For Quick Alerts
ALLOW NOTIFICATIONS  
For Daily Alerts

ವಾಂತಿ ಸಮಸ್ಯೆ-ನೀವು ತಿಳಿಯಲೇಬೇಕಾದ ಸತ್ಯ ಸಂಗತಿಗಳು!

By Manu
|

ನಾವು ಚಲನಚಿತ್ರದಲ್ಲಿ ಕಂಡಂತೆ ನವ ವಿವಾಹಿತೆ (ಅಥವಾ ಚಿತ್ರದ ನಾಯಕಿ) ವಾಂತಿ ಮಾಡಿಕೊಂಡರೆ ಆಕೆ ಗರ್ಭಿಣಿಯಾಗಿರುವುದು ಖಚಿತ. ಮುಂದಿನ ದೃಶ್ಯದಲ್ಲಿ ವೈದ್ಯರು ಬಂದು ಶುಭಸುದ್ದಿಯನ್ನು ದೃಢೀಕರಿಸುತ್ತಾರೆ. ವರ್ಷಗಟ್ಟಲೇ ಇದನ್ನು ನೋಡೀ ನೋಡೀ ನಾವೆಲ್ಲಾ ವಿವಾಹಿತೆಯರು ವಾಂತಿ ಮಾಡಿಕೊಂಡರೆ ಗರ್ಭಿಣಿಯಾಗಿದ್ದಾರೆ ಎಂಬ ತೀರ್ಮಾನಕ್ಕೇ ಬಂದುಬಿಡುತ್ತೇವೆ.

ಆದರೆ ವಾಂತಿ ಮಾಡಿಕೊಳ್ಳುತ್ತಿರುವವರು ವೃದ್ಧೆಯಾಗಿದ್ದರೆ? ಮಕ್ಕಳಾಗಿದ್ದರೆ? ಆಗ ಈ ತರ್ಕ ಸೋಲುತ್ತದೆ. ವಾಂತಿ ಮಗುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಕಾಡುತ್ತದೆ. ವಾಂತಿ ಎಂದರೆ ಹೊಟ್ಟೆಯೊಳಗಿರುವ ದ್ರವವನ್ನು ಬಾಯಿಯ ಮುಖಾಂತರ ಬಲವಂತವಾಗಿ ಹೊರದಬ್ಬುವ ಕ್ರಿಯೆಯಾಗಿದೆ. ಪ್ರಯಾಣದ ವೇಳೆಯಲ್ಲಿ ವಾಂತಿಯ ಸಮಸ್ಯೆಗೆ ಪರಿಹಾರವೇನು?

ಇದು ಹೆಚ್ಚಿನ ಬಾರಿ ಅನೈಚ್ಛಿಕವಾಗಿದ್ದರೂ ಕೆಲವೊಮ್ಮೆ ಐಚ್ಛಿಕವಾಗಿಯೂ ಆಗುತ್ತದೆ. (ವಿಷಾಹಾರ ಸೇವಿಸಿದ್ದರೆ ಇದನ್ನು ಹೊರಹಾಕಲು ತಕ್ಷಣ ಗಂಟಲಿಗೆ ಬೆರಳು ಹಾಕಿ ವಾಂತಿ ಮಾಡಿಕೊಳ್ಳುವುದು ಸರಿಯಾದ ಕ್ರಮ). ಅಪರೂಪಕ್ಕೆ ವಾಂತಿ ಮೂಗಿನ ಮೂಲಕವೂ ಹರಿದು ಅಪಾರವಾದ ಉರಿ ತರುತ್ತದೆ.

ವಾಂತಿಗೆ ಕೆಲವಾರು ಕಾರಣಗಳಿವೆ (ಗರ್ಭಿಣಿಯಾಗಿರುವ ಹೊರತು). ಅಜೀರ್ಣ, ಪ್ರಯಾಣದ ಅವಧಿಯಲ್ಲಿ ಕಾಡುವ ವಾಕರಿಕೆ, ಕೆಲವು ಔಷಧಿಗಳ ಅಡ್ಡಪರಿಣಾಮ, ವೈರಸ್ ಧಾಳಿಯ ಮೂಲಕ ಎದುರಾಗುವ ಫ್ಲೂ ಜ್ವರ, ವಿಷಾಹಾರ ಸೇವನೆ, ಪಿತ್ತಕೋಶದ ಸೋಂಕು, ಸಾಮರ್ಥ್ಯಕ್ಕೂ ಮೀರಿದ ಆಹಾರ ಸೇವನೆ, ತಲೆಗೆ ಬಿದ್ದ ಹೊಡೆತ, ಹೊಟ್ಟೆಯಲ್ಲಿ ತುಂಬಿಕೊಳ್ಳುವ ಗ್ಯಾಸ್, ಪರಸ್ಪರ ಹೊಂದಿಕೊಳ್ಳದ ಆಹಾರಗಳನ್ನು ಸೇವಿಸುವುದು, ಅತಿಯಾದ ಮದ್ಯಸೇವನೆ ಮೊದಲಾದವು ವಾಂತಿ ತರಿಸಬಲ್ಲವು. ಮುಜುಗರವನ್ನುಂಟು ಮಾಡುವ ವಾಂತಿ ಸಮಸ್ಯೆಗೆ ಫಲಪ್ರದ ಮನೆಮದ್ದುಗಳು

ಇದರ ಅಡ್ಡಪರಿಣಾಮಗಳಾಗಿ ಎದೆಯುರಿ, ಎದೆನೋವು, ಹೊಟ್ಟೆ ನೋವು, ಗಂಟಲ ಬೇನೆ ಮೊದಲಾದವು ಕಾಡಬಹುದು. ಬನ್ನಿ, ವಾಂತಿಯ ಬಗ್ಗೆ ಕೆಲವು ಅಚ್ಚರಿಯ ಮಾಹಿತಿಗಳನ್ನು ಈಗ ನೋಡೋಣ....

ಮಾಹಿತಿ #1

ಮಾಹಿತಿ #1

ಕೆಲವೊಮ್ಮೆ ವೈರಲ್ ಜ್ವರ ಆವರಿಸಿದರೆ ವಾಂತಿ ಕಾಡುತ್ತದೆ. ಮಕ್ಕಳಲ್ಲಿ ಈ ಪ್ರಕ್ರಿಯೆ ಹೆಚ್ಚಾಗಿ ಕಂಡುಬರುತ್ತದೆ. ವಾಂತಿಗೆ ಹೊಟ್ಟೆಯ ಆಮ್ಲ ಹಿಮ್ಮೆಟ್ಟುವುದು,ಮೈಗ್ರೇನ್ ತಲೆನೋವು, ಗಂಟಲಲ್ಲಿ ಸೋಂಕು ಸಹಾ ವಾಂತಿ ತರಿಸಬಹುದು.

ಮಾಹಿತಿ #2

ಮಾಹಿತಿ #2

ವಾಂತಿಯಾದ ತಕ್ಷಣ ದ್ರವ ಯಾವ ಬಣ್ಣದಲ್ಲಿದೆ ಎಂಬುದನ್ನು ಗಮನಿಸಬೇಕು. ಸಾಮಾನ್ಯವಾಗಿ ಜೀರ್ಣವಾದ ಆಹಾರದ ವಾಸನೆ ಹಿತಕರವಾಗಿರುವುದಿಲ್ಲ. ಆದರೂ ಕೊಂಚ ಸಹನೆ ವಹಿಸಿ ಬಣ್ಣವನ್ನು ಗಮನಿಸಬೇಕು. ಏಕೆಂದರೆ ಬಣ್ಣ ಹಲವು ಮಾಹಿತಿಗಳನ್ನು ನೀಡುತ್ತದೆ.

ಮಾಹಿತಿ #2

ಮಾಹಿತಿ #2

ಒಂದು ವೇಳೆ ಕಪ್ಪು ಅಥವಾ ಕೆಂಪು ಬಣ್ಣದಲ್ಲಿದ್ದರೆ ಇದರಲ್ಲಿ ರಕ್ತ ಇರುವ ಸಾಧ್ಯತೆ ಇದ್ದು ಇದು ಯಾವುದೋ ರೋಗದ ಮಾಹಿತಿಯನ್ನೂ ನೀಡಬಹುದು. (ನೂರೆಂಟು ನೆನಪು ಎದೆಯಾಳದಿಂದ ದಂತಹ ಹಾಡಿಗೆ ಪ್ರೇರಣೆಯನ್ನೂ ನೀಡಬಹುದು). ತಕ್ಷಣ ವೈದ್ಯರ ತಪಾಸಣೆ ಅಗತ್ಯವಾಗಿದೆ.

ಮಾಹಿತಿ #3

ಮಾಹಿತಿ #3

ಒಂದು ಅರ್ಥದಲ್ಲಿ ವಾಂತಿ ಒಳ್ಳೆಯದೇ. ಏಕೆಂದರೆ ಜೀರ್ಣಗೊಂಡ ಆಹಾರದಲ್ಲಿ ಸೋಂಕು ತಗಲುವ ಸಾಧ್ಯತೆಯಿದ್ದರೆ ವಾಂತಿಯ ಮೂಲಕ ಈ ಅಪಾಯ ದೂರವಾಗುತ್ತದೆ.

ಮಾಹಿತಿ #4

ಮಾಹಿತಿ #4

ವಾಂತಿಯನ್ನು ಕಲ್ಪಿಸಿಕೊಂಡು ಒಂದು ಭಯವೂ ಇದೆ. ಇದೇ emetophobia. ಈ ಭಯವಿರುವ ವ್ಯಕ್ತಿಗಳು ತಾವು ವಾಂತಿ ಮಾಡಿಕೊಳ್ಳಲೂ ಹೆದರುತ್ತಾರೆ ಅಥವಾ ಇತರರು ವಾಂತಿ ಮಾಡುವುದನ್ನು ನೋಡಿದರೂ ಭಯಪಡುತ್ತಾರೆ. ಕೆಲವೊಮ್ಮೆ ಈ ಭಯ ಪ್ರಾಣಕ್ಕೂ ಅಪಾಯಕಾರಿಯಾಗಬಹುದು.

ಮಾಹಿತಿ #5

ಮಾಹಿತಿ #5

ಒಂದು ವೇಳೆ ವಾಂತಿಯ ಕಾರಣವನ್ನು ಕಂಡುಕೊಂಡು ಸೂಕ್ತ ಚಿಕಿತ್ಸೆ ಪಡೆಯದೇ ಇದ್ದರೆ ಇದರಿಂದ ದೇಹದಲ್ಲಿ ಅತೀವವಾದ ದ್ರವದ ಕೊರತೆಯುಂಟಾಗಿ ದೇಹದ ಹಲವು ಪ್ರಮುಖ ಅಂಗಗಳು ನಿಷ್ಫಲಗೊಳ್ಳುವ ಸಾಧ್ಯತೆ ಇದೆ.

ಮಾಹಿತಿ #6

ಮಾಹಿತಿ #6

ಕೆಲವು ಜನರಲ್ಲಿ ವಾಂತಿ ಒಂದು ನಿಯಮಿತವಾದ ಪ್ರಕ್ರಿಯೆಯಂತೆ ಕಂಡುಬರುತ್ತದೆ. ಅಂದರೆ ಇವರು ದಿನದ ಅಥವಾ ವಾರದ ಒಂದು ನಿಗದಿತ ಅವಧಿಯಲ್ಲಿ ತಪ್ಪದೇ ವಾಂತಿಯಾಗುತ್ತದೆ. ಈ ವಿದ್ಯಮಾನ ಇಂದಿಗೂ ಬಗೆಹರಿಯದ ರಹಸ್ಯವಾಗಿದೆ.

 ಮಾಹಿತಿ #7

ಮಾಹಿತಿ #7

ಇನ್ನೊಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಉದ್ವೇಗ, ಖಿನ್ನತೆ ಮೊದಲಾದ ಮಾನಸಿಕ ತೊಂದರೆಗಳಿಂದ ಬಳಲುವವರು ಹೆಚ್ಚು ವಾಂತಿ ಮಾಡಿಕೊಳ್ಳುತ್ತಾರೆ. ಮೆದುಳಿನಲ್ಲಿ ಆಗುವ ಕೆಲವು ರಾಸಾಯನಿಕ ಕ್ರಿಯೆಗಳು ವಾಂತಿಗೆ ಪ್ರಚೋದನೆ ನೀಡುವುದೇ ಇದಕ್ಕೆ ಕಾರಣ.

English summary

Surprising Facts About Vomiting That You Never Knew!

Vomiting can be caused by various reasons like indigestion, motion sickness, pregnancy, certain medications, viral flu, food poisoning, gallbladder issues, overeating, concussion, gastritis, etc. Side effects of vomiting can be chest pain, stomach pain, sore throat, etc., which are induced due to the forceful expulsion of stomach content. So, here are a few interesting facts about vomiting, have a look.
X
Desktop Bottom Promotion