For Quick Alerts
ALLOW NOTIFICATIONS  
For Daily Alerts

ಕಿಡ್ನಿ ಕಲ್ಲುಗಳು- ಪ್ರತಿಯೊಬ್ಬರೂ ತಿಳಿಯಬೇಕಾದ ಸತ್ಯಸಂಗತಿಗಳು

ದಿನೇ ದಿನೇ ಬೆಳೆದು ದೊಡ್ಡದಾಗುವ ಈ ಕಿಡ್ನಿ ಕಲ್ಲುಗಳು ಒಂದು ಹಂತಕ್ಕೆ ಮೂತ್ರಪಿಂಡದಿಂದ ಹೊರಹೋಗಲು ಯತ್ನಿಸಿದಾಗ ನೋವು ಶುರುವಾಗುತ್ತದೆ. ಆಗಲೇ ನಮಗೆ ಮೂತ್ರಪಿಂಡಗಳ ಒಳಗೆ ಕಲ್ಲುಗಳಿರುವುದು ಗೊತ್ತಾಗುತ್ತದೆ....

By Arshad
|

ನಮ್ಮ ದೇಹದ ಶೋಧಕ ಅಂಗಗಳಾದ ಮೂತ್ರಪಿಂಡಗಳು ನಮ್ಮ ಬೆನ್ನಿನ ಬದಿಯಲ್ಲಿ ಹೊಟ್ಟೆಯ ಹಿಂಭಾಗದಲ್ಲಿವೆ. ಮುಷ್ಟಿಕಟ್ಟಿಕೊಂಡರೆ ಕೈ ಪಡೆಯುವಷ್ಟು ಗಾತ್ರ ಇರುವ ಈ ಅಂಗಗಳು ಪ್ರಮುಖ ಅಂಗಗಳಾಗಿದ್ದು ಇವುಗಳಲ್ಲಿ ಕನಿಷ್ಠ ಒಂದಾದರೂ ಕಾರ್ಯನಿರ್ವಹಿಸುತ್ತಲೇ ಇರಬೇಕು.

Kidney

ಈ ಅಂಗಗಳ ಪ್ರಮುಖ ಕೆಲಸವೆಂದರೆ ರಕ್ತವನ್ನು ಶೋಧಿಸಿ ಕಲ್ಮಶಗಳನ್ನು ನಿವಾರಿಸಿ ಮೂತ್ರದ ಮೂಲಕ ದೇಹದಿಂದ ಹೊರಹಾಕುವುದು ಮತ್ತು ದೇಹದಲ್ಲಿ ದ್ರವದ ಅಂಶದ ಸಂತುಲತೆಯನ್ನು ಕಾಪಾಡುವುದು. ಮೂತ್ರಪಿಂಡಗಳು ಅಥವಾ ಕಿಡ್ನಿ ಸತತವಾಗಿ ರಕ್ತವನ್ನು ಶೋಧಿಸುತ್ತಲೇ ಇರುತ್ತವೆ. ಕಲ್ಮಶಗಳು ನಿಧಾನವಾಗಿ ಮೂತ್ರಕೋಶದಲ್ಲಿ ಸಂಗ್ರಹಗೊಳ್ಳುತ್ತಿರುತ್ತದೆ. ಒಂದು ಹಂತದಷ್ಟು ಭರ್ತಿಯಾದ ಬಳಿಕ ಇದನ್ನು ವಿಸರ್ಜಿಸಲು ಮೆದುಳಿಗೆ ಸೂಚನೆ ಹೋಗುತ್ತದೆ. ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು

ಆಗ ನಮಗೆ ಮೂತ್ರಕ್ಕೆ ಅವಸರವಾಗುತ್ತದೆ. ಮೂತ್ರಪಿಂಡಗಳ ವೈಫಲ್ಯದಿಂದ ಜೀವಕ್ಕೇ ಅಪಾಯವಿದೆ. ಹೀಗೇ ಶೋಧಿಸುವಾಗ ನಮ್ಮ ಆಹಾರದ ಮೂಲಕ ದೇಹ ಪ್ರವೇಶಿಸಿರುವ ಕರಗಿದ್ದ ಕೆಲವು ಲವಣಗಳು ಮೂತ್ರಪಿಂಡದಲ್ಲಿ ಘನರೂಪ ಪಡೆಯುತ್ತವೆ. ಇದಕ್ಕೆ ಇನ್ನಷ್ಟು ಲವಣಗಳ ಕಣಗಳು ಅಂಟಿಕೂಂಡು ಚಿಕ್ಕ ಕಲ್ಲಿನಂತಾಗುತ್ತದೆ.

ದಿನೇ ದಿನೇ ಬೆಳೆದು ದೊಡ್ಡದಾಗುವ ಈ ಕಲ್ಲುಗಳು ಒಂದು ಹಂತಕ್ಕೆ ಮೂತ್ರಪಿಂಡದಿಂದ ಹೊರಹೋಗಲು ಯತ್ನಿಸಿದಾಗ ನೋವು ಶುರುವಾಗುತ್ತದೆ. ಆಗಲೇ ನಮಗೆ ಮೂತ್ರಪಿಂಡಗಳ ಒಳಗೆ ಕಲ್ಲುಗಳಿರುವುದು ಗೊತ್ತಾಗುತ್ತದೆ. ಪರಿಣಾಮವಾಗಿ ಮೂತ್ರಕ್ಕೆ ಒತ್ತಡ ಹೇರಿದ ಕೂಡಲೇ ಅಪಾರ ನೋವಾಗುವುದು, ಕೆಳಹೊಟ್ಟೆಯಲ್ಲಿ ನೋವು, ಬೆನ್ನು, ಮೂತ್ರ ಕೋಶಗಳಲ್ಲಿಯೂ ನೋವು, ವಾಕರಿಕೆ, ನಡುಕ, ಜ್ವರ ಇತ್ಯಾದಿಗಳು ಎದುರಾಗುತ್ತವೆ. ತಂಪು ಪಾನೀಯ ಕುಡಿದರೆ ಕಿಡ್ನಿ ಹಾಳಾಗುವುದೇ?

ಅಚ್ಚರಿಯ ವಿಷಯವೆಂದರೆ ಎಲ್ಲಾ ಆರೋಗ್ಯಕರ ವ್ಯಕ್ತಿಗಳ ಮೂತ್ರಪಿಂಡಗಳಲ್ಲಿ ಕಲ್ಲುಗಳು ಇದ್ದೇ ಇರುತ್ತವೆ. ಆದರೆ ಇವು ನೋವು ಕೊಡುವಷ್ಟು ಬೆಳೆದೇ ಇರುವುದಿಲ್ಲವಾದುದರಿಂದ ಇದರ ಇರವಿನ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ. ಬನ್ನಿ, ಇಂತಹ ಕೆಲವು ಮಾಹಿತಿಗಳನ್ನು ನೋಡೋಣ.....

ಮಾಹಿತಿ #1

ಮಾಹಿತಿ #1

ಮೂತ್ರಪಿಂಡಗಳ ಕಲ್ಲುಗಳ ಲವಣಗಳನ್ನು ಆಧರಿಸಿ ವಿವಿಧ ಬಗೆಯ ಕಲ್ಲುಗಳು ಮೂಡುತ್ತವೆ. ಕ್ಯಾಲ್ಸಿಯಂ ಕಲ್ಲು, ಯೂರಿಕ್ ಆಮ್ಲ ಕಲ್ಲು, ಸ್ಟ್ರೂಟಿವ್ ಕಲ್ಲು, ಸಿಸ್ಟೈನ್ ಕಲ್ಲು ಮೊದಲಾದ ಕಲ್ಲುಗಳನ್ನಾಗಿ ವೈದ್ಯರು ಗುರುತಿಸುತ್ತಾರೆ. ಇದರಲ್ಲಿ ಒಂದು ಅಚ್ಚರಿಯ ವಿಷಯವೆಂದರೆ ಓರ್ವ ವ್ಯಕ್ತಿಯಲ್ಲಿ ಎರಡು ಬಗೆಯ ಕಲ್ಲುಗಳು ಉಂಟಾಗದೇ ಒಂದೇ ಬಗೆಯ ಲವಣದ್ದೇ ಕಲ್ಲುಗಳು ಉಂಟಾಗುತ್ತವೆ. ಕಿಡ್ನಿ ಕಲ್ಲು ಕರಗಿಸುವ, ಹಿತ್ತಲ ಗಿಡದ ಮದ್ದು

ಮಾಹಿತಿ #2

ಮಾಹಿತಿ #2

ಮೂತ್ರಪಿಂಡಗಳ ಕಲ್ಲುಗಳು ಬೆಳೆದು ಇದರ ಅಂಚುಗಳು ಮೂತ್ರಪಿಂಡಗಳ ಒಳಭಾಗವನ್ನು ಒತ್ತುತ್ತಿದ್ದರೂ ಇದು ನೋವು ನೀಡುವುದಿಲ್ಲ. ಏಕೆಂದರೆ ಮೂತ್ರಪಿಂಡಗಳ ಒಳಗೆ ನೋವಿನ ಸೂಚನೆ ಪಡೆಯಲು ನರಗಳಿಲ್ಲ. ಆದರೆ ಯಾವಾಗ ಈ ಕಲ್ಲನ್ನು ಮೂತ್ರನಾಳದ ಮೂಲಕ ಹೊರಹಾಕಲು ಮೂತ್ರಪಿಂಡ ಯತ್ನಿಸಿದಾಗ ಇದು ಕಿರಿದಾಗ ಮೂತ್ರನಾಳದ ಗೋಡೆಗೆ ಒತ್ತುತ್ತಾ ಅಪಾರ ನೋವು ನೀಡುತ್ತದೆ.

ಮಾಹಿತಿ #3

ಮಾಹಿತಿ #3

ಇತ್ತೀಚಿನ ಸಂಶೋಧನೆಯ ಪ್ರಕಾರ ಯಾವ ಆಹಾರದಲ್ಲಿ ಆಕಲೇಟ್ (oxalate) ಎಂಬ ಕಣಗಳು ಹೆಚ್ಚಿರುತ್ತವೆಯೋ ಆ ಅಹಾರಗಳ ಸೇವನೆಯಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳು ಮೂಡುವ ಸಂಭವ ಅತಿ ಹೆಚ್ಚಾಗುತ್ತದೆ. ಪೀನಟ್ ಬಟರ್, ಚಾಕಲೇಟು, ಪಾಲಕ್ ಸೊಪ್ಪು, ಕಾಫಿ, ಬಿಯರ್ ಮೊದಲಾದ ಆಹಾರಗಳ ಸೇವನೆಯಿಂದ ಮೂತ್ರಪಿಂಡಗಳ ಕಲ್ಲುಗಳಾಗುವ ಸಾಧ್ಯತೆ ಹೆಚ್ಚುತ್ತದೆ.

ಮಾಹಿತಿ #4

ಮಾಹಿತಿ #4

ಮೂತ್ರಪಿಂಡಗಳಲ್ಲಿ ಕಲ್ಲುಗಳಾಗಲು ಕೆಲವು ವಾತಾವರಣದ ಪರಿಸ್ಥಿತಿಗಳೂ ಕಾರಣವಾಗುತ್ತವೆ. ಅಂದರೆ ಬಿಸಿ ಇರುವ ಪ್ರದೇಶದಲ್ಲಿ ವಾಸಿಸುವವರು ಈ ಸ್ಥಿತಿಗೆ ಹೆಚ್ಚು ಒಳಗಾಗುತ್ತಾರೆ. ಏಕೆಂದರೆ ವಾತಾವರಣದ ಬಿಸಿಯ ಪರಿಣಾಮದಿಂದ ತಂಪುಗೊಳಿಸಲು ದೇಹ ಹೆಚ್ಚಿನ ನೀರನ್ನು ಬಳಸುವ ಕಾರಣ ಮೂತ್ರ ಹೆಚ್ಚು ಸಾಂದ್ರೀಕೃತವಾಗುತ್ತದೆ. ಕಿಡ್ನಿ ವೈಫಲ್ಯ: ಪ್ರತಿಯೊಬ್ಬರೂ ತಿಳಿಯಬೇಕಾದ ಸತ್ಯಾಸತ್ಯತೆ

ಮಾಹಿತಿ #5

ಮಾಹಿತಿ #5

ಇನ್ನೊಂದು ಸಂಶೋಧನೆಯ ಪ್ರಕಾರ ನಿಯಮಿತವಾಗಿ ಕೂಡುವ ದಂಪತಿಗಳಲ್ಲಿ ಮೂತ್ರಪಿಂಡಗಳ ಕಲ್ಲುಗಳ ಸಾಧ್ಯತೆ ಕಡಿಮೆ. ಏಕೆಂದರೆ ಈ ಅವಧಿಯಲ್ಲಿ ದೇಹದಲ್ಲಿ ಕೊಂಚ ಪ್ರಮಾಣದ ನೈಟ್ರಿಕ್ ಆಕ್ಸೈಡ್ ಬಿಡುಗಡೆಯಾಗುತ್ತದೆ. ಈ ರಾಸಾಯನಿಕ ಮೂತ್ರನಾಳವನ್ನು ಸಡಿಲಗೊಳಿಸಿ ಕಲ್ಲುಗಳನ್ನು ಸುಲಭವಾಗಿ ಹೊರಹಾಕಲು ನೆರವಾಗುತ್ತದೆ.

ಮಾಹಿತಿ #6

ಮಾಹಿತಿ #6

ಮೂಳೆಗಳನ್ನು ದೃಢವಾಗಿಸಲು ಸೇವಿಸುವ ಕ್ಯಾಲ್ಸಿಯಂ ಮಾತ್ರೆಗಳೂ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಈ ಮಾತ್ರೆಗಳ ಬದಲು ಹಾಲು ಮತ್ತು ಇತರ ಕ್ಯಾಲ್ಸಿಯಂ ಹೆಚ್ಚಿರುವ ನೈಸರ್ಗಿಕ ಆಹಾರಗಳನ್ನು ಸೇವಿಸುವುದೇ ಉತ್ತಮ.

ಮಾಹಿತಿ #7

ಮಾಹಿತಿ #7

ಎಚ್ಚರ: ನಿಮ್ಮ ಕಿಡ್ನಿ ಕೂಡ ಅಪಾಯದಲ್ಲಿ ಸಿಲುಕಿರಬಹುದು!

English summary

Surprising Facts You Must Know About Kidney Stones

The kidneys are a pair of organs located at the back of our abdomen, each about the size of our fist. Their main function being filtering the blood, they also carry out other important bodily functions like waste removal, maintaining the fluid balance of the body, etc. So, here are a few surprising facts about kidney stones that you must know, have a look!
X
Desktop Bottom Promotion