನು ತಪಾಸಿಸಿಕೊಳ್ಳಬೇಕು. ಈ ಪರೀಕ್ಷೆಯ ವಿವರಗಳನ್ನು ಪಡೆದ ವೈದ್ಯರಿಗೆ ನಿಮ್ಮ ಆರೋಗ್ಯ ಏರುಪೇರಾಗಲು ಏನು ಕಾರಣ ಎಂದು ಕಂಡುಕೊಳ್ಳಲು ಸುಲಭವಾಗುತ್ತದೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Friday, December 2, 2016, 11:11 [IST]
English summary

Surprising Facts You Must Know About Your Urine!

All of us pass urine on a daily basis, that is a fact. However, most of us may not be aware of certain health facts about our urine, which are quite important!Do you ever keep a track of how many times you urinate in a day? Are you aware of what is the average number of times a person needs to pass urine in a day that signifies good health?
Please Wait while comments are loading...
Subscribe Newsletter