ಚಳಿಗಾಲದ ಶೀತ, ಕೆಮ್ಮು, ಜ್ವರಕ್ಕೆ ಅಡುಗೆಮನೆಯ ಔಷಧ!

ಚಳಿಗಾಲ ಬಂತೆಂದರೆ ಸಾಕು ಎಲ್ಲರಿಗೂ ಶೀತ, ನೆಗಡಿ, ಜ್ವರಗಳು ಸಾಮಾನ್ಯವಾಗಿ ಆವರಿಸುತ್ತವೆ. ಹೆಚ್ಚಿನವರಿಗೆ ಸೋಂಕು ವಿಪರೀತವಾಗಿರುತ್ತದೆ. ಅದರಲ್ಲೂ ನೆಗಡಿ ಮತ್ತು ಶೀತ ಒಬ್ಬರಿಂದೊಬ್ಬರಿಗೆ ಶೀಘ್ರವಾಗಿ ಹರಡುತ್ತದೆ

By: manu
Subscribe to Boldsky

ಚಳಿಗಾಲದಲ್ಲಿ ಆರೋಗ್ಯವನ್ನು ಕಾಪಾಡುವುದು ತುಂಬಾ ಮುಖ್ಯ. ಯಾಕೆಂದರೆ ನಮಗೆ ಸಾಮಾನ್ಯವೆಂದು ಕಾಣುವಂತಹ ಶೀತ, ಕೆಮ್ಮು ಹಾಗೂ ಜ್ವರ ಚಳಿಗಾಲದಲ್ಲಿ ಹೆಚ್ಚಾಗಿ ಕಾಡುತ್ತದೆ. ಕಟ್ಟಿದ ಮೂಗು ಜ್ವರ, ಶೀತ ಹಾಗೂ ಕೆಮ್ಮಿನ ಲಕ್ಷಣವಾಗಿದೆ. ಇದರಿಂದ ಉಸಿರಾಡಲು ಮತ್ತು ಯಾವುದೇ ವಾಸನೆ ತೆಗೆದುಕೊಳ್ಳಲು ಕಷ್ಟವಾಗುತ್ತದೆ.  ನೆಗಡಿ-ತಲೆನೋವಿಗೆಲ್ಲಾ ವೈದ್ಯರ ಹಂಗೇಕೆ?

ಮೂಗಿನ ತುಂಬಾ ಲೋಳೆ ತುಂಬಿರುವುದೇ ಇದಕ್ಕೆ ಕಾರಣವಾಗಿ ಬಿಡುತ್ತದೆ. ಮೂಗು ಕಟ್ಟಿರುವುದರಿಂದ ಸರಿಯಾಗಿ ಉಸಿರಾಡಲು ಆಗಲ್ಲ. ಮೂಗಿನಲ್ಲಿ ಅತಿಯಾಗಿ ಲೋಳೆ ಸುರಿದರೆ ಮೂಗಿನಲ್ಲಿ ಸೋಂಕು ಕಾಣಿಸಿಕೊಳ್ಳಬಹುದು.  ಜ್ವರ-ಶೀತಕ್ಕೆ ಮನೆಯಂಗಳದ ತುಳಸಿ ಎಲೆಗಳೇ ಸಾಕು!

ಇಂತಹ ಸಮಸ್ಯೆಯನ್ನು ನಿವಾರಣೆ ಮಾಡಲು ಕೆಲವೊಂದು ಮನೆಮದ್ದನ್ನು ಬಳಸಿದರೆ ಒಳ್ಳೆಯದು. ಮನೆಮದ್ದಿನಿಂದ ಈ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ. ಮೂಗು ಕಟ್ಟಿರುವುದಕ್ಕೆ ಇಲ್ಲಿ ಕೆಲವೊಂದು ಮದ್ದನ್ನು ಸೂಚಿಸಲಾಗಿದೆ. ಇದನ್ನು ಪ್ರಯೋಗಿಸಿ ನೋಡಿ... 

ಸಾಸಿವೆ ಎಣ್ಣೆ

ಮೂಗಿನ ಎರಡು ಬದಿಗೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಸರಿಯಾಗಿ ತಿಕ್ಕಿ. ಸಾಸಿವೆ ಎಣ್ಣೆಯ ಘಾಟು ಲೋಳೆಯು ಸರಿಯಾಗಿ ಹೊರಗೆ ಬರುವಂತೆ ಮಾಡಿ ಮೂಗು ಕಟ್ಟಿರುವುದನ್ನು ನಿವಾರಣೆ ಮಾಡುತ್ತದೆ. ಇದರಿಂದ ಮೂಗು ಸ್ವಚ್ಛವಾಗುತ್ತದೆ.  ಆರೋಗ್ಯ ಟಿಪ್ಸ್: ಸಾಸಿವೆ ಎಣ್ಣೆಯ ತಾಕತ್ತಿಗೆ, ತಲೆಬಾಗಲೇಬೇಕು!

ಜೀರಿಗೆ ಕಾಳು

ಸ್ವಲ್ಪ ಜೀರಿಗೆ ಕಾಳುಗಳನ್ನು ಬಿಸಿ ಮಾಡಿಕೊಳ್ಳಿ ಮತ್ತು ಬಿಸಿಯಾಗಿರುವಾಗಲೇ ಅದನ್ನು ಒಂದು ಹತ್ತಿಯ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ಇದರ ಸುವಾಸನೆಯನ್ನು ಪಡೆಯಿರಿ ಮತ್ತು ಇದು ಮೂಗು ಕಟ್ಟಿರುವುದನ್ನು ನಿವಾರಿಸುತ್ತದೆ. ಜೀರಿಗೆ ನೀರು: ಸಣ್ಣ-ಪುಟ್ಟ ಕಾಯಿಲೆಗೆ ದಿವ್ಯೌಷಧ

ನೀಲಗಿರಿ ಹೂವು

ನೀಲಗಿರಿಯ ಹೂವನ್ನು ಕುದಿಯುತ್ತಿರುವ ನೀರಿಗೆ ಹಾಕಿಕೊಂಡು ಅದರಿಂದ ಬರುತ್ತಿರುವ ಆವಿಗೆ ಮೂಗನ್ನು ಹಿಡಿಯಿರಿ. ನೀಲಗಿರಿಯಲ್ಲಿ ವೈರಲ್ ವಿರೋಧಿ ಅಂಶವಿದೆ. ಇದು ಮೂಗು ಕಟ್ಟಿರುವುದನ್ನು ನಿವಾರಣೆ ಮಾಡಿ ಸೋಂಕನ್ನು ಬರದಂತೆ ಮಾಡುವುದು. ನೀಲಗಿರಿಯ ಹೂವನ್ನು ಮೂಗಿನ ಸಮೀಪ ಇಟ್ಟುಕೊಳ್ಳಬಹುದು.

ಈರುಳ್ಳಿ

ಈರುಳ್ಳಿಯನ್ನು ಜಜ್ಜಿಕೊಂಡು ಅದನ್ನು ಮೂಗಿನ ಬಳಿಯಲ್ಲಿಡಿ. ಈರುಳ್ಳಿಯ ಘಾಟು ಲೋಳೆಯನ್ನು ಮೂಗಿನಿಂದ ಹೊರಬರುವಂತೆ ಮಾಡುವುದು. ಇದರಿಂದ ಕಟ್ಟಿದ ಮೂಗಿನಿಂದ ಪರಿಹಾರ ಪಡೆಯಬಹುದು.

ಬಿಸಿ ನೀರಿನ ಸ್ನಾನ

ಶೀತ ಹಾಗೂ ಸಾಧಾರಣ ಜ್ವರವಿದ್ದಾಗ ಸ್ನಾನ ಮಾಡಬಾರದು ಎನ್ನುವುದು ಸುಳ್ಳು. ಈ ಸಮಯದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡಬೇಕು... (ಜ್ವರ ತುಂಬಾ ಜಾಸ್ತಿ ಇದ್ದರೆ ಸ್ನಾನ ಮಾಡದಿರುವುದು ಒಳ್ಳೆಯದು). ಬಿಸಿ ನೀರು ಕಟ್ಟಿದ ಮೂಗನ್ನು ನಿವಾರಿಸುತ್ತದೆ. ಇದರಿಂದ ಸೋಂಕನ್ನು ತಡೆಯಬಹುದು.

ಬಿಸಿ ನೀರಿನ ಸ್ನಾನ

ಈ ಮನೆಮದ್ದುಗಳು ಕಟ್ಟಿದ ಮೂಗನ್ನು ನಿವಾರಣೆ ಮಾಡಿ ಪರಿಹಾರ ನೀಡುವುದು. ಶೀತದಿಂದ ಉಂಟಾಗುವ ತಲೆನೋವನ್ನು ಇದು ಕಡಿಮೆ ಮಾಡುತ್ತದೆ. ಈ ಮನೆಮದ್ದುಗಳು ಶೀತದಿಂದ ಉಂಟಾಗುವ ಆಯಾಸ, ಕಣ್ಣಿನ ಮೇಲಿನ ಒತ್ತಡ ಇತ್ಯಾದಿಯನ್ನು ನಿವಾರಿಸುತ್ತದೆ.  

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Tuesday, November 29, 2016, 11:50 [IST]
English summary

Stuffy Nose And Remedies For Quick Cure

Stuffy nose is a common symptom of flu, cough and cold and sinus. It becomes difficult for you to breath and swallow as the wind pipe shrinks and is filled with mucus. Blocked nose hinders you from breathing properly and constant flow of excessive mucus can lead to nose infection.
Please Wait while comments are loading...
Subscribe Newsletter