For Quick Alerts
ALLOW NOTIFICATIONS  
For Daily Alerts

ನೆನಪಿರಲಿ- ಇದೇ ಕಾರಣಕ್ಕೆ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುವುದು!

ಕಿಡ್ನಿ ಆರೋಗ್ಯದ ಬಗ್ಗೆ ನೋಡುವುದಾದರೆ ಸೇವಿಸುವ ಆಹಾರದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ಕಿಡ್ನಿಯಲ್ಲಿ ಕಲ್ಮಶ ಸಂಗ್ರಹವಾಗುತ್ತಾ ಹೋದಂತೆ ಕಿಡ್ನಿಯಲ್ಲಿ ಕಲ್ಲು ಮುಂತಾದ ಸಮಸ್ಯೆ ಕಂಡು ಬರುವುದು....

By Arshad
|

ಆರೋಗ್ಯ ಎಂದರೇನು? ಹೊಟ್ಟೆಯ ಸ್ನಾಯುಗಳನ್ನು ಸೆಡೆಸಿ ಸಿಕ್ಸ್ ಪ್ಯಾಕ್ ತೋರಿಸುವುದೇ ಆರೋಗ್ಯ ಎಂದು ಇಂದು ಜಾಹೀರಾತುಗಳ ಮೂಲಕ ಬಿಂಬಿಸಲಾಗುತ್ತಿದೆ. ವಾಸ್ತವವಾಗಿ ನಮ್ಮ ಸೂಕ್ಷ್ಮ ಅಂಗಗಳು ಸರಿಯಾಗಿ ಕೆಲಸ ಮಾಡುತ್ತಿದ್ದು ಯಾವುದೇ ತೊಂದರೆ ಇಲ್ಲದಿದ್ದಾಗ ಮಾತ್ರ ಈ ಸಿಕ್ಸ್ ಪ್ಯಾಕ್ ಗಳಿಗೆ ಅರ್ಥವಿದೆ. ಆದ್ದರಿಂದ ಉತ್ತಮ ಆರೋಗ್ಯ ಪಡೆಯಲು ಸಿಕ್ಸ್ ಪ್ಯಾಕ್ ಪಡೆಯುವ ಅಗತ್ಯವಿಲ್ಲ ಬದಲಿಗೆ ನಮ್ಮ ಆಹಾರ ಮತ್ತು ಜೀವನಕ್ರಮ ಸರಿಯಾಗಿದ್ದರೆ ಸಾಕು. ಕಿಡ್ನಿ ಕಲ್ಲು ಕರಗಿಸುವ, ಹಿತ್ತಲ ಗಿಡದ ಮದ್ದು

ಮೂತ್ರಪಿಂಡಗಳ ಕೆಲಸವೇನೆಂದರೆ ನಮ್ಮ ದೇಹದ ನೀರನ್ನು ಶುದ್ಧೀಕರಿಸಿ ಕಲ್ಮಶಗಳನ್ನು ನಿವಾರಿಸುವುದು. ಕೆಲವೊಮ್ಮೆ ಕಲ್ಮಶಗಳಲ್ಲಿರುವ ಸುಣ್ಣ ಮತ್ತು ಇತರ ಖನಿಜಗಳು ಘನರೂಪ ಪಡೆದು ಕಲ್ಲುಗಳಾಗುತ್ತವೆ. ಇದಕ್ಕೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಮ್ಮ ಜೀವನಕ್ರಮ ನಿಸರ್ಗಕ್ಕೆ ಅನುಗುಣವಾಗಿರದೇ ಇರುವುದು ಪ್ರಮುಖ ಕಾರಣ. ಉದಾಹರಣೆಗೆ ಮೂತ್ರಕ್ಕೆ ಅವಸರವಾಗಿದ್ದರೂ ಯಾವುದೋ ಕಾರಣದಿಂದ ತುಂಬಾ ಹೊತ್ತಿನವರೆಗೆ ಮೂತ್ರವನ್ನು ಕಟ್ಟಿಕೊಂಡಿರುವುದು. ಮೂತ್ರ ವಿಸರ್ಜನೆ ತಡವಾದಷ್ಟೂ ಮೂತ್ರ ಹೆಚ್ಚು ಹೆಚ್ಚು ಸಾಂದ್ರೀಕೃತವಾಗುತ್ತಾ ಕಲ್ಲುಗಳಾಗುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು

ಮೂತ್ರಪಿಂಡಗಳ ಇನ್ನೊಂದು ಕೆಲಸವೆಂದರೆ ನಮ್ಮ ಮೂತ್ರದ ಪಿಎಚ್ ಅಥವಾ ಆಮ್ಲೀಯ ಮತ್ತು ಕ್ಷಾರೀಯ ಮಟ್ಟವನ್ನು ಸಮ ಪ್ರಮಾಣದಲ್ಲಿರಿಸುವುದು. ಕೆಲವೊಮ್ಮೆ ಮೂತ್ರಪಿಂಡಗಳು ಈ ಕಾರ್ಯದಲ್ಲಿ ವಿಫಲವಾಗುತ್ತವೆ ಅಥವಾ ಪೂರ್ಣಕ್ಷಮತೆ ತೋರಲು ಅಸಮರ್ಥವಾಗುತ್ತವೆ. ಇದರಿಂದ ಮೂತ್ರಪಿಂಡಗಳಲ್ಲಿ ಕಲ್ಮಶಗಳು ಕೊಂಚ ಉಳಿದುಬಿಡುತ್ತವೆ.

ಇದು ಕೆಲವು ಆರೋಗ್ಯದ ಏರುಪೇರಿಗೆ ಕಾರಣವಾಗುತ್ತದೆ. ಉಲ್ಬಣಗೊಂಡಾಗ ವೈಫಲ್ಯವೂ ಎದುರಾಗಬಹುದು. ಈ ಸ್ಥಿತಿಯನ್ನು ಮೊದಲೇ ಕಂಡುಕೊಂಡಾಗ ಮಾತ್ರ ಸೂಕ್ತ ಚಿಕಿತ್ಸೆ ನೀಡಿ ಮೂತ್ರಪಿಂಡಗಳನ್ನು ಮೊದಲಿನಂತಾಗಿಸಬಹುದು. ತಂಪು ಪಾನೀಯ ಕುಡಿದರೆ ಕಿಡ್ನಿ ಹಾಳಾಗುವುದೇ?
ಬನ್ನಿ, ಈ ಸ್ಥಿತಿಗೆ ಎದುರಾಗದಿರಲು ನಮ್ಮ ಜೀವನದಲ್ಲಿ ನಾವು ಏನು ತಪ್ಪು ಮಾಡುತ್ತಿದ್ದೇವೆ ಎಂಬುದನ್ನು ಕಂಡುಕೊಂಡು ಬದಲಾಗೋಣ, ಆರೋಗ್ಯವಂತರಾಗೋಣ....

ನಿರ್ಜಲೀಕರಣ

ನಿರ್ಜಲೀಕರಣ

ನಮಗೆ ದಿನದಲ್ಲಿ ಸದಾ ನೀರಿನ ಪೂರೈಕೆ ಸತತವಾಗಿ ಆಗುತ್ತಲೇ ಇರಬೇಕು. ಅಂತೆಯೇ ಮೂತ್ರವಿಸರ್ಜನೆ ಸಹಾ. ಆದರೆ ಪ್ರಯಾಣ ಮೊದಲಾದ ಕಾರಣಗಳಿಂದ ಕೆಲವರಿಗೆ ನೀರು ಕುಡಿಯಲು ಸಾಧ್ಯವಾಗುವುದಿಲ್ಲ.

ನಿರ್ಜಲೀಕರಣ

ನಿರ್ಜಲೀಕರಣ

ಶೌಚಾಲಯವಿಲ್ಲದ ಸ್ಥಳಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮುಜುಗರ ಎದುರಾಗುವ ಆತಂಕದಿಂದಲೂ ನೀರು ಕುಡಿಯುವುದಿಲ್ಲ. ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದು ಮೂತ್ರಪಿಂಡಗಳು ವಿಫಲಗೊಳ್ಳಲು ಪ್ರಮುಖ ಕಾರಣವಾಗಿದೆ.

ಅಗತ್ಯಕ್ಕೂ ಹೆಚ್ಚು ಸಕ್ಕರೆ ಸೇವಿಸುವುದು

ಅಗತ್ಯಕ್ಕೂ ಹೆಚ್ಚು ಸಕ್ಕರೆ ಸೇವಿಸುವುದು

ಆರೋಗ್ಯಕರ ಪುರುಷನಿಗೆ ಒಂದು ದಿನಕ್ಕೆ 37.5 ಗ್ರಾಂ ಮತ್ತು ಮಹಿಳೆಯರಿಗೆ 25 ಗ್ರಾಂ ಸಕ್ಕರೆ ಸಾಕು ಎಂದು ಆಹಾರತಜ್ಞರು ತಿಳಿಸುತ್ತಾರೆ. ಅಂದರೆ ಪುರುಷರಿಗೆ ಏಳು ಚಮಚ, ಮಹಿಳೆಯರಿಗೆ ಆರು ಚಮಚ. ನಿಮ್ಮ ದಿನದ ಆಹಾರದಲ್ಲಿ ಸಕ್ಕರೆಯ ಪ್ರಮಾಣ ಇದಕ್ಕೂ ಹೆಚ್ಚಾದರೆ ಈ ಪ್ರಮಾಣ ರಕ್ತದಲ್ಲಿ ಸೇರುವ ಮೂಲಕ ಮೂತ್ರಪಿಂಡಗಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತದೆ.ಈ ಒತ್ತಡ ಮೂತ್ರಪಿಂಡಗಳನ್ನು ನಿಧಾನವಾಗಿ ವಿಫಲಗೊಳಿಸುತ್ತಾ ಹೋಗುತ್ತದೆ. ಸಕ್ಕರೆ ಹಿಂದಿರುವ ಕರಾಳ ಸತ್ಯ: ಇಲ್ಲಿದೆ 10 ಪುರಾವೆಗಳು

ಸೋಂಕುಗಳನ್ನು ಗುಣಪಡಿಸಲು ತಡವಾಗಿಸುವುದು

ಸೋಂಕುಗಳನ್ನು ಗುಣಪಡಿಸಲು ತಡವಾಗಿಸುವುದು

ಕೆಲವೊಮ್ಮೆ ಶೀತ ನೆಗಡಿ ಮೊದಲಾದವು ಎದುರಾದರೆ ಹೆಚ್ಚಿನವರು ಇದಕ್ಕೆ ಅಸಡ್ಡೆ ತೋರುತ್ತಾರೆ. ನಾಳೆ ಹೋದರಾಯಿತು ಎಂಬ ಉದಾಸೀನಭಾವದಿಂದ ಹಲವು ನಾಳೆಗಳು ಬಂದು ಹೋದರೂ ಒಂದು ಮಾತ್ರೆ ತೆಗೆದುಕೊಳ್ಳುವುದಿಲ್ಲ. ಪರಿಣಾಮವಾಗಿ ಸೋಂಕುಕಾರಕ ವೈರಾಣುಗಳು ರಕ್ತಕ್ಕೆ ಸೇರಿ ಮೂತ್ರಪಿಂಡಗಳಿಗೂ ಸೋಂಕು ಹರಡಬಹುದು. ಈ ಸೋಂಕು ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗಬಹುದು.

ಹೆಚ್ಚಿನ ಉಪ್ಪಿನ ಸೇವನೆ

ಹೆಚ್ಚಿನ ಉಪ್ಪಿನ ಸೇವನೆ

ಒಂದು ವೇಳೆ ನಿಮಗೆ ಉಪ್ಪಿನ ಖಾದ್ಯಗಳು ಹೆಚ್ಚು ಇಷ್ಟವಾಗಿದ್ದರೆ ಈ ಅಭ್ಯಾಸ ನಿಮ್ಮ ಮೂತ್ರಪಿಂಡಗಳಿಗೆ ಭಾರಿಯಾಗಿ ಪರಿಣಮಿಸಬಹುದು. ಏಕೆಂದರೆ ಹೆಚ್ಚುವರಿ ಉಪ್ಪನ್ನು ನಿವಾರಿಸಲು ಮೂತ್ರಪಿಂಡಗಳು ಅತಿ ಹೆಚ್ಚು ಶ್ರಮಪಡಬೇಕಾಗಿ ಬರುತ್ತದೆ. ಇದು ಮೂತ್ರಪಿಂಡಗಳು ಬಿರಿಯಲು ಹಾಗೂ ವಿಫಲಗೊಳ್ಳಲೂ ಕಾರಣವಾಗಬಹುದು.

ಅಗತ್ಯಕ್ಕೂ ಹೆಚ್ಚಿನ ವ್ಯಾಯಾಮ!

ಅಗತ್ಯಕ್ಕೂ ಹೆಚ್ಚಿನ ವ್ಯಾಯಾಮ!

ಸಿಕ್ಸ್ ಪ್ಯಾಕ್ ಬೇಕೇ ಬೇಕು ಎಂದು ಹಠಹಿಡಿದು ದಿನವಿಡೀ ವ್ಯಾಯಾಮ ಮಾಡುವ ಮೂಲಕ ಅತಿಹೆಚ್ಚಿನ ಪ್ರಮಾಣದ ರಕ್ತವನ್ನು ಬಲವಂತವಾಗಿ ಮೂತ್ರಪಿಂಡಗಳ ಮೂಲಕ ಕಳಿಸಿದರೆ ಇದರ ಸಾಮರ್ಥ್ಯಕ್ಕೂ ಮೀರಿದ ಕೆಲಸ ಮಾಡಬೇಕಾಗಿ ಬಂದು ವಿಫಲಗೊಳ್ಳಬಹುದು.

ಮೂತ್ರವಿಸರ್ಜಿಸಲು ತಡಮಾಡುವುದು

ಮೂತ್ರವಿಸರ್ಜಿಸಲು ತಡಮಾಡುವುದು

ಕೆಲವೊಮ್ಮೆ ಅತಿ ಹೆಚ್ಚಿನ ಕೆಲಸದ ಒತ್ತಡ ಅಥವಾ ದೂರದ ಪ್ರಯಾಣ ಮೊದಲಾದ ಸಂದರ್ಭಗಳಲ್ಲಿ ಮೂತ್ರ ವಿಸರ್ಜಿಸಲು ಸಮಯ ಸಾಲದೇ ಹಾಗೇ ಹಿಡಿದಿಟ್ಟುಕೊಳ್ಳುತ್ತೇವೆ. ಇದು ಮೂತ್ರದ ಸಾಂದ್ರತೆಯನ್ನು ವಿಪರೀತವಾಗಿ ಹೆಚ್ಚಿಸುತ್ತದೆ.

ಮೂತ್ರವಿಸರ್ಜಿಸಲು ತಡಮಾಡುವುದು

ಮೂತ್ರವಿಸರ್ಜಿಸಲು ತಡಮಾಡುವುದು

ಅಲ್ಲದೇ ಇದರಲ್ಲಿರುವ ಬ್ಯಾಕ್ಟೀರಿಯಾ ಮತ್ತು ಇತರ ಸೋಂಕುಕಾರಕ ಕೀಟಾಣುಗಳಿಗೆ ತಮ್ಮ ಬಲಪ್ರದರ್ಶನ ಮಾಡಲು ಸೂಕ್ತ ಅವಕಾಶ ಸಿಕ್ಕಂತಾಗುತ್ತದೆ. ಇವು ಮೂತ್ರಪಿಂಡದ ಅಂಗಾಂಶಗಳನ್ನೇ ಘಾಸಿಮಾಡುತ್ತವೆ.

ಮದ್ಯಪಾನ

ಮದ್ಯಪಾನ

ಇತ್ತೀಚಿನ ಒಂದು ಸಂಶೋಧನೆಯಲ್ಲಿ ಮದ್ಯಪಾನಿಗಳು ಅಥವಾ ಆಗಾಗ ಮದ್ಯವನ್ನು ಮೋಜಿಗಾಗಿ ಸೇವಿಸುವವರ ಮೂತ್ರಪಿಂಡಗಳು ಆರೋಗ್ಯವಂತರಿಗಿಂತ ಹೆಚ್ಚು ಘಾಸಿಗೊಂಡಿರುವುದನ್ನು ಕಂಡುಕೊಳ್ಳಲಾಗಿದೆ.

ಮದ್ಯಪಾನ

ಮದ್ಯಪಾನ

ಮದ್ಯಪಾನ ಬಿಟ್ಟ ಬಳಿಕ, ಆರೋಗ್ಯ ಹೇಗಿರುತ್ತೆ ನೋಡಿ....

English summary

Stop These Common Habits If You Want To Avoid Kidney Damage!

Our kidneys also maintain the natural pH balance of the urine. So, it is very important to keep the kidneys clean and healthy. Many a times, if our kidneys become weak, they lose their ability to filter out waste products, and so the waste gets accumulated in the kidneys, causing more health complications. Waste accumulation in the kidney can lead to the formation of kidney stones and even lead to kidney failure, if not treated at the right time. So, here is a list of common habits you must stop to avoid kidney damage, have a look!
X
Desktop Bottom Promotion