For Quick Alerts
ALLOW NOTIFICATIONS  
For Daily Alerts

ಕ್ಯಾಮೊಮೈಲ್ ಚಹಾ, ಮುಟ್ಟಿನ ನೋವಿಗೆ ದಿವ್ಯೌಷಧ

By Deepak
|

ಮಹಿಳೆಯರು ಕಚೇರಿಯನ್ನು ಅಥವಾ ಕಾಲೇಜನ್ನು ತಪ್ಪಿಸಿಕೊಳ್ಳುವ೦ತೆ ಮಾಡುವ ಪ್ರಮುಖವಾದ ಕಾರಣಗಳ ಪೈಕಿ ನೋವುಭರಿತ ಮುಟ್ಟಿನ ದಿನಗಳೂ ಸಹ ಒ೦ದಾಗಿರುತ್ತವೆ. ಅನೇಕ ಮಹಿಳೆಯರ ಪಾಲಿಗೆ ನೋವುಭರಿತ ಮುಟ್ಟಿನ ದಿನಗಳು ನಿರ೦ತರವಾಗಿ ಕ೦ಗೆಡಿಸುವ ಸ೦ಗತಿಯಾಗಿರುತ್ತದೆ. ನೋವಿನ ತೀವ್ರತೆಯು ಮಹಿಳೆಯಿ೦ದ ಮಹಿಳೆಗೆ ವ್ಯತ್ಯಯಗೊಳ್ಳಬಹುದಾದರೂ ಸಹ, ಅದರಿ೦ದಾಗುವ ಕಿರಿಕಿರಿಯಿ೦ದ ಸ೦ಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಾರದು. ಮೊದಲ ಒ೦ದೆರಡು ದಿನಗಳ೦ತೂ ಜೀವನವನ್ನು ಸ೦ಪೂರ್ಣವಾಗಿ ಹಳಿತಪ್ಪಿಸಿಬಿಡುತ್ತವೆ.

ಅದರಲ್ಲೂ ಹಲವಾರು ಮಹಿಳೆಯರು ಈ ನೋವನ್ನು ಸಹಿಸಲು ಸಾಧ್ಯವಾಗದೆ ಮಾತ್ರೆಗಳ ಮೊರೆ ಹೋಗುವುದು ಇತ್ತೀಚಿಗೆ ಸಾಮಾನ್ಯವಾಗಿ ಬಿಟ್ಟಿದೆ, ಆದರೆ ರಾಸಾಯನಿಕಗಳಿಂದ ಕೂಡಿರುವ ಈ ಮಾತ್ರೆಗಳು ಆರೋಗ್ಯದ ಮೇಲೆ ಇನ್ನಷ್ಟು ವ್ಯತಿರಿಕ್ತ ಪರಿಣಾಮ ಬೀರಬಹುದು. ಹಾಗಾಗಿ ಇಂತಹ ಮಾತ್ರೆಗಳ ದುಷ್ಪರಿಣಾಮಗಳನ್ನು ಸಹ ಅನುಭವಿಸುವ ಬದಲಿಗೆ ಸ್ವಾಭಾವಿಕ ಪರಿಹಾರಗಳನ್ನು ಇದಕ್ಕಾಗಿ ಪಡೆದು ಈ ನೋವಿನಿಂದ ಮುಕ್ತರಾಗಿ.

Soothe period pain with chamomile tea

ಇದಕ್ಕಾಗಿ ಹಲವಾರು ಸ್ವಾಭಾವಿಕ ಪರಿಹಾರಗಳು ಮತ್ತು ಮನೆಮದ್ದುಗಳಿದ್ದು, ಅದರಲ್ಲಿ ಕ್ಯಾಮೊಮೈಲ್ ಟೀ ಸಹ ಒಂದು. ಇದರಲ್ಲಿರುವ ಉರಿ-ಬಾವು ನಿರೋಧಕ ಗುಣಗಳು ಅಧಿಕ ಪ್ರಮಾಣದಲ್ಲಿದ್ದು, ಆಂಟೀಸ್ಪಾಸ್ಮೊಡಿಕ್ ಪರಿಣಾಮಗಳು ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡುತ್ತವೆ ಮತ್ತು ಮುಟ್ಟಿನ ನೋವನ್ನು ನಿವಾರಿಸಿ ಬಿಡುತ್ತವೆ. ಅಲ್ಲದೆ, ಇದರಲ್ಲಿರುವ ನಿದ್ರೆಯನ್ನು ತರುವ ಮತ್ತು ಉದ್ವೇಗ ನಿವಾರಕ ಗುಣಗಳು ನಿಮ್ಮ ನರಗಳಿಗೆ ವಿಶ್ರಾಂತಿಯನ್ನು ನೀಡುತ್ತವೆ ಮತ್ತು ನೋವಿಗೆ ಶೀಘ್ರ ಉಪಶಮನ ನೀಡುತ್ತವೆ. ಆ ದಿನಗಳ ಅತಿಯಾದ ರಕ್ತಸ್ರಾವಕ್ಕೆ ನೈಸರ್ಗಿಕ ಪರಿಹಾರಗಳು..

ಅಷ್ಟೇ ಅಲ್ಲದೆ, ಕ್ಯಾಮೊಮೈಲ್ ಟೀಯಲ್ಲಿ ಗರ್ಭಾಶಯ ಮತ್ತು ಹೊಟ್ಟೆ ನೋವಿಗೆ ರಾಮಬಾಣವಾದ ಅಂಶಗಳು ಅಧಿಕ ಪ್ರಮಾಣದಲ್ಲಿದ್ದು, ತನ್ಮೂಲಕ ಈ ಎರಡು ನೋವನ್ನು ಹದ್ದು ಬಸ್ತಿನಲ್ಲಿಡುತ್ತದೆ. ಜೊತೆಗೆ ಕೋಪ, ಖಿನ್ನತೆಯನ್ನು ಸಹ ನಿವಾರಿಸುತ್ತದೆ. ವಿಶೇಷವಾಗಿ ಪ್ರಿಮೆನುಸ್ಟ್ರುವಲ್ ಸಿಂಡ್ರೊಮ್ ಸಮಸ್ಯೆ ತಲೆದೋರಿದಾಗ ಈ ಟೀಯು ವರವಾಗಿ ಪರಿಣಮಿಸುತ್ತದೆ. ಇದಲ್ಲದೆ ಮುಟ್ಟು ಪೂರ್ವ ನೋವು ಕಾಣಿಸಿಕೊಂಡಾಗ ಸಹ ನಿಮಗೆ ಕ್ಯಾಮೊಮೈಲ್ ಟೀಯು ಉಪಶಮನವನ್ನು ನೀಡುತ್ತದೆ. ಹಾಗಾಗಿ ಸಂಭವನೀಯ ಮುಟ್ಟಿನ ದಿನಾಂಕಗಳಿಗೆ ಮುನ್ನ ಈ ಟೀಯನ್ನು ಸೇವಿಸಲು ಆರಂಭಿಸಿ. ಈ ಕ್ಯಾಮೊಮೈಲ್ ಟೀಯಲ್ಲಿ ಅಷ್ಟೊಂದು ಪ್ರಯೋಜನಗಳು ಇವೆಯೇ ಎಂದು ನಿಮಗೆ ಅನಿಸುತ್ತಿದೆಯೇ? ಹಾಗಾದರೆ ಮುಂದೆ ಓದಿ...

ಮುಟ್ಟಿನ ನೋವು ನಿವಾರಿಸಿಕೊಳ್ಳಲು ಚಾಮೊಮೈಲ್ ಟೀಯನ್ನು ಹೇಗೆ ಬಳಸಿಕೊಳ್ಳುವುದು
ಕ್ಯಾಮೊಮೈಲ್ ಟೀಯನ್ನು ಕಾಯಿಸಿಕೊಂಡು ಅದನ್ನು ಸೇವಿಸುವ ಮೂಲಕ ನಿಮ್ಮ ಮುಟ್ಟಿನ ನೋವನ್ನು ನಿವಾರಿಸಿಕೊಳ್ಳಬಹುದು. ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ನಿಮಗೆ ಇಷ್ಟವಾದ ಬ್ರ್ಯಾಂಡ್‌ ಅನ್ನು ನೀವು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದು.

ಕ್ಯಾಮೊಮೈಲ್ ಟೀ ತಯಾರಿಸಿಕೊಳ್ಳುವ ಬಗೆ
ಒಂದು ಕಪ್ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಿ. ಅದಕ್ಕೆ ಎರಡು-ಮೂರು ಟೀ ಸ್ಪೂನ್ ಕ್ಯಾಮೊಮೈಲ್ ಟೀ ಪುಡಿಯನ್ನು ಬೆರೆಸಿಕೊಳ್ಳಿ. ಇದು ಮೂರು ನಿಮಿಷ ಬೇಯಲಿ. ಈ ಟೀಯನ್ನು ಶೋಧಿಸಿಕೊಂಡು ಲೋಟಕ್ಕೆ ಸುರಿದುಕೊಳ್ಳಿ. ನಿಮಗೆ ಅಗತ್ಯವಾದಲ್ಲಿ ಜೇನು ತುಪ್ಪ ಅಥವಾ ಸ್ವಲ್ಪ ಲಿಂಬೆರಸವನ್ನು ಬೆರೆಸಿಕೊಂಡು ಸೇವಿಸಿ. ಮುಟ್ಟಿನ ನೋವಿನಿಂದ ಮುಕ್ತರಾಗಿ.

English summary

Soothe period pain with chamomile tea

There are various home remedies you can try to get some relief from menstrual pain, and one such remedy is Chamomile tea. Chamomile has anti-inflammatory and antispasmodic effects that relax your muscles and relieves you from menstrual cramps. It also has sedative and anti-anxiety effects that calm your nerves and offer immediate relief from pain.
Story first published: Monday, January 4, 2016, 12:19 [IST]
X
Desktop Bottom Promotion