For Quick Alerts
ALLOW NOTIFICATIONS  
For Daily Alerts

ಜೇನು ಕಣ್ಣಿನ ಆರೋಗ್ಯಕ್ಕೂ ಉತ್ತಮ ಎಂದರೆ ಅಚ್ಚರಿ ಅಲ್ಲವೇ?

ಕಣ್ಣುರಿ ಬಂತು ಎಂದು ಯಾವುದೋ ದ್ರವ, ಡ್ರಾಪ್ಸ್ ಗಳನ್ನು ಹಾಕುವುದೂ ಅಪಾಯಕರ. ಇದರ ಬದಲಿಗೆ ಕೊಂಚ ಅಪ್ಪಟ ಜೇನನ್ನು ಬಳಸಬಹುದು. ಬನ್ನಿ, ಕಣ್ಣಿಗೆ ಜೇನಿನ ಬಳಕೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....

By Arshad
|

ಜೇನು ಒಂದು ಆಹಾರಕ್ಕಿಂತ ಹೆಚ್ಚಾಗಿ ಔಷಧಿಯ ರೂಪದಲ್ಲಿಯೇ ಹೆಚ್ಚಿನ ಬಳಕೆಯಾಗುತ್ತದೆ. ಚರ್ಮ, ಕೂದಲು, ಜೀರ್ಣಾಂಗಗಳ ಪೋಷಣೆ, ಜೀವನಿರೋಧಕ ಶಕ್ತಿ ಹೆಚ್ಚಿಸುವುದು ಮೊದಲಾದ ಪ್ರಯೋಜನಗಳ ಜೊತೆಗೇ ತೂಕ ಇಳಿಸಲೂ ಜೇನು ನೆರವಾಗುತ್ತದೆ. ಈ ಎಲ್ಲಾ ಗುಣಗಳಿರುವ ಜೇನು ಕಣ್ಣಿನ ಆರೋಗ್ಯಕ್ಕೂ ಉತ್ತಮ ಎಂದು ಹೆಚ್ಚಿನವರಿಗೆ ತಿಳಿದಿರಲಾರದು. ನಮ್ಮ ಶರೀರದಲ್ಲಿ ಅತಿ ಸೂಕ್ಷ್ಮವಾದ ಮತ್ತು ಮುಖ್ಯ ಇಂದ್ರಿಯವೆಂದರೆ ಕಣ್ಣುಗಳು. ಜಗತ್ತನ್ನು ನೋಡಲು ಈ ಕಣ್ಣುಗಳು ಅತಿ ಅಗತ್ಯವಾಗಿದ್ದು ಅತಿ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಕಣ್ಣಿನ ಆರೋಗ್ಯಕ್ಕೆ ಬೇಕು, ಸ್ವಲ್ಪ ಸ್ಪೆಷಲ್ ಆರೈಕೆ!

ಇಂದಿನ ದಿನಗಳಲ್ಲಿ ಮೊಬೈಲ್ ಕಂಪ್ಯೂಟರ್ ಇಲ್ಲದ ಸ್ಥಳವೇ ಇಲ್ಲದಾಗಿದೆ. ಅಂತೆಯೇ ಇವುಗಳ ಬಳಕೆಯಲ್ಲಿ ಕಣ್ಣುಗಳ ಬಳಕೆ ಅತಿ ಹೆಚ್ಚಾಗಿದೆ. ಅನಾರೋಗ್ಯಕರ ಜೀವನಶೈಲಿ ಸೋಮಾರಿತನವನ್ನು ಮೈಗೂಡಿಸಿ ಸ್ಥೂಲಕಾಯವನ್ನು ಹತ್ತಿರ ತರುತ್ತಿದ್ದರೆ ಈ ಸಾಧನಗಳನ್ನು ಸತತವಾಗಿ ನೋಡುವ ಮೂಲಕ ಕಣ್ಣುಗಳ ಮೇಲಿನ ಒತ್ತಡವೂ ಹೆಚ್ಚಾಗುತ್ತಿದೆ. ಬಹಳ ಹೊತ್ತು ನೋಡಿದ ಬಳಿಕ ಕಣ್ಣುಗಳಲ್ಲಿ ಉರಿ ಬಂದರೆ ಯಾವುದಾದರೂ ಕಣ್ಣುಗಳ ಡ್ರಾಪ್ಸ್ ಹಾಕಿ ಈ ಉರಿಯನ್ನು ಕಡಿಮೆ ಮಾಡುವತ್ತ ಚಿತ್ತ ಹರಿಸುತ್ತಾರೆಯೇ ವಿನಃ ಬಳಕೆಯನ್ನು ಕಡಿಮೆ ಮಾಡುತ್ತಿಲ್ಲ. ಶೀತ ಶಮನಕ್ಕೆ, ಒಂದು ಚಮಚದಷ್ಟು ಜೇನು ಸಾಕು

ಹೆಚ್ಚಿನ ಸಂದರ್ಭದಲ್ಲಿ ಈ ವಿಕ್ಷಣೆ ನಮ್ಮ ಉದ್ಯೋಗಗಳಿಗೆ ಅನಿವಾರ್ಯವಾಗಿದ್ದಾಗ ಇವುಗಳಿಂದ ದೂರವಿರುವುದೂ ಸಾಧ್ಯವಿಲ್ಲ. ಕಣ್ಣುರಿ ಬಂತು ಎಂದು ಯಾವುದೋ ದ್ರವ, ಡ್ರಾಪ್ಸ್ ಗಳನ್ನು ಹಾಕುವುದೂ ಅಪಾಯಕರ. ಸತತ ಬಳಕೆಯಿಂದ ಕಣ್ಣುಗಳು ಒಣಗುವುದು, ಉರಿ ಬರುವುದು, ಹೆಚ್ಚು ನೀರು ಸುರಿಯುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಈ ತೊಂದರೆಗಳಿಗೆ ಗೊತ್ತಿಲ್ಲದ ಡ್ರಾಪ್ಸ್ ಹಾಕುವುದಕ್ಕಿಂತ ಕೊಂಚ ಅಪ್ಪಟ ಜೇನನ್ನು ಬಳಸಬಹುದು. ಬನ್ನಿ, ಕಣ್ಣಿಗೆ ಜೇನಿನ ಬಳಕೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ:

ಕಣ್ಣುಗಳು ಒಣಗುವುದನ್ನು ತಡೆಯುತ್ತದೆ

ಕಣ್ಣುಗಳು ಒಣಗುವುದನ್ನು ತಡೆಯುತ್ತದೆ

ಕೊಂಚ ಜೇನನ್ನು ಸ್ವಚ್ಛವಾದ, ಉಗುರುಬೆಚ್ಚನೆಯ ಕುಡಿಯುವ ನೀರಿನಲ್ಲಿ ಬೆರೆಸಿ. ರಾತ್ರಿ ಮಲಗುವ ಮುನ್ನ ಈ ನೀರಿನಿಂದ ಕಣ್ಣುಗಳನ್ನು ತೊಳೆದುಕೊಂಡು ಮಲಗಿದರೆ ಕಣ್ಣುಗಳು ಒಣಗಿರುವ ಮತ್ತು ತುರಿಕೆಯಿಂದ ಪರಿಹಾರ ಒದಗುತ್ತದೆ.

ಕಣ್ಣುಗಳು ಊದಿಕೊಂಡಿರುವುದನ್ನು ತಡೆಯುತ್ತದೆ

ಕಣ್ಣುಗಳು ಊದಿಕೊಂಡಿರುವುದನ್ನು ತಡೆಯುತ್ತದೆ

ಕೆಲವೊಮ್ಮೆ ಕಣ್ಣುಗಳು ವಿಪರೀತವಾಗಿ ದಣಿದು ತೆರೆಯಲೇ ಕಷ್ಟಕರವಾಗಿರುವಾಗ ಕಣ್ಣುಗಳನ್ನು ಮುಚ್ಚಿಕೊಂಡು ಕಣ್ಣುರೆಪ್ಪೆಗಳ ಮೇಲೆ ಕೊಂಚ ಜೇನನ್ನು ನಯವಾದ ಮಸಾಜ್ ಮೂಲಕ ಹಚ್ಚಿ.

ಕಣ್ಣುಗಳು ಊದಿಕೊಂಡಿರುವುದನ್ನು ತಡೆಯುತ್ತದೆ

ಕಣ್ಣುಗಳು ಊದಿಕೊಂಡಿರುವುದನ್ನು ತಡೆಯುತ್ತದೆ

ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಕಣ್ಣುಗಳನ್ನು ಮುಚ್ಚಿಕೊಂಡೇ ಇದ್ದು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಊದಿಕೊಂಡಿದ್ದ ಕಣ್ಣುಗಳು ಸಾಮಾನ್ಯ ಸ್ಥಿತಿಗೆ ಮರಳುತ್ತದೆ.

ಮದ್ರಾಸ್ ಕಣ್ಣಿಗೆ ಸೂಕ್ತ ಚಿಕಿತ್ಸೆಯಾಗಿದೆ

ಮದ್ರಾಸ್ ಕಣ್ಣಿಗೆ ಸೂಕ್ತ ಚಿಕಿತ್ಸೆಯಾಗಿದೆ

ಒಂದು ವೇಳೆ ಕೆಂಗಣ್ಣು ಬೇನೆ ಅಥವಾ ಮದ್ರಾಸ್ ಐ (conjunctivitis) ಎಂಬ ಕಾಯಿಲೆ ಆವರಿಸಿದ್ದರೆ ಇದು ನಿಮ್ಮಿಂದ ಇತರರಿಗೆ ಹರಡುವುದನ್ನು ತಡೆಯಲು ಮತ್ತು ನಿಮ್ಮ ಬೇನೆ ತಕ್ಷಣ ಕಡಿಮೆಯಾಗಲು ಅಪ್ಪಟ ಜೇನಿನ ಒಂದೆರಡು ಹನಿಯನ್ನು ನೇರವಾಗಿ ಕಣ್ಣುಗಳಿಗೆ ಬಿಟ್ಟು ಕೆಲವು ಬಾರಿ ಮಿಟುಕಿಸಿ ಸಾಧ್ಯವಾದಷ್ಟು ಹೊತ್ತು ಮುಚ್ಚಿಕೊಳ್ಳಬೇಕು. ಕೆಲವಾರು ಸಂಶೋಧನೆಗಳ ಮೂಲಕ ಈ ವಿಧಾನದಿಂದ ನಿಜವಾಗಿಯೂ ಈ ಬೇನೆ ಗುಣವಾಗಿರುವುದು ಕಂಡುಬಂದಿದೆ. ಕಣ್ಣಿನ ಸೋಂಕಿಗೆ ಕಾರಣವಾಗಿರುವ ಮದ್ರಾಸ್ ಕಣ್ಣಿನ ಲಕ್ಷಣಗಳೇನು?

ಕಣ್ಣುಗಳ ಸೋಂಕನ್ನು ಕಡಿಮೆಗೊಳಿಸುತ್ತದೆ

ಕಣ್ಣುಗಳ ಸೋಂಕನ್ನು ಕಡಿಮೆಗೊಳಿಸುತ್ತದೆ

ಅಪ್ಪಟ ಜೇನನ್ನು ಕೊಂಚ ಉಗುರುಬೆಚ್ಚನೆಯ ನೀರಿನೊಂದಿಗೆ ಬೆರೆಸಿ ಈ ನೀರಿನಲ್ಲಿ ಹತ್ತಿಯುಂಡೆಯೊಂದನ್ನು ಮುಳುಗಿಸಿ ಸೋಂಕಿಗೆ ಒಳಗಾದ ಕಣ್ಣುಗಳಿಗೆ ಒತ್ತಿಕೊಳ್ಳಿ. ಈ ವಿಧಾನದಿಂದ ಕಣ್ಣಿನ ವಿವಿಧ ಸೋಂಕುಗಳು ಕಡಿಮೆಯಾಗುತ್ತವೆ.

ಕಣ್ಣುಗಳ ಸ್ನಾಯುಗಳನ್ನು ಬಲಶಾಲಿಯಾಗಿಸುತ್ತದೆ

ಕಣ್ಣುಗಳ ಸ್ನಾಯುಗಳನ್ನು ಬಲಶಾಲಿಯಾಗಿಸುತ್ತದೆ

ಕಣ್ಣುಗಳಿಗೆ ಜೇನಿನ ಕೆಲವು ಹನಿಗಳನ್ನು ಆಗಾಗ ಹಾಕುತ್ತಿರುವ ಮೂಲಕ ಕಣ್ಣುಗಳ ಸ್ನಾಯುಗಳು ಬಲಯುತವಾಗಿರಲು ನೆರವಾಗುತ್ತದೆ.

ಕಣ್ಣುಗಳ ಸ್ನಾಯುಗಳನ್ನು ಬಲಶಾಲಿಯಾಗಿಸುತ್ತದೆ

ಕಣ್ಣುಗಳ ಸ್ನಾಯುಗಳನ್ನು ಬಲಶಾಲಿಯಾಗಿಸುತ್ತದೆ

ವಿಶೇಷವಾಗಿ ನಡುವಯಸ್ಸು ದಾಟಿದ ಬಳಿಕ ಕಣ್ಣುಗಳ ದೃಷ್ಟಿ ಕೊಂಚ ಕಡಿಮೆಯಾಗತೊಡಗಿದಾಗ ನಿಯಮಿತವಾಗಿ ಬಳಸಿದರೆ ಕಣ್ಣುಗಳ ಸ್ನಾಯುಗಳು ಬಲಯುತವಾಗಿರಲು ನೆರವಾಗುತ್ತದೆ.

ಗ್ಲೌಕೋಮಾ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ

ಗ್ಲೌಕೋಮಾ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ

ಹಲವಾರು ಸಂಶೋಧನೆಗಳ ಮೂಲಕ ಕಣ್ಣುಗಳಲ್ಲಿ ಕೊಂಚ ಜೇನನ್ನು ಬಿಟ್ಟುಕೊಳ್ಳುವ ವಿಧಾನದಿಂದ ಕಣ್ಣುಗಳಿಗೆ ಆವರಿಸುವ ಗ್ಲೌಕೋಮಾ ಎಂಬ ಕಾಯಿಲೆ ಆವರಿಸುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗಿರುವುದನ್ನು ಕಂಡುಕೊಳ್ಳಲಾಗಿದೆ.

ಕಣ್ಣಿನ ದೃಷ್ಟಿ ಕಡಿಮೆಯಾಗುವುದನ್ನು ತಡೆಯುತ್ತದೆ

ಕಣ್ಣಿನ ದೃಷ್ಟಿ ಕಡಿಮೆಯಾಗುವುದನ್ನು ತಡೆಯುತ್ತದೆ

ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣ ಮತ್ತು ಇದರಲ್ಲಿರುವ ಸತು ಕಣ್ಣಿನ ದೃಷ್ಟಿನರದ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ. ಆದ್ದರಿಂದ ಜೇನನ್ನು ನಿಯಮಿತವಾಗಿ ಸೇವಿಸುತ್ತಿರುವ ಮೂಲಕ ಕಣ್ಣಿನ ದೃಷ್ಟಿ ಉತ್ತಮವಾಗಿರಲು, ತನ್ಮೂಲಕ ಕಣ್ಣಿನ ದೃಷ್ಟಿ ಕಡಿಮೆಯಾಗುವುದನ್ನು ತಡೆಯುತ್ತದೆ

ಕಣ್ಣುನೋವನ್ನು ಗುಣಪಡಿಸುತ್ತದೆ

ಕಣ್ಣುನೋವನ್ನು ಗುಣಪಡಿಸುತ್ತದೆ

ಜೇನನ್ನು ನಿತ್ಯವೂ ಕೊಂಚವಾಗಿ ಸೇವಿಸುವ ಮೂಲಕ ಕಣ್ಣುಗಳ ನೋವು ಕಡಿಮೆಯಾಗುತ್ತದೆ ಹಾಗೂ ಕಣ್ಣುಗಳ ಸುತ್ತ ನೆರಿಗೆಗಳು ಮೂಡುವ ಸಾಧ್ಯತೆ ದೂರವಾಗುತ್ತದೆ.

ಎಚ್ಚರಿಕೆ

ಎಚ್ಚರಿಕೆ

ಕಣ್ಣುಗಳಿಗೆ ಬಳಸುವ ಜೇನು ಅಪ್ಪಟವಾಗಿರುವುದು ಅವಶ್ಯಕ. ಇಂದು ಹಣದಾಸೆಗಾಗಿ ಜೇನಿನೊಂದಿಗೆ ಬೆಲ್ಲದ ನೀರನ್ನು ಬೆರೆಸಿ ಮಾರುತ್ತಿದ್ದಾರೆ. ಕಣ್ಣುಗಳಿಗೆ ಈ ಬೆರಕೆ ಜೇನು ಸರ್ವಥಾ ಉತ್ತಮವಲ್ಲ. ಆದ್ದರಿಂದ ಕೊಂಚ ದುಬಾರಿಯಾದರೂ ತೊಂದರೆಯಿಲ್ಲ, ಅಪ್ಪಟ ಜೇನನ್ನು ಮಾತ್ರವೇ ಬಳಸಿ.

English summary

Surprising Benefits Of Honey For Your Eyes

You might have heard about the benefits of honey for your skin or a few of you might have found it beneficial for getting rid of the tummy fat. But surprisingly honey is also beneficial for one's eyesight. Eyes are one of the most important sense organs of human beings. Having a healthy eyesight is extremely important as it is through the eyes one can view the world.
X
Desktop Bottom Promotion